ಭಾವ ಗುಚ್ಛ by “ತ್ರಿವೇಣಿ ತನಯ”
ಮುಖ್ಯ ಪ್ರಾಣ -ಜಗದ
ತ್ರಾಣ
ಮೊದಲೆರಡು ಅವತಾರಗಳಲ್ಲಿ ಶಕ್ತಿ
ಜ್ಞಾನಗಳ ಮೇಳ,
ಮೂರನೆಯದಾದರೋ ಜ್ಞಾನ
ಪ್ರಸಾರದ್ದೇ ಆಳ,
ವ್ಯಾಸಪೂಜೆಗೆಂದೇ ಅವತರಿಸಿದ
ಶ್ರೀಮದಾಚಾರ್ಯ,
ಇಪ್ಪತ್ತೊಂದು ತರಿದು ತತ್ವವಾದ
ಕೊಟ್ಟ ಮಧ್ವಾಚಾರ್ಯ.
ಪಾಜಕದಲಿ ಅವತರಿಸಿದ ದಶ ಪ್ರಮತಿ
,
ಇಪ್ಪತ್ತೊಂದು ಕುಮತಗಳ ಖಂಡಿಸಿದ
ಪೂರ್ಣಪ್ರಮತಿ,
ಸಹಜ ಸರ್ವಕಾಲಿಕ ಸಿದ್ಧಾಂತ
ಎತ್ತಿ ತೋರಿದ,
ಶಿಸ್ತಿನಿಂದ ವ್ಯಾಸಪೂಜೆ
ಸಲ್ಲಿಸಿ ಕೃಷ್ಣಾರ್ಪಣವೆಂದ.
ಪಾಜಕದಲಿ ಉದಯಿಸಿತು ನಿಜಜ್ಞಾನ
ಸೂರ್ಯ,
ಆಮೇಲೆ ಲೋಕದಿಂದ
ಕರೆಸಿಕೊಂಡದ್ದು ಮಧ್ವಾಚಾರ್ಯ,
ಹೆತ್ತವರಿಟ್ಟ ಹೆಸರದು ವಾಸುದೇವ,
ಹನುಮ ಭೀಮರ ನಂತರ ಬಂದ
ಪ್ರಾಣದೇವ.
ಬಾಲ್ಯದಿಂದಲೇ ತೋರಿದ ಅನೇಕ
ವಿಸ್ಮಯಗಳ,
ತಂದೆ ತಾಯಿಗಳಿಗೆ ಏನೋ ವಿಚಿತ್ರ
ಕಳವಳ,
ಆಡಾಡುತಲೇ ನಿವಾರಿಸಿದ
ಮಾಯಾವಾದದ ಗೊಂದಲ,
ನೈಜಸಾಧಕರಿಗೆ ತಿಳಿಸಿ ತೋರಿದ
"ನಿಜ ಹಂಬಲ."
ಪಂಚಭೇದಗಳ ಪ್ರಪಂಚದಲಿ ಎಲ್ಲವೂ
ಒಂದಲ್ಲವೆಂದ,
ಒಂದರಂತೆ ಒಂದಿಲ್ಲ ಅದೇ
ಸೃಷ್ಟಿಯ ನಿಯಮ ನೋಡೆಂದ,
ತತ್ವವಾದದ ತಾರತಮ್ಯವ ತಿಳಿಸಿ
ದಾರಿ ತೋರಿದ ಧೀರ,
ಜಗದ ಮಾತಾಪಿತರ ಪ್ರೀತಿಪಾತ್ರ
ನಿರವದ್ಯ ಕುಮಾರ.
(Contributed by Shri Govind Magal)
No comments:
Post a Comment
ಗೋ-ಕುಲ Go-Kula