Saturday 10 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 188-200

 

ತತಃ ಕೃಷ್ಣಃ ಸುತವರಂ ತ್ವತ್ತ ಆದಾಸ್ಯ ಇತ್ಯಜಃ ।

ಯದುಕ್ತವಾಞ್ಛಿವಂ ಪೂರ್ವಂ ಸತ್ಯಂ ಕರ್ತ್ತುಂ ತದಬ್ರವೀತ್             ॥೨೨.೧೮೮॥

 

ಪುತ್ರಂ ದೇಹೀತಿ ಸೋsಪ್ಯಾಹ ಪೂರ್ವಮೇವ ಸುತಸ್ತವ ।

ಜಾತಃ ಪ್ರದ್ಯುಮ್ನನಾಮಾ ಯಃ ಸ ಮದ್ದತ್ತಃ ಪ್ರವಾದತಃ             ॥೨೨.೧೮೯॥

ನಿನ್ನಿಂದ ಮಗನನನ್ನು ಪಡೆಯುತ್ತೇನೆ ಎಂದು ಕೃಷ್ಣ ರುದ್ರಗೆ ಹೇಳುತ್ತಾನೆ,

ಹಿಂದಾಡಿದ ಮಾತಿನಲ್ಲೇ ಲೋಕಪ್ರಚಾರಕ್ಕಾಗಿ ರುದ್ರನಲ್ಲಿ ಮಗನ ಬೇಡುತ್ತಾನೆ.

ರುದ್ರ ಹೇಳುತ್ತಾನೆ -ಯಾವ ಪ್ರದ್ಯುಮ್ನ ನಾಮಕ ಮಗನು ನಿನಗೆ ಹುಟ್ಟಿದ್ದಾನೆ,

ಅವನು ನನ್ನಿಂದಲೇ ಕೊಡಲ್ಪಟ್ಟವನೆಂದು ಆಗಲಿ ಲೋಕದ ಜನರ ಭಾವನೆ.

 

ಪೂರಾ ದಗ್ಧೋ ಮಯಾ ಕಾಮಸ್ತದಾsಯಾಚತ ಮಾಂ ರತಿಃ ।

ದೇಹಿ ಕಾನ್ತಂ ಮಮೇತ್ಯೇವ ತದಾ ತಾಮಹಮಬ್ರವಮ್             ॥೨೨.೧೯೦॥

 

ಉತ್ಪತ್ಸ್ಯತೇ ವಾಸುದೇವಾದ್ ಯದಾ ತಂ ಪತಿಮಾಪ್ಸ್ಯಸಿ ।

ಇತ್ಯತೋsಸೌ ಮಯಾ ದತ್ತ ಇವ ದೇವ ತ್ವದಾಜ್ಞಯಾ             ॥೨೨.೧೯೧॥

ಬಹಳ ಹಿಂದೆಯೇ ಆಗಿತ್ತಲ್ಲ ನನ್ನಿಂದ ಕಾಮನ ದಹನ,

ಅವನ ಸತಿ ರತಿಯಿಂದ ತನಗೆ ಪತಿಯ ಕೊಡೆಂಬ ನಿವೇದನ.

ಮುಂದೆ ಕೃಷ್ಣನಲ್ಲಿ ಈಗ ದೇಹ ಕಳಕೊಂಡವನು ಮತ್ತೆ ಹುಟ್ಟುತ್ತಾನೆ,

ಅವನನ್ನೇ ನೀನು ಗಂಡನಾಗಿ ಹೊಂದುವೆ ಎಂದು ನಾನು ಹೇಳಿದ್ದೇನೆ.

ಅದೂ ಕೂಡಾ ನಿನ್ನ ಆಜ್ಞೆಯಂತೆಯೇ ಆಗಿದೆ ಎಂದು ಶಿವನನ್ನುತ್ತಾನೆ.

 

ದಾಸೋsಸ್ಮಿ ತವ ದೇವೇಶ ಪಾಹಿ ಮಾಂ ಶರಣಾಗತಮ್ ।

ಇತ್ಯುಕ್ತ್ವಾsಭಿಪ್ರಣಮ್ಯೈನಂ ಪುನರಾಹ ಸುರಾನ್ ಹರಃ ॥೨೨.೧೯೨॥

ಓ ದೇವತೆಗಳೊಡೆಯಾ, ನಾನಾಗಿದ್ದೇನೆ ನಿನ್ನ ದಾಸ,

ಶರಣಾಗಿರುವ ನನ್ನನ್ನು ನೀನೇ ರಕ್ಷಿಸಬೇಕು ಸರ್ವೇಶ.

ಹೀಗೆ ಹೇಳುತ್ತಾ ರುದ್ರ ಕೃಷ್ಣಗೆ ಮಾಡುತ್ತಾನೆ ನಮಸ್ಕಾರ,

ದೇವತೆಗಳುದ್ದೇಶಿಸಿ ಅವನಿಂದ ಬರುತ್ತದೆ ಮುಂದಿನ ಉದ್ಗಾರ.

 

ಯದರ್ತ್ಥಮೇಷ ಆಯಾತಃ ಕೇಶವಃ ಶೃಣುತಾಮರಾಃ ।

ಯೋsಸುರೋ ವಕ್ರನಾಮಾssಸೀದವದ್ಧ್ಯೋ ಬ್ರಹ್ಮಣೋ ವರಾತ್             ॥೨೨.೧೯೩॥

ಓ ದೇವತೆಗಳೇ ಶ್ರೀಕೃಷ್ಣ ಏಕೆ ಇಲ್ಲಿಗೆ ಬಂದನೆಂದು ನೀವೆಲ್ಲಾ ಕೇಳಿ,

ಹೆಚ್ಚಿತ್ತು ಬ್ರಹ್ಮವರದಿ ಅವಧ್ಯನಾಗಿದ್ದ ವಕ್ರನೆಂಬ ಅಸುರನ ಹಾವಳಿ.

 

ತದಾಜಾತಾದ್ ವಾಸುದೇವಪುತ್ರಾತ್ ಕಾಮಾದೃತೇ ಕ್ವಚಿತ್ ।

ತಂ ಹನ್ತುಮೇವ ಪುತ್ರಂ ಸ್ವಂ ಪ್ರದ್ಯುಮ್ನಮುದರೇsರ್ಪ್ಯ ಚ             ॥೨೨.೧೯೪॥

 

ಆಯಾತ ಇಹ ತಂ ಚಾಪಿ ದದಾಹ ಸ್ವೋದರಾತ್ ಸುತಮ್ ।

ನಿಸ್ಸಾರಯಿತ್ವಾ ಕಕ್ಷಂ ಚ ದಗ್ಧಂ ಪಶ್ಯತ ದೇವತಾಃ                     ॥೨೨.೧೯೫॥

ವಕ್ರ ಪಡೆದುಕೊಂಡಿದ್ದ ಬ್ರಹ್ಮದೇವರಿಂದ ವಿಶೇಷವಾದಂಥ ಒಂದು ವರ,

ಅವಧ್ಯನಾದ ತನಗೆ ಸಾವು ಬಂದರೆ ಅದು ನವಜಾತ ದೈವಶಿಶುದ್ವಾರ.

ಕಾಮಾವತಾರಿಯಾದ ಪ್ರದ್ಯುಮ್ನನನ್ನು ತನ್ನ ಹೊಟ್ಟೆಯಲ್ಲಿಟ್ಟುಕೊಂಡು ಬಂದಿದ್ದ ಕೃಷ್ಣ,

ಅವನನ್ನು ಹೊರತಂದು ಆ ಕಾಡನ್ನೂ ಕಾಡನಾವರಿಸಿದ ವಕ್ರನನ್ನೂ ಮಾಡಿದ ಭಸ್ಮ.

ಹೀಗೆ ಕೃಷ್ಣ ಹಿಮಾಲಯದ ಆ ಕಾಡು ಕಾಡಲ್ಲಿದ್ದ ವಕ್ರನನ್ನು ಸುಟ್ಟ,

ಅದನ್ನೇ ರುದ್ರದೇವರು ದೇವತೆಗಳಿಗೆ ತೋರಿದ ಸಾಕ್ಷಿಯ ನೋಟ.

 

ಜ್ವಾಲಾಮಾಲಾಕರಾಳೇನ ಸ್ವತೇಜೋವರ್ದ್ಧಿತೇನ ಚ ।

ಪ್ರದ್ಯುಮ್ನೇನೈವ ತಂ ದೈತ್ಯಂ ದಗ್ಧ್ವಾ ವನಸಮನ್ವಿತಮ್             ॥೨೨.೧೯೬॥

 

ಪುನಶ್ಚ ಸ್ವೋದರೇ ಪುತ್ರಂ ಸ್ಥಾಪಯಾಮಾಸ ಕೇಶವಃ ।

ಸದ್ಯೋಗರ್ಭಂ ಪುನಸ್ತಂ ಚ ರುಗ್ಮಿಣ್ಯಾಂ ಜನಯಿಷ್ಯತಿ   ॥೨೨.೧೯೭॥

ಅಗ್ನಿಸಮೇತವಾದ ತನ್ನ ತೇಜಸ್ಸಿನಿಂದ ಕೂಡಿದ ಪ್ರದ್ಯುಮ್ನನಿಂದ ಮಾಡಿಸಿದ ಅಸುರ ಕಾನನ ದಹನ,

ಮತ್ತೆ ತನ್ನುದರದೊಳಗೆ ಮಗನನ್ನಿಟ್ಟುಕೊಂಡ ಕೃಷ್ಣ -ಮುಂದೆ ರುಗ್ಮಿಣಿಯಲ್ಲಿ ಆಯಿತವನ ಜನನ.

 

ಪೂರ್ವವತ್ ಕ್ಷಣಮಾತ್ರೇಣ ಯುವಾ ಚ ಸ ಭವಿಷ್ಯತಿ ।

ದೃಷ್ಟಮೇತನ್ನಾರದಾದ್ಯೈರ್ಮ್ಮುನಿಭಿಃ ಸರ್ವಮೇವ ಚ               ॥೨೨.೧೯೮॥

ಪ್ರದ್ಯುಮ್ನ ಆಗಬಲ್ಲವನಾಗಿದ್ದ ಯುವಕ ಹುಟ್ಟಿದ ಆ ಕ್ಷಣ,

ಇವೆಲ್ಲವೂ ಕೂಡಾ ಆಗಿತ್ತು ನಾರದಾದಿಗಳಿಂದ ವೀಕ್ಷಣ.

 

ಏವಂ ಕ್ರೀಡತ್ಯಯಂ ದೇವಃ ಪೂರ್ಣ್ಣೈಶ್ವರ್ಯ್ಯೇಣ ಕೇವಲಮ್ ।

ಇತ್ಯುಕ್ತೇ ಕೇಶವಂ ನೇಮುರ್ದ್ದೇವಾಃ ಶಕ್ರಪುರೋಗಮಾಃ             ॥೨೨.೧೯೯॥

ತತೋ ಹರಿರ್ಬ್ರಹ್ಮಸುರೇನ್ದ್ರಮುಖ್ಯೈಃ ಸುರೈಃ ಸ್ತುತೋ ಗರುಡಸ್ಕನ್ಧಸಂಸ್ಥಃ ।

ಪುನಃಪುನಃ ಪ್ರಣತಃ ಶಙ್ಕರೇಣ ಸ್ತುತಸ್ತೃತೀಯೇsಹ್ನಿ ನಿಜಾಂ ಪುರೀಮಗಾತ್ ॥೨೨.೨೦೦॥

ನಂತರ ನಾರಾಯಣನಾದ :ಬ್ರಹ್ಮ ಇಂದ್ರಾದಿ ದೇವತೆಗಳಿಂದ ಸ್ತುತ,

ಗರುಡಗಮನನು ಆದ ಮತ್ತೆ ಮತ್ತೆ ಶಂಕರನಿಂದ ನಮಸ್ಕೃತ.

ಸ್ತುತಿಸಲ್ಪಟ್ಟವನಾದ ಶ್ರೀಕೃಷ್ಣ ಮೂರನೇ ದಿನ,

ತನ್ನ ಪಟ್ಟಣಾಭಿಮುಖವಾಗಿ ಹೊರಟ ಪಯಣ.

No comments:

Post a Comment

ಗೋ-ಕುಲ Go-Kula