Wednesday 19 January 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 34-37

 

ದರ್ಪ್ಪಂ ನಿಹನ್ತುಂ ಹರಿರರ್ಜ್ಜುನಸ್ಯ ಸಮಾನಯದ್ ವಿಪ್ರಸುತಾನ್ ಪರೇಶಃ ।

ಪ್ರೀತಿರ್ಮ್ಮಹತ್ಯೇವ ಯತೋsರ್ಜ್ಜುನೇ ಹರೇಃ ಸಂಶಿಕ್ಷಯಾಮಾಸ ತತಃ ಸ ಏನಮ್ ॥೨೧.೩೪॥

ಭಗವಂತ; ಅರ್ಜುನನ ಅಹಂಕಾರವ ಮಾಡಲೆಂದು ನಾಶ,

ಬ್ರಾಹ್ಮಣನ ಮಕ್ಕಳನ್ನು ತನ್ನಲ್ಲಿಗೆ ಕರೆತಂದ ಮೂಲ ಉದ್ದೇಶ.

ಶ್ರೀಕೃಷ್ಣಗಿತ್ತು ಅರ್ಜುನನಲ್ಲಿ ಅತಿಶಯ ಪ್ರೀತಿ,

ಹಾಗಾಗಿಯೇ ಬೋಧಿಸಿದ್ದವಗೆ ನೀತಿಯ ರೀತಿ.

 

ಅಪ್ರಾಕೃತಾತ್ ಸದನಾದ್ ವಾಸುದೇವೋ ನಿಸ್ಸೃತ್ಯ ಸೂರ್ಯ್ಯಾಧಿಕಲಕ್ಷದೀಧಿತೇಃ ।

ರಥಂ ಸಮಾರು̐ಹ್ಯ ಸಪಾರ್ತ್ಥವಿಪ್ರ ಆಗಾತ್ ಸುತಾಂಶ್ಚೈವ ದದೌ ದ್ವಿಜಾಯ             ॥೨೧.೩೫॥

ಕೃಷ್ಣನದು ಅನಂತಸೂರ್ಯರ ಅಪ್ರಾಕೃತ ಕಾಂತಿಯಂತೆ,

ತನ್ನ ಅನಂತಾಸನದಿಂದ ಹೊರಬಂದು ರಥವನೇರಿದನಂತೆ.

ಅರ್ಜುನ, ವಿಪ್ರನೊಂದಿಗೆ ತಿರುಗಿ ಬಂದ ಭಗವಂತ,

ಬ್ರಾಹ್ಮಣನಿಗೆ ಅವನ ಮಕ್ಕಳನ್ನು ಮರಳಿ ತಂದಿತ್ತ.

 

ಲೋಕಶಿಕ್ಷಾರ್ತ್ಥಮೇವಾಸೌ ಪ್ರಾಯಶ್ಚಿತ್ತಂ ಚ ಚಾಲನೇ ।

ಚಕ್ರೇ ಸಾರ್ದ್ಧಮುಹೂರ್ತೇನ  ಸಮಾಗಮ್ಯ ಪುನರ್ಮ್ಮಖಮ್    ॥೨೧.೩೬॥

ಲೋಕಶಿಕ್ಷಣಕ್ಕಾಗಿ ಕೃಷ್ಣ ಮಾಡಿಕೊಂಡ ಪ್ರಾಯಶ್ಚಿತ್ತ,

ಯಜ್ಞದೀಕ್ಷಿತನಾದವನು ಎದ್ದುಹೋದುದರ ನಿಮಿತ್ತ.

ಇದೆಲ್ಲಾ ನಡೆದ ಸಮಯ ಮೂರುಘಳಿಗೆಯ ಮುಹೂರ್ತ.

 

ಬ್ರಹ್ಮಾದೀನಾಗತಾಂಶ್ಚೈವ ಸದಾ ಸ್ವಪರಿಚಾರಕಾನ್ ।

ಪೂಜಯಿತ್ವಾsಭ್ಯನುಜ್ಞಾಯ ಬ್ರಾಹ್ಮಣಾನಪ್ಯಪೂಜಯತ್           ॥೨೧.೩೭॥

ಕೃಷ್ಣನಿಂದ ತನ್ನ ಸೇವೆಯ ಮಾಡುವ ಬ್ರಹ್ಮಾದಿಗಳಿಗೆ ಗೌರವ,

ಅವರಿಗೆ ಹೊರಡಲು ಆಜ್ಞೆ ಕೊಟ್ಟು ವಿಪ್ರರ ಪೂಜಿಸಿದ ವಾಸುದೇವ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula