Monday 14 March 2016

Bhava Guccha 45

ಭಾವ ಗುಚ್ಛ  by “ತ್ರಿವೇಣಿ ತನಯ

ಹಬ್ಬ

ವೇದವ್ಯಾಸನ ನಿತ್ಯ ಸ್ತುತಿಪುದೇ ಹಬ್ಬ,
ಸಾಧು ಸಜ್ಜನರೊಳು ನಲಿದಾಡುವುದೇ ಹಬ್ಬ,
ಸವಿ ನುಡಿಯುತ ಸಿಹಿ ಹಂಚುವುದೇ ಹಬ್ಬ,
ನೋಯದೇ ನೋಯಿಸದೇ ಬದುಕಿ ಬಾಳುವುದೇ ಹಬ್ಬ.

ಮುಖವಾಡಗಳ ಕಿತ್ತೆಸೆವುದೇ ಹಬ್ಬ,
ನಖಶಿಖಾಂತ ಶುದ್ಧವಾಗಿರುವುದೇ ಹಬ್ಬ,
ಸುಜ್ಞಾನದ ನಿಜ ಹಂಬಲವೇ ಹಬ್ಬ,
"ವಿಜ್ಞಾನಿ"ಯ ಇರವಿನ ಅರಿವೇ ಹಬ್ಬ.

ನವರಾತ್ರಿಯದು ಬೊಂಬೆಗಳ ಹಬ್ಬ,
ಬಿಂಬ ಜೀವಿಬೊಂಬೆಗಳಾಡಿಸೋ ಹಬ್ಬ,
ಜೀವ ನೀ ಕಂಬ ನಾ ಬಿಂಬಎಂದು ನೆನಪಿಸುವ ಹಬ್ಬ,
ಕಂಬಕೆ ಬಿಂಬನರಿವಾದರೆ ಅದು ನಿಜ ಹಬ್ಬ.

ಸಜ್ಜನರ ಸಂಗ

ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ,
ಪರಮ ಲೌಕಿಗರ ಸಂಗವದು ಅಂತೆ ಕಂತೆಯ ಬೊಂತೆ,
ಸಜ್ಜನರ ಪ್ರತಿ ಮಾತಿನಲೂ ಭಗವಂತನ ಹುಡುಕಾಟ,
ಅನ್ಯರ ಸಂಗದಲಿ ನಿತ್ಯ ಸಂಸಾರದ ಗೋಳಾಟ.

ಆಟ -ನೋಟ

ನಿತ್ಯ ಬದುಕಲಿ ಸಂಸಾರದಾಟವನೇ ಆಡು ,
ಎಲ್ಲದರೊಳಗೆ ನಿಯಾಮಕನವನ ನೋಡು,
ಏನೇ ಮಾಡುತಿರು ಹಚ್ಚಿಕೊಳ್ಳದಿರು ಅಂಟು,
ಜತೆಗೆ ಕಟ್ಟುತಿರು ಅಧ್ಯಾತ್ಮ ಬುತ್ತಿಯ ಗಂಟು.


(Contributed by Shri Govind Magal)

No comments:

Post a Comment

ಗೋ-ಕುಲ Go-Kula