ತತಃ ಕದಾಚಿನ್ಮೃಗಯಾಂ
ಗತೇಷು ಪಾರ್ತ್ಥೇಷು ರಾಜಾ ಸೈನ್ಧವ ಆಸಸಾದ ।
ಸಕೋಟಿಕಾಶ್ಯಃ ಸಬಲಶ್ಚ ತೇಷಾಂ ವರಾಶ್ರಮಂ ಸೋSತ್ರ ದದರ್ಶ ಕೃಷ್ಣಾಮ್ ॥೨೨.೩೮೪॥
ಒಂದು ಸಲ ಪಾಂಡವರೆಲ್ಲರೂ ಬೇಟೆಗೆಂದು ಹೊರ ತೆರಳಿದ್ದಾಗ,
ಸಿಂಧೂ ದೇಶಾಧಿಪತಿ ಜಯದ್ರಥ ಕೋಟಿಕಾಶ್ಯನ ಜೊತೆ ಬಂದನಾಗ.
ತನ್ನ ಸೈನ್ಯದಿಂದ ಕೂಡಿಕೊಂಡು ಹೋಗುತ್ತಿದ್ದನವನು,
ಆಶ್ರಮಕ್ಕೆ ಬಂದು ಅಲ್ಲಿ ದ್ರೌಪದಿಯನ್ನು ನೋಡಿದನು.
ವ್ರಜನ್
ವಿವಾಹಾರ್ತ್ಥಮಸೌ ನಿಶಾಮ್ಯ ಕೃಷ್ಣಾಂ ಕೋಟಿಂ ಪ್ರೇಷಯಿತ್ವೈವ ಕಾಶ್ಯಮ್ ।
ಆಯಾಹಿ ಮಾಮಿತ್ಯವದತ್
ಸುಪಾಪಸ್ತಯಾ ನಿರಸ್ತೋ ಜಗೃಹೇ ಕರೇ ಚ ॥೨೨.೩೮೫॥
ಯಾವುದೋ ಒಂದು ಮದುವೆಗಾಗಿ ಆ ದಾರಿಯಲ್ಲಿ ಹೋಗುತ್ತಿದ್ದ ಜಯದ್ರಥ,
ಕೋಟಿಕಾಶ್ಯನನ್ನು ಕಳುಹಿಸಿ ದ್ರೌಪದಿಯನ್ನು ತನ್ನಲ್ಲಿಗೆ
ಬರಹೇಳಿದನಾತ.
ದ್ರೌಪದಿ ಮಾಡಿದಳದಕ್ಕೆ ತಿರಸ್ಕಾರ,
ಪಾಪಿ ಜಯದ್ರಥ ಹಿಡಿದ ಅವಳ ಕರ.
ತಯಾ ಧುತೋ ನಿಪಪಾತಾSಶು ಭೂಮೌ ಪುನಶ್ಚ ಸಜ್ಜೋSಭ್ಯಪತದ್ ವಿಲಜ್ಜಃ ।
ತತೋSಸಹಾಯತ್ವತ ಏವ ಕೃಷ್ಣಾ ಧೌಮ್ಯಾಯೋಕ್ತ್ವಾ ಸಾಗ್ನಿರನ್ವೇಹಿ ಮೇತಿ
॥೨೨.೩೮೬॥
ಸಮಾರುಹತ್ ಸೈನ್ಧವಸ್ಯೈವ
ಯಾನಂ ಸುಖಂ ನ ಯಾಸೀತಿ ತಮೀರಯಿತ್ವಾ ।
ತದಾ ನಿಮಿತ್ತಾನಿ
ನಿಶಾಮ್ಯ ಪಾರ್ತ್ಥಾಃ ಸಮಾಯಯುಸ್ತ್ವರಯೈವಾSಶ್ರಮಾಯ
॥೨೨.೩೮೭॥
ದ್ರೌಪದಿಯಿಂದ ತಳ್ಳಲ್ಪಟ್ಟ ಜಯದ್ರಥ ನೆಲದ ಮೇಲೆ ಬಿದ್ದ,
ಮತ್ತೆ ಸಿದ್ಧವಾಗೆದ್ದು ನಾಚಿಕೆ ಬಿಟ್ಟು ದ್ರೌಪದಿಯೆದುರು ನಿಂದ.
ಆಗ ಅಲ್ಲಿ ಸಹಾಯಕ್ಕೆ ಯಾರೂ ಇರದಂಥ ವೇಳೆ,
ದ್ರೌಪದಿ ಧೌಮ್ಯರಿಗೆ ಅಗ್ನಿ ಹಿಡಿದು ಬರಲ್ಹೇಳುತ್ತಾಳೆ.
ಜಯದ್ರಥಾ ನೀನು ಸುರಕ್ಷಿತವಾಗಿ ಹಿಂತಿರುಗಿ ಪಟ್ಟಣಕ್ಕೆ ಹೋಗಲಾರೆ ಎಂದ
ದ್ರೌಪದಿ,
ಅವನ ರಥವೇರುತ್ತಾಳೆ; ಅಪಶಕುನ ಕಂಡ ಪಾಂಡವರು ಹಿಡಿದರು ಆಶ್ರಮದ ಹಾದಿ.
ಶ್ರುತ್ವಾ ದಾಸೀವಚನಾತ್
ಸರ್ವಮೇವ ಚಕ್ರುಃ ಕ್ಷಿಪ್ರಂ ಸೈನ್ಧವಸ್ಯಾನುಯಾನಮ್ ।
ಅಕ್ರೋಶಮಾನಂ ಭೀಮಸೇನೇತಿ
ಧೌಮ್ಯಂ ದೃಷ್ಟ್ವಾ ತಸ್ಯಾಗ್ರೇ ಸೈನ್ಧವಂ ಚಾತಿಪಾಪಮ್ ॥೨೨.೩೮೮॥
ಚಕ್ರುರ್ನ್ನಾದಾನ್
ಸಿಂಹವತ್ ಪಾಣ್ಡುಪುತ್ರಾ ದೃಷ್ಟ್ವಾ ಕೃಷ್ಣಾ ಚಾವತರದ್ ರಥಾತ್ ತದಾ ।
ಧೌಮ್ಯೇನ ಸಾರ್ದ್ಧಂ ಸಾ
ಯಯೌ ಚಾSಶ್ರಮಾಯ ಸೈನ್ಯಂ ಪಾರ್ತ್ಥಾಸ್ತತ್ರ ನಿಜಘ್ನುರೋಜಸಾ ॥೨೨.೩೮೯॥
ಅಲ್ಲಿದ್ದ ದಾಸಿಯಿಂದ ಪಾಂಡವರು ಎಲ್ಲವನ್ನೂ ಕೇಳಿ ತಿಳಿಯುತ್ತಾರೆ,
ಮರುಕ್ಷಣದಲ್ಲಿ ಅವರು ಜಯದ್ರಥನ ಹಿಂಬಾಲಿಸಿ ಹೊರಡುತ್ತಾರೆ.
ಧೌಮ್ಯರು ಗಟ್ಟಿಯಾಗಿ ಕಿರುಚಿಕೊಳ್ಳುತ್ತಿದ್ದರು -ಭೀಮಸೇನಾ ಭೀಮಸೇನ,
ಅವರ ಮುಂದೆ ಜಯದ್ರಥನ ಕಂಡ ಪಾಂಡವರು ಮಾಡಿದರು ಸಿಂಹಗರ್ಜನ.
ಪಾಂಡವರ ಕಂಡ ದ್ರೌಪದಿ ರಥದಿಂದಿಳಿಯುತ್ತಾಳೆ,
ಧೌಮ್ಯರೊಂದಿಗೆ ಆಶ್ರಮದೆಡೆಗೆ ಹೋಗುತ್ತಾಳೆ.
ಜಯದ್ರಥನ ಸೈನ್ಯವಾಗುತ್ತದೆ ಪಾಂಡವರಿಗೆ ಆಹಾರ,
ಕ್ಷಣದಲ್ಲಿ ಮಾಡುತ್ತಾರೆ ಅವನ ಪೂರ್ಣಸೈನ್ಯವ ಸಂಹಾರ.
No comments:
Post a Comment
ಗೋ-ಕುಲ Go-Kula