Sunday 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 356-365

 

ತಸ್ಮಿನ್ನೇವಂ ನಿಪತಿತೇ ಬ್ರಹ್ಮಣಃ ಶಾಪಕಾರಣಾತ್ ।

ಅಷ್ಟಾವಿಂಶತಿಮೇ ಪ್ರಾಪ ಯುಗೇ ಭೀಮಸ್ತಮುಲ್ಬಣಮ್ ॥೨೨.೩೫೬॥

ಹೀಗೆ ನಹುಷ ಬ್ರಹ್ಮಶಾಪದಿಂದ ಅಜಗರನಾಗಿ ಭೂಮಿಗೆ ಬಿದ್ದ,

ಇದೀಗ ಭೀಮಸೇನ ಇಪ್ಪತ್ತೆಂಟನೇ ದ್ವಾಪರದಲ್ಲಿ ಅವನ ಸಂಧಿಸಿದ.

 

ಜಾನನ್ನೇವ ತದೀಯಂ ತತ್ ತಪ ಆದಾತುಮೀಪ್ಸಯಾ ।

ಯತ್ತತ್ ಸುರಾಣಾಂ ಸರ್ವೇಷಾಂ ಮುನೀನಾಂ ಚ ತಪಃ ಸ್ಥಿತಮ್ ॥೨೨.೩೫೭॥

 

ತದ್ ಗೃಹೀತುಂ ವಶಗವದಿಚ್ಛಯೈವಾSಸ ಮಾರುತಿಃ ।

ದೇವಾನಾಂ ಹಿ ನೃಜಾತಾನಾಮಲ್ಪಂ ವ್ಯಕ್ತಂ ಭವೇದ್ ಬಲಮ್  ॥೨೨.೩೫೮॥

 

ಇಚ್ಛಯಾ ವ್ಯಕ್ತತಾಂ ಯಾತಿ ವಾಯೋರನ್ಯೇಷು ತಚ್ಚ ನ ।

ನಿತ್ಯವ್ಯಕ್ತಾ ಗುಣಾ ವಿಷ್ಣೋರಿತಿ ಶಾಸ್ತ್ರಸ್ಯ ನಿರ್ಣ್ಣಯಃ ॥೨೨.೩೫೯॥

ಅಜಗರ ರೂಪದಲ್ಲಿರುವವನು ನಹುಷ ಎಂಬ ಅರಿವಿತ್ತು,

ತನ್ನ ತಪಶ್ಯಕ್ತಿ ದೇವತೆ ಮುನಿಗಳ ತಪಶ್ಯಕ್ತಿ ನಹುಷನಲ್ಲಿತ್ತು.

ಅದೆಲ್ಲವನ್ನೂ ಭೀಮಸೇನ ತಾನು ಸ್ವೀಕರಿಸಬೇಕಾಗಿತ್ತು,

ಅದಕೇ ಭೀಮ ತಿಳಿದೂ ಅಜಗರನ ವಶವಾದ ಹೊತ್ತು.

ಭಗವಂತನ ಅವತಾರ, ರೂಪಗಳಲ್ಲಿ ಮೂಲ ಗುಣಗಳು ವ್ಯಕ್ತ,

ಇದು ಶಾಸ್ತ್ರದಲ್ಲಿ ನಿರ್ಣಯವಾಗಿರುವ ಅನಾದಿ ನಿತ್ಯಸತ್ಯ.

 

ಏವಮನ್ಯೇSಪಿ ಹಿ ಗುಣಾ ಮಾನುಷಾದಿಷು ಜನ್ಮಸು ।

ದೇವಾನಾಂ ಮಾನುಷಾದೌ ತು ಶಕ್ಯೇSಪ್ಯವ್ಯಕ್ತತಾಕೃತೇಃ ॥೨೨.೩೬೦॥

 

ಧರ್ಮ್ಮವೃದ್ಧಿರ್ಭವೇತ್ ತೇಷಾಂ ಪ್ರೀತೋ ಭವತಿ ಕೇಶವಃ ।

ತನ್ಮಾನುಷೇ ಬಲೇ ತಸ್ಯ ವರಾದ್ ವಾರಿತವತ್ ಸ್ಥಿತೇ ॥೨೨.೩೬೧॥

 

ದೈವಂ ಬಲಂ ನ ಶಕ್ತೋSಪಿ ವ್ಯಕ್ತಂ ಚಕ್ರೇ ನ ಮಾರುತಿಃ ।

ಆತ್ಮಮೋಕ್ಷಾಯ ನ ಪ್ರಶ್ನಾನ್ ವ್ಯಾಜಹಾರ ಸ ಚಾಭಿಭೂಃ  ॥೨೨.೩೬೨॥

ಮನುಷ್ಯರಾಗಿ ಅವತರಿಸಿ ಬಂದಂಥಾ ಎಲ್ಲಾ ದೇವತೆಗಳಿಗೆ,

ಉಂಟು ತಮ್ಮ ಸ್ವರೂಪಬಲ ಯಥಾಶಕ್ತಿ ಅಭಿವ್ಯಕ್ತ ಆಗುವ ಬಗೆ.

ಮಾನವಾವತಾರದಲ್ಲೂ ಸ್ವಯಿಚ್ಛೆಯಂತೆ ಜ್ಞಾನಬಲ ವ್ಯಕ್ತ ಪ್ರಾಣನಿಗೆ.

ದೇವತೆಗಳು ಮನುಷ್ಯರಾಗಿ ಜನ್ಮವೆತ್ತಿ ಬಂದಾಗ,

ಸ್ವರೂಪಬಲ ವ್ಯಕ್ತಮಾಡದಿರುವುದು ಒಂದು ಯೋಗ.

ದೇವತೆಗಳ ಪುಣ್ಯಾಭಿವೃದ್ಧಿಗೆ ಭಗವತ್ಪ್ರೀತಿಯ ಯಾಗ.

ಮನುಷ್ಯ ಜನ್ಮದಲ್ಲಿದ್ದ ಭೀಮಸೇನನ ಬಲ,

ಬ್ರಹ್ಮವರದಿಂದ ತಡೆಯಲ್ಪಟ್ಟಂಥಾ ಜಾಲ.

ತನ್ನ ಮೂಲಬಲವನ್ನು ವ್ಯಕ್ತಪಡಿಸಲು ಆಗಿದ್ದರೂ ಶಕ್ತ,

ವ್ಯಕ್ತಪಡಿಸಲಿಲ್ಲ, ನಹುಷಗುತ್ತರಿಸಲಿಲ್ಲ ಆಗಿದ್ದರೂ ಸಮರ್ಥ.

 

[ತನ್ನ ಪ್ರಶ್ನೆಗೆ ಉತ್ತರ ಕೊಟ್ಟರೆ ನಿನ್ನನ್ನು ಬಿಡುಗಡೆಗೊಳಿಸುತ್ತೇನೆ ಎಂದು ನಹುಷ ಹೇಳಿದಾಗ, ಆತನ ಪ್ರಶ್ನೆಗಳಿಗೆ ಉತ್ತರ ತಿಳಿದಿದ್ದರೂ ಕೂಡಾ ಭೀಮ ಉತ್ತರಿಸಲಿಲ್ಲ. ಏಕೆ ಉತ್ತರಿಸಲಿಲ್ಲ ಎನ್ನುವುದನ್ನು ಆಚಾರ್ಯರು ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾರೆ:]

 

ವಿದ್ಯೋಪಜೀವನಂ ಧರ್ಮ್ಮೋ ವಿಪ್ರಾಣಾಮಪಿ ನೋ ಯತಃ ।

ಕಿಮುತ ಕ್ಷತ್ರಿಯಸ್ಯೇತಿ ಜಾನನ್ನಪಿ ವೃಕೋದರಃ  ॥೨೨.೩೬೩॥

 

ತತ್ಪ್ರಶ್ನಪರಿಹಾರೇಣ ನಾSತ್ಮಮೋಕ್ಷಂ ಸಮೈಚ್ಛತ ।

ಅಯತನ್ತಮಪಿ ಹ್ಯೇನಂ ಚಾಲನಾಯಾಪಿ ನಾಶಕತ್ ॥೨೨.೩೬೪॥

 

ಪೂರ್ಣ್ಣೋSಪಿ ಸರ್ವಲೋಕಾನಾಂ ಬಲೇನ ನಹುಷಸ್ತದಾ ।

ವೇಷ್ಟಯಿತ್ವೈವ ತಂ ಭೀಮಂ ಸ್ಥಿತೋSಸೌ ನಾಶಕತ್ ಪರಮ್ ॥೨೨.೩೬೫॥

ವಿದ್ಯೆಯ ಬಳಸಿಕೊಂಡು ಮಾಡುವ ಉಪಜೀವನ,

ಬ್ರಾಹ್ಮಣ ಧರ್ಮಕ್ಕಾಗುವುದಿಲ್ಲ ಅದು ಸಾಧನ.

ಇನ್ನು ಕ್ಷತ್ರಿಯರಿಗೂ ಒಳ್ಳೆಯದಲ್ಲವೆಂಬುದು ಕೈಮುತ್ಯಸಿದ್ಧ,

ಅದಕೇ ಭೀಮ ನಹುಷಗ್ಹೇಳುವ ಉತ್ತರ ಗೊತ್ತಿದ್ದರೂ ಸುಮ್ಮನಿದ್ದ.

ಉತ್ತರದಿಂದ ಬರಬಹುದಾದ ಬಿಡುಗಡೆಯನ್ನೂ ಬಯಸಲಿಲ್ಲ,

ಬಿಡುಗಡೆ ಬಯಸದ ಭೀಮನನ್ನು ಅಲ್ಲಾಡಿಸಲೂ ನಹುಷಗಾಗಲಿಲ್ಲ.

ಎಲ್ಲಾ ಲೋಕಗಳ ಬಲದಿಂದ ಪೂರ್ಣವಾಗಿದ್ದ ನಹುಷ,

ಭೀಮನ ಸುತ್ತಿದ್ದ ಮಾತ್ರ ; ಮತ್ತೇನಕ್ಕಿರಲಿಲ್ಲ ಅವಕಾಶ.

No comments:

Post a Comment

ಗೋ-ಕುಲ Go-Kula