ಯಾವ ದ್ವಾದಶೀ ತಿಥಿಯ ದಿನ ಶ್ರವಣ ನಕ್ಷತ್ರ ಇರುತ್ತದೋ ಆ ದ್ವಾದಶೀ ದಿನ ಉಪವಾಸ ಮುಂದುವರೆಸುವುದೇ ಶ್ರವಣೋಪವಾಸ...
ಕೃಷ್ಣಾಮೃತಮಹಾರ್ಣವದಲ್ಲಿ ಶ್ರೀಮದಾಚಾರ್ಯರು ಹೇಳಿದ ಮಾತು ಹೀಗಿದೆ :
ಏಕಾದಶ್ಯಾಂ ತು ವಿದ್ಧಾಯಾಂ
ಸಂಪ್ರಾಪ್ತೇ ಶ್ರವಣೇ ತಥಾ |
ಉಪೋಷ್ಯಾ ದ್ವಾದಶೀ ಪುಣ್ಯಾ
ಪಕ್ಷಯೋರುಭಯೋರಪಿ ||139||
ಏಕಾದಶಿ ದಶಮಿಗಂಟಿಕೊಂಡಿದ್ದಾಗ ಎರಡೂ ಪಕ್ಷಗಳಲ್ಲಿ ಪಾವನವಾದ ದ್ವಾದಶಿಯಂದು ಉಪವಾಸ ಮಾಡಬೇಕು, ದ್ವಾದಶಿಯಂದು ಶ್ರವಣನಕ್ಷತ್ರ ಬಂದಾಗ ಕೂಡ...
ದ್ವಾದಶೀಂ ಶ್ರವಣೋಪೇತಾಂ ಯೋ
ನೋಪೋಷ್ಯಾತ್ ಸುಮಂದಧೀಃ |
ಪಂಚಸಂವತ್ಸರಕೃತಂ ಪುಣ್ಯಂ ತಸ್ಯ ವಿನಶ್ಯತಿ ||161||
ಶ್ರವಣ ನಕ್ಷತ್ರದಿಂದ ಕೂಡಿದ ದ್ವಾದಶಿಯಂದು ಉಪವಾಸ ಮಾಡದ ತಿಳಿಗೇಡಿ ಐದು ವರ್ಷಗಳಲ್ಲಿ ಗಳಿಸಿದ ಪುಣ್ಯವನ್ನೆಲ್ಲ ಕಳೆದುಕೊಳ್ಳುತ್ತಾನೆ...
ಏಕಾದಶೀಮುಪೋಷ್ಯಾಥ ದ್ವಾದಶೀಮುಪ್ಯಪೋಷಯೇತ್ |
ನ ತತ್ರ ವಿಧಿಲೋಪಃ
ಸ್ಯಾದುಭಯೋರ್ದೇವತಾ ಹರಿಃ ||162||
ಏಕಾದಶಿಯಂದು ಉಣ್ಣದೆ ಇದ್ದು ಶ್ರವಣದ್ವಾದಶಿಯಂದೂ ಉಪವಾಸವಿರಬೇಕು. ಅದರಲ್ಲಿ ಪಾರಣೆಯ ಲೋಪದ ದೋಷವಿಲ್ಲ. ಏಕೆಂದರೆ ಎರಡಕ್ಕೂ ಹರಿಯೇ ದೇವತೆಯಲ್ಲವೇ ?...
ಇವೆಲ್ಲವನ್ನೂ ಶ್ರೀಮದಾಚಾರ್ಯರೇ "ಕೃಷ್ಣಾಮೃತಮಹಾರ್ಣವ" ಗ್ರಂಥದಲ್ಲಿ ಹೇಳಿದ್ದಾರೆ... ಇಷ್ಟು ಚೆನ್ನಾಗಿ ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರೂ ಕನ್ನಡದಲ್ಲಿ ಅರ್ಥೈಸಿದ್ದಾರೆ... ಆದರೂ ನಮಗೇಕೆ ಸಂಶಯ ಭಯ ?? ಗೊತ್ತಿಲ್ಲ...
(Contributed by Shri Harish B S)

No comments:
Post a Comment
ಗೋ-ಕುಲ Go-Kula