[ದೇವರು ಅರ್ಜುನನ ಜೊತೆಗೆ ಬಲರಾಮ-ಪ್ರದ್ಯುಮ್ನ-ಅನಿರುದ್ಧ ಇವರನ್ನು ಏಕೆ ಕಳುಹಿಸಲಿಲ್ಲ ಎಂದರೆ:]
ನ್ಯಯೋಜಯತ್ ತತ್ಸಹಾಯೇ ಯಶಸ್ತೇಷ್ವಭಿರಕ್ಷಿತುಮ್ ।
ಪ್ರಿಯೋ ಹಿ ನಿತರಾಂ ರಾಮಃ ಕೃಷ್ಣಸ್ಯಾನು ಚ ತಂ ಸುತಃ ॥೨೧.೨೩॥
ಅನಿರುದ್ಧಃ ಕಾರ್ಷ್ಣ್ಣಿಮನು ಪ್ರದ್ಯುಮ್ನಾದ್ ಯೋsಜನಿಷ್ಟ ಹಿ ।
ರುಗ್ಮಿಪುತ್ರ್ಯಾಂ ರುಗ್ಮವತ್ಯಾಮಾಹೃತಾಯಾಂ ಸ್ವಯಮ್ಬರೇ ॥೨೧.೨೪॥
ಬಲರಾಮ, ಪ್ರದ್ಯುಮ್ನ, ಅನಿರುದ್ಧಾದಿಗಳಿಗೆ ಅಪಕೀರ್ತಿ,
ಬಾರದೇ ಯಶಸ್ಸು ರಕ್ಷಣೆಯಾಗಲೆಂಬುದು ಕೃಷ್ಣನೀತಿ,
ಅವರನ್ನು ಅರ್ಜುನನೊಂದಿಗೆ ಕಳಿಸದಿದ್ದುದು ಅದೇ ರೀತಿ.
ಕೃಷ್ಣಗೆ ಅನುಕ್ರಮವಾಗಿ ಬಲುಪ್ರಿಯರಿವರು -ಬಲರಾಮ, ಪ್ರದ್ಯುಮ್ನ, ಅನಿರುದ್ಧ,
ಈ ಅನಿರುದ್ಧ ;ಪ್ರದ್ಯುಮ್ನ
ಸ್ವಯಂವರದಿ ಕದ್ದು ತಂದ ರುಗ್ಮವತಿಯಲ್ಲಿ ಜನಿಸಿದ್ದ.
ರತಿರೇವ ಹಿ ಯಾ ತಸ್ಯಾಂ ಜಾತೋsಸೌ ಕಾಮನನ್ದನಃ ।
ಪೂರ್ವಮಪ್ಯನಿರುದ್ಧಾಖ್ಯೋ ವಿಷ್ಣೋಸ್ತನ್ನಾಮ್ನ ಏವಚ ॥೨೧.೨೫॥
ಆವೇಶಯುಕ್ತೋ ಬಲವಾನ್ ರೂಪವಾನ್ ಸರ್ವಶಾಸ್ತ್ರವಿತ್ ।
ತಸ್ಮಾತ್ ತಾಂಸ್ತ್ರಿನೃತೇ ಕೃಷ್ಣಃ ಪಾರ್ತ್ಥಸಾಹಾಯ್ಯಕಾರಣಾತ್ ॥೨೧.೨೬॥
ನ್ಯಯೋಜಯತ್ ಸೂತಿಕಾಲೇ ಬ್ರಾಹ್ಮಣ್ಯಾಃ ಸ ಚ ಫಲ್ಗುನಃ ।
ಅಸ್ತ್ರೈಶ್ಚಕಾರ ದಿಗ್ಬನ್ಧಂ ಕುಮಾರೋsಥಾಪಿತು ಕ್ಷಣಾತ್ ॥೨೧.೨೭॥
ಅದರ್ಶನಂ ಯಯೌ ಪಾರ್ತ್ಥೋ ವಿಷಣ್ಣಃ ಸಹ ಯಾದವೈಃ ।
ಅಧಿಕ್ಷಿಪ್ತೋ ಬ್ರಾಹ್ಮಣೇನ ಯಯೌ ಯತ್ರ ಶ್ರಿಯಃಪತಿಃ ॥೨೧.೨೮॥
ಆ ರುಗ್ಮವತಿ ಮೂಲರೂಪದಲ್ಲಿ ಸಾಕ್ಷಾತ್ ರತಿ,
ಅನಿರುದ್ಧ ಮಗನಾದರೆ, ರತಿ ಕಾಮ ಸತಿ ಪತಿ.
ಈತನಲ್ಲಿತ್ತು 'ಅನಿರುದ್ಧ' ನಾಮಕ ಭಗವಂತನ ಆವೇಶ,
ಬಲಿಷ್ಠ, ರೂಪವಂತ,ಶಾಸ್ತ್ರಜ್ಞನಾಗಿದ್ದದ್ದು ಅವನ ವಿಶೇಷ.
ಅರ್ಜುನಗೆ ಸಹಾಯ ಮಾಡಲು ಈ ಮೂವರನ್ನು ಬಿಟ್ಟು,
ಮಿಕ್ಕೆಲ್ಲ ಯಾದವರನ್ನು ಕಳಿಸಿದ್ದು ದೈವಸಂಕಲ್ಪದ ಗುಟ್ಟು.
ಅರ್ಜುನ ವಿಪ್ರಪತ್ನಿಯ ಪ್ರಸವಕಾಲದಲ್ಲಿ ಮಾಡಿದ್ದ ಅಸ್ತ್ರದಿಗ್ಬಂಧನ,
ಆದರೂ ಹುಟ್ಟಿದಕ್ಷಣದಲ್ಲೇ ಮಗು ಕಾಣದಾದಾಗ ನಿಂದಿತನಾದ ಅರ್ಜುನ,
ವಿಷಾದದಿಂದ ಯಾದವರೊಂದಿಗೆ ಬಂದುಸೇರಿದ ಶ್ರೀಕೃಷ್ಣನ ಸನ್ನಿಧಾನ.
No comments:
Post a Comment
ಗೋ-ಕುಲ Go-Kula