Saturday 10 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 273-280

 

ಏವಂ ವಸತ್ಯಮಿತಪೌರುಷವೀರ್ಯ್ಯಸಾರೇ ನಾರಾಯಣೇ ಸ್ವಪುರಿ ಶಕ್ರಧನಞ್ಜಯೋಕ್ತಃ ।

ಸಮ್ಪ್ರಾಪ್ಯ ಲೋಮಶಮುನಿಃ ಸಕಲಾನಿ ತೀರ್ತ್ಥಾನ್ಯಾಪ್ತುಂ ಸ ಪಾಣ್ಡುತನಯೇಷು ಸಹಾಯ ಆಸೀತ್ ॥೨೨.೨೭೩॥

ಹೀಗೆ ಅಮಿತ ಬಲ ಪೌರುಷಗಳ ಶ್ರೀಕೃಷ್ಣ ದ್ವಾರಕೆಯಲ್ಲಿ ವಾಸವಿದ್ದಾಗ,

ಇಂದ್ರಾರ್ಜುನರಿಂದ ಪ್ರಾರ್ಥಿತರಾದ ಲೋಮಶ ಮುನಿ ಬಂದು ತಲುಪಿದರಾಗ.

ಪಾಂಡವರೆಲ್ಲರ ಭೂಪ್ರದಕ್ಷಿಣೆ ತೀರ್ಥಯಾತ್ರೆಗೆ ಮಾರ್ಗದರ್ಶಕರಾದ ಯೋಗ.

 

ಪೃಥ್ವೀಂ ಪ್ರದಕ್ಷಿಣತ ಏತ್ಯ ಸಮಸ್ತತೀರ್ತ್ಥಸ್ನಾನಂ ಯಥಾಕ್ರಮತ ಏವ ವಿಧಾಯ ಪಾರ್ತ್ಥಾಃ।

ಸಮ್ಪೂಜ್ಯ ತೇಷು ನಿಖಿಲೇಷು ಹರಿಂ ಸುಭಕ್ತ್ಯಾ ಕೃಷ್ಣೇ ಸಮರ್ಪ್ಪಯಿತುಮಾಪುರಥ ಪ್ರಭಾಸಮ್ ।

ಸಮ್ಭಾವನಾಯ ಸಕಲೈರ್ಯ್ಯದುಭಿಃ ಸಮೇತಸ್ತೇಷಾಂ ಚ ರಾಮಸಹಿತೋ ಹರಿರಾಜಗಾಮ ॥೨೨.೨೭೪॥

ಪಾಂಡವರಿಂದ ಇಡೀ ಭೂಪ್ರದಕ್ಷಿಣೆ ಮತ್ತು ತೀರ್ಥಸ್ನಾನ,

ಎಲ್ಲದರಲ್ಲೂ ಮರೆಯದಂತೆ ಭಗವಂತನ ಅನುಸಂಧಾನ.

ಎಲ್ಲವನ್ನೂ ಕೃಷ್ಣಗರ್ಪಿಸಲು ಆಗುತ್ತದವರದು ಪ್ರಭಾಸಕ್ಕೆ ಆಗಮನ,

ಯಾದವರು ಬಲರಾಮನೊಡಗೂಡಿ ಪ್ರಭಾಸಕ್ಕೆ ಬಂದ ದೇವಕೀನಂದನ.

 

ಪಾರ್ತ್ಥೈಃ ಸಮ್ಪೂಜಿತಸ್ತತ್ರ ಕೃಷ್ಣೋ ಯದುಗಣೈಃ ಸಹ ।

ಪಾರ್ತ್ಥಾನ್ ಸಮ್ಪೂಜಯಾಮಾಸುರ್ವೃಷ್ಣಯಶ್ಚಾSಜ್ಞಯಾ ಹರೇಃ             ॥೨೨.೨೭೫॥

ಪ್ರಭಾಸದಲ್ಲಿ ಯಾದವರೊಂದಿಗಿದ್ದ ಕೃಷ್ಣನಿಗೆ ಪಾಂಡವರಿಂದ ಸತ್ಕಾರ,

ಕೃಷ್ಣನಾಣತಿಯಂತೆ ಯಾದವರಿಂದ ಪಾಂಡವರಿಗೆ ಆತಿಥ್ಯ ಪುರಸ್ಕಾರ.

 

ತತ್ರ ಭೀಮಂ ತಪೋವೇಷಂ ದೃಷ್ಟ್ವಾSತಿಸ್ನೇಹಕಾರಣಾತ್ ।

ದುರ್ಯ್ಯೋಧನಂ ನಿನ್ದಯತಿ ರಾಮೇ ಸಾತ್ಯಕಿರಬ್ರವೀತ್                        ॥೨೨.೨೭೬॥

 ಅಲ್ಲಿ ತಪಸ್ವಿಯ ವೇಷದಲ್ಲಿದ್ದ ಭೀಮಸೇನ,

ಬಲರಾಮಗೆ ಸ್ನೇಹ ಪ್ರೀತಿ ಉಕ್ಕಿದ ಕಾರಣ,

ದುರ್ಯೋಧನನನ್ನು ಬಯ್ಯಲಾರಂಭಿಸಿದ,

ಜೊತೆಯಿದ್ದ ಸಾತ್ಯಕಿ ಆಗ ಮಾತನಾರಂಭಿಸಿದ.

 

ಸರ್ವೇ ವಯಂ ನಿಹತ್ಯಾದ್ಯ ಸಕರ್ಣ್ಣಾನ್ ಧೃತರಾಷ್ಟ್ರಜಾನ್ ।

ಅಭಿಮನ್ಯುಂ ಸ್ಥಾಪಯಾಮೋ ರಾಜ್ಯೇ ಯಾವತ್ ತ್ರಯೋದಶಮ್             ॥೨೨.೨೭೭॥

 

ಸಂವತ್ಸರಂ ಸಮಾಪ್ಯೈವ ಪುರಂ ಯಾಸ್ಯನ್ತಿ ಪಾಣ್ಡವಾಃ ।

ತತೋ ಯುಧಿಷ್ಠಿರೋ ರಾಜಾ ರಾಜ್ಯಂ ಶಾಸತು ಪೂರ್ವವತ್                ॥೨೨.೨೭೮॥

ತಡಬೇಡ ಬಲರಾಮ;ಕರ್ಣ ದುರ್ಯೋಧನಾದಿಗಳ ಇಂದೇ ಕೊಲ್ಲೋಣ,

ಹದಿಮೂರು ವರ್ಷಗಳವರೆಗೆ ಅಭಿಮನ್ಯುವಿಗೆ ರಾಜ್ಯಭಾರವನ್ನು ನೀಡೋಣ.

ಪಾಂಡವರದು ಮುಗಿದನಂತರ ಅಜ್ಞಾತವಾಸ,

ಯುಧಿಷ್ಠಿರ ಹಿಂದಿನಂತೆಯೇ ಆಳಲಿ ಆಗಿ ಅರಸ.

 

ಏವಂ ವದತ್ಯೇವ ಶಿನಿಪ್ರವೀರೇ ಜನಾರ್ದ್ದನಃ ಪಾರ್ತ್ಥಮುಖಾನ್ಯುದೀಕ್ಷ್ಯ ।

ಉವಾಚ ಶೈನೇಯ ನ ಪಾಣ್ಡುಪುತ್ರಾಃ ಪರೇಣ ಸಂಸಾಧಿತರಾಜ್ಯಕಾಮಾಃ ॥೨೨.೨೭೯॥

 

ಸ್ವಬಾಹುವೀರ್ಯ್ಯೇಣ ನಿಹತ್ಯ ಶತ್ರೂನಾಪ್ಸ್ಯನ್ತಿ ರಾಜ್ಯಂ ತ ಇತೀರಿತೇSಮುನಾ ।

ತಥೇತಿ ಪಾರ್ತ್ಥಾ ಅವದಂಸ್ತತಸ್ತೇ ಕೃಷ್ಣಂ ಪುರಸ್ಕೃತ್ಯ ಯಯುರ್ದ್ದಶಾರ್ಹಾಃ ॥೨೨.೨೮೦॥

ಈರೀತಿಯಾಗಿ ಸಾತ್ಯಕಿ ಹೇಳುತ್ತಿರುವಾಗ,

ಕೃಷ್ಣ ಪಾಂಡವರ ನೋಡುತ್ತಾ ಹೇಳುವನಾಗ.

ಸಾತ್ಯಕೀ, ಇನ್ನೊಬ್ಬರು ಗೆದ್ದ ರಾಜ್ಯವನ್ನವರು ಬಯಸುವುದಿಲ್ಲ,

ಪಾಂಡವರು ಹೋರಾಡಿ ಗೆಲ್ಲುತ್ತಾರೆ ನಂಬಿ ತಮ್ಮದೇ ತೋಳ್ಬಲ.

ಪಾಂಡವರೂ ಸೂಚಿಸುತ್ತಾರೆ ಕೃಷ್ಣನಭಿಪ್ರಾಯಕ್ಕೆ ಒಪ್ಪಿಗೆ,

ಹೊರಡುತ್ತಾರೆ;ಯಾದವರು ಕೃಷ್ಣನ ಹಿಂದೆ ದ್ವಾರಕೆ  ಕಡೆಗೆ.

No comments:

Post a Comment

ಗೋ-ಕುಲ Go-Kula