ಉತ್ತರೋತ್ತರತಃ ಸರ್ವೇ ಸುಖೇ ಶತಗುಣೋತ್ತರಾಃ ।
ಅನನ್ತಜನಸಮ್ಪೂರ್ಣ್ಣಾ ಅಪಿ ತೇ ಹೀಚ್ಛಯಾ ಹರೇಃ
॥೨೧.೬೦॥
ಅವಕಾಶವನ್ತೋ ದಿವ್ಯತ್ವಾತ್ ಪೂರ್ಯ್ಯನ್ತೇ ನ ಕದಾಚನ ।
ಸರ್ವಕಾಮಸುಖೈಃ ಪೂರ್ಣ್ಣಾ ದಿವ್ಯಸ್ತ್ರೀಪುರುಷೋಜ್ಜ್ವಲಾಃ ॥೨೧.೬೧॥
ಸ್ವರ್ಗದಿಂದ ವೈಕುಂಠದವರೆಗೆ
ಇರುವ ಲೋಕಗಳಲ್ಲಿನ ಸುಖ,
ಕ್ರಮೇಣ ಮೇಲು ಮೇಲಕ್ಕೆ
ಒಂದರಿಂದೊಂದು ನೂರ್ಪಟ್ಟು ಅಧಿಕ.
ಅಲ್ಲಿದೆ ಅನಂತ ಜೀವರಾಶಿಗಳ
ಶಾಶ್ವತ ವಾಸ,
ಎಲ್ಲರಿಗುಂಟು ಸಂದಣಿಯಿರದ
ವಿಶೇಷ ಅವಕಾಶ.
ಈ ಲೋಕಗಳು ಎಲ್ಲಾ ಸುಖ
ಸಮೃದ್ಧಿಯಿಂದ ಭರಿತ,
ಅಲೌಕಿಕ ಸ್ತ್ರೀಪುರುಷರಿಂದ
ಲೋಕಗಳಿವು ಶೋಭಿತ.
[ಭೂಲೋಕದಿಂದ ಸತ್ಯಲೋಕದತನಕ
ಅಂತರಿಕ್ಷಲೋಕಗಳನ್ನು ನೋಡಿದೆವು. ಅದೇ ರೀತಿ ಕೆಳಗೆ ಏಳು ಪಾತಾಳ ಲೋಕಗಳಿವೆ- ಅತಳ, ವಿತಳ, ಸುತಳ, ತಳಾತಳ, ಮಹಾತಳ, ರಸಾತಳ ಮತ್ತು
ಪಾತಾಳ)]
ದಿವ್ಯರತ್ನಸಮಾಕೀರ್ಣ್ಣಂ ತಥಾ ಪಾತಾಳಸಪ್ತಕಮ್ ।
ಅಧಸ್ತಾಚ್ಛೇಷದೇವೇನ ಬಲಿನಾ ಸಮಧಿಷ್ಠಿತಮ್ ॥೨೧.೬೨॥
ದಿವ್ಯ ರತ್ನಗಳಿಂದ
ತುಂಬಿರುವವುಗಳು,
ಅವು ಏಳು ಪಾತಾಳ ಲೋಕಗಳು.
ಶೇಷನಿಂದ ಹೊರಲ್ಪಟ್ಟ
ಲೋಕಗಳು.
ಕಾಮಭೋಗಸಮಾಯುಕ್ತಾ ಬಹುವರ್ಷಸಹಸ್ರಿಣಃ ।
ಸಪ್ತದ್ವೀಪೇಷು ಪುರುಷಾ ನಾರ್ಯ್ಯಶ್ಚೋಕ್ತಾಃ ಸುರೂಪಿಣಃ ॥೨೧.೬೩॥
ಕೆಳಗಿನ ಲೋಕದಲ್ಲಿರುವವರದು
ಬಯಸಿದ ಭೋಗ ಪಡೆದ ದೀರ್ಘ ಬಾಳು,
ಏಳೂ ದ್ವೀಪಗಳಲ್ಲಿರುವ
ಸ್ತ್ರೀ ಪುರುಷರುಗಳು ಅತ್ಯಂತ ಸ್ಫುರದ್ರೂಪಿಗಳು.
ಏಷಾಂ ಚ ಸರ್ವಲೋಕಾನಾಂ ಧಾತಾ ನಾರಾಯಣಃ ಪರಃ ।
ವಿಷ್ಣುಲೋಕಸ್ಥಿತೋ ಮುಕ್ತೈಃ ಸದಾ ಸರ್ವೈರುಪಾಸ್ಯತೇ ॥೨೧.೬೪॥
ಈ ಎಲ್ಲಾ ಲೋಕಗಳನ್ನೂ
ಹೊತ್ತಿರುವ ಏಕೈಕ ಮಹಾತ್ರಾಣ,
ಮುಕ್ತಲೋಕದಲ್ಲಿದ್ದು
ಮುಕ್ತರಿಂದ ಸ್ತುತಿಗೊಂಬ ನಾರಾಯಣ.
[ಹೀಗೆ ಒಟ್ಟಿನಲ್ಲಿ ಇಲ್ಲಿ
ಆಚಾರ್ಯರು ಭಾಗವತದ ಐದನೇ ಸ್ಕಂಧದಲ್ಲಿ ಹೇಳಿದ ಭೂಗೋಳ ವರ್ಣನೆ, ಖಗೋಳ ವರ್ಣನೆ
ಮತ್ತು ವಿಷ್ಣುಪುರಾಣಾದಿಗಳಲ್ಲಿ ಹೇಳಿರುವ ಇಡೀ ಬ್ರಹ್ಮಾಂಡ ವರ್ಣನೆ ಈ ಮೂರನ್ನೂ ಸಮಷ್ಟಿಯಾಗಿ, ಎಲ್ಲವನ್ನೂ
ಒಟ್ಟಿಗೆ ವ್ಯಾಖ್ಯಾನ ಮಾಡಿ ನಮಗೆ ನೀಡಿದ್ದಾರೆ].
No comments:
Post a Comment
ಗೋ-ಕುಲ Go-Kula