ಸ ಚಿತ್ರಸೇನಃ ಪ್ರಥಮಂ ಕರ್ಣ್ಣಮೇವ ಯುಯೋಧ ಪಾರ್ತ್ಥಸ್ಪರ್ದ್ದಯಾ ತೇನ
ಯುದ್ಧ್ಯನ್ ।
ಕರ್ಣ್ಣೋ ನಾಶಕ್ನೋದ್
ವಚನಾದ್ ಭಾರ್ಗ್ಗವಸ್ಯ ರಾಮಸ್ಯ ನಿತ್ಯಾಮಿತಷಡ್-ಗುಣಸ್ಯ
॥೨೨.೪೧೦॥
ಆ ಚಿತ್ರಸೇನ ಗಂಧರ್ವ ಮೊದಲು ಎದುರಿಸಿದ್ದು ಕರ್ಣನನ್ನು,
ಕರ್ಣ ತೋರಿಸಿದ್ದು ಅರ್ಜುನನ ಮೇಲಿನ ಸ್ಪರ್ಧಾ ಭಾವವನ್ನು.
ಅಮಿತಜ್ಞಾನ ಗುಣಶಾಲಿ ಪರಶುರಾಮನ ಶಾಪದಂತೆ ಸೋತನು.
ಸ ಭಗ್ನಯಾನಶ್ಚ
ವಿಕರ್ಣ್ಣಯಾನಮಾಸ್ಥಾಯ ತಸ್ಯೈವ ನಿಯಮ್ಯ ವಾಜಿನಃ ।
ಪರಾದ್ರವತ್ ತೇನ ಸಹೈವ
ಶೀಘ್ರಂ ದುರ್ಯ್ಯೋಧನಶ್ಚಿತ್ರಸೇನಂ ಯುಯೋಧ ॥೨೨.೪೧೧॥
ಗಂಧರ್ವರೊಡನೆಯ ಯುದ್ಧದಲ್ಲಿ ಕರ್ಣನಾದ ರಥವಿಹೀನ,
ವಿಕರ್ಣನ ರಥವೇರಿ, ಕುದುರೆ ಓಡಿಸಿ ಮಾಡಿದ ಪಲಾಯನ.
ಆಗ ದುರ್ಯೋಧನ ಯುದ್ಧದಲ್ಲಿ ಎದುರಿಸಿದ್ದು ಚಿತ್ರಸೇನನನ್ನ.
ಮುಹೂರ್ತ್ತಮೇನೇನ ಸಮಂ ಸ
ಯುದ್ಧ್ಯನ್ನನ್ಯೈರ್ಗ್ಗನ್ಧರ್ವೈರ್ಬಹುಭಿರ್ಮ್ಮಾಯಯೈವ ।
ಭಗ್ನೇ ರಥೇ ಭೂಮಿತಳೇ
ಸ್ಥಿತಃ ಸನ್ ಗೃಹೀತ ಆಸೀಚ್ಚಿತ್ರಸೇನೇನ ಸಙ್ಖೇ ॥೨೨.೪೧೨॥
ದುರ್ಯೋಧನ ಚಿತ್ರಸೇನರ ಯುದ್ಧ ನಡೆಯಿತು ಸಮವಾಗಿ ಒಂದು ಮುಹೂರ್ತ,
ಉಳಿದನೇಕ ಗಂಧರ್ವರು ಮಾಯಾವಿದ್ಯೆಯಿಂದ ಮುರಿದು ಹಾಕಿದರವನ ರಥ.
ನೆಲದಮೇಲೆ ನಿಂತಿದ್ದ ದುರ್ಯೋಧನನಾಗುತ್ತಾನೆ ಚಿತ್ರಸೇನನಿಂದ ಬಂಧಿತ.
ಮಹಾಬಲೋ
ಧಾರ್ತ್ತರಾಷ್ಟ್ರೋSಪಿ ಶಕ್ರವರಾದ್
ವಿಷ್ಣೋರಾಜ್ಞಯಾ ಜಾಭಿವೃದ್ಧೇ ।
ಸ ಚಿತ್ರಸೇನೇನ
ಧೃತಸ್ತದಾSSಸೀದ್ ಬದ್ಧಃ ಪಾಶೈರ್ವೈದ್ಯುತೈರಿನ್ದ್ರದತ್ತೈಃ ॥೨೨.೪೧೩॥
ಇಂದ್ರನ ವರಬಲ, ಹರಿಯಾಜ್ಞೆ ಇದ್ದುದರಿಂದ ಗಂಧರ್ವರ ಕಡೆಗಿತ್ತು ಬಲ,
ಚಿತ್ರಸೇನಗೆ ಸೆರೆಯಾದ ದುರ್ಯೋಧನ ತಾನು ಆಗಿದ್ದರೂ ಮಹಾಬಲ.
ಹೀಗೆ ದುರ್ಯೋಧನನ ಬಂಧಿಸಿತ್ತು ಇಂದ್ರ ಕೊಟ್ಟ ಮಿಂಚಿನ್ಹಗ್ಗಗಳ ಜಾಲ.
[ವಸ್ತುತಃ ದುರ್ಯೋಧನ ಚಿತ್ರಸೇನನಿಗಿಂತ ಬಲಿಷ್ಠ. ಆದರೆ
ಬ್ರಹ್ಮ-ನಾರಾಯಣರ ವರವಿದ್ದುದರಿಂದ, ಇಂದ್ರನ ಬಯಕೆಯಂತೆ ಚಿತ್ರಸೇನ ದುರ್ಯೋಧನನನ್ನು ಕಟ್ಟಿಹಾಕಲು
ಸಾಧ್ಯವಾಯಿತು].
ತಸ್ಯಾನುಜಾಃ ಶಕುನೀ
ರಾಜಭಾರ್ಯ್ಯಾಃ ಸರ್ವೇ ಬದ್ಧಾಃ ಶಕ್ರಭೃತ್ಯೈಃ ಪ್ರಣೀತಾಃ ।
ಆದಾಯ ತಾನಮ್ಬರಂ
ಸಮ್ಪ್ರಯಾತೇಷ್ವರೂರುವನ್ ಪಾಣ್ಡವಾನ್ ಮನ್ತ್ರಿಣೋSಸ್ಯ ॥೨೨.೪೧೪॥
ದುರ್ಯೋಧನನ ತಮ್ಮಂದಿರು,ಶಕುನಿ, ದುರ್ಯೋಧನನ ಹೆಣ್ಣುಮಕ್ಕಳು,
ಇಂದ್ರನ ಭೃತ್ಯರಿಂದಾದರು ಎಲ್ಲಾ ಹಿಡಿದು ಕಟ್ಟಲ್ಪಟ್ಟು ಸೆರೆಯಾಳು.
ಗಂಧರ್ವರು ಅವರನ್ನು ಹಿಡಿದು ಆಕಾಶಕ್ಕೆ ನೆಗೆಯುವಾಗ,
ದುರ್ಯೋಧನನ ಮಂತ್ರಿಗಳು ಪಾಂಡವರನ್ನು ಕೂಗಿಕೊಂಡರಾಗ.
No comments:
Post a Comment
ಗೋ-ಕುಲ Go-Kula