Sunday 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 379-383

 

ತತೋSಮಿತೌಜಾ ಭಗವಾನುಪಾಗಮನ್ನಾರಾಯಣಃ ಸತ್ಯಭಾಮಾಸಹಾಯಃ ।

ಸಮ್ಪೂಜಿತಃ ಪಾಣ್ಡವೈಸ್ತೈಃ ಸಮೇತಶ್ಚಕ್ರೇSಥ ಸೌಹಾರ್ದ್ದನಿಮಿತ್ತಸತ್ಕಥಾಃ ॥೨೨.೩೭೯॥

ಆನಂತರ ಎಣೆಯಿರದ ಪರಾಕ್ರಮಶಾಲಿ, ಷಡ್ಗುಣ ಐಶ್ವರ್ಯಸಂಪನ್ನ,

ಸತ್ಯಭಾಮೆಯಿಂದ ಕೂಡಿದವನಾಗಿ ಕಾಡಿಗೆ ಬಂದ ಶ್ರೀಕೃಷ್ಣಪರಮಾತ್ಮ.

ಅಲ್ಲಿ ಕೃಷ್ಣ ಪಾಂಡವರಿಂದ ಪೂಜಿತನಾದ,

ಸ್ನೇಹ ಸೌಹಾರ್ದದ ಮಾತುಗಳನ್ನಾಡಿದ.

 

ಕೃಷ್ಣಾ ಚ ಸತ್ಯಾ ಚ ಪರಸ್ಪರಂ ಮುದಾ ಸಮ್ಭಾಷಣಂ ಚಕ್ರತುರ್ಯ್ಯೋಷಿದಗ್ರ್ಯೇ ।

ಪರೀಕ್ಷನ್ತ್ಯಾ ಸತ್ಯಯಾ ಸರ್ವವೇತ್ರ್ಯಾ ನಿರ್ದ್ದೋಷಯಾ ಚೋದಿತಾ ಪ್ರಾಹ ಕೃಷ್ಣಾ ॥೨೨.೩೮೦॥

ಸ್ತ್ರಿಯರಲ್ಲೇ ಶ್ರೇಷ್ಠರಾದ ದ್ರೌಪದಿ ಮತ್ತು ಸತ್ಯಭಾಮೆಯರ ಸಂಭಾಷಣೆ,

ಪರೀಕ್ಷೆಗಾಗಿ,ಸರ್ವಜ್ಞಳಾದ ದೋಷವಿರದ ಭಾಮೆಯಿಂದ ದ್ರೌಪದಿಗೆ ಪ್ರಶ್ನೆ.

 

ಸ್ತ್ರೀಧರ್ಮ್ಮಾನಖಿಲಾಂಸ್ತತ್ರ ಸತ್ಯಾಂ ನಿರ್ದ್ದೋಷಸಂವಿದಮ್ ।

ಜ್ಞಾತ್ವಾSಪಿ ಕೃಷ್ಣಾ ಪ್ರೋವಾಚ ಲೋಕಶಿಕ್ಷಾರ್ತ್ಥಮೇವ ತು ॥೨೨.೩೮೧॥

ಭಾಮೆ ಸರ್ವಜ್ಞಳೆಂದು ತಿಳಿದೂ ಹೇಳುತ್ತಾಳೆ,

ಸ್ತ್ರೀಧರ್ಮವ ದ್ರೌಪದಿ ಲೋಕಕ್ಕೆ ತಿಳಿಸುತ್ತಾಳೆ.

 

ಕ್ರೀಡಾರ್ತ್ಥಮೇವ ವಚನಂ ಜ್ಞಾತ್ವಾ ಸತ್ಯಾಸಮೀರಿತಮ್ ।

ತಸ್ಯಾನುಸಾರವಾಕ್ಯಾನಿ ತತ್ಪ್ರೀತ್ಯಾ ಏವ ಸಾSಬ್ರವೀತ್ ॥೨೨.೩೮೨॥

ಸತ್ಯಭಾಮೆ ಹೇಳಿದ ಮಾತು ಕ್ರೀಡೆಗಾಗಿ ಎಂದು ದ್ರೌಪದಿಗೆ ತಿಳಿದಿತ್ತು,

ಅದಕ್ಕನುಗುಣವಾಗಿತ್ತವಳ ಮೇಲಿನ ಪ್ರೀತಿಯ ದ್ರೌಪದಿ ನುಡಿಮುತ್ತು.

 

ತತಃ ಕತಿಪಯಾಹಾನಿ ನಿರುಷ್ಯಾತ್ರ ಜನಾರ್ದ್ದನಃ ।

ಯಯೌ ಸಭಾರ್ಯ್ಯಃ ಸ್ವಪುರೀಂ ಪಾಣ್ಡವಾನನುಮಾನ್ಯ ಚ ॥೨೨.೩೮೩॥

ಕೆಲವು ದಿನಗಳಕಾಲ ಶ್ರೀಕೃಷ್ಣ ಪಾಂಡವರಿದ್ದಲ್ಲಿಯೇ ವಾಸ ಮಾಡಿದ,

ಆನಂತರ ಮಡದಿಯೊಂದಿಗೆ ಪಾಂಡವರಿಗೆ ವಿದಾಯ ಹೇಳಿ ದ್ವಾರಕೆಗೆ ತೆರಳಿದ.

No comments:

Post a Comment

ಗೋ-ಕುಲ Go-Kula