Sunday, 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 23: 07-10

 

ಶಾಪಾದೇವಾರ್ಜ್ಜುನಃ ಷಣ್ಢವೇಷೋsಭೂನ್ನಕುಲಸ್ತಥಾ ।

ಕ್ಷತ್ರಿಯಾನನ್ತರತ್ವಾತ್ತು ಸೂತಜಾತೇಸ್ತಥಾsಭವತ್ ॥೨೩.೦೭॥

ಊರ್ವಶಿಯ ಶಾಪದಿಂದ ಅರ್ಜುನ ಷಂಡ ವೇಷದವನಾದ,

ನಕುಲ ಕ್ಷತ್ರಿಯ ನಂತರದ ಸೂತ ಜಾತಿಯ ವೇಷದವನಾದ.

 

ಸೂತಸ್ಯಾನನ್ತರತ್ವಾತ್ತು ವೈಶ್ಯಜಾತೇಸ್ತಥಾSಭವತ್ ।

ಸಹದೇವೋ  ವೈಶ್ಯಜಾತಿರ್ಗ್ಗೋಪಾಲಸ್ತೇಷು ಚೋತ್ತಮಃ ।

ತತೋ ಗೋಪಾಲತಾಮಾಪ ಯತಿಃ ಪೂಜ್ಯೋSಖಿಲೈರ್ಯ್ಯತಃ ॥೨೩.೦೮॥

ಸೂತನ ನಂತರ ಬರುವುದು ವೈಶ್ಯಜಾತಿ,

ಹಾಗಾಗಿ ಸಹದೇವ ಧರಿಸಿದ್ದು ವೈಶ್ಯಜಾತಿ.

ವೈಶ್ಯಜಾತಿಯಲ್ಲಿ ಶ್ರೇಷ್ಠವದು ಗೋಪಾಲಕ,

ಹಾಗಾಗಿ ಅವನಿಗೊದಗಿದ್ದು ಗೋಪಾಲ ಕಾಯಕ.

 

ಯತಿರಾಸೀದ್ ಧರ್ಮ್ಮಜೋSತಃ ಸೋSಭ್ಯಾಸಾರ್ತ್ಥಂ ಸದೈವ  ಚ ।

ಅಕ್ಷಾಸಕ್ತೋSಭವತ್ ಪಶ್ಚಾದ್ ದರ್ಶಯಿಷ್ಯನ್ ಸ್ವಶಿಷ್ಟತಾಮ್ ॥೨೩.೦೯॥

 

ಯಾವ ಕಾರಣದಿಂದ ಯತ್ಯಾಶ್ರಮ ಬಹಳ ಪೂಜ್ಯ,

ಆ ಕಾರಣದಿಂದ ಯತಿಯಾದನು ತಾನು ಧರ್ಮರಾಜ.

ಅವನಾದ ಅಭ್ಯಾಸ ಮಾಡುವುದಕ್ಕಾಗಿ ಜೂಜಿನಲ್ಲಿ ರತ,

ಜಗತ್ತಿಗೆ ತೋರಿಸಲು ಜೂಜಿನಲ್ಲಿ ತಾನೆಷ್ಟು ಪರಿಣಿತ.

 

ಭೀಮಸೇನಸಧರ್ಮ್ಮಾರ್ತ್ಥಂ ಶೂದ್ರಾ ಸೈರನ್ಧ್ರಿಕಾSಭವತ್ ।

ದ್ರೌಪದೀ ಭರ್ತ್ತೃಸಾಧರ್ಮ್ಮೈಂ ಸ್ತ್ರೀಣಾಂ ಧರ್ಮ್ಮೋ ಯತಃ ಸದಾ ॥೨೩.೧೦॥

ದ್ರೌಪದಿ ಬಯಸಿದಳು ಸ್ತ್ರೀಧರ್ಮದಿಂದ ಭೀಮನ ಸಾದೃಶ್ಯ,

ಹಾಗಾಗಿಯೇ ಧರಿಸಿದಳು ಅವಳು ಸೈರಂಧ್ರಿಯ ವೇಷ.

(ಭೀಮಸೇನ ಧರಿಸಿದ್ದ ಶೂದ್ರ ವೇಷ,

ಸತಿಯಾಗಿ ದ್ರೌಪದಿ ಅನುಸರಿಸಿದ್ದು ವಿಶೇಷ.)

No comments:

Post a Comment

ಗೋ-ಕುಲ Go-Kula