Saturday, 10 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 211-218

 

ರಾಮೋ ವಿಜಿತ್ಯಾತಿಬಲಂ ರಣೇ ರಿಪುಂ ಮುದೈವ ದಾಮೋದರಮಾಸಸಾದ ।

ಪೌಣ್ಡ್ರಸ್ತ್ವವಜ್ಞಾಯ ಶಿನಿಪ್ರವೀರಂ ನಿವಾರ್ಯ್ಯಮಾಣೋSಪಿ ಯಯೌ ಜನಾರ್ದ್ದನಮ್ ॥೨೨.೨೧೧॥

ಬಲರಾಮ ಬಲಿಷ್ಠ ಶತ್ರುವಾದ ಏಕಲವ್ಯನ ಗೆದ್ದ,

ಬಲು ಸಂತೋಷದಿಂದ ಶ್ರೀಕೃಷ್ಣನ ಬಳಿಗೆ ಬಂದ.

ಪೌಂಡ್ರಕ ವಾಸುದೇವಗೆ ಸಾತ್ಯಕಿಯಿಂದ ಆದರೂ ತಡೆ,

ಸಾತ್ಯಕಿಯ ತಿರಸ್ಕರಿಸಿ ಶ್ರೀಕೃಷ್ಣನ ಕಡೆಗೆ ಇತ್ತವನ ನಡೆ.

 

ತಂ ಕೇಶವೋ ವಿರಥಂ ವ್ಯಾಯುಧಂ ಚ ಕ್ಷಣೇನ ಚಕ್ರೇ ಸ ಯಯೌ ನಿಜಾಂ ಪುರೀಮ್ ।

ಪ್ರಸ್ಥಾಪಯಾಮಾಸ ಪುನಶ್ಚ ದೂತಂ ಕೃಷ್ಣಾಯೈಕೋ ವಾಸುದೇವೋSಹಮಸ್ಮಿ ॥೨೨.೨೧೨॥

 

ಮದೀಯಲಿಙ್ಗಾನಿ ವಿಸೃಜ್ಯ ಚಾsಶು ಸಮಾಗಚ್ಛೇಥಾಃ ಶರಣಂ ಮಾಮನನ್ತಮ್ ।

ತದ್ದೂತೋಕ್ತಂ ವಾಕ್ಯಮೇತನ್ನಿಶಮ್ಯ ಯದುಪ್ರವೀರಾ ಉಚ್ಚಕೈಃ ಪ್ರಾಹಸನ್ ಸ್ಮ ॥೨೨.೨೧೩॥

ಕೃಷ್ಣನಿಂದ ಪೌಂಡ್ರಕನಾದ ಕ್ಷಣ ಮಾತ್ರದಲ್ಲಿ ರಥ ಆಯುಧಹೀನ,

ಆಯುಧ ರಥಹೀನನಾದವನು ಹೊರಟ ತನ್ನ ದೇಶದತ್ತ ಪ್ರಯಾಣ.

ತನ್ನೂರಿಗೆ ಹೋದವನು ಕೃಷ್ಣಗೆ ಸಂದೇಶ ಕಳಿಸುತ್ತಾನೆ,

ಅದು ಹೀಗೆ : ನಾನೊಬ್ಬನೇ ವಾಸುದೇವ ಆಗಿರುತ್ತೇನೆ.

ಚಕ್ರ ಶಂಖ ಗದೆ ವಾಹನ ಗರುಡ ಶ್ರಿವತ್ಸ ಎಲ್ಲಾ ನನ್ನವೇ,

ನನ್ನ ಎಲ್ಲಾ ಚಿಹ್ನೆ ವಾಹನಗಳ ನೀನು ಉಪಯೋಗಿಸುತ್ತಿರುವೆ.

ಅವುಗಳನ್ನೆಲ್ಲಾ ಕೂಡಲೇ ನನಗೆ ಬಿಟ್ಟು ಕೊಟ್ಟು ಬಿಡು,

ಸಮವಿರದ ಪರಾಕ್ರಮಿಯಾದ ನನ್ನಲ್ಲಿ ಶರಣು ಹೊಂದು.

ಹೀಗಿತ್ತು ಪೌಂಡ್ರಕ ಕಳುಹಿಸಿದ ಸಂದೇಶದ ಬಗೆ,

ಕೇಳಿದ ಯಾದವರಿಂದ ಬಂತು ಗಟ್ಟಿಯಾದ ನಗೆ.

 

ಕೃಷ್ಣಃ ಪ್ರಹಸ್ಯಾSಹ ತವಾSಯುಧಾನಿ ದಾಸ್ಯಾಮ್ಯಹಂ ಲಿಙ್ಗಭೂತಾನಿ ಚಾSಜೌ ।

ಇತ್ಯುಕ್ತೋSಸೌ ದೂತ ಏತ್ಯಾSಹ ತಸ್ಮೈ ಸ ಚಾಭ್ಯಾಗಾದ್ ಯೋದ್ಧುಕಾಮೋ ಹರಿಶ್ಚ ॥೨೨.೨೧೪॥

ಶ್ರೀಕೃಷ್ಣ ಹೇಳುತ್ತಾನೆ ನಗುವಿನ ಮಧ್ಯದಲ್ಲಿ,

ಆಯುಧಗಳ ಕೊಡುವೆ ನಿನಗೆ ಯುದ್ಧದಲ್ಲಿ.

ಸಂದೇಶ ಹೊತ್ತ ದೂತ ಪೌಂಡ್ರಕನ ತಲುಪಿದ,

ಅವನಿಗೆ ಕೃಷ್ಣ ಹೇಳಿದ್ದೆಲ್ಲವನ್ನೂ ವರದಿಮಾಡಿದ.

ಪೌಂಡ್ರಕ ಕೃಷ್ಣನ ಮೇಲೆ ಯುದ್ಧಕೆ ಬಂದ,

ಕೃಷ್ಣ ಕೂಡಾ ಯುದ್ಧಕೆ ಸಿದ್ಧನಾಗಿ ನಿಂದ.

 

ತಂ ಶಾತಕೌಮ್ಭೇ ಗರುಡೇ ರಥಸ್ಥೇ ಸ್ಥಿತಂ ಚಕ್ರಾದೀನ್ ಕೃತ್ರಿಮಾನ್ ಸನ್ದಧಾನಮ್ ।

ಶ್ರೀವತ್ಸಾರ್ತ್ಥೇ ದಗ್ಧವಕ್ಷಸ್ಥಲಂ ಚ ದೃಷ್ಟ್ವಾ ಕೃಷ್ಣಃ ಪ್ರಾಹಸತ್ ಪಾಪಬುದ್ಧಿಮ್ ॥೨೨.೨೧೫॥

ರಥದ ಮೇಲಿಟ್ಟಿದ್ದ ಕೃತಕ ಬಂಗಾರದ ಗರುಡನ ಮೇಲೇರಿ,

ಕೃತಕ ಚಿಹ್ನೆ ತೋಳುಗಳನ್ನು ಧರಿಸಿದ ಪೌಂಡ್ರಕನ ಸವಾರಿ.

ಶ್ರಿವತ್ಸ ಚಿಹ್ನೆಗಾಗಿ ತನ್ನ ಎದೆ ಸುಟ್ಟುಕೊಂಡಿದ್ದ ಬಗೆ,

ಪಾಪಿಷ್ಠ ಬುದ್ಧಿಯವನ ಕಂಡು ಕೃಷ್ಣಗೆ ಬಂತು ನಗೆ.

 

ತತೋsಸ್ತ್ರಶಸ್ತ್ರಾಣ್ಯಭಿವರ್ಷಮಾಣಂ ವಿಜಿತ್ಯ ತಂ ವಾಸುದೇವೋSರಿಣೈವ ।

ಚಕರ್ತ್ತ ತತ್ಕನ್ಧರಂ ತಸ್ಯ ಚಾನು ಮಾತಾಮಹಸ್ಯಾಚ್ಛಿನತ್ ಸಾಯಕೇನ ॥೨೨.೨೧೬॥

ಅಸ್ತ್ರ ಶಸ್ತ್ರಗಳ ಮಳೆಗರೆಯುತ್ತಿದ್ದ ಪೌಂಡ್ರಕ ವಾಸುದೇವ,

ಅವನ ಗೆದ್ದು ಮತ್ತವನ ತಲೆ ತೆಗೆದ ಶ್ರೀಕೃಷ್ಣ ವಾಸುದೇವ.

ಆನಂತರ ಅವನ ತಾತನ ತಲೆಯನ್ನೂ ತೆಗೆದ ಕೃಷ್ಣದೇವ.

 

ಅಪಾತಯಚ್ಚಾSಶು ಶಿರಃ ಸ ತೇನ ಕಾಶೀಶ್ವರಸ್ಯೇಶ್ವರೋ ವಾರಣಸ್ಯಾಮ್ ।

ಸ ಚ ಬ್ರಹ್ಮಾಹಂ ವಾಸುದೇವೋSಸ್ಮಿ ನಿತ್ಯಮಿತಿ ಜ್ಞಾನಾದಗಮತ್ ತತ್ ತಮೋSನ್ಧಮ್ ॥೨೨.೨೧೭॥

ಶ್ರೀಕೃಷ್ಣ ಕಾಶೀರಾಜನ ತಲೆಯ ಬಾಣದಿಂದ ಹೊಡೆದ,

ಅದು ಹಾರಿ ವಾರಣಾಸಿಯಲ್ಲಿ ಬೀಳುವಂತೆ ಮಾಡಿದ.

ನಾನೇ ಬ್ರಹ್ಮ, ನಾನೇ ವಾಸುದೇವ ಎಂದಿತ್ತು ಅವನ ಪರಿ,

ಅಂಥವನಿಗೆ ಶ್ರೀಕೃಷ್ಣ ತೋರಿದ ಅಂಧಂತಮಸ್ಸಿನ ದಾರಿ.

 

ಸಹಾಯ್ಯಕೃಚ್ಚಾಸ್ಯ ಚ ಕಾಶಿರಾಜೋ ಯಥೈವ ಕಿರ್ಮ್ಮೀರಹಿಡಿಮ್ಬಸಾಲ್ವಾಃ ।

ಅನ್ಯೇ ಚ ದೈತ್ಯಾ ಅಪತಂಸ್ತಮೋSನ್ಧೇ ತಥೈವ ಸೋSಪ್ಯಪತತ್ ಪಾಪಬುದ್ಧಿಃ ॥೨೨.೨೧೮॥

ಹೀಗೆ ಕಿರ್ಮೀರ, ಹಿಡಿಂಬ, ಸಾಲ್ವ ಇತ್ಯಾದಿ ದೈತ್ಯರುಗಳು ಸೇರಿದರು ಅಂಧಂತಮಸ್ಸು,

ದೈವವಿರೋಧಿ ಪೌಂಡ್ರಕಗೆ ಸಹಾಯಕನಾದ ಕಾಶೀರಾಜಗೂ ಅಲ್ಲಿಗೆ ಕಳಿಸಿತ್ತು ದೈವ ಸಲೀಸು.

No comments:

Post a Comment

ಗೋ-ಕುಲ Go-Kula