ಕಿಮೇತದ್ ದೃಷ್ಟಮಿತ್ಯೇವ ತೇನ ಪೃಷ್ಟೋ ರಮಾಪತಿಃ ।
ಅಯಂ ದ್ವೀಪಃ ಸಾಗರಶ್ಚ ಲಕ್ಷಯೋಜನವಿಸ್ತೃತೌ ॥೨೧.೪೨॥
ನಾನೇನೆಲ್ಲಾ ನೋಡಿದೆ ಎಂದು ತಬ್ಬಿಬ್ಬಾದಂತೆ ಕಾಣುವ ಅರ್ಜುನ
ಶ್ರೀಕೃಷ್ಣನ ಕೇಳುತ್ತಾನೆ,
ಜಂಬೂದ್ವೀಪವ ಆವರಿಸಿಕೊಂಡ ಸಾಗರವದು ಲಕ್ಷ ಯೋಜನದಷ್ಟು ಎಂದು ಕೃಷ್ಣ
ಹೇಳುತ್ತಾನೆ.
ತದನ್ಯೇ ತು ಕ್ರಮೇಣೈವ ದ್ವಿಗುಣೇನೋತ್ತರೋತ್ತರಾಃ ।
ಅನ್ತ್ಯಾದ್ಧ್ಯರ್ದ್ಧಸ್ಥಲಂ ಹೈಮಂ ಬಾಹ್ಯತೋ ವಾಜ್ರಲೇಪಿಕಮ್ ॥೨೧.೪೩॥
ಬೇರೆಲ್ಲಾ ದ್ವೀಪ ಸಮುದ್ರಗಳದ್ದು ಕ್ರಮವಾಗಿ ಎರಡು ಪಟ್ಟು ಹೆಚ್ಚು
ವಿಸ್ತಾರ,
ಶುದ್ಧೋದಕದ ವಿಸ್ತಾರಕ್ಕಿಂತ ಒಂದೂವರೆ ಪಟ್ಟು ವಜ್ರಲೇಪ ಪ್ರದೇಶದ
ವಿಸ್ತಾರ.
[ವಿಷ್ಣುಪುರಾಣ( ೨.೨.೫-೬)
ಜಂಬೂಪ್ಲಕ್ಷಾಹ್ವಯೌ ದ್ವೀಪೌ ಶಾಲ್ಮಲಶ್ಚಾಪರೋ ದ್ವಿಜ । ಕುಶಃ ಕ್ರೌಞ್ಚಸ್ತಥಾ ಶಾಕಃ
ಪುಷ್ಕರಶ್ಚೈವ ಸಪ್ತಮಃ । ಎತೇ ದ್ವೀಪಾಃ
ಸಮುದ್ರೈಸ್ತು ಸಪ್ತ ಸಪ್ತಭಿರಾವೃತಾಃ । ಲವಣೇಕ್ಷುಸುರಾಸರ್ಪಿರ್ದಧಿದುಗ್ಧಜಲೈಃ ಸಮಮ್’ ಜಂಬೂ, ಪ್ಲಕ್ಷ, ಶಾಲ್ಮಲ, ಕುಶ,
ಕ್ರೌಞ್ಚ ಶಾಕಃ ಮತ್ತು
ಪುಷ್ಕರ ಎನ್ನುವ ಏಳುದ್ವೀಪಗಳಿವೆ. ಇವು ಏಳು ಸಮುದ್ರಗಳಿಂದ ಆವೃತವಾಗಿವೆ. ಅವುಗಳೆಂದರೆ:
ಲವಣ(ಉಪ್ಪು), ಇಕ್ಷು(ಕಬ್ಬಿನರಸ), ಸುರಾ(ಮದ್ಯ), ಸರ್ಪಿಃ(ಘೃತ
-ತುಪ್ಪ), ದಧಿ(ಮೊಸರು), ದುಗ್ಧ(ಹಾಲು)
ಮತ್ತು ಶುದ್ಧೋದಕ].
ಏತತ್ ಸರ್ವಂ ಲೋಕನಾಮ ಹ್ಯೇತಸ್ಮಾದ್ ದ್ವಿಗುಣಂ ತಮಃ ।
ಅನ್ಧಂ ಯತ್ರ ಪತನ್ತ್ಯುಗ್ರಾ ಮಿಥ್ಯಾಜ್ಞಾನಪರಾಯಣಾಃ ॥೨೧.೪೪॥
ಇವೆಲ್ಲವೂ ಸೇರಿದಾಗದು ಸೂರ್ಯರಶ್ಮಿ ಹರಿದಾಡುವ ಪ್ರದೇಶ -ಲೋಕ,
ಎರಡು ಪಟ್ಟು ಅಂಧಂತಮ :ಮಿಥ್ಯಾಜ್ಞಾನ ಪರಾಯಣರು ಬೀಳುವ ಲೋಕ.
ಘನೋದಕಂ ತದ್ದ್ವಿಗುಣಂ ತದನ್ತೇ ಧಾಮ ಮಾಮಕಮ್ ।
ಯತ್ತದ್ ದೃಷ್ಟಂ ತ್ವಯಾ ಪಾರ್ತ್ಥ ತತ್ರ ಮುಕ್ತೈರಜಾದಿಭಿಃ ॥೨೧.೪೫॥
ಸೇವ್ಯಮಾನಃ ಸ್ಥಿತೋ ನಿತ್ಯಂ ಸರ್ವೈಃ ಪರಮಪೂರುಷಃ ।
ಲೋಕಾಲೋಕಪ್ರದೇಶಸ್ತು ಪಞ್ಚಾಶಲ್ಲಕ್ಷವಿಸ್ತೃತಃ ॥೨೧.೪೬॥
ಸಪಞ್ಚಾಶತ್ಸಹಸ್ರಶ್ಚ ತಸ್ಯಾಪಿ ಗಣನಂ ತಥಾ ।
ಯೋಜನಾನಾಂ ಪಞ್ಚವಿಂಶತ್ಕೋಟಯೋ ಮೇರುಪರ್ವತಾತ್ ॥೨೧.೪೭॥
ಚತಸೃಷ್ವಪಿ ದಿಕ್ಷೂರ್ಧ್ವಮಧಶ್ಚಾಣ್ಡಂ ಪ್ರಕೀರ್ತ್ತಿತಮ್ ।
ಅಬಗ್ನೀರನಭೋಹಙ್ಕೃನ್ಮಹತ್ತತ್ವಗುಣತ್ರಯೈಃ ॥೨೧.೪೮॥
ಕ್ರಮಾದ್ ದಶೋತ್ತರೈರೇತದಾವೃತಂ ಪರತಸ್ತತಃ ।
ವ್ಯಾಪ್ತೋsಹಂ ಸರ್ವಗೋsನನ್ತೋsನನ್ತರೂಪೋ
ನಿರನ್ತರಃ ॥೨೧.೪೯॥
ಘನೋದಕವಿರುವುದು ಅಂಧಂತಮಕ್ಕಿಂತ ಎರಡು ಪಟ್ಟು ಮಿಗಿಲಾಗಿ,
ಅದರಾಚೆಯಿರುವ ನನ್ನ ಧಾಮವನ್ನೇ ನೀನು ನೋಡಿರುವುದು ಹೋಗಿ.
ಅಲ್ಲಿ ಪರಮಪುರುಷನಾದ ನಾನು ಸಮಸ್ತ ಬ್ರಹ್ಮಾದಿಗಳಿಂದ,
ಬೇರೆಲ್ಲಾ ದೇವತೆಗಳು ಮತ್ತು ಇತರ ಮುಕ್ತರಿಂದ ಸದಾವಂದ್ಯ.
ಲೋಕಾಲೋಕ ಪ್ರದೇಶ ಐವತ್ತು ಲಕ್ಷ ಐವತ್ತು ಸಾವಿರ ಯೋಜನ ವಿಸ್ತಾರ,
ಪುರಾಣ ಹೇಳಿರುವ ಐವತ್ತು ಲಕ್ಷ ಯೋಜನ ತಾತ್ಪರ್ಯಗ್ರಾಹಕ ವಿಚಾರ.
ಮೇರುಪರ್ವತ ಮಧ್ಯವಾಗಿಟ್ಟುಕೊಂಡು ಇಪ್ಪತ್ತೈದು ಕೋಟಿ ಯೋಜನ,
ಮೇಲೆ ಕೆಳಗೆ ಮತ್ತು ನಾಕು ದಿಕ್ಕುಗಳಲ್ಲೂ ಇದೆ ಬ್ರಹ್ಮಾಂಡದ ಪರಿಮಾಣ.
ಇಂತಹಾ ಬ್ರಹ್ಮಾಂಡಕ್ಕೆ ಉಂಟು ಅನೇಕ ಆವರಣ,
ಜಲಾವರಣ,ಅಗ್ನಿ ಆವರಣ,ಗಾಳಿ ಆಕಾಶದಾವರಣ,
ಅಹಂಕಾರ ತತ್ವದಾವರಣ, ಮಹತತ್ವದಾವರಣ, ತ್ರಿಗುಣಗಳ ಆವರಣ.
(ತಮೋಗುಣ, ರಜೋಗುಣ, ಮತ್ತು ಸತ್ವಗುಣಗಳ
ಆವರಣ.)
ಇಲ್ಲಿ ಪ್ರತಿಯೊಂದು ಆವರಣದ ಗಾತ್ರ,
ಒಂದಕ್ಕಿಂತ ಒಂದು ಹತ್ತುಪಟ್ಟು ವಿಸ್ತಾರ.
ಇವೆಲ್ಲವುದರ ಆಚೆ ಭಗವಂತನವ ವ್ಯಾಪ್ತ,
ಸರ್ವತ್ರವ್ಯಾಪ್ತ, ಅಂತವೇ ಇರದ ಅನಂತ.
ಅನಂತಾನಂತ ರೂಪಗಳ ಆ ಭಗವಂತ,
ಬ್ರಹ್ಮಾಂಡದ ಪ್ರತಿ ಪರಮಾಣುವಿನಲ್ಲೂ ವ್ಯಾಪ್ತ.
No comments:
Post a Comment
ಗೋ-ಕುಲ Go-Kula