Sunday, 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 351-355

 

[ವೇದದಲ್ಲಿ  ‘ಇಂದ್ರೋ ವೈ ವೃತ್ರಂ ಹತ್ವಾ ಮಹಾನಭವತ್’ - ವೃತ್ರನನ್ನು ಕೊಂದದ್ದರಿಂದ ಇಂದ್ರನಿಗೆ ಪಾಪ ಬಂತು ಎಂದು ಹೇಳುತ್ತಾರೆ. ಆ ಬ್ರಹ್ಮಹತ್ಯಾ ಪಾಪವನ್ನು ಪರಿಹರಿಸಿಕೊಳ್ಳಲು ಇಂದ್ರ ತಪಸ್ಸು ಮಾಡಿದ. ಇಲ್ಲಿ ಸಾಮಾನ್ಯವಾಗಿ ನಮಗೆ ಒಂದು ಕುತೂಹಲ ಏನೆಂದರೆ ದೇವತೆಗಳ ಪಾಪ-ಪುಣ್ಯಕ್ಕೂ ಮನುಷ್ಯರ ಪಾಪ-ಪುಣ್ಯಕ್ಕೂ ಏನಾದರು ವ್ಯತ್ಯಾಸವಿದೆಯೇ ಎನ್ನುವುದು. ಈ ಪ್ರಶ್ನೆಗೆ ಆಚಾರ್ಯರು ಮುಂದೆ ಉತ್ತರ ನೀಡಿರುವುದನ್ನು ನಾವು ಕಾಣಬಹುದು:]

 

ಧರ್ಮ್ಮವೃದ್ಧ್ಯರ್ತ್ಥಮೇವೈತತ್ ಪಾಪಮಾಸೀಚ್ಛಚೀಪತೇಃ ।

ನಹಿ ಲೋಕಾವನಂ ಪಾಪಂ ತ್ರೈಲೋಕ್ಯೇಶಸ್ಯ ವಜ್ರಿಣಃ ॥೨೨.೩೫೧॥

ಇಂದ್ರನಿಗೆ ಬಂದಂಥಾ ಪಾಪದ ಈ ರೀತಿ,

ಇತರ ದೇವತೆಗಳಿಗೂ ಬರಬಹುದು ಆ ಸ್ಥಿತಿ.

ದೇವತೆಗಳಲ್ಲಿ ಅವರ ಪಾಪ ಪುಣ್ಯಕ್ಕಾಗುತ್ತದೆ ಸಾಧನ,

ಮೂರ್ಲೋಕದೊಡೆಯಗೆ ಪಾಪವಲ್ಲ ನರಕಕ್ಕೆ ಮಾಪನ.

 

ವೃತ್ರಂ ಹತ್ವಾ ಮಹಾನಾಸೇತ್ಯಾದಿ ವೇದಪದಂ ಚ ಯತ್ ।

‘ಕ್ವಚಿತ್ ಪಾಪಂ ಚ ಪುಣ್ಯಾನಾಂ ವೃದ್ಧಯೇ ಭವತಿ ಸ್ಫುಟಮ್ ॥೨೨.೩೫೨॥

 

‘ವೃತ್ರಹತ್ಯಾ ಯಥೇನ್ದ್ರಸ್ಯ ಜಾತಾ ಧರ್ಮ್ಮಸ್ಯ ವೃದ್ಧಯೇ ।

‘ದೇವಾನಾಂ ವಾ ಮುನೀನಾಂ ವಾ ಭವೇದೇವಂ ನವೈ ನೃಣಾಮ್ ॥೨೨.೩೫೩॥

 

‘ಪಾಪಂ ಯತ್ ಪುಣ್ಯಮೇವೈತದಸುರಾಣಾಂ ವಿಲೋಮತಃ’ ।

ಏವಂ ಸ್ಕಾನ್ದೇ ಹಿ ವಚನಂ ನ ಪಾಪಂ ತಚ್ಛಚೀಪತೇಃ ॥೨೨.೩೫೪॥ ॥

ವೃತ್ರನ ಕೊಂದ ಇಂದ್ರ ಶ್ರೇಷ್ಠನಾದ ಎನ್ನುತ್ತದೆ ವೇದ ವಚನ,

ದೇವತೆಗಳ ಪಾಪವೂ ಆಗುತ್ತದೆ ಅವರ ಪುಣ್ಯ ವೃದ್ಧಿಗೆ ಸಾಧನ.

ಹೇಗೆ ಇಂದ್ರನಿಗೆ ವೃತ್ರವಧೆಯು ಪುಣ್ಯಾಭಿವೃದ್ಧಿಗೆ ಆಯಿತು ಕಾರಣ,

ಹಾಗೆಯೇ ದೇವತೆ ಮುನಿಗಳಲ್ಲಿ ಮಾತ್ರ ಪುಣ್ಯಕ್ಕೆ ಆಗುತ್ತದೆ ಸಾಧನ.

ಮನುಷ್ಯರಲ್ಲಿ ಹೀಗಾಗುವುದಿಲ್ಲ -ಅದು ಬೇರೆಯೇ ವ್ಯವಸ್ಥೆ,

ಅಸುರರಿಗೆ ಅವರ ಪುಣ್ಯ ಕೂಡಾ ಪಾಪವಾಗುವ ಅವಸ್ಥೆ.

ಹೀಗೆ ಹೇಳುತ್ತದೆ -ಸ್ಕಂಧಪುರಾಣ ವಚನ,

ಶಚೀಪತಿಗಿಲ್ಲ ವೃತ್ರವಧೆಯ ಪಾಪ ಲೇಪನ.

 

[ಏಕೆ ದೇವತೆಗಳು ಪುರಂದರನ ಅನುಪಸ್ಥಿತಿಯಲ್ಲಿ ನಹುಷನಿಗೆ ಇಂದ್ರಪದವಿಯನ್ನು ನೀಡಿದರು? ದೇವತೆಗಳಲ್ಲೇ ಒಬ್ಬ ಹಿರಿಯ ದೇವತೆ ಏಕೆ ಹಂಗಾಮಿ ಇಂದ್ರನಾಗಿ ಕಾರ್ಯನಿರ್ವಹಿಸಲಿಲ್ಲಾ ?  ಇದು ಸಾಮಾನ್ಯವಾಗಿ ಎಲ್ಲರಲ್ಲೂ ಮೂಡುವ ಪ್ರಶ್ನೆ. ಈ ಪ್ರಶ್ನೆಗೆ ಆಚಾರ್ಯರು ಉತ್ತರ ನೀಡುವುದನ್ನು ನಾವು ಮುಂದಿನ ಶ್ಲೋಕದಲ್ಲಿ ಕಾಣಬಹುದು: ]

 

ನಾನ್ಯಸ್ಯ ಪದಮಾಪ್ಸ್ಯನ್ತಿ ತದ್ ದೇವಾನಾಂ ವ್ರತಂ ಪರಮ್ ।

ತಸ್ಮಾತ್ ತೇ ನಹುಷಂ ಶಕ್ರಪದೇ ನಿದಧುರೀಶ್ವರಾಃ ॥೨೨.೩೫೫॥

‘ಇನ್ನೊಬ್ಬನ(ರ ) ಪದವಿಯನ್ನು ಹೊಂದುವುದಿಲ್ಲ’ ಎನ್ನುವುದು ದೇವತೆಗಳ ಶ್ರೇಷ್ಠ ವ್ರತ.

ಆ ಕಾರಣದಿ ಸಮರ್ಥರಿದ್ದರೂ ಕೂಡಾ ನಹುಷನ ಮಾಡಿದರು ಇಂದ್ರಪದವಿಯಲ್ಲಿ ಸ್ಥಾಪಿತ.

No comments:

Post a Comment

ಗೋ-ಕುಲ Go-Kula