ಕೃಷ್ಣಃ ಕ್ರೀಡನ್
ದ್ವಾರವತ್ಯಾಂ ಸುಪೂರ್ಣ್ಣನಿತ್ಯಾನನ್ದಃ ಕ್ವಚಿದಾಹ ಸ್ಮ ಭೈಷ್ಮೀಮ್ ।
ವಿಡಮ್ಬಯನ್ ಗೃಹಿಣಾಮೇವ
ಚೇಷ್ಟಾ ನಿತ್ಯಾವಿರೋಧೋSಪಿ ತಯಾ
ವಿದೋಷಯಾ ॥೨೨.೨೨೭॥
ಪರಿಪೂರ್ಣವಾದ ನಿತ್ಯಾನಂದವುಳ್ಳವನು ಭಗವಂತ,
ಒಮ್ಮೆ ದ್ವಾರಕೆಯಲ್ಲಿ ಲೋಕನೀತಿಯಂತೆ ಲೀಲೆ ತೋರುತ್ತಾ,
ಸಾಮಾನ್ಯ ಗೃಹಸ್ಥರು ಹೆಂಡಂದಿರೊಡನೆ ಮಾತಾಡುವ ರೀತಿಯಲ್ಲಿ,
ಕೃಷ್ಣ ಕೂಡಾ ಮಾತಿಗಾರಂಭಿಸುತ್ತಾನೆ ಹೆಂಡತಿ ರುಗ್ಮಿಣಿ ಜೊತೆಯಲ್ಲಿ.
ತ್ವಯಾ ನ ಕಾರ್ಯ್ಯಂ ಮಮ
ಕಿಞ್ಚ ಭದ್ರೇ ಮಯಾSರೀಣಾಂ
ಮಾನಭಙ್ಗಾರ್ತ್ಥಮೇವ ।
ಸಮಾಹೃತಾSಸೀತಿ ಸಾ ಚಾವಿಯೋಗಂ ಸದಾ ಕೃಷ್ಣೇನಾSತ್ಮನೋSಪ್ಯೇವ
ವೇತ್ರೀ ॥೨೨.೨೨೮॥
ಸ್ತ್ರಿಯಾ ಭೇತವ್ಯಂ
ಭರ್ತ್ತುರಿತ್ಯೇವ ಧರ್ಮ್ಮಂ ವಿಜ್ಞಾಪಯನ್ತೀ ದುಃಖಿತೇವಾSಸ ದೇವೀ ।
ತಾಂ ಸಾನ್ತ್ವಯಾಮಾಸ
ಗೃಹಸ್ಥಧರ್ಮ್ಮಂ ವಿಜ್ಞಾಪಯನ್ ದೇವದೇವೋSಪ್ಯದುಃಖಾಮ್
॥೨೨.೨೨೯॥
ಮಂಗಳೆ ರುಗ್ಮಿಣೀ, ನಿನ್ನಿಂದ ನನಗ್ಯಾವ ಪ್ರಯೋಜನವಿಲ್ಲ,
ಜರಾಸಂಧಾದಿಗಳ ಅಹಂ ನಾಶಕ್ಕೆ ನಿನ್ನನ್ನ ಎತ್ತಿತಂದೆನಲ್ಲ.
ಲಕ್ಷ್ಮೀನಾರಾಯಣರಾದ ತಮಗೆ ವಿಯೋಗವಿಲ್ಲ ಎಂದರಿತ ರುಗ್ಮಿಣಿ ವಿಧೇಯ
ಹೆಂಡತಿಯಂತೆ,
ಲೋಕನೀತಿಗಾಗಿ ರುಗ್ಮಿಣಿ ತೋರಿಕೊಂಡಳು ತನ್ನನ್ನು ತಾನು ದುಃಖ
ಪಡುತ್ತಿರುವವಳಂತೆ.
ತನ್ನ ಹೆಂಡತಿಯನ್ನು ಸಮಾಧಾನ ಪಡಿಸುತ್ತಾನೆ ಕೃಷ್ಣ ಒಬ್ಬ ಜನಸಾಮಾನ್ಯ
ಗಂಡನಂತೆ.
ಏವಂ ಕ್ರೀಡತ್ಯಬ್ಜನಾಭೇ
ರಮಾಯಾಂ ಕೃಷ್ಣಾದಿಷ್ಟೋ ಗೋಕುಲಂ ರೌಹಿಣೇಯಃ ।
ಪ್ರಾಯಾದ್ ದೃಷ್ಟ್ವಾ
ತತ್ರ ನನ್ದಂ ಯಶೋದಾಂ ತತ್ಪೂಜಿತಃ ಕೃಷ್ಣವಾರ್ತ್ತಾಂ ಚ ಪೃಷ್ಟಃ ॥೨೨.೨೩೦॥
ಹೀಗೆ ಸಾಗಿತ್ತು ಲಕ್ಷ್ಮೀಸ್ವರೂಪ ರುಗ್ಮಿಣಿಯೊಂದಿಗೆ ಕೃಷ್ಣನ ಕ್ರೀಡೆ,
ಕೃಷ್ಣ ನಿರ್ದೇಶನದಂತೆ ಬಲರಾಮನದು ಗೋಕುಲದತ್ತ ನಡೆ.
ಅಲ್ಲಿ ನಂದಗೋಪ ಯಶೋದೆಯರನ್ನು ಕಂಡ,
ಅವರಿಂದ ಬಲರಾಮ ತಾನು ಸತ್ಕಾರಗೊಂಡ.
ಕೃಷ್ಣನ ಬಗ್ಗೆ ಅವರು ಹೇಳಿದ್ದನ್ನು ಕೇಳುವನಾದ.
ಮಾಸೌ ತತ್ರ ನ್ಯವಸದ್
ಗೋಪಿಕಾಭೀ ರೇಮೇ ಕ್ಷೀಬೋ ಯಮುನಾಮಾಹ್ವಯಚ್ಚ ।
ಮತ್ತೋsಯಮಿತ್ಯೇವ ನದೀಮನಾಗತಾಂ ಚಕರ್ಷ ರಾಮೋ ಲಾಙ್ಗಲೇನಾಗ್ರ್ಯವೀರ್ಯ್ಯಃ
॥೨೨.೨೩೧॥
ಬಲರಾಮನದು ನಂದಗೋಕುಲದಲ್ಲಿ ಎರಡು ತಿಂಗಳ ವಾಸ,
ಗೋಪಿಯರೊಡನೆ ಕ್ರೀಡಿಸುತ್ತಾ ಹಾಯಾಗಿದ್ದದ್ದು ಏನು ವಿಶೇಷ!.
ಮದೋನ್ಮತ್ತನಾದ ಬಲರಾಮ ಯಮುನಾತೀರದಿ ನಿಂತು ಯಮುನೆಯ ಕರೆದ,
ಮತ್ತಿನಲ್ಲಿರುವವನ ಮಾತ ಮನ್ನಿಸದ ಯಮುನೆಯ ನೇಗಿಲಿಂದ ತನ್ನೆಡೆಗೆ
ಸೆಳೆದ.
ಪುನಸ್ತಯಾ ಪ್ರಣತಃ
ಸಂಸ್ತುತಶ್ಚ ವ್ಯಸರ್ಜ್ಜಯತ್ ತಾಮಥ ನನ್ದಗೋಪಮ್ ।
ಆಪೃಚ್ಛ್ಯ ಚಾಗಾದ್
ದ್ವಾರಕಾಂ ಕೇಶವಾಯ ನ್ಯವೇದಯನ್ನನ್ದಗೋಪಾದಿಭಕ್ತಿಮ್ ॥೨೨.೨೩೨॥
ಆಗ ನದ್ಯಭಿಮಾನಿ ಯಮುನಾದೇವಿಯಿಂದ ನಮಸ್ಕಾರ,
ಸ್ತುತಿಸಲ್ಪಟ್ಟ ಬಲರಾಮ ಯಮುನೆಯ ಕ್ಷಮಿಸಿದ ವ್ಯಾಪಾರ.
ಆನಂತರ ಬಲರಾಮ ನಂದಗೋಪಗೆ ಹೇಳುತ್ತಾನೆ ವಿದಾಯ,
ದ್ವಾರಕೆಗೆ ಬಂದು ಕೃಷ್ಣಗೆ ಹೇಳಿದ ನಂದಾದಿಗಳ ಭಕ್ತಿ ವಿಷಯ.
No comments:
Post a Comment
ಗೋ-ಕುಲ Go-Kula