ದೈತ್ಯಾಶ್ಚ ನಾಗಾಶ್ಚ ಪಿಶಾಚಯಕ್ಷಾ ಹತಾಃ ಸರ್ವೇ ತದ್ವನಸ್ಥಾ ಹಿ ತಾಭ್ಯಾಮ್ ।
ಋತೇ
ಚತುಷ್ಪಕ್ಷಿಣಶ್ಚಾಶ್ವಸೇನಂ ಮಯಂ ಚ ನಾನ್ಯತ್ ಕಿಞ್ಚಿದಾಸಾತ್ರ ಮುಕ್ತಮ್ ॥೨೦.೨೩೮॥
ಖಾಂಡವವನ
ದಹನದಲ್ಲಿ ಅಲ್ಲಿದ್ದವರೆಲ್ಲಾ ಸುಟ್ಟುಹೋದರು,
ದೈತ್ಯ,ನಾಗ,ಪಿಶಾಚ,ಯಕ್ಷರೆಲ್ಲ
ಕೃಷ್ಣಾರ್ಜುನರಿಂದ ಹತರಾದರು.
ನಾಕು
ಪಕ್ಷಿಗಳು,ತಕ್ಷಕನ ಮಗ ಅಶ್ವಸೇನ, ದೈತ್ಯಶಿಲ್ಪಿ ಮಯ,
ಇವರನ್ನು
ಬಿಟ್ಟು ಮಿಕ್ಕೆಲ್ಲರ ನುಂಗಿತ್ತು ಅಗ್ನಿಜ್ವಾಲೆಯ ದಾಹ.
ಅಯಮಗ್ನೇ
ಜರಿತೇತ್ಯಾದಿಮನ್ತ್ರೈಃ ಸ್ತುತ್ವಾ ವಹ್ನಿಂ ಪಕ್ಷಿಣೋ ನೋಪದಗ್ಧಾಃ ।
ಅಶ್ವಸೇನಃ
ಪುತ್ರಕಸ್ತಕ್ಷಕಸ್ಯ ಮಾತ್ರಾ ಗ್ರಸ್ತಃ ಪ್ರಾತಿಲೋಮ್ಯೇನ ಕಣ್ಠೇ ॥೨೦.೨೩೯॥
‘ಅಯಮಗ್ನೇ
ಜರಿತಾ’ ಇತ್ಯಾದಿ ಮಂತ್ರಗಳ ನಾರಾಯಣ ಜಪದಿಂದ,
ನಾಕು
ಪಕ್ಷಿಗಳು ಉಳಿದುಕೊಂಡವು ಪಾರಾಗಿ ಅಗ್ನಿಯ ಜ್ವಾಲೆಯಿಂದ.
ತಕ್ಷಕಪುತ್ರ
ಅಶ್ವಸೇನನನ್ನು ತಾಯಿ ಹಿಂದುಮುಂದಾಗಿ ನುಂಗಿದ್ದಳು,
ಬಾಲ
ತುಂಡಾಗಿ ಉಳಿದ ಅಶ್ವಸೇನ ಅರ್ಜುನ ಅವಳ ತಲೆ ಕತ್ತರಿಸಲು.
ಛಿನ್ನೇsರ್ಜ್ಜುನೇನಾನ್ತರಿಕ್ಷೇ ಪತನ್ತ್ಯಾಸ್ತಸ್ಯಾಃ
ಶಕ್ರೇಣಾವಿತಶ್ಛಿನ್ನಪುಚ್ಛಃ ।
ವಧಾನ್ಮಾತುಃ
ಪುಚ್ಛಭಙ್ಗಾಚ್ಚ ರೋಷಾದ್ಧನ್ತುಂ ಪಾರ್ತ್ಥಂ ಕರ್ಣ್ಣತೂಣೀರಗೋsಭೂತ್ ॥೨೦.೨೪೦॥
ಆಕಾಶದಲ್ಲಿ
ಹಾರುತ್ತಿದ್ದ ತಕ್ಷಕನ ಹೆಂಡತಿಯ ತಲೆ ಕತ್ತರಿಸಲ್ಪಟ್ಟಿತ್ತು,
ಇಂದ್ರರಕ್ಷಿತನಾಗಿ
ಬಾಲಹೀನನಾಗಿ ಉಳಿದ ಅಶ್ವಸೇನನಲ್ಲಿ ಸೇಡಿತ್ತು,
ತನ್ನ
ತಾಯಿಯ ಸಾವು, ಬಾಲ ಹೋದ ನೋವು ಅರ್ಜುನನ ಕೊಲ್ಲಲು ಕಾದಿತ್ತು,
ಈ
ಹಿನ್ನೆಲೆಯ ದ್ವೇಷವು ಅಶ್ವಸೇನನನ್ನು ಕರ್ಣನ ಬತ್ತಳಿಕೆಯಲ್ಲಿ ಸೇರಿಸಿತ್ತು.
[ಮಯನ
ಕುರಿತು ಹೇಳುತ್ತಾರೆ:]
ಮಯಃ ಕೃಷ್ಣೇನಾsತ್ತಚಕ್ರೇಣ ದೃಷ್ಟೋ ಯಯೌ ಪಾರ್ತ್ಥಂ ಶರಣಂ ಜೀವನಾರ್ಥೀ ।
ಪಾರ್ತ್ಥಾರ್ತ್ಥಮೇನಂ ನ
ಜಘಾನ ಕೃಷ್ಣಃ ಸ್ವಭಕ್ತಶ್ಚೇತ್ಯತಿಮಾಯಂ ಪರೇಶಃ ॥೨೦.೨೪೧॥
ಚಕ್ರಧಾರಿ
ಶ್ರೀಕೃಷ್ಣ ಮಯನನ್ನು ನೋಡಿದ,
ಮಯ
ಅರ್ಜುನನಲ್ಲಿ ಜೀವಭಿಕ್ಷೆ ಬೇಡಿದ.
ಸರ್ವಸಮರ್ಥನಾದ
ಶ್ರೀಕೃಷ್ಣ ಅರ್ಜುನನಿಗೋಸ್ಕರ,
ಮತ್ತೆ
ಭಕ್ತನೂ ಆದ ಮಯನನ್ನು ಮಾಡಲಿಲ್ಲ ಸಂಹಾರ.
[ಮಯ
ನೇರವಾಗಿ ಕೃಷ್ಣನಲ್ಲಿ ಶರಣುಹೊಂದಬಹುದಿತ್ತು.
ಅರ್ಜುನನನ್ನು ಶರಣುಹೊಂದಿ, ಅರ್ಜುನನ ಮೂಲಕ ಕೃಷ್ಣನಿಂದ ಏಕೆ ಜೀವ
ಉಳಿಸಿಕೊಂಡ ಎನ್ನುವುದನ್ನು ವಿವರಿಸುತ್ತಾರೆ:]
ದೇವಾರಿರಿತ್ಯೇವ ಮಯಿ
ಪ್ರಕೋಪಃ ಕೃಷ್ಣಸ್ಯ ತೇನಾಹಮಿಮಂ ಪುರನ್ದರಮ್ ।
ಪಾರ್ತ್ಥಾತ್ಮಕಂ ಶರಣಂ
ಯಾಮಿ ತೇನ ಕೃಷ್ಣಪ್ರಿಯಃ ಸ್ಯಾಮಿತಿ ತಸ್ಯ ಬುದ್ಧಿಃ ॥ ೨೦.೨೪೨॥
ದೇವತೆಗಳ
ವೈರಿಯಾದ ನನ್ನಲ್ಲಿ ಕೃಷ್ಣನಿಗೆ ಕೋಪವಿದೆ,
ಅರ್ಜುನರೂಪದ
ಇಂದ್ರನ ಮೊರೆಹೋದರೆ ರಕ್ಷಣೆಯಿದೆ.
ಹಾಗೆ
ಮಾಡುವುದರಿಂದ ಕೃಷ್ಣಪರಮಾತ್ಮನಿಗೂ ಪ್ರಿಯ,
ಹೀಗೆಂದುಕೊಂಡು
ಅರ್ಜುನನ ಮೊರೆಹೋದ ಮಯ.
ಪ್ರಾಣೋಪಕೃತ್ ಪ್ರತ್ಯುಪಕಾರಮಾಶು ಕಿಂ ತೇ ಕರೋಮೀತಿ ಸ ಪಾರ್ತ್ಥಮಾಹ ।
ಕೃಷ್ಣಪ್ರಸಾದಾದ್ಧಿ
ಭವಾನ್ ವಿಮುಕ್ತಸ್ತಸ್ಮೈ ಕರೋತ್ವಿತ್ಯವದತ್ ಸ ಪಾರ್ತ್ಥಃ ॥೨೦.೨೪೩॥
ಪ್ರಾಣ
ಉಳಿಸಿದ ಅರ್ಜುನನೇ ನಿನಗೇನು ಪ್ರತ್ಯುಪಕಾರ ಮಾಡಲಿ ಎಂದ ಮಯ,
ಅರ್ಜುನನೆಂದ
-ಕೃಷ್ಣಪ್ರೀತಿಗಾಗಿ ಏನಾದರೂ ಮಾಡು ನಿನ್ನುಳಿಸಿದ್ದು ಅವನ ದಯ.
ಕೃಷ್ಣೋsಪಿ ರಾಜ್ಞೋsತಿವಿಚಿತ್ರರೂಪಸಭಾಕೃತಾವದಿಶತ್
ತಾಂ ಸ ಚಕ್ರೇ ।
ಅನಿರ್ಗ್ಗಮಂ
ಪ್ರಾಣಿನಾಮರ್ತ್ಥಿತೌ ತೌ ಹುತಾಶನೇನಾಥ ವಿಧಾಯ ಜಗ್ಮತುಃ ॥೨೦.೨೪೪॥
ಕೃಷ್ಣ
-ಯುಧಿಷ್ಠಿರನಿಗಾಗಿ ಮಾಡು ವಿಶೇಷ ಸಭಾಭವನ ನಿರ್ಮಾಣ,
ಮಯ
ಅದರಂತೇ ಮಾಡಿದ ಅನುಸರಿಸಿ ಶ್ರೀಕೃಷ್ಣನ
ಆಜ್ಞೆಯನ್ನ.
ಅಗ್ನಿ
ಪ್ರಾರ್ಥಿಸಿದ-ಉಳಿದ ಪ್ರಾಣಿಗಳಾವವೂ ಹೊರಹೋಗಬಾರದು,
ಹಾಗೆಯೇ
ಅನುಗ್ರಹಿಸಿದ ಮೇಲೆಯೇ ಕೃಷ್ಣ ಅರ್ಜುನರು ಹೊರಟದ್ದು.
ದೃಷ್ಟ್ವಾ ಚ ತೌ
ಪಾಣ್ಡವಾಃ ಸರ್ವ ಏವ ಮಹಾಮುದಂ ಪ್ರಾಪುರೇತನ್ನಿಶಮ್ಯ ।
ಕೃಷ್ಣೋsಪಿ ಪಾರ್ತ್ಥೈರ್ಮ್ಮುಮುದೇsನನ್ತಶಕ್ತಿಸುಖಜ್ಞಾನಪ್ರಾಭವೌದಾರ್ಯ್ಯವೀರ್ಯ್ಯಃ ॥೨೦.೨೪೫॥
ಹೀಗೆ
ಇಂದ್ರನ ಗೆದ್ದ, ಖಾಂಡವವನ ಸುಟ್ಟ ಮಯಾದಿಗಳನ್ನ ಉಳಿಸಿದ ವಿಷಯ,
ಕೇಳಿಸಿಕೊಂಡ
ಎಲ್ಲ ಪಾಂಡವರಿಗದು ಅತ್ಯಂತ ಸಂತೋಷದ ಸಮಯ.
ಮಿತಿಯಿರದ
ಶಕ್ತಿ, ಸುಖ, ಜ್ಞಾನ,
ಒಡೆತನ,
ಔದಾರ್ಯ,
ವೀರ್ಯಗಳ ಆಗರ,
ಪಾಂಡವರೊಂದಿಗಿದ್ದು
ಸಂತೋಷ ಪಟ್ಟನಂತೆ ಕೃಷ್ಣನೆಂಬ ಕರುಣಾಸಾಗರ.
॥ ಇತಿ
ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ
ಖಾಣ್ಡವದಾಹೋ ನಾಮ
ವಿಂಶೋsಧ್ಯಾಯಃ ॥
ಹೀಗೆ ಶ್ರೀಮದಾನಂದತೀರ್ಥರಿಂದ ರಚಿತವಾದ,
ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯಾನುವಾದ,
ಖಾಂಡವದಹನ ನಾಮಾಂಕಿತ ಇಪ್ಪತ್ತನೇ ಅಧ್ಯಾಯ,
ಅಂತರ್ಯಾಮಿ ಶ್ರೀಕೃಷ್ಣಗೆ ಅರ್ಪಿಸಿದ ಧನ್ಯತಾ
ಭಾವ.
**************
No comments:
Post a Comment
ಗೋ-ಕುಲ Go-Kula