ಪುನಶ್ಚ ತೇ
ತ್ವಮನ್ತ್ರಯನ್ ಸಹೈವ ಪಾಪಬುದ್ಧಯಃ ।
ಧ್ರುವಂ ಸಮಾಗತೋ
ಹರಿರ್ಲ್ಲಭೇತ ರುಗ್ಮಿಣೀಮಿಮಾಮ್ ॥೧೭.೨೨॥
ಪಾಪಬುದ್ಧಿಯ ಜರಾಸಂಧಾದಿಗಳು ಮಾಡಿದರು ಮಂತ್ರಾಲೋಚನೆ ,
ಕೃಷ್ಣ ಬಂದನೆಂದಾದರೆ ಖಂಡಿತವಾಗಿ ರುಗ್ಮಿಣಿಯ ಪಡೆದೇ ಪಡೆಯುತ್ತಾನೆ .
ಅಯಂ ತ್ರಿಲೋಕಸುನ್ದರೋsನುರೂಪಿಣೀ ಚ ರುಗ್ಮಿಣೀ ।
ಮುಖೇನ ಬಾಹುನಾsಪ್ಯಯಂ ಸಮಸ್ತಲೋಕಜಿದ್ ವಶೀ ॥೧೭.೨೩॥
ಕೃಷ್ಣನದು ಮೂರ್ಲೋಕದಲ್ಲೇ ವಿಶಿಷ್ಟ ಚೆಲುವು ,
ರುಗ್ಮಿಣಿಯದು ಕೂಡಾ ಸೌಂದರ್ಯದ ನಿಲುವು .
ಇವನ ಮುಖದಿಂದ (ತೇಜಸ್ಸು) ಲೋಕ ಗೆದ್ದವ,
ಎಲ್ಲರನ್ನೂ ತನ್ನ ವಶದಲ್ಲಿಟ್ಟುಕೊಂಡವನವ .
ಸಮಸ್ತವೇದಿನಾಂ ವರಂ
ಜಿತಾರಿಮಗ್ರ್ಯರೂಪಿಣಮ್ ।
ಸಮಸ್ತಯೋಷಿತಾಂ ವರಾ
ವ್ರಜೇತ ರುಗ್ಮಿಣೀ ದ್ಧ್ರುವಮ್ ॥೧೭.೨೪॥
ಸರ್ವಜ್ಞರಲ್ಲಿ ಇವ ಅಗ್ರಗಣ್ಯ ,
ಶತ್ರುಗಳ ಗೆದ್ದ ಚೆಲುವವರೇಣ್ಯ .
ರುಗ್ಮಿಣಿ ಸರ್ವಸ್ತ್ರೀಯರಲ್ಲೇ ಬಲು ಶ್ರೇಷ್ಠ ,
ಅವಳು ಕೃಷ್ಣನನ್ನು ಸೇರುವುದು ಖಂಡಿತ .
ವಯಂ ಚ ಮಾನಸಂಙ್ಕ್ಷಯಮ್
ನಿತಾನ್ತಮಾಪ್ನುಮಸ್ತದಾ ।
ನ ಶಕ್ನುಮೋ ನಿವಾರಿತುಂ
ಶರೈರಮುಂ ಕಥಞ್ಚನ ॥೧೭.೨೫॥
ನಮಗಾಗುತ್ತದೆ ಆಗ ಮಾನಭಂಗದ ನೋವು ,
ಬಾಣಗಳು ಇವನ ತಡೆಯಲು ಶಕ್ತವಾಗಲಾರವು.
ಅತಃ ಸ್ವಯಮ್ಬರೇ ಯಥಾ ನ
ಸಙ್ಗಮೋ ಹರೇರ್ಭವೇತ್ ।
ತಥಾ ವಿಧಾನಮೇವ ನಃ
ಸುನೀತಿರೂರ್ಜ್ಜಿತಾ ದ್ಧ್ರುವಮ್ ॥೧೭.೨೬॥
ಆದಕಾರಣ ಸ್ವಯಂವರಕ್ಕೆ ಕೃಷ್ಣಸಂಗವಾಗದಿರುವ ರೀತಿ ,
ವ್ಯವಸ್ಥೆ ಮಾಡುವುದೊಂದೇ ನಿಶ್ಚಿತವಾಗಿ ಉತ್ತಮ ನೀತಿ.
No comments:
Post a Comment
ಗೋ-ಕುಲ Go-Kula