Sunday, 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 23: 19-26

 

ಏವಂ ನಿವಸತಾಂ ತತ್ರ ಪಾಣ್ಡವಾನಾಂ ಮಹಾತ್ಮನಾಮ್ ।

ಸಂವತ್ಸರೇ ದ್ವಿಮಾಸೋನೇ ವಿಜಿತ್ಯ ದಿಶ ಆಗತಃ ।

ಕೀಚಕೋ ಮತ್ಸ್ಯನೃಪತೇಃ ಸ್ಯಾಲೋ ಬಲವತಾಂ ವರಃ ॥೨೩.೧೯॥

ಹೀಗೆ ನಡೆದಿರಲು ವಿರಾಟನಗರದಲ್ಲಿ ಪಾಂಡವರ ವಾಸ,

ಎರಡು ತಿಂಗಳು ಬಾಕಿಯಿತ್ತು ತುಂಬಲು ಒಂದು ವರುಷ.

ಆಗ ಮತ್ಸ್ಯರಾಜನ ಹೆಂಡತಿಯ ತಮ್ಮನಾದ,

ಬಲಿಷ್ಠ ಕೀಚಕ ದಿಗ್ವಿಜಯ ಮಾಡುತ್ತಾ ಬಂದ.

 

ಸ ದ್ರೌಪದೀಮೀಕ್ಷ್ಯ ಮಾನೋಭವಾರ್ತ್ತಃ ಸಮ್ಪ್ರಾರ್ತ್ಥಯಾಮಾಸ ತಯಾ ನಿರಸ್ತಃ ।

ಮಾಸೇ ಗತೇ ಭಗನೀಂ ಸ್ವಾಂ ಸುದೇಷ್ಣಾಂ ಸಮ್ಪ್ರಾರ್ತ್ಥಯಾಮಾಸ ತದರ್ತ್ಥಮೇವ ॥೨೩.೨೦॥

ದ್ರೌಪದಿಯನ್ನು ನೋಡಿದ ಕೀಚಕನಾದ ಕಾಮಪೀಡಿತ,

ಅವಳನ್ನು ಬೇಡಿ ಅವಳಿಂದಾದನು ತಾ ತಿರಸ್ಕೃತ.

ತಿಂಗಳಾದ ನಂತರ ಅಕ್ಕ ಸುದೇಷ್ಣೆಯಲ್ಲಿ ಹೇಳಿದ,

ದ್ರೌಪದಿಯನ್ನು ತನ್ನಲ್ಲಿಗೆ ಕಳಿಸುವಂತೆ ಬೇಡಿದ.

 

ತಯಾ ನಿಷಿದ್ಧೋSಪಿ ಪುನಃಪುನಸ್ತಾಂ ಯದಾ ಯಯಾಚೇSಥ ಚ ಸಾSSಹ ಕೃಷ್ಣಾಮ್ ।

ಸಮಾನಯಾSಶ್ವೇವ ಸುರಾಂ ಮದರ್ತ್ಥಮಿತೀರಿತಾ ನೇತಿ ಭೀತಾSವದತ್ ಸಾ॥೨೩.೨೧॥

ರಾಣಿ ಸುದೇಷ್ಣಾ ಬೇಡವೆನ್ನುತ್ತಾಳೆ,

ಕೀಚಕನಿಂದ ಮತ್ತೆ ಬೇಡಲ್ಪಡುತ್ತಾಳೆ.

ಕೀಚಕನ ಮನೆಯಿಂದ ತನಗೆ ಮದ್ಯ ತರಲು ಹೇಳುತ್ತಾಳೆ,

ಅಳುಕಿದ ದ್ರೌಪದಿ ನಾನು ಹೋಗುವುದಿಲ್ಲ ಎಂದ್ಹೇಳುತ್ತಾಳೆ.

 

ಬಲಾತ್ ತಯಾ ಪ್ರೇಷಿತಾ ತದ್ಗೃಹಾಯ ಯದಾSಗಮತ್ ತೇನ ಹಸ್ತೇ ಗೃಹೀತಾ ।

ವಿಧೂಯ ತಂ ಪ್ರಾದ್ರವತ್ ಸಾ ಸಭಾಯೈ ಸ್ಮೃತ್ವಾSSದಿತ್ಯಸ್ಥಂ ವಾಸುದೇವಂ ಪರೇಶಮ್ ॥೨೩.೨೨॥

ಸುದೇಷ್ಣಾ ಬಲಾತ್ಕಾರವಾಗಿ ದ್ರೌಪದಿಯ ಕಳಿಸುತ್ತಾಳೆ,

ಕೀಚಕನ ಮನೆಯಲ್ಲಿ ಅವನಿಂದ ಹಿಡಿಯಲ್ಪಡುತ್ತಾಳೆ.

ಅವನನ್ನು ಕೊಡವಿ ಸೂರ್ಯಾಂತರ್ಯಾಮಿಯ ಸ್ಮರಿಸುತ್ತ,

ದ್ರೌಪದಿ ಓಡುತ್ತಾಳೆ ನಡೆಯುತ್ತಿರುವ ರಾಜಸಭೆಯತ್ತ.

 

ಅನುದ್ರುತ್ಯೈತಾಂ ಪಾತಯಿತ್ವಾ ಪದಾ ಸ ಸನ್ತಾಡಯಾಮಾಸ ತದಾ ರವಿಸ್ಥಿತಃ ।

ನಾರಾಯಣೋ ಹೇತಿನಾಮೈವ ರಕ್ಷೋ ನ್ಯಯೋಜಯತ್ ತದದೃಶ್ಯಂ ಸಮಾಗಾತ್ ॥೨೩.೨೩॥

ಕೀಚಕ ದ್ರೌಪದಿಯ ಹಿಂಬಾಲಿಸಿಕೊಂಡು ಬಂದ,

ಅವಳನ್ನು ಕೆಳಕ್ಕೆ ಬೀಳಿಸಿ ಕಾಲಿನಿಂದ ಒದ್ದ.

ಆಗ ಸೂರ್ಯಾಂತರ್ಯಾಮಿ ನಾರಾಯಣ,

'ಹೇತಿ' ರಾಕ್ಷಸನ ಮಾಡುತ್ತಾನೆ ನಿಯೋಜನ.

ಹೇತಿ ಅಲ್ಲಿರುತ್ತಾನೆ ನೀಡದಂತವನ ದರ್ಶನ.

 

ವಾಯುಸ್ತಮಾವಿಶ್ಯ ತು ಕೀಚಕಂ ತಂ ನ್ಯಪಾತಯತ್ ತಾಂ ಸಮೀಕ್ಷ್ಯೈವ ಭೀಮಃ ।

ಚುಕೋಪ ವೃಕ್ಷಂ ಚ ಸಮೀಕ್ಷಮಾಣಂ ತಂ ವಾರಯಾಮಾಸ ಯುಧಿಷ್ಠಿರೋsಗ್ರಜಃ ॥೨೩.೨೪॥

ಮುಖ್ಯಪ್ರಾಣ ಹೇತಿಯಲ್ಲಿ ಹೊಕ್ಕು ಕೀಚಕನ ಕೆಡವುತ್ತಾನೆ,

ದ್ರೌಪದಿಯ ಕಂಡ ಭೀಮ ಕೋಪದಿಂದ ಮರ ನೋಡುತ್ತಾನೆ.

ಸಭೆಯಲ್ಲಿ ಧರ್ಮಜ ಸಿಟ್ಟಾದ ಭೀಮಸೇನನ ತಡೆಯುತ್ತಾನೆ.

 

ಕೃಷ್ಣಾ ರಾತ್ರೌ ಭೀಮಸಕಾಶಮೇತ್ಯ ಹನ್ತುಂ ಪಾಪಂ ಕೀಚಕಂ ಪ್ರೈರಯತ್ ತಮ್ ।

ಭೀಮಸ್ಯ ಬುದ್ಧ್ಯಾ ನಿಶಿ ಸಾ ಕೀಚಕಂ ಚ ಜಗಾದ ಗನ್ತುಂ ಶೂನ್ಯಗೃಹಂ ಸ ಚಾಗಾತ್ ॥೨೫.೨೫॥

ಭೀಮಸೇನನ ಬಳಿಗೆ ಬರುತ್ತಾಳೆ ಆ ರಾತ್ರಿ ದ್ರೌಪದೀದೇವಿ,

ಪಾಪಿಷ್ಠ ಕೀಚಕನ ಕೊಲ್ಲಲು ಭೀಮನ ಪ್ರೇರಿಸುತ್ತಾಳೆ ತಾಯಿ.

ಭೀಮಸೇನ ದ್ರೌಪದಿಗೆ ಗುಟ್ಟಿನಲ್ಲಿ ಸಲಹೆ ಕೊಡುತ್ತಾನೆ,

ದ್ರೌಪದಿಯ ಮಾತಿನಂತೆ ಕೀಚಕ ನೃತ್ಯಗೃಹಕ್ಕೆ ಬರುತ್ತಾನೆ.

 

ತತ್ರೈನಮಾಸಾದ್ಯ ತು ಭೀಮಸೇನೋ ವಿಜಿತ್ಯ ತಂ ಬಾಹುಯುದ್ಧೇ ನಿಹತ್ಯ ।

ಶಿರೋ ಗುದೇ ಪಾಣಿಪಾದೌ ಚ ತಸ್ಯ ಪ್ರವೇಶಯಾಮಸ ವಿಮೃದ್ಯ ವೀರಃ ॥೨೩.೨೬॥

ಭೀಮಸೇನ ನೃತ್ಯಗೃಹದಲ್ಲಿದ್ದ ಕೀಚಕನ ಬಳಿಗೆ ಬಂದ,

ಕುಸ್ತಿಯಲಿ ಗುದ್ದಿ ತಲೆ ಪೃಷ್ಟ ಕೈಕಾಲುಗಳ ತೂರಿಸಿ ಕೊಂದ.

No comments:

Post a Comment

ಗೋ-ಕುಲ Go-Kula