Sunday 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 316-321

 

ರಾಕ್ಷಸಾನಾಮವದ್ಧ್ಯಾನಾಂ ಸಖಾಯೇ ಮಣಿಮತ್ಯಪಿ ।

ಆರುರೋಹ ರಥಂ ದಿವ್ಯಂ ಯೋದ್ಧುಕಾಮೋ ವೃಕೋದರಮ್ ॥೨೨.೩೧೬॥

ಕೋಟ್ಯಂತರ ರಾಕ್ಷಸರು ಕೊಲ್ಲಲ್ಪಡುತ್ತಿದ್ದಾಗ,

ಗೆಳೆಯ ಮಣಿಮಂತ ಕೂಡಾ ಸಾಯುತ್ತಿದ್ದಾಗ,

ಕುಬೇರ ಭೀಮನೊಡನೆ ಸಮರಕ್ಕೆ ಸಿದ್ಧನಾದ,

ಯುದ್ಧಕ್ಕಾಗಿ ಅಲೌಕಿಕವಾದ ರಥವನ್ನೇರಿದ.

 

ಅಸುರಾವೇಶತಸ್ತಸ್ಯ ಭೀಮೇ ಕ್ರೋಧೋ ಮಹಾನಭೂತ್ ।

ಸ ಆಜಗಾಮ ಭೀಮೇನ ಯೋದ್ಧುಂ ವಿತ್ತಪತಿಃ ಸ್ವಯಮ್ ॥೨೨.೩೧೭॥

ಕುಬೇರನಿಗೆ ಅಸುರಾವೇಶ ಬಂದದ್ದು ನೋಡಿ,

ಭೀಮನಲ್ಲಿ ಹರಿಯಿತು ಮಹಾಕೋಪದ ಕೋಡಿ.

 

ತಸ್ಮಿನ್ ಕಾಲೇ ಭೀಮಸೇನಸ್ಯ ಘೋಷಂ ಶ್ರುತ್ವಾ ರಾಜಾsಪೃಚ್ಛದಾಶು ಸ್ಮ ಕೃಷ್ಣಾಮ್ ।

ಕ್ವ ಭೀಮ ಇತ್ಯೇವ ತಯೋದಿತಂ ಚ ಶ್ರುತ್ವಾ ಜಗಾಮಾsಶು ರಕ್ಷೋಂಸಸಂಸ್ಥಃ ॥೨೨.೩೧೮॥

ಆಗ ಕೇಳಿಸಿತು ಧರ್ಮರಾಜನಿಗೆ ಭೀಮಸೇನನ ಸಿಂಹನಾದ,

ಧರ್ಮಜ ದ್ರೌಪದಿಯ ಕೇಳಿದ -ಭೀಮಸೇನ ಎಲ್ಲಿಗೆ ಹೋದ.

ಅವಳಿಂದ ಸಂಪೂರ್ಣ ವಿಚಾರ ಕೇಳಿದ ಮರು ಗಳಿಗೆ,

ಧರ್ಮಜ ಹೊರಟ ರಕ್ಕಸರ ಹೆಗಲೇರಿ ಭೀಮನಿದ್ದಲ್ಲಿಗೆ.

 

ಸಭ್ರಾತೃಕೇ ಮುನಿಭಿಃ ಕೃಷ್ಣಯಾ ಚ ಗತೇ ರಾಜನ್ಯತ್ರ ಭೀಮಂ ಕುಬೇರಃ ।

ದೃಷ್ಟ್ವಾsಸುರಾವೇಶತೋ ಧರ್ಮಜಂ ಚ ಕಿಞ್ಚಿನ್ಮುಕ್ತಃ ಸ್ನೇಹಯುಕ್ತಸ್ತಥಾssಸ ॥೨೨.೩೧೯॥

ತಮ್ಮಂದಿರು, ಮುನಿಗಳು, ದ್ರೌಪದೀ ಸಮೇತ,

ಧರ್ಮಜ ಹೊರಟ ಭೀಮಸೇನನಿದ್ದ ಜಾಗದತ್ತ.

ಕುಬೇರನಿಗೆ ಭೀಮ ಧರ್ಮರಾಜರ ದರ್ಶನ ಆದಾಗ,

ಅಸುರಾವೇಶದಿಂದ ಕೊಂಚ ಬಿಡುಗಡೆಯ ಪಡೆದನಾಗ.

ಹಾಗಾಗಿ ಧರ್ಮರಾಜನ ಕುರಿತು ಸ್ನೇಹಯುಕ್ತ ಆದನಾಗ.

 

ಧೃತಾಯುಧಂ ಭೀಮಮೀಕ್ಷ್ಯಾಪಿ ಕಿಞ್ಚಿದ್ ದೈತ್ಯಾವೇಶಾದ್ ಬಹು ಮೇನೇ ನ ಭೀಮಮ್ ।

ಅಗಸ್ತ್ಯಶಾಪಂ ಚಾವದತ್ ಸ್ವಸ್ಯ ಪೂರ್ವಂ ಸಖಾಯನಾಶೇ ಕಾರಣಂ ರಾಜರಾಜಃ ॥೨೨.೩೨೦॥

ಆಯುಧವನ್ನು ಹಿಡಿದ ಭೀಮಸೇನನನ್ನು ನೋಡಿದ ಕುಬೇರ,

ದೈತ್ಯಾವೇಶದಿಂದ ಭೀಮನೆಡೆ ಹರಿಯಲಿಲ್ಲ ಗೌರವಾದರ.

ತನ್ನ ಗೆಳೆಯ ಮಣಿಮಂತಗೆ ಬಂದ ಮರಣ,

ಅಗಸ್ತ್ಯನ ಶಾಪವಾಗಿದೆ ಅದಕ್ಕೆ ಕಾರಣ.

 

ದೈತ್ಯಾವೇಶಾದುಜ್ಝಿತಃ ಶಾನ್ತಭಾವೋ ದದೌ ನಿಜಂ ಸ್ಥಾನಮೇಷಾಂ ಸುತುಷ್ಟಃ ।

ಆವಾಸಾರ್ತ್ಥಂ ತೇsವಸಂಸ್ತತ್ರ ಪಾರ್ತ್ಥಾಸ್ತಥಾsನ್ಯೇಷಾಂ ದೈವತಾನಾಂ ಗೃಹೇಷು ॥೨೨.೩೨೧॥

ಕ್ರಮೇಣ ದೈತ್ಯಾವೇಶದಿಂದ ದೂರವಾದ ಕುಬೇರ,

ತನ್ನ ಮನೆಯನ್ನೇ ಮಾಡಿಕೊಟ್ಟವರಿಗೆ ಬಿಡಾರ.

ಪಾಂಡವರದು ನಡೆದಿತ್ತು ಕುಬೇರನೊಂದಿಗೆ ವಾಸ,

ಆಗಾಗ ನಡೆಯುತ್ತಿತ್ತು ಬೇರೆ ದೇವತೆಗಳೆಡೆಗೂ ಪ್ರವಾಸ.

No comments:

Post a Comment

ಗೋ-ಕುಲ Go-Kula