ಧರ್ಮ್ಮಾತ್ಮಜೋSಥಾSಜಗಾಮೋದಕಾನ್ತಂ
ದೃಷ್ಟ್ವಾ ಭ್ರಾತೄಂಸ್ತತ್ರ ದುಃಖಾಭಿತಪ್ತಃ ।
ಇಚ್ಛನ್ ಪಾತುಂ ವಾರಿ
ಸಂವಾರಿತಶ್ಚ ಪಿತ್ರಾ ಬಕಾಗಾರಮಿತೇನ ನಾಪಾತ್ ॥೨೨.೪೫೧॥
ಆನಂತರ ಯಮಧರ್ಮಸುತ ಧರ್ಮಜ, ತಮ್ಮಂದಿರ್ಯಾರೂ ಹಿಂದಿರುಗದಿದ್ದುದರಿಂದ ತಾನೇ ನೀರಿನ ಬಳಿ
ಬರುತ್ತಾನೆ,
ಅಲ್ಲಿದ್ದ ತಮ್ಮಂದಿರ ಸ್ಥಿತಿ ನೋಡಿ ದುಃಖಿತನಾದರೂ ಬಾಯಾರಿಕೆಯಿಂದ
ನೀರು ಕುಡಿಯಲು ಉದ್ಯುಕ್ತನಾಗುತ್ತಾನೆ,
ಆಗ ಕೊಕ್ಕರೆ ವೇಷದಲ್ಲಿದ್ದ ತನ್ನ ತಂದೆಯಿಂದ ತಡೆಯಲ್ಪಟ್ಟು ನೀರನ್ನು
ಕುಡಿಯದೇ ಸುಮ್ಮನೇ ನಿಂತುಕೊಳ್ಳುತ್ತಾನೆ.
ಅರ್ತ್ಥೇ
ಭ್ರಾತೄಣಾಮೈಚ್ಛದಸೌ ತದೀಯಪ್ರಶ್ನಪ್ರತಿವ್ಯಾಹರಣಂ ದಯಾಳುಃ ।
ತತೋ ಧರ್ಮ್ಮೋ ಯಕ್ಷತನುಃ
ಸ ಭೂತ್ವಾ ಪ್ರಶ್ನಾಂಶ್ಚಕ್ರೇ ವ್ಯಾಕರೋತ್ ತಾನ್
ಸ ಪಾರ್ತ್ಥಃ ॥೨೨.೪೫೨॥
ತನ್ನ ತಮ್ಮಂದಿರಿಗಾಗಿ ಆ ಯಕ್ಷಪ್ರಶ್ನೆಗೆ ಉತ್ತರಿಸಲು ದಯಾಳು ಧರ್ಮಜ
ಮುಂದಾದ,
ಆಗ ಯಮಧರ್ಮ ಬಕವೇಷವನ್ನು ಬಿಟ್ಟು ದೊಡ್ಡ ಅವ್ಯಕ್ತವಾದ ವೇಷವ ಧರಿಸಿದ.
ಧರ್ಮರಾಜನಿಗೆ ಯಮಧರ್ಮ ಪ್ರಶ್ನೆಗಳ ಮಾಡಿದ - ಮತ್ತು ಧರ್ಮಜ ಅವಕ್ಕೆ
ಉತ್ತರಿಸಿದ.
ತತಸ್ತುಷ್ಟೋ ವರಮಸ್ಮೈ
ದದೌ ಸ ಏಕೋತ್ಥಾನಂ ಭ್ರಾತೃಮದ್ಧ್ಯೇ ಸ ವವ್ರೇ ।
ಯದ್ಯೇಕಃ ಸ್ಯಾನ್ನಕುಲೋSಸ್ತ್ವಿತ್ಯಥಾSಹ ತುಷ್ಟೋ
ಧರ್ಮ್ಮಃ ಕಥಮೇತತ್ ಕೃತಂ ತೇ ॥೨೨.೪೫೩॥
ಯುಧಿಷ್ಠಿರನ ಉತ್ತರದಿಂದ ಯಮಧರ್ಮನಾದ ಸಂತೃಪ್ತ,
ನಿನ್ನ ತಮ್ಮಂದಿರಲ್ಲಿ ಒಬ್ಬ ಮಾತ್ರ ಏಳಬಹುದೆಂಬ ವರವಿತ್ತ.
ಧರ್ಮರಾಯ : ಒಬ್ಬನೇ ಆದರೆ ನಕುಲನೇ ಏಳಲಿ ಎನ್ನುತ್ತಾನೆ,
ಏಕಾಗಿ ನಕುಲನನ್ನೇ ಆರಿಸಿದೆ ಎಂದು ಯಮಧರ್ಮ ಕೇಳುತ್ತಾನೆ.
ಅತಿಪ್ರೀತಿರ್ಭೀಮಸೇನೇ
ತವಾಸ್ತಿ ಬಲೀ ಚಾಸೌ ರಾಜ್ಯಹೇತುಸ್ತವ ಸ್ಯಾತ್ ।
ಇತ್ಯುಕ್ತ ಊಚೇ
ಮಾದ್ರಿಪುತ್ರಂ ವಿಹಾಯ ಕುನ್ತೀಪುತ್ರೋ ನ ಮಯೋತ್ಥಾಪನೀಯಃ
॥೨೨.೪೫೪॥
ನಿನಗಿದೆ ಭೀಮಸೇನನಲ್ಲಿ ಬಹಳವಾದ ಪ್ರೀತಿ,
ಅವ ಬಲಿಷ್ಠ, ರಾಜ್ಯಕ್ಕೂ ಕಾರಣವಾಗುವ ರೀತಿ.
ಇಬ್ಬರಿಗೇ ಅವಕಾಶವಿದ್ದಾಗ -ಕುಂತಿಯ ಮಗನಾಗಿ ಇದ್ದೇನೆ ನಾನು,
ಮಾದ್ರಿಯ ಮಕ್ಕಳಲ್ಲಿ ಒಬ್ಬನೆಬ್ಬಿಸುವುದೇ ಯೋಗ್ಯವಲ್ಲವೇನು?
ಸ ಏವಮುಕ್ತೋ ನಿತರಾಂ
ಪ್ರೀಯಮಾಣ ಉತ್ಥಾಪಯಾಮಾಸ ಚ ತಾನ್ ಸಮಸ್ತಾನ್ ।
ಯತೇಷ್ಟರೂಪಪ್ರಾಪ್ತಿಮೇಷಾಂ
ಪುನಶ್ಚ ಸ್ವಕಾಮತೋ ನಿಜರೂಪಾಪ್ತಿಮಾದಾತ್ ॥೨೨.೪೫೫॥
ಇದನ್ನು ಕೇಳಿದ ಯಮಧರ್ಮನಾದ ಅತ್ಯಂತ ಸಂಪ್ರೀತ,
ಎಲ್ಲರನ್ನೂ ಎಬ್ಬಿಸಿ, ಇಚ್ಛಾರೂಪ ಪಡೆಯುವ ವರವಿತ್ತ.
ಬಯಸಿದಾಗ ನಿಜರೂಪ ಪಡೆಯಬಹುದೆಂಬ ವರ ಕೊಟ್ಟ.
ಆಜ್ಞಾತವಾಸೇSಜ್ಞಾತತಾಂ ಸರ್ವದೈವ ದದೌ ತೇಷಾಂ ಪ್ರೀತ ಇವಾSನೃಶಂಸ್ಯಾತ್ ।
ಏವಂ ಕ್ರೀಡನ್ ಪುತ್ರ
ಇತ್ಯಾತ್ಮನೈವ ಯಶೋಧರ್ಮಾವಾತ್ಮನೋ ವರ್ದ್ಧಯನ್ ಸಃ ॥೨೨.೪೫೬॥
ಅಜ್ಞಾತವಾಸದಲ್ಲಿರುವಾಗ ಯಾವಾಗಲೂ ಆ ಪಾಂಡವರು,
ಯಾರಿಗೂ ತಿಳಿಯದಿರಲೆಂಬ ವರ ಕೊಡುತ್ತಾರೆ ಯಮದೇವರು.
ಯಮ,
ಧರ್ಮರಾಜನ
ಕರುಣಾನಡೆಯಿಂದ ಪ್ರೀತನಾಗಿ,
ಇಷ್ಟೆಲ್ಲಾ ವರಗಳನ್ನು ಕರುಣಿಸಿದವನಾದ ಪಾಂಡವರಿಗಾಗಿ.
ಯಮ :ಧರ್ಮಜ ತನ್ನ ಮಗನೆಂದು ತನ್ನಲ್ಲಿ ತಾನೇ ಸಂತಸ ಪಟ್ಟ,
ಜಗತ್ತಿನಲ್ಲಿ ತನ್ನ ಕೀರ್ತಿಯನ್ನು ಬೆಳೆಸಿಕೊಳ್ಳುವ ಯಮನ ಆಟ.
ಯುಧಿಷ್ಠಿರಾತ್ಮನಸ್ತಸ್ಯ
ಯಶೋಧರ್ಮ್ಮವಿವೃದ್ಧಯೇ ।
ಕೃತ್ವಾSರಣ್ಯಪಹಾರಾದಿ ಪುನರ್ದ್ದತ್ವಾ ಚ ತತ್ ಸ್ವಯಮ್ ।
ದಾತುಂ ವಿಪ್ರಾಯ
ತದ್ಧಸ್ತೇ ಯಯೌ ಧರ್ಮ್ಮೋ ದಿವಂ ಪುನಃ ॥೨೨.೪೫೭॥
ಯಮಧರ್ಮ ; ತಾನೇ ಆಗಿದ್ದರೂ ಯುಧಿಷ್ಠಿರ,
ಲೋಕದಿ ತನ್ನ ಪುಣ್ಯವಾಗಲೆಂದು ಅಜರಾಮರ,
ತಾನೇ ಮಾಡಿದ ಘಟನೆಯದು ಅರಣಿಯ ಅಪಹಾರ,
ಬ್ರಾಹ್ಮಣಗೆ ಕೊಡಿ ಎಂದ್ಹೇಳಿ ತನ್ನ ಲೋಕಕ್ಕೆ ಹೊರಟ ವ್ಯಾಪಾರ.
ತತೋ ರಾಜಾ
ಭೀಮಸೇನಾರ್ಜ್ಜುನೌ ಚ ಸಾರ್ದ್ಧಂ ಯಮಾಭ್ಯಾಮರಣೀಂ ಪ್ರದಾಯ ।
ಮುದಾ ಯುತಾಃ ಕೃಷ್ಣಯಾ
ಸಾರ್ದ್ಧಮೇವ ಸನ್ತುಷ್ಟುವುಃ ಕೃಷ್ಣಮನನ್ತಮಚ್ಯುತಮ್ ॥೨೨.೪೫೮॥
ಆನಂತರ ಧರ್ಮರಾಜ ತನ್ನೆಲ್ಲಾ ತಮ್ಮಂದಿರೊಂದಿಗೆ,
ಅರಣಿಯ ಬ್ರಾಹ್ಮಣಗೆ ಕೊಟ್ಟು ದ್ರೌಪದಿಯೊಂದಿಗೆ,
ಸಂತಸದಿಂದ ಮಾಡಿದರು ಸರ್ವಜ್ಞ ಸರ್ವಶಕ್ತನ ಗುಣಗಾನ,
ಹೀಗೆ ಸಾಗಿತ್ತು ದೈವಪ್ರಜ್ಞೆ, ಸ್ಮರಣೆಯಲ್ಲಿ ಅವರ ವನಜೀವನ.
[ಆದಿತಃ ಶ್ಲೋಕಾಃ :
೩೧೮೧+೪೫೮=೩೬೩೯]
॥ ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ
ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಅರಣೀಪ್ರಾಪ್ತಿರ್ನ್ನಾಮ ದ್ವಾವಿಂಶೋSದ್ಧ್ಯಾಯಃ ॥
ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ ವಿರಚಿತವಾದ, ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯದ
ಅಲ್ಪ ಭಾವಾನುವಾದ,
ಅರಣೀಪ್ರಾಪ್ತಿನಾಮದ ಇಪ್ಪತ್ತೆರಡನೇ ಅಧ್ಯಾಯ,
ಶ್ರೀಹರಿಗುರುಗಳ ಪಾದಕ್ಕರ್ಪಿಸಿದ ಧನ್ಯತಾಭಾವ.
********
No comments:
Post a Comment
ಗೋ-ಕುಲ Go-Kula