Saturday 10 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 173-180

 

ಪೂರ್ವಂ ತೇನೋದಿತಂ ಯತ್ತಲ್ಲೋಕಾನ್ ಮೋಹಯತಾSಞ್ಚಸಾ ।

ಶರ್ವಂ ಪ್ರತಿ ತವಾಹಂ ತು ಕುರ್ಯ್ಯಾಂ ದ್ವಾದಶವತ್ಸರಮ್ ॥೨೨.೧೭೩॥

 

ತಪೋSಸುರಾಣಾಂ ಮೋಹಾಯ ಸುರಾಃ ಸನ್ತು ಗತಜ್ವರಾಃ ।

ಇತಿ ತಸ್ಮಾತ್ ತದಾ ಕೃಷ್ಣ ಏಕಾಹೇನ ಬೃಹಸ್ಪತಿಮ್ ॥೨೨.೧೭೪॥

 

ಆಜ್ಞಯಾ ಚಾರಯಾಮಾಸ ಕ್ಷಿಪ್ರಂ ದ್ವಾದಶರಾಶಿಷು ।

ದ್ವಾದಶಾಬ್ದಮಭೂತ್ ತೇನ ತದಹಃ ಕೇಶವೇಚ್ಛಯಾ ॥೨೨.೧೭೫॥

ಅಸುರರನ್ನು ಮೋಹಿಸಲೆಂದು ನಿಯಾಮಕ ಭಗವಂತ,

ರುದ್ರತಪವ ಮಾಡುವೆನೆಂದಿದ್ದ ದ್ವಾದಶ ವರ್ಷ ಪರ್ಯಂತ,

ಅದಕ್ಕೇ ಹಾಗೆ ರುದ್ರಗೆ ಹೇಳಿದ್ದ-ದೇವತೆಗಳಿರಲಿ ನಿಶ್ಚಿಂತ.

ಭಗವಂತನ ಹನ್ನೆರಡು ವರ್ಷಗಳ ಆ ತಪಸ್ಸಿನ ಕಾಲ,

ಬೃಹಸ್ಪತಿ ದೈವಾಜ್ಞೆಯಂತೆ ದ್ವಾದಶ ರಾಶಿ ಸುತ್ತಿದ ಜಾಲ.

ಅದೇನಾಶ್ಚರ್ಯ ಎಲ್ಲಾ ನಿಯಂತ್ರಿಸುವ ನಿಯಾಮಕಗೆ,

ಅದರಂತೆ ಒಂದೇ ದಿನ ಹನ್ನೆರಡು ವರ್ಷವಾದ ದೈವೀ ಬಗೆ.

 

ಏಕಸ್ಮಿನ್ನಹ್ನಿ ಭಗವಾನ್ ರಾಶಿಂರಾಶಿಂ ಚ ವತ್ಸರಮ್ ।

ಕಲ್ಪಯಿತ್ವೋಪವಾಸಾದೀನ್ ಮನಸಾ ನಿಯಮಾನಪಿ             ॥೨೨.೧೭೬॥

 

ಮಾಸಬ್ರತಂ ಸಾರ್ದ್ಧಶತಶ್ವಾಸಕಾಲೈರಕಲ್ಪಯತ್ ।

ಮನಸೈವ ಸ್ವಭಕ್ತಾನಾಂ ದ್ವಾದಶಾಬ್ದವ್ರತಾಪ್ತಯೇ                   ॥೨೨.೧೭೭॥

ಆ ಒಂದೇ ದಿವಸ ಕೃಷ್ಣನಿಂದ ಕೆಲವೊಂದು ಶ್ವಾಸ ಮುಖೇನ ವ್ರತಾಚರಣೆ,

ದ್ವಾದಶ ವರ್ಷದ ವ್ರತಫಲದ ಲಾಭಕ್ಕೆ ಸರ್ವಶಕ್ತ ಮಾಡಿಟ್ಟ ಸಲಕರಣೆ.

 

ತತ್ರಾಸ್ಯ ಗರುಡಾದ್ಯಾಶ್ಚ ಪರಿಚರ್ಯ್ಯಾಂ ಸ್ವಪಾರ್ಷದಾಃ ।

ಚಕ್ರುರ್ಹೋಮಾದಿಕಾಶ್ಚೈವ ಕ್ರಿಯಾಶ್ಚಕ್ರೇ ಜನಾರ್ದ್ದನಃ ।

ಸ್ವಾತ್ಮಾನಂ ಪ್ರತಿ ಪಾಪಾನಾಂ ಶಿವಾಯೇತಿ ಪ್ರಕಾಶಯನ್ ॥೨೨.೧೭೮॥

ಆಗ ಗರುಡ ಮೊದಲಾದವರಿಂದ ನಡೆಯಿತು ಭಗವಂತನ ಸೇವೆ,

ಪಾಪಾತ್ಮರಿಗೆ ಕೃಷ್ಣ ರುದ್ರ ತಪಸ್ಸಿನಲ್ಲಿದ್ದಾನೆಂಬ ಭ್ರಮೆಗೆ ಪುರಾವೆ.

ಕೃಷ್ಣ ತನ್ನ ತಾನೇ ಪೂಜಿಸಿಕೊಂಡ ಹೋಮ ಹವನಾದಿಗಳಿಂದ,

ನೋಡುಗರಿಗೆ ಕೊಟ್ಟಿದ್ದು ಸದಾಶಿವನ ಪೂಜೆ ಎಂಬ ಮೋಹಾನಂದ.

 

ಏವಂ ಸ್ಥಿತಂ ತಮರವಿನ್ದದಲಾಯತಾಕ್ಷಂ ಬ್ರಹ್ಮೇನ್ದ್ರಪೂರ್ವಸುರಯೋಗಿವರಪ್ರಜೇಶಾಃ ।

ಅಭ್ಯಾಯಯುಃ ಪಿತೃಮುನೀನ್ದ್ರಗಣೈಃ ಸಮೇತಾ ಗನ್ಧರ್ವಸಿದ್ಧವರಯಕ್ಷವಿಹಙ್ಗಮಾದ್ಯಾಃ ॥೨೨.೧೭೯॥

ಹೀಗೆ ಕಮಲಾಕ್ಷನಾದ ಪರಮಾತ್ಮ ತಪಸ್ಸಿನಲ್ಲಿ ನಿರತನಾಗಿರುವಾಗ,

ಬ್ರಹ್ಮ ಇಂದ್ರಾದಿ ದೇವತೆಗಳು ಪಿತೃದೇವತೆಗಳು ಬಂದು ಸೇರಿದರಾಗ.

ಪ್ರಜಾಪತಿಗಳು ಬ್ರಹ್ಮರ್ಷಿ ಸಮೂಹದ ಆಗಮನ,

ಗಂಧರ್ವ ಸಿದ್ಧ ಯಕ್ಷರೆಲ್ಲರೂ ಸೇರಿದಂಥ ಕ್ಷಣ.

 

ಶರ್ವೋsಪಿ ಸರ್ವಸುರದೈವತಮಾತ್ಮದೈವಮಾಯಾತಮಾತ್ಮಗೃಹಸನ್ನಿಧಿಮಾಶ್ವವೇತ್ಯ ।

ಅಭ್ಯಾಯಯೌ ನಿಜಗಣೈಃ ಸಹಿತಃ ಸಭಾರ್ಯ್ಯೋ ಭಕ್ತ್ಯಾsತಿಸಮ್ಭ್ರಮಗೃಹೀತಸಮರ್ಹಣಾಗ್ರ್ಯಃ ॥೨೨.೧೮೦॥

ಎಲ್ಲಾ ದೇವತೆಗಳ ಮನ ಮನೆಯ ಆರಾಧ್ಯ ದೈವ,

ತನ್ನ ಮನೆ ಕೈಲಾಸಕ್ಕೆ ಬಂದಿರುವುದನ್ನರಿತ ಶಿವ.

ತನ್ನ ಭೂತಗಣ, ಪತ್ನಿಯೊಂದಿಗೆ ಕೂಡಿಕೊಂಡ,

ಪೂಜಾಸಾಮಗ್ರಿಗಳೊಡನೆ ಕೃಷ್ಣನ ಎದಿರುಗೊಂಡ.

No comments:

Post a Comment

ಗೋ-ಕುಲ Go-Kula