Sunday 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 23: 27-35

 

ಅವದ್ಧ್ಯಂ ತಂ ನಿಹತಂ ವೀಕ್ಷ್ಯ ತಸ್ಯ ಪಞ್ಚೋತ್ತರಂ ಶತಮೇವಾನುಜಾನಾಮ್ ।

ಸರ್ವಂ ವರಾಚ್ಛಙ್ಕರಸ್ಯ ಹ್ಯವದ್ಧ್ಯಂ ಸಹೈವ ಕೃಷ್ಣಾಂ ತೇನ ದಗ್ಧುಂ ಬಬನ್ಧ ॥೨೩.೨೭॥

ಅವಧ್ಯನಾಗಿದ್ದಂಥ ದುಷ್ಟ ಕೀಚಕನವನು ಸತ್ತು ಬಿದ್ದಿದ್ದನ್ನು ಕಂಡು,

ರೊಚ್ಚೆದ್ದಿತು ರುದ್ರವರದಿ ಅವಧ್ಯರಾದ ನೂರೆಂಟು ಉಪಕೀಚಕರ ದಂಡು.

ದ್ರೌಪದಿಯನ್ನು ಕಟ್ಟಿಹಾಕಿದರು ಕೀಚಕನ ಜೊತೆ ಅವಳನ್ನೂ ಸುಡಲೆಂದು.

 

ಸಾ ನೀಯಮಾನಾ ಕೀಚಕೈಃ ಸಂರುರಾವ ಶ್ರುತ್ವೈವ ತಂ ಭೀಮಸೇನೋ ಮಹಾನ್ತಮ್ ।

ಉದ್ಧೃತ್ಯ ವೃಕ್ಷಂ  ತೇನ ಜಘಾನ ಸರ್ವಾನಾದಾಯ ಕೃಷ್ಣಾಂ ಪುನರಾಗಾತ್ ಪುರಂ ಚ ॥೨೩.೨೮॥

ಉಪಕೀಚಕರು ದ್ರೌಪದಿಯ ಕೊಂಡೊಯ್ಯುತ್ತಿರುವಾಗ,

ಅವಳು ಗಟ್ಟಿಯಾಗಿ ಕಿರುಚಿ ಕೂಗಿಕೊಳ್ಳುತ್ತಾಳಾಗ.

ಕೂಗ ಕೇಳಿದ ಭೀಮಸೇನ ದೊಡ್ಡ ಮರವೊಂದನ್ನು ಕಿತ್ತು ತಂದ,

ಅವರನ್ನೆಲ್ಲ ಕೊಂದು ದ್ರೌಪದಿಯೊಂದಿಗೆ ಮತ್ತೆ ಪಟ್ಟಣಕ್ಕೆ ಬಂದ.

 

ಏವಂ ಯತ್ನಾತ್ ತಪಸಾ ತೈರವಾಪ್ತೋ ವರಃ ಶಿವಾದಜಯತ್ವಂ ರಣೇಷು ।

ಅವದ್ಧ್ಯತಾ ಚೈವ ಷಡುತ್ತರಾಸ್ತೇ ಶತಂ ಹತಾ ಭೀಮಸೇನೇನ ಸಙ್ಖೇ ॥೨೩.೨೯॥

ಹೀಗೆ ಕೀಚಕನಂತೆ ನೂರೈದು ಉಪಕೀಚಕರ ಆ ದಂಡು,

ತಪಸ್ಸಾಚರಿಸಿ ಕೊಬ್ಬಿತ್ತು ಅಜೇಯತ್ವ ಅವಧ್ಯತ್ವದ ವರವುಂಡು.

ಕೀಚಕನ ಮತ್ತೆ ನೂರೈದು ಮಂದಿ ಉಪಕೀಚಕರ,

ನೂರಾಆರು ಜನರ ಭೀಮ ಮಾಡಿದ ಸಂಹಾರ.

 

ಗನ್ಧರ್ವ ಇತ್ಯೇವ ನಿಹತ್ಯ ಸರ್ವಾನ್ ಮುಮೋದ ಭೀಮೋ ದ್ರೌಪದೀ ಚಾsಥ ಕೃಷ್ಣಾಮ್ ।

ಯಾಹೀತ್ಯೂಚೇ ತಾಂ ಸುದೇಷ್ಣಾ ಭಯೇನ ತ್ರಯೋದಶಾಹಂ ಪಾಲಯೇತ್ಯಾಹ ತಾಂ ಸಾ ॥೨೩.೩೦॥

ಅವರನ್ನು ಕೊಂದ ಭೀಮ 'ಗಂಧರ್ವ ಕೊಂದ',

ಎಂದು ಎಲ್ಲರಿಗೆ ಹೇಳುತ್ತಾ ಆನಂದಪಡುತ್ತಿದ್ದ.

ದ್ರೌಪದಿಗೂ ಸಹಜವಾಗಿತ್ತು ಮಹದಾನಂದ.

ಭಯಗೊಂಡ ಸುದೇಷ್ಣೆ ದ್ರೌಪದಿಗೆ ಹೋಗೆನ್ನುತ್ತಾಳೆ,

ದ್ರೌಪದಿ : ಇನ್ನೂ ಹದಿಮೂರು ದಿನ ತಡೆದುಕೋ ಎನ್ನುತ್ತಾಳೆ.

 

ಅಸ್ತ್ವೀತ್ಯೇನಾಮಾಹ ಭಯಾತ್ ಸುದೇಷ್ಣಾ ತಥಾSವಸನ್ ಪೂರ್ಣಮಬ್ದಂ ಚ ತೇSತ್ರ ।

ತದಾ ಪಾರ್ತ್ಥಾನ್ ಪ್ರವಿಚಿತ್ಯಾಖಿಲಾಯಾಂ ಪೃಥ್ವ್ಯಾಂ ಛನ್ನಾನ್ ಧಾರ್ತ್ತರಾಷ್ಟ್ರಸ್ಯ ದೂತಾಃ ॥೨೩.೩೧॥

 

ಅವಿಜ್ಞಾಯ ಪ್ರಯಯುರ್ದ್ಧಾರ್ತ್ತರಾಷ್ಟ್ರಮೂಚುರ್ಹತಂ ಕೀಚಕಂ ಯೋಷಿದರ್ತ್ಥೇ ।

ತೇನಾವದದ್ ದ್ರೌಪದೀಕಾರಣೇನ ದುರ್ಯ್ಯೋಧನೋ ನಿಹತಂ ಕೀಚಕಂ ತಮ್ ॥೨೩.೩೨॥

ದ್ರೌಪದಿಯ ಮಾತನ್ನು ಭಯದಿಂದ ಒಪ್ಪಿಕೊಳ್ಳುತ್ತಾಳೆ ಸುದೇಷ್ಣಾ,

ಹೀಗಾಗುತ್ತದೆ ವಿರಾಟನಗರದಲ್ಲಿ ಪಾಂಡವರ ವಾಸ ವರ್ಷಪೂರ್ಣ.

ಇತ್ತ ದುರ್ಯೋಧನನ ದೂತರಿಂದ ನಡೆದಿತ್ತು ಪಾಂಡವರ ಹುಡುಕಾಟ,

ಹೇಳುತ್ತಾರೆ ;ಅವರು ಸಿಗಲಿಲ್ಲ ಆದರೆ ಕೀಚಕ ಒಂದ್ಹೆಣ್ಣಿಗಾಗಿ ಕೊಲ್ಲಲ್ಪಟ್ಟ.

ದುರ್ಯೋಧನ ಹೇಳುತ್ತಾನೆ : ದ್ರೌಪದಿಗಾಗಿ ಕೀಚಕನು ಸತ್ತದ್ದದು ದಿಟ.

 

ಭೀಮೇನಾಗುಸ್ತತ್ರ ದುರ್ಯ್ಯೋಧನಾದ್ಯಾ ಭೀಷ್ಮಾದಿಭಿಃ ಸಹ ಕರ್ಣ್ಣೇನ ಚೈವ ।

ಅಗ್ರೇ ಯಯೌ ತತ್ರ ಯೋದ್ಧುಂ ಸುಶರ್ಮ್ಮಾ ಸ ಗಾ ವಿರಾಟಸ್ಯ ಸಮಾಜಹಾರ ॥೨೩.೩೩॥

ದುರ್ಯೋಧನ ಹೇಳಿದ : ಭೀಮಸೇನನೇ ಕೀಚಕನ ಕೊಂದಿದ್ದಾನೆ,

ಭೀಷ್ಮ, ಕರ್ಣ ಮುಂತಾದದವರೊಡನೆ ವಿರಾಟ ನಗರಕ್ಕೆ ಬರುತ್ತಾನೆ.

ಮೊದಲು ರಾಜ ಸುಶರ್ಮ ಯುದ್ಧಕೆ ಬಂದ,

ವಿರಾಟನ ಗೋವುಗಳ ಅಪಹರಣ ಮಾಡಿದ.

 

ಶ್ರುತ್ವಾ ವಿರಾಟೋSನುಯಯೌ ಸಸೇನಸ್ತಂ ಪಾಣ್ಡವಾಶ್ಚಾನುಯಯುರ್ವಿನಾSರ್ಜ್ಜುನಮ್ ।

ವಿಜಿತ್ಯ ಸಙ್ಖೇ ಜಗೃಹೇ ವಿರಾಟಂ ತದಾ ಸುಶರ್ಮ್ಮಾ ತಮಯಾದ್ ವೃಕೋದರಃ ॥೨೩.೩೪॥

ತ್ರಿಗರ್ತದೇಶದ ರಾಜ ಸುಶರ್ಮ ಆಕ್ರಮಣ ಮಾಡಿದಾಗ,

ವಿರಾಟರಾಜ ಸೈನ್ಯದೊಂದಿಗೆ ಸುಶರ್ಮನ ಬೆನ್ನಟ್ಟಿದನಾಗ.

ಅರ್ಜುನನನ್ನು ಬಿಟ್ಟುಳಿದ ಪಾಂಡವರು ಅವನನ್ನನುಸರಿಸುತ್ತಾರೆ,

ಯುದ್ಧದಲ್ಲಿ ಗೆದ್ದ ಸುಶರ್ಮ ಮಾಡುತ್ತಾನೆ ವಿರಾಟರಾಜನ ಸೆರೆ.

ಆಗ ಭೀಮಸೇನದೇವರು ಸುಶರ್ಮನ ಹಿಂಬಾಲಿಸಿ ತೆರಳುತ್ತಾರೆ.

 

ಸ ತಸ್ಯ ಸೇನಾಂ ವಿನಿಹತ್ಯ ಮಾತ್ಸ್ಯಂ ವಿಮೋಚ್ಯ ಜಗ್ರಾಹ ಸುಶರ್ಮ್ಮರಾಜಮ್ ।

ಯುಧಿಷ್ಠಿರೋ ಮೋಚಯಮಾಸ ತಂ ಚ ತತೋ ರಾತ್ರೌ ನ್ಯವಸನ್ ಬಾಹ್ಯತಸ್ತೇ ॥೨೩.೩೫॥

ಭೀಮಸೇನ ಸುಶರ್ಮನ ಸೇನೆಯ ಕೊಂದ,

ವಿರಾಟನ ಬಿಡಿಸಿ, ಸುಶರ್ಮನ ಸೆರೆಹಿಡಿದ.

ಸುಶರ್ಮನನ್ನು ಯುಧಿಷ್ಠಿರ ಬಿಡಿಸುತ್ತಾನಾಗ,

ಅವರೆಲ್ಲ ಆರಾತ್ರಿ ಕಳೆದದ್ದು ನಗರದ ಹೊರಭಾಗ.

No comments:

Post a Comment

ಗೋ-ಕುಲ Go-Kula