Wednesday 9 March 2016

Bhava Guccha 42

ಭಾವ ಗುಚ್ಛ  by “ತ್ರಿವೇಣಿ ತನಯ

ಆನೆ ನೀನು ಆನಂದದಾನೆ

ಆನೆ ನೀನು ಆನಂದದಾನೆ
ನಿಜ ಭಕ್ತರ ಮನದಲ್ಲಿದ್ದಾನೆ

ನಾಟಕದ ಹಿರಿಯಾನೆ,
ಹೊಕ್ಕುಳಲಿ ಬ್ರಹ್ಮನ ಹೆತ್ತಾನೆ,
ಎದೆಯಲಿ ಲಕುಮಿಯ ಹೊತ್ತಾನೆ,
ಗದೆಯೊಳಗೆ ಮಗನ ಇತ್ತಾನೆ.

ಆನೆ ನೀನು ಆನಂದದಾನೆ

ಗೋವು ಗೊಲ್ಲರೊಡನೆ ನಲಿದಾನೆ,
ಕಾಳಿಂಗನ ಹೆಡೆ ತುಳಿದಾನೆ,
ಮಾವ ಕಂಸನ ಕೊಂದಾನೆ,
ರಕ್ಕಸರ ಹೊಸಕಿದಾನೆ.

ಆನೆ ನೀನು ಆನಂದದಾನೆ

ಕ್ಷೀರಸಾಗರದಿ ಮಲಗಿದಾನೆ,
ಆನೆಯ ಕಾಯಲು ಬಂದಾನೆ,
ಮಕರಿಗೆ ಮೋಕ್ಷವಿತ್ತಾನೆ,
ತನ್ನವರ ಕೈ ಬಿಡದಾನೆ.

ಆನೆ ನೀನು ಆನಂದದಾನೆ

ಮದವೇರಿದವರ ಮದವಡಗಿಸಿದಾನೆ,
ಶರಣರ ಸಲಹಿ ರಕ್ಷಿಸಿದಾನೆ,
ದುರುಳರ ಪಾಲಿಗೆ ಮದ್ದಾನೆ,
ಭಕುತರ ಮನದಲಿ ಇದ್ದಾನೆ.

ಆನೆ ನೀನು ಆನಂದದಾನೆ

ಸೆಟೆದು ನಿಂತವರಿಗೆ ಸಿಡಿದಾನೆ,
ಬಾಗಿದ ಭಕ್ತರ ಮನದಾನೆ,
ನೀ ನೋಡುವ ನೋಟಕೆ ತಕ್ಕಾನೆ,
ಶಾರಣ್ಯದ ಭಕುತರಿಗೆ ದಕ್ಯಾನೆ.

ಆನೆ ನೀನು ಆನಂದದಾನೆ,
ನಿಜ ಭಕ್ತರ ಮನದಲ್ಲಿದ್ದಾನೆ.

(Contributed by Shri Govind Magal)

No comments:

Post a Comment

ಗೋ-ಕುಲ Go-Kula