ಭಾವ ಗುಚ್ಛ by “ತ್ರಿವೇಣಿ ತನಯ”
ವಾಮನಾವತಾರ
ಅದಿತಿಯ ವ್ರತ ನೇಮ ಭಕುತಿಗೆ
ಒಲಿದ,
ಅನುಗ್ರಹಿಸಲು ವಾಮನ
ಮಗನಾಗಿ ಬಂದ,
ಬಲೀಂದ್ರನ ಯಾಗಮಂಟಪಕೆ ನಡೆದ,
ಮೂರು ಪಾದ ಭೂಮಿ ಕೊಡು ಸಾಕೆಂದ.
ವ್ಯಾಪ್ತತ್ವದನುಸಂಧಾನದಲಿ ಬಲಿ
ತನ್ನನರ್ಪಿಸಿಕೊಂಡ,
ತ್ರಿವಿಕ್ರಮನಾದ ಹರಿ
ಬಲಿಯನುದ್ಧರಿಸಿ ಬಾಗಿಲ ಕಾಯ್ದ,
ಅರ್ಪಿಸಿಕೊಂಡವರನಪ್ಪುವ ನೀನೆಷ್ಟು
ಕರುಣಾಳು,
ನಮಗೂ ನಿನ್ನ ಇರವಿನ ಅರಿವಿತ್ತು
ಕೊಳೆ ಕಳೆಯ ಕೀಳು.
ನಮೋ ನಮೋ ಶ್ರೀ ವಾಮನ ರೂಪ,
ಮೂರ್ಪಾದ ಭೂಮಿ ಬೇಡಿದ ಭೂಪ,
ಒಪ್ಪಿಸಿಕೊಂಡವರನಪ್ಪುವ ಮಾಧವ,
ತಪ್ಪಿ ನಡೆವರ ಮಟ್ಟ ಹಾಕುವ
ಭಾರ್ಗವ,
ಎಣಿಸಲಳವೇ ನಿನ್ನ ಒಂದೊಂದು ರೂಪ,
ಅನಂತ ರೂಪದಿ ಬಂದು ಕಳೆವೆ
ಭಕ್ತರ ತಾಪ,
ಒಪ್ಪಿದೆ
"ಸಮ"ನಿನ್ನ ಕಾಯಿದೆ ಕಾನೂನು,
ಪಾಳಿ ನಿಂತವರ ಗತಿ ಸುಳಿವು
ನೀಡೆಯಾ ನೀನು.
ನೀ ಬೇಡಿದ್ದು ಮೂರು,
ನಾ ಬೇಡುವುದೂ ಮೂರುl
ಕಳೆದು ಬಿಡು ಆರು,
ತೊಳೆದು ಬಿಡು ನೂರುl
ಕೀಳು ವಾಂಛೆಗಳ ಬೇರು,
ಸೃಜಿಸು ಭಕುತಿಯ ನೀರುl
ಮನ್ನಿಸಿ ಕಾರುಣ್ಯ ಬೀರು,
ನಿನ ಮನೆ ದಾರಿಯಾ ತೋರುl
(Contributed by Shri Govind Magal)
No comments:
Post a Comment
ಗೋ-ಕುಲ Go-Kula