Thursday, 2 December 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 17-22

ನ ಕೃಷ್ಣರಾಮಕಾರ್ಷ್ಣಿಭಿಃ ಸುತಾ ನು ಮೇsತ್ರ ಪಾಲಿತಾಃ ।

ಕ್ವ ತೇsತ್ರ ಶಕ್ತಿರಿತ್ಯಮುಂ ಜಗಾದ ಸೋsರ್ಜ್ಜುನಮ್  ದ್ವಿಜಃ ॥೨೧.೧೭॥

 ಯಾವಾಗ ಅರ್ಜುನ ತಾನು ರಕ್ಷಿಸುತ್ತೇನೆಂದು ಹೇಳಿದ,

ಅದನ್ನ ಕೇಳಿದ ಆ ಬ್ರಾಹ್ಮಣ ಅರ್ಜುನನಿಗೆ ಕೇಳಿದ.

ಕೃಷ್ಣ ಬಲರಾಮ ಪ್ರದ್ಯುಮ್ನನಿಂದ ಆಗದೇ ಇದ್ದದ್ದು,

ನಿನ್ನಲ್ಲಿ ಎಲ್ಲುಂಟು ಆ ಶಕ್ತಿ -  ಅದು ಹೇಗೆ ಆಗುವುದು?

 

ತದಾ ಜಗಾದ ಫಲ್ಗುನೋsಸುರೈರ್ವಿದೂಷಿತಾತ್ಮನಾ ।

ನ ವಿಪ್ರ ತಾದೃಶೋsಸ್ಮ್ಯಹಂ ಯಥೈವ ಕೇಶವಾದಯಃ ॥೨೧.೧೮॥

ಆಗ ಅರ್ಜುನ ಅಸುರಾವೇಶದಿಂದ ಹೇಳುವ,

ಎಲೈ ಬ್ರಾಹ್ಮಣ ನಾನು ಕೃಷ್ಣಾದಿಗಳಂತಲ್ಲ ಎನ್ನುವ.

 

 

ಮಯಾ ಜಿತಾ ಹಿ ಖಾಣ್ಡವೇ ಸುರಾಸ್ತಥಾsಸುರಾನಹಮ್ ।

ನಿವಾತವರ್ಮ್ಮನಾಮಕಾನ್  ವಿಜೇಷ್ಯ ಉತ್ತರತ್ರ ಹಿ ॥೨೧.೧೯॥

ಹಿಂದೆ ಖಾಂಡವವನ ದಹನದಲ್ಲಿ ದೇವತೆಗಳ ಗೆದ್ದಿದ್ದೇನೆ,

ಮುಂದೆ ನಿವಾತಕವಚರೆಂಬ ಅಸುರರನ್ನು ಗೆಲ್ಲುವವನಿದ್ದೇನೆ.

 

 

ಉದೀರ್ಯ್ಯ ಚೇತಿ ಕೇಶವಂ ಸ ಊಚಿವಾನ್ ವ್ರಜಾಮ್ಯಹಮ್ ।

ಇತೀರಿತೋsವದದ್ಧರಿಸ್ತವಾತ್ರ ಶಕ್ಯತೇ ನು ಕಿಮ್ ॥೨೧.೨೦॥

ಹೀಗೆ ಹೇಳಿದ ಅರ್ಜುನ ಕೃಷ್ಣಗೆ ನಾನು ಹೋಗುತ್ತೇನೆ ಅಂದ,

ಎಲ್ಲಾ ಕೇಳಿದ ಕೃಷ್ಣ ನಿನ್ನಲ್ಲಿ ಆ ಸಾಮರ್ಥ್ಯವಿದೆಯೇ ಎಂದ.

 

 

ವಿಲಜ್ಜಮಾನಮೀಕ್ಷ್ಯ ತಂ ಜಗಾದ ಕೇಶವೋsರಿಹಾ ।

ವ್ರಜೇತಿ ಸ ಪ್ರತಿಶ್ರವಂ ಚಕಾರ ಹಾಪ್ಯರಕ್ಷಣೇ ॥೨೧.೨೧॥

 

ವಹ್ನಿಂ ಪ್ರವೇಕ್ಷ್ಯೆsಶಕ್ತಶ್ಚೇದಿತ್ಯುಕ್ತ್ವಾ ಸರ್ವಯಾದವೈಃ ।

ಯಯೌ ನ ರಾಮಪ್ರದ್ಯುಮ್ನಾವನಿರುದ್ಧಂ ಚ ಕೇಶವಃ ॥೨೧.೨೨॥

ಕೃಷ್ಣನ ಮಾತನ್ನು ಕೇಳಿದ ಅರ್ಜುನ ಲಜ್ಜಿತನಾದ,

ಅರಿಗಳ ನಿಗ್ರಹಿಸುವ ಹರಿ-ಸರಿ ಹೊರಡು ಎಂದ.

ಒಂದುವೇಳೆ ನನ್ನಿಂದ ಬ್ರಾಹ್ಮಣಪುತ್ರರ ರಕ್ಷಣೆ ಆಗದಿದ್ದರೆ,

ಅರ್ಜುನನೆಂದ-ಅಗ್ನಿಪ್ರವೇಶ ಮಾಡುವೆ ಸೋತು ಹೋದರೆ.

ಪ್ರತಿಜ್ಞೆಗೈದ ಅರ್ಜುನ ಯಾದವರನ್ನೊಡಗೂಡಿ ಹೊರಟ,

ಬಲರಾಮ ಪ್ರದ್ಯುಮ್ನ ಅನಿರುದ್ಧರನ್ನು ಕೃಷ್ಣ ಕಳಿಸದೇ ಬಿಟ್ಟ,

ಅವರುಗಳ ಕೀರ್ತಿ ಕಾಪಾಡುವುದಕ್ಕೆ ಶ್ರೀಕೃಷ್ಣ ಆಡಿದ ಆಟ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula