Saturday 16 October 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 228 - 232

ವಿಶೇಷತೋ ಧ್ವಜಸಂಸ್ಥೇ ಹನೂಮತ್ಯಜೇಯತಾ ಸ್ಯಾಜ್ಜಯರೂಪೋ ಯತೋsಸೌ ।

ಸರ್ವಂ ಚ ತದ್ ದಿವ್ಯಮಭೇದ್ಯಮೇವ ವಿದ್ಯುತ್ಪ್ರಭಾ ಜ್ಯಾ ಚ ಗಾಣ್ಡೀವಸಂಸ್ಥಾ ॥೨೦.೨೨೮॥

ಯಾವ ಕಾರಣದಿಂದ ಎಲ್ಲರನ್ನೂ ಗೆದೆಯಬಲ್ಲ ಮುಖ್ಯಪ್ರಾಣ- ಜಯರೂಪ,

ಅಂಥ ಹನುಮ ಧ್ವಜದಲ್ಲಿರಲು ರಥಿಕ ಅನ್ಯರಿಂದ ಜಯಿಸಲಾಗದ ಭೂಪ.

ಮಿಂಚಿನಂಥಾ ಕಾಂತಿಯುಳ್ಳ ಹೆದೆಯಿದ್ದ ಗಾಂಡೀವವದು,

ಸಮಸ್ತವೂ ಅಲೌಕಿಕವಾಗಿದ್ದುದ್ದಲ್ಲದೆ ಅಭೇದ್ಯವಾದುದು.

 

ಗಾಣ್ಡೀವಮಪ್ಯಾಸ ಕೃಷ್ಣಪ್ರಸಾದಾಚ್ಛಕ್ಯಂ ಧರ್ತ್ತುಂ ಪಾಣ್ಡವಸ್ಯಾಪ್ಯಧಾರ್ಯ್ಯಮ್ ।

ದೇವೈಶ್ಚ ತೈರ್ಬ್ರಹ್ಮವರಾದ್ ಧೃತಂ ತದ್ ಬ್ರಹ್ಮೈವ ಸಾಕ್ಷಾತ್ ಪ್ರಭುರಸ್ಯ ಧಾರಣೇ ॥೨೦.೨೨೯॥

 ಬ್ರಹ್ಮನ ಬಿಟ್ಟರೆ ಉಳಿದವರಿಗೆ ಗಾಂಡೀವ ಧರಿಸಲು ಅಸಾಧ್ಯ,

ಆದರೆ ಕೃಷ್ಣನ ಅನುಗ್ರಹದಿಂದ ಅರ್ಜುನಗೆ ಆಗಿತ್ತದು ಸಾಧ್ಯ.

ಇತರೆ ದೇವತೆಗಳು ಬ್ರಹ್ಮವರದಿಂದ ಅದ  ಧರಿಸಲಾದರು ಬಾಧ್ಯ.

 

ಇನ್ದ್ರಸ್ಯ ದತ್ತಶ್ಚ ವರಃ ಸ್ವಯಮ್ಭುವಾ ತೇನಾಪಿ ಪಾರ್ತ್ಥಸ್ಯ ಬಭೂವ ಧಾರ್ಯ್ಯಮ್ ।

ಇನ್ದ್ರೋ ಹ್ಯಸೌ ಫಲ್ಗುನತ್ವೇನ ಜಾತಸ್ತತತಃ ಸೋsಸ್ತ್ರೈಃ ಶರಶಾಲಾಂ ಚಕಾರ ॥೨೦.೨೩೦॥

ಇತರ ದೇವತೆಗಳಂತೆ ಇಂದ್ರನಿಗೂ ಬ್ರಹ್ಮದೇವರು ಕೊಟ್ಟ ವರವಿತ್ತು,

ಹಾಗಾಗಿ ಅರ್ಜುನನಾದ ಇಂದ್ರನಿಗೂ ಗಾಂಡೀವ

ಧರಿಸುವ ಶಕ್ತಿಯಿತ್ತು.

ಆನಂತರ ಇಂದ್ರನೇ ಆದಂಥ ಅರ್ಜುನ,

ಖಾಂಡವವನಕ್ಕೆ ಮಾಡಿದ ಬಾಣದಾವರಣ.

 

ಸ ಯೋಜನದ್ವಾದಶಕಾಭಿವಿಸ್ತೃತಂ ಪುರಂ ಚಕಾರಾsಶು ಪುರನ್ದರಾತ್ಮಜಃ ।

ಹುತಾಶನೋsಪ್ಯಾಶು ವನಂ ಪ್ರಗೃಹ್ಯ ಪ್ರಭಕ್ಷಯಾಮಾಸ ಸಮುದ್ಧತಾರ್ಚ್ಚಿಃ ॥೨೦.೨೩೧॥

ಇಂದ್ರಪುತ್ರ ಅರ್ಜುನ ವನಕ್ಕೆ ನಿರ್ಮಿಸುತ್ತಿರಲು ಹನ್ನೆರಡು ಯೋಜನ ಶರಪಂಜರ,

ಅಗ್ನಿದೇವ ಖಾಂಡವವನವನ್ನು ಧಾವಂತದಿ ಸುಡುತ್ತಾ ಮಾಡಿಕೊಂಡ ತನಗೆ ಆಹಾರ.

 

ಪ್ರಭಕ್ಷ್ಯಮಾಣಂ ನಿಜಕಕ್ಷಮೀಕ್ಷ್ಯ ಸನ್ಧುಕ್ಷಯಾಮಾಸ ತದಾssಶುಶುಕ್ಷಣಿಮ್ ।

ಅಕ್ಷೋಪಮಾಭಿರ್ಬಹುಲೇಕ್ಷಣೋsಮ್ಭಸಾಂ ಧಾರಾಭಿರಾಕ್ಷುಬ್ಧಮನಾಃ ಕ್ಷಯಾಯ ॥೨೦.೨೩೨॥

ಇಂದ್ರ ತನ್ನ ವನ ಭಕ್ಷಿತವಾಗುತ್ತಿರುವುದನ್ನು ನೋಡಿದ,

ಅಗ್ನಿಯ ನಂದಿಸಲು ದೊಡ್ಡ ಧಾರೆಗಳ ಮಳೆ ಸುರಿಸಿದ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula