ತತಃ ಕದಾಚಿತ್ ಪ್ರವರೇ ಸಭಾತಳೇ ಧರ್ಮ್ಮಾತ್ಮಜೋ ರಾಜಭಿರ್ಭ್ರಾತೃಭಿಶ್ಚ ।
ವೃತೋ ನಿಶಮ್ಯೈವ ಸಭಾಃ ಸುರಾಣಾಂ ಯಥಾ ಸ್ಥಿತಾ ನಾರದಮನ್ವಪೃಚ್ಛತ್ ॥೨೧.೫೫॥
ಒಮ್ಮೆ ಮಯ ಮಾಡಿದ ಶ್ರೇಷ್ಠ
ಸಭಾಂಗಣದಲ್ಲಿ ರಾಜರು ಸಹೋದರರ ಕೂಡಿದ ಧರ್ಮರಾಜ,
ದೇವತಾಸಭೆಗಳ ಬಗ್ಗೆ
ವಿಚಾರಿಸುತ್ತಾ ನಾರದರನ್ನು ಪ್ರಶ್ನೆ ಮಾಡಿದ ತಾನು ಪಾಂಡವಾಗ್ರಜ.
ಅನ್ತರಿಕ್ಷಂ ತ್ವಯಾ ಪ್ರೋಕ್ತಂ ಲಕ್ಷಯೋಜನಮುಚ್ಛ್ರಿತಮ್ ।
ಅರ್ದ್ಧಕೋಟ್ಯುಚ್ಛ್ರಿತಃ ಸ್ವರ್ಗ್ಗೋ ವಿಮಾನಾವಲಿಸಙ್ಕುಲಃ ॥೨೧.೫೬॥
ನಾರದರೇ, ಅಂತರಿಕ್ಷವು
ಭುವಿಯಿಂದ ಲಕ್ಷ ಯೋಜನ ಮೇಲಿದೆಯೆಂದು ಹೇಳಿದ್ದೀರಿ,
ಆನಂತರ ಸ್ವರ್ಗಲೋಕವು ಐವತ್ತು
ಲಕ್ಷ ಯೋಜನ ವಿಸ್ತಾರ ಎಂದು ಹೇಳಿರುವಿರಿ,
ಸ್ವರ್ಗಲೋಕದಲ್ಲಿ ವಿಮಾನಗಳ
ಸಾಲು ಸಾಲುಗಳೇ ಇರುತ್ತವೆಂದು ತಿಳಿಸಿರುವಿರಿ.
[ಅಂದರೆ ಭೂಮೇರು ಊರ್ಧ್ವ-
ಲಕ್ಷ ಯೋಜನ ಪರ್ಯಂತ ಅಂತರಿಕ್ಷಲೋಕ. ಅನಂತರ ಅರ್ಧ
ಕೋಟಿ ಯೋಜನ ಸ್ವರ್ಗಲೋಕ. ಒಟ್ಟು ೫೧,೦೦೦೦೦ ಯೋಜನ ವಿಸ್ತಾರ]
ಭುವಃ ಸ್ವರ್ಗ್ಗಶ್ಚ ಕೋಟ್ಯೈವ ಯೋಜನಾನಾಂ ಪ್ರವಿಸ್ತೃತೌ ।
ಮಹರ್ಜ್ಜನಸ್ತಪಶ್ಚೈವ ಕ್ರಮಾದದ್ಧ್ಯರ್ದ್ಧಯೋಜನಾಃ ॥೨೧.೫೭॥
ಭುವಃಲೋಕ ಮತ್ತು
ಸ್ವರ್ಗಲೋಕಗಳು ಒಂದು ಕೋಟಿ ಯೋಜನದಷ್ಟು ವಿಸ್ತಾರ,
ಮಹರ್ಲೋಕ,ಜನಲೋಕ, ತಪೋಲೋಕಗಳು
ಕ್ರಮವಾಗಿ ಒಂದೂವರೆ ಪಟ್ಟು ಹೆಚ್ಚು ಎತ್ತರ.
ಪಞ್ಚಾಶತ್ಕೋಟಿವಿಸ್ತಾರಾ ಯೋಜನಾನಾಂ ಸಮಸ್ತಶಃ ।
ಯಾವನ್ತ ಏತೇ ಮಿಳಿತಾಸ್ತತ್ಪ್ರಮಾಣ ಉದೀರಿತಃ ॥೨೧.೫೮॥
ಸತ್ಯಾಖ್ಯೋ ಬ್ರಹ್ಮಲೋಕಸ್ತು ಯತ್ರ ಬ್ರಹ್ಮಾ ವಿ ರಾಜತೇ ।
ತತಶ್ಚ ದ್ವಿಗುಣಃ ಪ್ರೋಕ್ತೋ ವಿಷ್ಣುಲೋಕಃ ಸನಾತನಃ ॥೨೧.೫೯॥
ಐವತ್ತುಕೋಟಿ ಯೋಜನಗಳಷ್ಟು
ಎಲ್ಲವೂ ಸೇರಿದ ಊರ್ಧ್ವಲೋಕ,
ಮಹರ್ಲೋಕ, ಜನಲೋಕ, ತಪೋಲೋಕದ ನಂತರ
ಬ್ರಹ್ಮನ ಸತ್ಯಲೋಕ.
ಇದರ ವಿಸ್ತಾರ
ಭೂಮಧ್ಯಬಿಂದುವಿನಿಂದ ತಪೋಲೋಕದ ತನಕ,
ಅಂಥಾ ಸತ್ಯಲೋಕಕ್ಕಿಂತ ಎರಡು
ಪಟ್ಟು ಮಿಗಿಲಾಗಿದೆ ವಿಷ್ಣುಲೋಕ.
[ಮಹರ್ಲೋಕ :- ೫೧,೦೦೦೦೦ + ೨೫೫೦೦೦೦
= ೭೬೫೦೦೦೦ ಯೋಜನ. ಜನರ್ಲೋಕ:- ೭೬೫೦೦೦೦ + ೩೮೨೫೦೦೦ = ೧೧೪೭೫೦೦೦ ಯೋಜನ. ತಪೋಲೋಕ:- ೧೧೪೭೫೦೦೦
+ ೫೭೩೭೫೦೦ = ೧೭೨೧೨೫೦೦ ಯೋಜನ.
ಭೂಮಧ್ಯಬಿಂದುವಿನಿಂದ ತಪೋಲೋಕದ ತನಕ – ೫೦೦೦೦ + ೫೧೦೦೦೦೦ + ೭೬೫೦೦೦೦ + ೧೧೪೭೫೦೦೦ +
೧೭೨೧೨೫೦೦ = ೪೧೪೮೭೫೦೦ ಯೋಜನ. ಸತ್ಯಲೋಕ -
೪೧೪೮೭೫೦೦ X ೨ = ೮೨೯೭೫೦೦೦
ಯೋಜನ. ಸತ್ಯಲೋಕದ ದ್ವಿಗುಣ ವಿಷ್ಣುಲೋಕ- ೮೨೯೭೫೦೦೦ X ೨ = ೧೬೫೯೫೦೦೦೦ ಯೋಜನ. ಒಟ್ಟು ೮೨೯೭೫೦೦೦ + ೧೬೫೯೫೦೦೦೦=
೨೪೮೯೨೫೦೦೦. ಹೀಗೆ ಭೂಮಿಯ ಮಧ್ಯದಿಂದ^ ಗಣನೆಗೆ ತೆಗೆದುಕೊಂಡಾಗ ಒಟ್ಟು
೨೫೦೦೦೦೦೦೦ ಯೋಜನ. ( ^೧೦೭೫೦೦೦+
೨೪೮೯೨೫೦೦೦).
ಮೇರು ಪರ್ವತವನ್ನೂ ಲೆಕ್ಕ ಹಾಕಿದರೆ ಐವತ್ತು ಕೋಟಿ ಯೋಜನ
ವಿಸ್ತಾರ. ಮೇರು ಪರ್ವತದಿಂದ ಲೆಕ್ಕ ಹಾಕಿದರೆ ಇಪ್ಪತ್ತೈದು ಕೋಟಿ ವಿಸ್ತಾರ. ಅದರಿಂದಾಗಿ ಪುರಾಣದ
ಮಾತಿಗೂ ಮಹಾಭಾರತದ ಮಾತುಗಳಿಗೂ ವಿರೋಧವಿಲ್ಲ. ಎಲ್ಲಿಂದ ಲೆಕ್ಕ ಹಾಕಿರುವುದು ಎನ್ನುವುದು ಮುಖ್ಯ.
ಹೀಗಾಗಿ ಪುರಾಣ ಬೇರೆಬೇರೆ ಗಣಿತವನ್ನು ಹೇಳಿದಾಗ ಅದರ ವಿವಕ್ಷೆ ಏನಿದೆ ಎನ್ನುವುದನ್ನು
ತಿಳಿದುಕೊಳ್ಳಬೇಕು].
No comments:
Post a Comment
ಗೋ-ಕುಲ Go-Kula