Monday, 28 March 2016

Sāra Saṅgama 07

ಸಾರ ಸಂಗಮ  by “ತ್ರಿವೇಣಿ ತನಯ


ಜಗನ್ನಾಥ ದಾಸರ ಸ್ಮರಣ -ನಮನ

ಜಗನ್ನಾಥ ಗುರು ದಾಸರೇ ನಿಮ್ಮ ಚರಣ ಕಮಲವ ನಂಬಿದೆ,
ನಿಮ್ಮ ಗ್ರಂಥದ ಪದ ಪದಾರ್ಥ ಸಾರವ ಎರೆವ ಭಾರವು ನಿಮ್ಮದೇ,
ಒಂದು ಅರಿಯದ ಮಂದ ಮತಿ ನಾ ಸುಮ್ಮನೆ ಗ್ರಂಥವನೋದಿದೆ,
ಅಕ್ಷರಾಭಿಮಾನಿಗಳ ಕೃಪೆಯ ತೋರಿಸಿ ಜ್ಞಾನವೆರೆಯೋ ಓ ತಂದೇ,
ಶ್ರೀನಿವಾಸಾಚಾರ್ಯನೆನಿಸಿ ಶಾಸ್ತ್ರಾಧ್ಯಯನವ ಮಾಡಿದೆ,
ಕಾಲ ಕೂಡಿ ಬರುವವರೆಗೂ ನಿನ್ನ ದಾರಿಯ ನೀ ಹಿಡಿದೆ,
ಪೊರೆಯ ಕಳಚಿದ ವಿಜಯರಾಯರ ಕೃಪೆಗೆ ನೀ ಪಾತ್ರನಾದೆ,
ಗೋಪಾಲದಾಸರ ಅನುಗ್ರಹದಿ ಮೃತ್ಯು ಜಯಿಸಿ ಮರುಜನ್ಮ ಪಡೆದೆ,
ಗುರುವಾಜ್ಞೆಯ ಶಿರದಿ ಧರಿಸಿ ಭಾರೀ ಸಾಧನೆ ಮಾಡಿದೆ,
ಮನುಜ ಕುಲದ ಉದ್ಧಾರಕೆಂದೇ ಹರಿಕಥಾಮೃತಸಾರ ನೀಡಿದೆ.

ನಮೋ ಭಕ್ತಾಗ್ರೇಸ ಜಗನ್ನಾಥದಾಸಾರ್ಯ,
ಮಧ್ವಾಮೃತವ ಅನುಭವಿಸಿ ಸವಿದ ಆರ್ಯ,
ವಿಜಯದಾಸರ ಅನುಗ್ರಹ ಪಡೆದ ಪುನೀತ,
ಗೋಪಾಲದಾಸರಿಂದ ಆಯುಷ್ಯವೃದ್ಧಿ ಪಡೆದಾತ,
ಸುಖದಿ ಹರಿವ್ಯಾಪಾರವ ಅನುಭವಿಸುತಾ ಬಾಳಿದ ಧೀರ,
ಮುದದಿ ನೀಡಿದೆ ಭಕುತಜನಕೆ ಹರಿಕಥಾಮೃತಸಾರ.


(Contributed by Shri Govind Magal)

No comments:

Post a Comment

ಗೋ-ಕುಲ Go-Kula