Wednesday, 19 January 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 38-41

 

ಸಸ್ನಾವವಭೃಥಂ ಕೃಷ್ಣಃ ಸದಾರಃ ಸಸುಹೃಜ್ಜನಃ ।

ಆಯಾನ್ತಂ ದ್ವಾರಕಾಂ ಕೃಷ್ಣಂ ದನ್ತವಕ್ರೋ ರುರೋಧ ಹ           ॥೨೧.೩೮॥

 

ಜಘಾನ ಗದಯಾ ಕೃಷ್ಣಃ  ತಂ ಕ್ಷಣಾತ್ ಸವಿಡೂರಥಮ್ ।

ವಿಡೂರಥಸ್ತಮೋsಗಚ್ಛದ್ ದನ್ತವಕ್ರೇ ಚ ಯೋsಸುರಃ                ॥೨೧.೩೯॥

 

ಹರೇಃ ಪಾರ್ಷದಃ ಕ್ಷಿಪ್ರಂ ಹರಿಮೇವ ಸಮಾಶ್ರಿತಃ ।

ಕೃಷ್ಣೇ ಪ್ರಾಪ್ತೇ ಸ್ವಲೋಕಂ ಚ ನಿಸ್ಸೃತ್ಯಾಸ್ಮಾತ್ ಸ್ವರೂಪತಃ     ॥೨೧.೪೦॥

 

 ಏಕೀಭಾವಂ ಸ್ವರೂಪೇಣ ದ್ವಾರಪೇನ ಗಮಿಷ್ಯತಿ ।                  

ತತಃ ಕೃಷ್ಣಃ ಪುರೀಮೇತ್ಯ ಬೋಧಯಾಮಾಸ ಫಲ್ಗುನಮ್         ॥೨೧.೪೧॥

ಕೃಷ್ಣ ತನ್ನ ಹೆಂಡಂದಿರು ಮತ್ತು ಮಿತ್ರರೊಡಗೂಡಿ,

(ಯಜ್ಞದ ಅಂತ್ಯದಿ )ಅವಭ್ರತಸ್ನಾನವನ್ನು ಮಾಡಿ,

ದ್ವಾರಕಾಪಟ್ಟಣದತ್ತ ಭಗವಂತ ನಡೆದ,

ದಂತವಕ್ರ ವಿಡೂರಥನೊಂದಿಗವನ ತಡೆದ.

ಶ್ರೀಕೃಷ್ಣ ಕ್ಷಣಮಾತ್ರದಲ್ಲಿ ತನ್ನ ಗದೆಯ ಬೀಸಿ ಅವರಿಬ್ಬರನ್ನೂ ಕೊಂದ,

ವಿಡೂರಥ ಅಂಧಂತಮಸ್ಸಿಗೆ, ದಂತವಕ್ರನಲ್ಲಿದ್ದ ಅಸುರ ಅಂಧಂತಮಸ್ಸಿಗೆ ತೆರಳಿದ.

ದಂತವಕ್ರನ ಒಳಗಿತ್ತು ಎರಡು ಜೀವಗಳ ಸಮಾವೇಶ,

ಒಬ್ಬ ದ್ವಾರಪಾಲಕ ವಿಜಯ ಇನ್ನೊಬ್ಬ ದೈವದ್ವೇಷಿ ರಕ್ಕಸ.

ಅಸುರನಿಗೆ ಆಯಿತು ಅಂಧಂತಮಸ್ಸಿಗೆ ಪ್ರವೇಶ,

ವಿಜಯನಿಗೆ ಆಯಿತು ಕೃಷ್ಣನ ಉದರದಲ್ಲಿ ವಾಸ.

ಮುಂದೆ ವಿಜಯನಾದ ತನ್ನ ಮೂಲ ರೂಪದಲ್ಲಿ ಲೀನ,

ದೇವತೆಗಳಲ್ಲಿ ಅನೇಕ ದೇಹ ಹೊಂದುವುದು ಸಾಮಾನ್ಯ.

ಆನಂತರ ಕೃಷ್ಣ ದ್ವಾರಕೆಗೆ ಬಂದ,

ಅರ್ಜುನಗೆ ಉಪದೇಶವ ಮಾಡಿದ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula