Sunday 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 366-371

 

ಭ್ರಾತೃಮಾತ್ರಾದಿಷು ಸ್ನೇಹಾತ್ ಕ್ಷಿಪ್ರಮಾತ್ಮವಿಮೋಕ್ಷಣಮ್ ।

ಇಚ್ಛನ್ನಪಿ ನ ಮೋಕ್ಷಾಯ ಯತ್ನಂ ಚಕ್ರೇ ವೃಕೋದರಃ ॥೨೨.೩೬೬॥

ತನ್ನ ಅಣ್ಣತಮ್ಮಂದಿರು, ತಾಯಿ, ಮಡದಿ ದ್ರೌಪದಿ ಮುಂತಾದವರ ಸ್ನೇಹ,

ಅವರಿಗೆಲ್ಲಾ ಸಂಕಟವಾಗದಿರಲೆಂದು ಒಳದ್ದರೂ ಬಿಡುಗಡೆಯ ಮೋಹ,

ತೋರಿಸಲೇ ಇಲ್ಲ ಭೀಮಸೇನ ತನ್ನ ಬಿಡುಗಡೆಗಾಗಿ ಪ್ರಯತ್ನದ ದಾಹ.

 

ಸರ್ವದೇವಮುನೀನ್ದ್ರಾಣಾಂ ತಪ ಆದಾತುಮತ್ರಗಮ್ ।

ಭ್ರಾತ್ರಾದಿಷು ಸ್ನೇಹವಶಾನ್ನ ಸ್ಥಾತವ್ಯಮಿಹೇತ್ಯಪಿ  ॥೨೨.೩೬೭॥

 

ಮನ್ವಾನಃ ಕಾಲತೋ ಭಙ್ಗಂ ಸ್ವಯಮೇವೈಷ ಯಾಸ್ಯತಿ ।

ಆಜ್ಞಯಾ ವಾಸುದೇವಸ್ಯ ದಾರ್ಢ್ಯಾದ್ ದೇಹಸ್ಯ ಮೇ ತಥಾ ॥೨೨.೩೬೮॥

ದೇವತೆಗಳ ಮುನಿಗಳ ತಪಸ್ಸನ್ನು ನಹುಷನಿಂದ ಸ್ವೀಕರಿಸಲಿಕ್ಕಾಗಿ,

ಪ್ರೀತಿಯ ಅಣ್ಣತಮ್ಮಂದಿರಿಂದ ದೂರವಿರಬಾರದು ಎಂಬುದಕ್ಕಾಗಿ,

ಈ ಹಾವಿನ ತೆಕ್ಕೆಯಲ್ಲಿರಲೇಬೇಕು ಕೆಲಕಾಲ,

ಹೀಗೆ ಸಾಗಿತ್ತು ಭೀಮನ ಮನದ ಯೋಚನಾಜಾಲ.

ಕಾಲಾಂತರದಲ್ಲಿ ತಾನಾಗಿಯೇ, ಭಗವಂತನ ಆಜ್ಞಾನುಸಾರ,

ಭರಿಸದೇ ನನ್ನ ಬಲದ ಭಾರ;ಬಿಟ್ಹೋಗುವನು ನನ್ನ ಅಜಗರ.

 

ಸ್ರಸ್ತಾಙ್ಗೇ ಪತಿತೇ ಸರ್ಪ್ಪೇ ಯಾಸ್ಯಾಮೀತಿ ವಿಚಿನ್ತಯನ್ ।

ತಸ್ಥೌ ಭೀಮೋ ಹರಿಂ ದ್ಧ್ಯಾಯನ್ ಸ್ವಭಾವಾನ್ನ ತದಿಚ್ಛಯಾ ॥೨೨.೩೬೯॥

ನಹುಷನ ಬಲಹ್ರಾಸ ಆದಮೇಲೆ ನಾನು ತೆರಳುತ್ತೇನೆ,

ಭಗವದ್ಧ್ಯಾನ ಮಾಡುತ್ತಾ ನಿಂತ ಭೀಮನ ಚಿಂತನೆ.

ಅದಾಗಿತ್ತು ಭೀಮಸೇನನ ಸ್ವಭಾವಸಹಜದ ಧ್ಯಾನ,

ಖಂಡಿತಾ ಅದಾಗಿರಲಿಲ್ಲ ಅಜಗರವಿಮೋಚನೆಗೆ ಕಾರಣ

 

ತದೈವ ಬ್ರಹ್ಮವಚನಾತ್  ಪೂರ್ವೋಕ್ತಾತ್  ಕೇಶವಾಜ್ಞಯಾ ।

ಬಲಂ ತಪಶ್ಚ ಸರ್ವಸ್ಯ ತತ್ಸ್ಥಮಾಯಾದ್ ವೃಕೋದರಮ್ ॥೨೨.೩೭೦॥

ಆಗ ಬ್ರಹ್ಮನ ಮಾತಿನಂತೆ, ಭಗವದಾಜ್ಞೆಯಂತೆಯೇ ಆಯಿತು,

ನಹುಷನಲ್ಲಿದ್ದ ದೇವತೆಗಳ ತಪಸ್ಸು ಮತ್ತು ಬಲ ಭೀಮಸೇನನ ಸೇರಿತು.

 

ಪೂರಿತೇ ನಹುಷಸ್ಥೇನ ತಪಸಾ ಚ ಬಲೇನ ಚ ।

ಭೀಮೇ ಸ ನಹುಷೋSಥಾSಸೀತ್ ಸ್ರಸ್ತಭೋಗಃ ಶನೈಃ ಶನೈಃ ॥೨೨.೩೭೧॥

ನಹುಷನಲ್ಲಿದ್ದ ತಪಸ್ಸು ಹಾಗೂ ಬಲ ಭೀಮನಲ್ಲಿ ತುಂಬಿಕೊಳ್ಳುತ್ತಿದ್ದಾಗ,

ನಹುಷ ಬಲಹೀನನಾಗುತ್ತಾ ಭೀಮನ ಮೇಲಿನ ಹಿಡಿತ ಸಡಿಲವಾಯಿತಾಗ.

No comments:

Post a Comment

ಗೋ-ಕುಲ Go-Kula