Sunday, 20 March 2016

Bhava Guccha 51

ಭಾವ ಗುಚ್ಛ  by “ತ್ರಿವೇಣಿ ತನಯ

ಬುದ್ಢಾವತಾರ

ದೇವದ್ವೇಷಿಗಳಾದ ಅಸುರರಿಗೆ ತೋರಿದಮೋಹಾವತಾರ,
ದೇವತೆಗಳಿಗೆ "ಪ್ರಶಾಂತವಿದ್ಯೆ"ಯ ಕೊಟ್ಟ ಮಹಾ ಅವತಾರ,
ಕ್ಷಣಿಕ ಶೂನ್ಯ ನಶ್ವರ ಎಂದು "ಅಶಾಶ್ವತತೆ"ತೋರಿದವತಾರ,
ಪಾಷಂಡಿಗಳು ತಮಗೆ ತೋಚಿದಂತೆ ತಿಳಿದ ಮೋಹಾವತಾರ.

ಕಲ್ಕ್ಯಾವತಾರ

ಕುದುರೆ ಏರಿ ಖಡ್ಗ ಹಿಡಿದು ಕಾಣಿಸಿಕೊಂಡಾವತಾರ,
ಧರ್ಮಗ್ಲಾನಿಯಾಗಿ ಅಧರ್ಮ ಮೆರೆದಾಗ ಬಂದ ಅವತಾರ,
ದುರುಳರನು ದೈತ್ಯರನು ಕರ್ಮಭ್ರಷ್ಟರನು ತರಿದವತಾರ,
ದಾನವರ ತರಿದು ಮಾನವತ್ವ ಧರ್ಮ ಉಳಿಸಿದ ಕಲ್ಕ್ಯಾವತಾರ.

ಹತ್ತಾವತಾರದಲಿ ಮೆರೆದವನೇ,
ಹೊತ್ಹೊತ್ತಿಗೆ ಸುಜನರ ಕಾಯ್ವವನೇ,
ಕತ್ತಲೋಡಿಸಿ ಬೆಳಕ ತಂದವನೇ,
ಇತ್ತಲೂ ನೋಡೊಮ್ಮೆ ಭಕುತ ಬಾಂಧವನೇ.

ಮಂಗಲಮ್ ಜಯ ಮಂಗಲಮ್,
ಮಂಗಲಮ್ ಜಯ ಮಂಗಲಮ್,

ಮಂಗಲಮ್ ಮಧುಸೂದನಗೆ,
ಮಂಗಲಮ್ ಮಹಾ ಮಾಧವಗೆ,
ಮಂಗಲಮ್ ದಶಾವತಾರನಿಗೆ,
ಮಂಗಲಮ್ ಅನಂತಾವತಾರನಿಗೆ.

ಮಂಗಲಮ್ ಜಯ ಮಂಗಲಮ್,
ಮಂಗಲಮ್ ಜಯ ಮಂಗಲಮ್.

(Contributed by Shri Govind Magal)

No comments:

Post a Comment

ಗೋ-ಕುಲ Go-Kula