Saturday, 10 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 261-265

 

ಯದಾ ಜ್ವರಾದ್ಯಾ ಅಖಿಲಾಃ ಪ್ರವಿದ್ರುತಾಸ್ತದಾ ಸ್ವಯಂ ಪ್ರಾಪ ಹರಿಂ ಗಿರೀಶಃ ।

ತಯೋರಭೂದ್ ಯುದ್ಧಮಥೈನಮಚ್ಯುತೋ ವಿಜೃಮ್ಭಯಾಮಾಸ ಹ ಜೃಮ್ಭಣಾಸ್ತ್ರತಃ ॥೨೨.೨೬೧॥

ಯಾವಾಗ ಆಯಿತೋ ಜ್ವರ ಮೊದಲಾದ ಎಲ್ಲಾ ಭೃತ್ಯರ ಪಲಾಯನ,

ಸ್ವಯಂ ರುದ್ರನೇ ಬಂದ ಯುದ್ಧದಲ್ಲಿ ಎದುರಿಸಲು ನಾರಾಯಣನನ್ನ.

ಶ್ರೀಕೃಷ್ಣ ಮತ್ತು ಸದಾಶಿವನ ನಡುವೆ ನಡೆಯಿತು ಯುದ್ಧ,

ಕೃಷ್ಣ ಜೃಂಭಣಾಸ್ತ್ರದಿಂದ ಸದಾಶಿವನ ಮಾಡಿದ ಸ್ತಬ್ಧ.

 

ವಿಜೃಮ್ಭಿತೇ ಶಙ್ಕರೇ ನಿಷ್ಪ್ರಯತ್ನೇ ಸ್ಥಾಣೂಪಮೇ ಸಂಸ್ಥಿತೇ ಕಞ್ಜಜಾತಃ ।

ದೈತ್ಯಾವೇಶಾದ್ ವಾಸುದೇವಾನಭಿಜ್ಞಂ ಸಮ್ಬೋಧಯಾಮಾಸ ಸದುಕ್ತಿಭಿರ್ವಿಭುಃ ॥೨೨.೨೬೨॥

ತನ್ನ ದೇಹದ ಎಲ್ಲಾ ಕ್ರಿಯೆಗಳನ್ನು ಕಳೆದುಕೊಂಡ ಸದಾಶಿವ,

ಅಲುಗಾಡಿಸಲಾಗದ ಮೋಟುಮರದಂತಾಯಿತು ರುದ್ರದೇಹ.

ದೈತ್ಯಾವೇಶದಿಂದ ಭಗವಂತನ ತಿಳಿಯದೇ ಯುದ್ಧ ಮಾಡುತ್ತಿದ್ದ ಸದಾಶಿವ,

ವೇದೋಕ್ತಿಗಳಿಂದ ತಿಳುವಳಿಕೆ ಕೊಡುತ್ತಾ ನೆನಪು ಮಾಡಿಕೊಟ್ಟ ಬ್ರಹ್ಮದೇವ.

 

ಪ್ರಗೃಹ್ಯ ಶರ್ವಂ ಚ ವಿವೇಶ ವಿಷ್ಣೋಃ ಸ ತೂದರಂ ದರ್ಶಯಾಮಾಸ ತತ್ರ ।

ಶಿವಸ್ಯ ರೂಪಂ ಸ್ತಮ್ಭಿತಂ ಬಿಲ್ವನಾಮ್ನಿ ವನೇ ಗಿರೀಶೇನ ಚ ಯತ್ ತಪಃ ಕೃತಮ್ ।

ಶೈವಂ ಪದಂ ಪ್ರಾಪ್ತುಮೇವಾಚ್ಯುತಾಚ್ಚ ತಚ್ಚಾವದತ್ ಕಞ್ಜಜಃ ಶಙ್ಕರಸ್ಯ ॥೨೨.೨೬೩॥

ಶಿವನೊಂದಿಗೆ ಬ್ರಹ್ಮ ಮಾಡಿದ ಶ್ರೀಕೃಷ್ಣನ ಉದರ ಪ್ರವೇಶ,

ತೋರಿದ ಕೃಷ್ಣಾಸ್ತ್ರದಿಂದ ಸ್ತಂಭಿತವಾಗಿ ಬದಲಾದ ರುದ್ರವೇಷ.

ಬಿಲ್ವಾ ಕಾಡಿನಲ್ಲಿ ಸದಾಶಿವ ಶಿವಪದವಿಗಾಗಿ ತಪಸ್ಸು ಮಾಡಿದ್ದ,

ಆ ಪದವಿ ಇತ್ತು ಅನುಗ್ರಹಿಸಿದ ಭಗವಂತಗೇ ಎದುರು ನಿಂತಿದ್ದ.

ಬೋಧನೆ ಮಾಡಿ ರುದ್ರನಿಗೆ ಅರಿವು ನೀಡಿದ ಬ್ರಹ್ಮದೇವ,

ನೆನಪಿಸಿಕೊಟ್ಟ ಸದಾಶಿವ ಉಪಾಸಿಸುವ ಆ ಭಗವದ್ರೂಪವ.

 

ಅಪೇತಮೋಹೋsಥ ವೃಷಧ್ವಜೋ ಹರಿಂ ತುಷ್ಟಾವ ಬಾಣೋSಭಿಸಸಾರ ಕೇಶವಮ್ । ತಸ್ಯಾಚ್ಯುತೋ  ಬಾಹುಸಹಸ್ರಮಚ್ಛಿನತ್ ಪುನಶ್ಚಾರಿಂ ಜಗೃಹೇ ತಚ್ಛಿರೋರ್ತ್ಥೇ ॥೨೨.೨೬೪॥

ಆನಂತರ ಮೋಹವನ್ನು ಕಳೆದುಕೊಂಡವನಾದ,

ವೃಷಭಧ್ವಜ ಭಗವಂತನ ಸ್ತೋತ್ರವನ್ನು ಮಾಡಿದ.

ಬಾಣಾಸುರ ಭಗವಂತನ ಮೇಲೆ ಯುದ್ಧಕೆ ಬಂದ,

ಕೃಷ್ಣ ಅವನ ಸಾಸಿರ ತೋಳುಗಳ ಕತ್ತರಿಸಿಹಾಕಿದ.

ಅವನ ಶಿರಸ್ಸು ಕತ್ತರಿಸಲು ಚಕ್ರವ ಹಿಡಿದುಕೊಂಡ.

 

ತದಾ ಶಿವೇನ ಪ್ರಣತೋ ಬಾಣರಕ್ಷಣಕಾಮ್ಯಯಾ ।

ಕೃತ್ವಾ ಸ್ವಭಕ್ತಂ ಬಾಣಂ ತಂ ರರಕ್ಷ ದ್ವಿಭುಜೀಕೃತಮ್    ॥೨೨.೨೬೫॥

ಬಾಣನ ರಕ್ಷಿಸೆಂದು ಕೃಷ್ಣನಲ್ಲಿ ಬೇಡಿಕೊಂಡ ಸದಾಶಿವ ,

ಭಕ್ತನನ್ನಾಗಿ ಅವನ ಸ್ವೀಕರಿಸಿ ದ್ವಿಭುಜ ಉಳಿಸಿದ ಮಾಧವ.

No comments:

Post a Comment

ಗೋ-ಕುಲ Go-Kula