Saturday, 10 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 167-172

ರಾತ್ರೌ ಕೃಷ್ಣೇ ಮುನಿಮದ್ಧ್ಯೇ ನಿವಿಷ್ಟೇ ಘಣ್ಟಾಕರ್ಣ್ಣಃ  ಕರ್ಣ್ಣನಾಮಾ ಪಿಶಾಚೌ ।

ಸಮಾಯಾತಾಂ ಗಿರಿಶೇನ ಪ್ರದಿಷ್ಟೌ ಕೃಷ್ಣಂ ದ್ರಷ್ಟುಂ ದ್ವಾರಕಾಂ ಗನ್ತುಕಾಮೌ ॥೨೨.೧೬೭॥

ಆ ರಾತ್ರಿಯಲ್ಲಿ ಶ್ರೀಕೃಷ್ಣ ಮುನಿಗಳ ಮಧ್ಯೆ ಇರುತ್ತಿರಲು,

ಬಂದವು ಘಂಟಾಕರ್ಣ ಕರ್ಣನೆಂಬೆರಡು ಪಿಶಾಚಿಗಳು.

ರುದ್ರನ ಆದೇಶದಂತೆ ಕೃಷ್ಣನ ಕಾಣುವುದಕ್ಕಾಗಿ,

ಬದರಿಗೆ ಬಂದವು ದ್ವಾರಕೆಗೆ ಹೋಗುವ ಇಷ್ಟದವರಾಗಿ.

 

ತೌ ದೃಷ್ಟ್ವಾ ಮುನಿಮದ್ಧ್ಯಸ್ಥಂ ಕೇಶವಂ ತದಬೋಧತಃ ।

ಕೃತ್ವಾ ಸ್ವಜಾತಿಚೇಷ್ಟಾಶ್ಚ ದ್ಧ್ಯಾನೇನೈನಮಪಶ್ಯತಾಮ್             ॥೨೨.೧೬೮॥

ಎರಡೂ ಪಿಶಾಚಿಗಳು ಮುನಿಗಳ ಮಧ್ಯವಿರುವ ಕೃಷ್ಣನ ನೋಡುತ್ತವೆ,

ಅಜ್ಞಾನ ಪ್ರಭಾವದಿಂದ ತಮ್ಮ ಸ್ವಜಾತಿ ಚೇಷ್ಟೆಗಳ ಮಾಡುತ್ತವೆ.

ನಂತರದ ಧ್ಯಾನದಲ್ಲಿ ಕೃಷ್ಣನ್ಯಾರು ಎಂಬುದನ್ನು ತಿಳಿಯುತ್ತವೆ.

 

ದೃಷ್ಟ್ವಾ ಹೃದಿ ಸ್ಥಿತಂ ತಂ ತು ಕೌತೂಹಲಸಮನ್ವಿತೌ ।

ಸ್ತುತ್ವಾ ಭಕ್ತ್ಯಾ ಪ್ರಣಾಮಂ ಚ ಬಹುಶಶ್ಚಕ್ರತುಃ ಶುಭೌ                  ॥೨೨.೧೬೯॥

ಆಯಿತವಕ್ಕೆ ಹೃತ್ಕಮಲದಲ್ಲಿರುವ ಶ್ರೀಕೃಷ್ಣನ ದರುಶನ,

ಸ್ತುತಿಸುತ್ತಾ ಭಕ್ತಿಯಿಂದ ಸಲ್ಲಿಸಿದವು ಅನೇಕ ನಮನ.

 

ತಯೋಃ ಪ್ರಸನ್ನೋ ಭಗವಾನ್ ಸ್ಪೃಷ್ಟ್ವಾ ಗನ್ಧರ್ವಸತ್ತಮೌ ।

ಚಕಾರ ಕ್ಷಣಮಾತ್ರೇಣ ದಿವ್ಯರೂಪಸ್ವರಾನ್ವಿತೌ                         ॥೨೨.೧೭೦॥

ಅವರಿಬ್ಬರ ಭಕ್ತಿಗೆ ಶ್ರೀಕೃಷ್ಣ ಪರಮಾತ್ಮ ಮೆಚ್ಚಿ ಪ್ರಸನ್ನನಾಗುತ್ತಾನೆ,

ಕ್ಷಣದಲ್ಲವರ ಸ್ಪರ್ಶಿಸಿ ಸುರೂಪ ಸುಸ್ವರದ ಗಂಧರ್ವರ ಮಾಡುತ್ತಾನೆ.

 

ತಾಭ್ಯಾಂ ಪುನರ್ನ್ನೃತ್ತಗೀತಸಂಸ್ತವೈಃ ಪೂಜಿತಃ ಪ್ರಭುಃ ।

ಯಯೌ ಕೈಲಾಸಮದ್ರೀಶಂ ಚಕಾರೇವ ತಪೋSತ್ರ ಚ             ॥೨೨.೧೭೧॥

ಶ್ರೀಕೃಷ್ಣ ಅವರಿಬ್ಬರ ನೃತ್ಯ ಸಂಗೀತ ಸ್ತುತಿಗಳಿಂದ ಪೂಜಿತ,

ತಪಸ್ಸಾಚರಿಸುವಂತೆ ತೋರಿದ ಸೇರಿ ಶ್ರೇಷ್ಠ ಕೈಲಾಸ ಪರ್ವತ.

 

ಸ್ವೀಯಾನೇವ ಗುಣಾನ್ ವಿಷ್ಣುರ್ಭುಞ್ಜನ್ ನಿತ್ಯೇನ ಶೋಚಿಷಾ ।

ಶಾರ್ವಂ ತಪಃ ಕರೋತೀವ ಮೋಹಯಾಮಾಸ ದುರ್ಜ್ಜನಾನ್             ॥೨೨.೧೭೨॥

ವಿಷ್ಣು ಅನುಭವಿಸುತ್ತಿದ್ದ ತನ್ನದೇ ಗುಣಗಳಿಂದ ಆನಂದ,

ರುದ್ರ ತಪಸ್ಸಲ್ಲಿ ನಿರತವಾದಂತೆ ದುರ್ಜನರ ಮೋಹಗೊಳಿಸಿದ. 

No comments:

Post a Comment

ಗೋ-ಕುಲ Go-Kula