Sunday, 4 February 2024

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 32: 160-180

 

ತತಸ್ತು ಬುದ್ಧೋದಿತಪಕ್ಷಸಂಸ್ಥೋ ಜಿನೋSಪಿ ಚಕ್ರೇ ಮತಮನ್ಯದೇವ ।

ಬೌದ್ಧೇನ ಜೈನೇನ ಮತೇನ ಚೈವ ದೈತ್ಯಾಂಶಕಾಃ ಪ್ರೀತಿಮಗುಃ ಸಮಸ್ತಾಃ ॥ ೩೨.೧೬೦ ॥

 

ತದನಂತರ ಬುದ್ಧಹೇಳಿದ ಪಕ್ಷದಲ್ಲಿದ್ದು ಜಿನನೂ ,

ಕೂಡಾ ಇನ್ನೊಂದು ಮತವನ್ನು ಆರಂಭಿಸಿದನು.

ಹೀಗೆ ದೈತ್ಯರ ಅಂಶಭೂತರಾದ ಎಲ್ಲರೂ, ಬೌದ್ಧಾಖ್ಯ, ಜಿನಾಖ್ಯವಾದ ಮತದಿಂದ,

ಅನುಭವಿಸಿದರು ಅವರವರ ಆನಂದ.

 

ಪ್ರಶಾನ್ತವಿದ್ಯೇತ್ಯಭಿಧಂ ತಥಾSನ್ಯದ್ ಬುದ್ಧೋಕ್ತಶಾಸ್ತ್ರಂ ತ್ರಿದಶಾ ಅವಾಪ್ಯ ।

ತೋಷಂ ಯಯುರ್ವೇದಸಮಸ್ತಸಾರಂ ಯಾಮಾಸ್ಥಿತಾನಾಮಚಿರೇಣ ಮುಕ್ತಿಃ ॥ ೩೨.೧೬೧ ॥

 

 

ಇತ್ತ ದೇವತೆಗಳು ಬುದ್ಧನಿಂದ ಹೇಳಲ್ಪಟ್ಟ, ಸಮಸ್ತ ವೇದದ ಸಾರದಲ್ಲಿ ಅದ್ದಿಡಲ್ಪಟ್ಟ ,         

ಯಾವುದನ್ನು ಹೊಂದಿದವರಿಗೆ ಆಗುತ್ತದೆಯೋ ವೇಗದಲ್ಲಿಯೇ ಮುಕ್ತಿ,

ಅಂತಹ ‘ಪ್ರಶಾಂತವಿದ್ಯಾ’ ಎಂಬ ಬುದ್ಧಶಾಸ್ತ್ರ ಹೊಂದಿ, ಸಂತೋಷ ಪ್ರಾಪ್ತಿ.

 

ಅನ್ಯೇ ಮನುಷ್ಯಾ ಅಪಿ ಭಾರತಾದ್ಯಂ ಸತ್ಸಮ್ಪ್ರದಾಯಂ ಪರಿಗೃಹ್ಯ ವಿಷ್ಣುಮ್ ।

ಯಜನ್ತ ಆಪುಃ ಪರಮಾಂ ಗತಿಂ ತನ್ನ ಸೇಹಿರೇ ಕ್ರೋಧವಶಾದಿದೈತ್ಯಾಃ ॥ ೩೨.೧೬೨ ॥

 

ದೇವತೆಗಳಿಂದ ಇತರರಾದ ಇನ್ನೂ ಕೆಲವು ಮನುಷ್ಯೋತ್ತಮರೂ ಕೂಡಾ,       

ಮಹಾಭಾರತವೇ ಮೊದಲಾದವುಗಳಿಂದ , ಪ್ರವೃತ್ತವಾದ ಒಳ್ಳೆಯ ಸಂಪ್ರದಾಯಗಳಿಂದ,

ನಾರಾಯಣನ ಪೂಜಿಸುತ್ತಾ, ಆನಂದದಿಂದ, ಉತ್ಕೃಷ್ಟವಾದ ಗತಿಯನ್ನು ಹೊಂದಿದರು.            

ಇದನ್ನು ಸಹಿಸಲಿಲ್ಲ ಕ್ರೋಧವಶ ದೈತ್ಯರು .

 

ಶೈವಂ ತಪಸ್ತೇ ವಿಪುಲಂ ವಿಧಾಯ ಜಗದ್ವಿಮೋಹೋರ್ಜ್ಜಿತಶಕ್ತಿಮಸ್ಮಾತ್ ।

ಪ್ರಾಪ್ಯ ಪ್ರಜಾತಾ ಭುವಿ  ಮೋಹನಂ ಚ ಚಕ್ರುಃ ಕುತರ್ಕ್ಕೈರಭಿದಾಂ ವದನ್ತಃ ॥ ೩೨.೧೬೩ ॥

 

ಆ ಕ್ರೋಧವಶ ದೈತ್ಯರು ಶಿವ ಸಂಬಂಧಿಯಾದ ಬಹಳವಾದ ತಪಸ್ಸನ್ನು ಮಾಡಿ,

ಶಿವನಿಂದ, ಜಗತ್ತನ್ನೇ ಮೋಹದಿಂದ ದಿಕ್ಕುಗೆಡಿಸುವ ಉತ್ಕೃಷ್ಟವಾದ ಶಕ್ತಿಯನ್ನು ಹೊಂದಿ,

ಭೂಮಿಯಲ್ಲಿ ಹುಟ್ಟಿದವರಾದರು,

ಕೆಟ್ಟ ತರ್ಕಗಳಿಂದ ಜೀವ-ಪರಮಾತ್ಮನ ನಡುವೆ ಅಭೇದ ಹೇಳುತ್ತಾ ಮೋಹಗೊಳಿಸಿದರು. 

 

ತೇಷಾಂ ಪ್ರಪಾತಾಯ ಸತಾಂ ಚ ಮಕ್ತ್ಯೈ ಜನ್ಮಾSಸ ಭೀಮಸ್ಯ ಯದುಕ್ತಮತ್ರ ।

ದುರ್ಗ್ಗಾ ಪುನರ್ವಿಪ್ರಕುಲೇSವತೀರ್ಣ್ಣಾಹನಿಷ್ಯತಿ ವ್ರಾತಮಥಾಸುರಾಣಾಮ್ ॥ ೩೨.೧೬೪ ॥

 

ಆ ಕ್ರೋಧವಶ ದೈತ್ಯರನ್ನು ಬೀಳಿಸುವುದಕ್ಕೊಸ್ಕರಸಜ್ಜನರ ಬಿಡುಗಡೆಗಾಗಿ,

ಹಿಂದೆ ಹೇಳಿದ ಭೀಮನ (ಬ್ರಾಹ್ಮಣ ಶರೀರದಲ್ಲಿ) ಅವತಾರ. ಆಮೇಲೆ ದುರ್ಗಾದೇವಿ (ಕೇರಳದ) ಬ್ರಾಹ್ಮಣ ಕುಟುಂಬದಲ್ಲಿ  ಅವತರಿಸುತ್ತಾಳೆ, ಮ್ಲೇಚ್ಚರೂಪವಾದ ಅಸುರರ ಸಮೂಹವನ್ನು ಕೊಲ್ಲುತ್ತಾಳೆ.

[ಆಚಾರ್ಯರು ಈ ಗ್ರಂಥ ನೀಡಿದ ಕಾಲದಲ್ಲಿ ಅಲ್ಲಿ ಮ್ಲೇಚ್ಚರಿರಲಿಲ್ಲ, ಈಗಿನ ಪರಿಸ್ಥಿತಿ ನಮಗೆ ತಿಳಿದಿದೆ].

 

ತತಃ ಕಲೇರನ್ತಮವಾಪ್ಯ ಧರ್ಮ್ಮಜ್ಞಾನಾದಿಕಲ್ಯಾಣಗುಣಪ್ರಹೀನೇ ।

ಲೋಕೇ ವಿರಿಞ್ಚತ್ರಿಪುರಘ್ನಶಕ್ರಪೂರ್ವಾಃ ಪಯೋಬ್ಧಿಂ ತ್ರಿದಶಾಃ ಪ್ರ ಜಗ್ಮುಃ ॥ ೩೨.೧೬೫ ॥

 

ದುರ್ಗಾವತಾರದ ನಂತರ, ಕಲಿಯುಗದ ಸಮಾಪ್ತಿಯ ಸಮಯ,

ಭೂಲೋಕದಲ್ಲಿ ಧರ್ಮ, ಜ್ಞಾನ, ಗುಣಗಳು ಆಗುತ್ತಿರಲು ಕ್ಷಯ,

ಬ್ರಹ್ಮ,ರುದ್ರ,ಇಂದ್ರ ಮುಂತಾದವರು, ಕ್ಷೀರಸಮುದ್ರವನ್ನು ಹೊಂದಿದರು.

 

ನಾರಾಯಣಸ್ತೈಃ ಸ್ತುತಿಪೂರ್ವಮರ್ತ್ಥಿತೋ ಭವಾಯ ಲೋಕಸ್ಯ ಸ ಶಮ್ಭಳಾಖ್ಯೇ ।

ಗ್ರಾಮೇ ಮುನೇರ್ವಿಷ್ಣುಯಶೋSಭಿದಸ್ಯ ಗೃಹೇ ಬಭೂವಾSವಿರಚಿನ್ತ್ಯಶಕ್ತಿಃ ॥ ೩೨.೧೬೬ ॥

 

ನಾರಾಯಣನು ಅವರಿಂದ ಸ್ತೋತ್ರಪೂರ್ವಕವಾಗಿ ಪ್ರಾರ್ಥಿತನಾಗುವ, ಸಜ್ಜನರ ಅಸ್ತಿತ್ವಕ್ಕಾಗಿ ಶಮ್ಭಳಾ ಗ್ರಾಮದಲ್ಲಿ ವಿಷ್ಣುಯಶಸ್ಸು ಹೆಸರಿನ ಮುನಿಯ, ಮನೆಯಲ್ಲಿ ಎಣೆಯಿರದ ,ಶಕ್ತಿಯವನಾಗಿ ಅವತರಿಸಿದ.

(ಅಂದರೆ ಅವತರಿಸುತ್ತಾನೆ).

 

ಕಲೇಸ್ತು ಕಾತ್ಕಾರತ ಏಷ ಕಲ್ಕೀ ಜ್ಞಾನಂ ಕಲಂ ಕಂ ಸುಖಮೇವ ತದ್ವಾನ್ ।

ಕಲ್ಕೀತಿ ವಾ ತೇನ ಸಮಸ್ತದಸ್ಯುವಿನಾಶನಂ ತೇನ ದಿನಾದ್ ವ್ಯಧಾಯಿ ॥ ೩೨.೧೬೭ ॥

 

ಕಲಿಯ ನಿಗ್ರಹದಿಂದ ಇವನಿಗೆ ಕಲ್ಕೀ ಎಂಬ ಹೆಸರು ಬಂದಿದೆ.

ಕಂ ಎಂದರೆ ಸುಖ,ಕಲ ಎಂದರೆ ಜ್ಞಾನ ಎಂದು ತಿಳಿದೇ ಇದೆ.

ಹೀಗೆ ಜ್ಞಾನಾನಂದ ಸ್ವರೂಪನಾದ ಇವನಿಗೆ ಕಲ್ಕೀ ಎಂದು ಹೆಸರು.

ಇಂತಹ ಕಲ್ಕೀ ತೆಗೆದ ಒಂದೇ ದಿನದಲ್ಲಿ ಎಲ್ಲಾ ದಸ್ಯುಗಳ ಉಸಿರು.

 

ಅಧರ್ಮ್ಮವೃತ್ತಂ ವಿಮುಖಂ ಹರೇಶ್ಚ ನಿಹತ್ಯ ನಿಃಶೇಷಜನಂ ತುರಙ್ಗೀ ।

ಸಂಸ್ಥಾಪಯಾಮಾಸ ಸ ಧರ್ಮ್ಮಸೇತುಂ ಜ್ಞಾನಂ ಸ್ವಭಕ್ತಿಂ ಚ ನಿಜಪ್ರಜಾಸು ॥ ೩೨.೧೬೮ ॥

 

ಕುದುರೆಯನ್ನೇರಿ ಬರುವ ಕಲ್ಕಿಯು ಅಧರ್ಮದಲ್ಲಿರುವ,

ದುರ್ಜನರಾಗಿದ್ದು ಪರಮಾತ್ಮನಿಗೆ ವಿಮುಖರಾಗಿರುವ ,

ಎಲ್ಲಾ ದುರ್ಜನರನ್ನೂ ಕೊಂದು, ಧರ್ಮದ ಮರ್ಯಾದೆಯನ್ನು,

ಯೋಗ್ಯರಲ್ಲಿ ಜ್ಞಾನವನ್ನೂ, ತನ್ನ ಭಕ್ತಿಯನ್ನೂ ಮತ್ತೆ ನೆಲೆಗೊಳಿಸಿದನು.

 

ಇತ್ಯಾದ್ಯನನ್ತಾನಿ ಹರೇರುದಾರಕರ್ಮ್ಮಾಣಿ ರೂಪಾಣಿ ಚ ಸದ್ಗುಣಾಶ್ಚ ।

ನಿತ್ಯವ್ಯಪೇತಾಖಿಲದೋಷಕಸ್ಯ ಬ್ರಹ್ಮೇತ್ಯನನ್ತೇತಿ ಚ ನಾಮ ಯೇನ ॥ ೩೨.೧೬೯ ॥

 

 

ಇವೇ ಮೊದಲಾದ ಕೊನೆಯಿರದ ಶ್ರೇಷ್ಠವಾದ ಕರ್ಮಗಳು ನಾರಾಯಣನದ್ದು.

ಆ ಪರಮಾತ್ಮನ ರೂಪಗಳು, ಸದ್ಗುಣಗಳೂ ಅನಂತವಾಗಿ ಅನಾದಿಯಾದದ್ದು.

ಈ ನಾರಾಯಣ ಸದಾ ದೋಷರಹಿತ ,        ಅವನ ಹೆಸರುಗಳೇ ‘ಬ್ರಹ್ಮ’ ಮತ್ತು ‘ಅನಂತ’.

 

ಆನನ್ದತೀರ್ತ್ಥಾಖ್ಯಮುನಿಃ ಸುಪೂರ್ಣ್ಣಪ್ರಜ್ಞಾಭಿಧೋ ಗ್ರನ್ಥಮಿಮಂ ಚಕಾರ ।

ನಾರಾಯಣೇನಾಭಿಹಿತೋ ಬದರ್ಯ್ಯಾಂ ತಸ್ಯೈವ ಶಿಷ್ಯೋ ಜಗದೇಕಭರ್ತ್ತುಃ ॥ ೩೨.೧೭೦ ॥

 

ಜಗತ್ತಿಗೇ ಒಡೆಯನಾಗಿರುವ ವೇದವ್ಯಾಸರ ಶಿಷ್ಯನಾಗಿರುವ ಈ ಆನಂದತೀರ್ಥ ,

ಎಂಬ ಮುನಿಯು ಬದರಿಯಲ್ಲಿ ನಾರಾಯಣನಿಂದ ಆದವನಾದ ಆದೇಶಿತ. ಪೂರ್ಣಪ್ರಜ್ಞಾ ಎಂಬ ಹೆಸರಿನಿಂದ, ಈ ಗ್ರಂಥವನ್ನು ರಚನೆಯ ಮಾಡಿದ.

 

ಯಸ್ತತ್ಪ್ರಸಾದಾದಖಿಲಾಂಶ್ಚ ವೇದಾನ್ ಸಪಞ್ಚರಾತ್ರಾನ್ ಸರಹಸ್ಯಸಙ್ಗ್ರಹಾನ್ ।

ವೇದೇತಿಹಾಸಾಂಶ್ಚ ಪುರಾಣಯುಕ್ತಾನ್ ಯಥಾವದನ್ಯಾ ಅಪಿ ಸರ್ವವಿದ್ಯಾಃ ॥ ೩೨.೧೭೧ ॥

 

ಭಗವಂತನ ಅನುಗ್ರಹದಿಂದ ಈ ಪೂರ್ಣಪ್ರಜ್ಞ ಎಂಬ ಮುನಿ,

ಪಂಚರಾತ್ರ, ಬ್ರಹ್ಮಸೂತ್ರ, ಪುರಾಣ, ವೇದ-ಇತಿಹಾಸಗಳ ಬಲ್ಲ ಧಣಿ.

ಎಲ್ಲಾ ವಿದ್ಯೆಗಳ ಬಲ್ಲವನಾಗಿದ್ದ, ಜ್ಞಾನ, ಬಲದ ಖಣಿಯಾಗಿದ್ದ.

 

ಸಮಸ್ತಶಾಸ್ತ್ರಾರ್ತ್ಥವಿನಿರ್ಣ್ಣಯೋSಯಂ ವಿಶೇಷತೋ ಭಾರತವರ್ತ್ಮಚಾರೀ ।

ಗ್ರನ್ಥಃ ಕೃತೋSಯಂ ಜಗತಾಂ ಜನಿತ್ರಂ ಹರಿಂ ಗುರುಂ ಪ್ರೀಣಯತಾSಮುನೈವ ॥ ೩೨.೧೭೨ ॥

 

ಈ ಗ್ರಂಥವು ಸಮಸ್ತ ಶಾಸ್ತ್ರದ ಅರ್ಥನಿರ್ಣಯವಾಗಿದೆ.

ವಿಶೇಷವಾಗಿ ಮಹಾಭಾರತದಲ್ಲಿ ಇದು ಸಂಚರಿಸುತ್ತದೆ.

ಜಗತ್ತಿನ ಜನಕನಾಗಿರುವ, ತನ್ನ ಗುರುವಾಗಿರುವವನು ನಾರಾಯಣ,

ಅವನ ಪ್ರೀತಿಗಾಗಿ ಈ ಆನಂದತೀರ್ಥರು ಈ ಗಂಥವನ್ನು ರಚಿಸಿದ ಕಾರಣ.

 

ವಿನಿರ್ಣ್ಣಯೋ ನಾಸ್ತ್ಯಮುನಾ ವಿನಾ ಯದ್ ವಿಪ್ರಸ್ಥಿತಾನಾಮಿವ ಸರ್ವವಾಚಾಮ್ ।

ತದ್ ಬ್ರಹ್ಮಸೂತ್ರಾಣಿ ಚಕಾರ ಕೃಷ್ಣೋ ವ್ಯಾಖ್ಯಾSಥ ತೇಷಾಮಯಥಾ ಕೃತಾSನ್ಯೈಃ ॥ ೩೨.೧೭೩ ॥

 

ಈ ಗ್ರಂಥಕ್ಕಿಂತ ಅತಿರಿಕ್ತವಾದ ನಿರ್ಣಯವು ಇಲ್ಲ. ಇತಿಹಾಸ-ಪುರಾಣಗಳಲ್ಲಿ ಪರಸ್ಪರ ವಿರುದ್ಧ ಜಾಲ,

ಅಂತಹಾ ಎಲ್ಲಾ ಮಾತುಗಳಿಗೆ ನಿರ್ಣಯದ ಆಳ,

ತಿಳಿಸಲು ವೇದವ್ಯಾಸರಿಂದ ಬ್ರಹ್ಮಸೂತ್ರಗಳ ರಚನೆ ಆಗಿದೆ,

ಅದರ ವ್ಯಾಖ್ಯಾನ ಬೇರೆಯವರಿಂದ ಬೇರೇ ರೀತಿ ಮಾಡಲ್ಪಟ್ಟಿದೆ.

 

ನಿಗೂಹಿತಂ ಯತ್ ಪುರುಷೋತ್ತಮತ್ವಂ ಸೂತ್ರೋಕ್ತಮಪ್ಯತ್ರ ಮಹಾಸುರೇನ್ದ್ರೈಃ ।

ಜೀವೇಶ್ವರೈಕ್ಯಂ ಪ್ರವದದ್ಭಿರುಗ್ರೈರ್ವ್ಯಾಖ್ಯಾಯ ಸೂತ್ರಾಣಿ ಚಕಾರ ಚಾSವಿಃ ॥ ೩೨.೧೭೪ ॥

 

ಬ್ರಹ್ಮ ಹಾಗೂ ಜೀವರಿಗೆ ಐಕ್ಯವನ್ನು ಹೇಳುವ ದೈತ್ಯರಿಂದ ಮುಚ್ಚಲ್ಪಟ್ಟ,

ಸೂತ್ರದಲ್ಲಿ ಹೇಳಿದ ಪುರುಷೋತ್ತಮತ್ವವ ಈ ಮುಖ್ಯಪ್ರಾಣ, ಸೂತ್ರಗಳ ವ್ಯಾಖ್ಯಾನಿಸಿ ಜನರ ಮುಂದಿಟ್ಟ. 

 

ವ್ಯಾಸಾಜ್ಞಯಾ ಭಾಷ್ಯವರಂ ವಿಧಾಯ ಪೃಥಕ್ಪೃಥಕ್ ಚೋಪನಿಷತ್ಸುಭಾಷ್ಯಮ್ ।

ಕೃತ್ವಾSಖಿಲಾನ್ಯಂ ಪುರುಷೋತ್ತಮಂ ಚ ಹರಿಂ ವದನ್ತೀತಿ ಸಮರ್ತ್ಥಯಿತ್ವಾ ॥ ೩೨.೧೭೫ ॥

 

ವೇದವ್ಯಾಸರ ಅಣತಿಯಂತೆ ಈ ಮಧ್ವ ಶ್ರೇಷ್ಠವಾದ ಭಾಷ್ಯವನ್ನು ರಚಿಸಿದ,

ಪ್ರತ್ಯೇಕ-ಪ್ರತ್ಯೇಕವಾಗಿ ಉಪನಿಷತ್ತುಗಳ ಭಾಷ್ಯವನ್ನೂ ಕೂಡಾ ಬರೆದ.

ಈ ಜೀವ ಹಾಗೂ ಜಡ ಪ್ರಪಂಚಕ್ಕಿಂತ ವಿಲಕ್ಷಣನಾದ,

ಅದರಿಂದಲೇ ಪುರುಷೋತ್ತಮ ಎಂಬ ಹೆಸರಿನವನಾದ ,

ನಾರಾಯಣನನ್ನೇ ಈ ಎಲ್ಲಾ ಶಾಸ್ತ್ರಗಳು ಹೇಳುತ್ತವೆ ಎಂದು ಸಮರ್ಥನೆ ಮಾಡಿದ.

 

ತನುಸ್ತೃತೀಯಾ ಪವನಸ್ಯ ಸೇಯಂ ಸದ್ಭಾರತಾರ್ತ್ಥಪ್ರತಿದೀಪನಾಯ ।

ಗ್ರನ್ಥಂ ಚಕಾರೇಮಮುದೀರ್ಣ್ಣವಿದ್ಯಾ ಯಸ್ಮಿನ್ ರಮನ್ತೇ ಹರಿಪಾದಭಕ್ತಾಃ ॥ ೩೨.೧೭೬ ॥

 

ಮುಖ್ಯಪ್ರಾಣನ ಈ ಮೂರನೇ ಅವತಾರದಲ್ಲಿ, ಸ್ಪಷ್ಟ ಮಹಾಭಾರತದ ಅರ್ಥ

ಪ್ರಕಾಶಿಸಲ್ಪಟ್ಟಿದೆಯಿಲ್ಲಿ. ಅದಕ್ಕಾಗಿಯೇ ಆಚಾರ್ಯ ಮಧ್ವರಿಂದ ಈ ಗ್ರಂಥವು ರಚಿಸಲ್ಪಟ್ಟಿತು.

ವಿದ್ಯೆ ಚೆನ್ನಾಗಿ ಬಲ್ಲ ಭಗವದ್ಭಕ್ತರಿಗೆಂದೇ ಈ ಮಹಾಭಾರತ ತಾತ್ಪರ್ಯ ಹುಟ್ಟಿತು .

ಅದರಲ್ಲೇ ಆಸಕ್ತರಾಗಿ ನಿರಂತರ ಹರಿಪಾದಲ್ಲಿ ಕ್ರೀಡಿಸುವ ಅವಕಾಶ ಕೊಟ್ಟಿತು.

 

‘ತೃತೀಯಮಸ್ಯ ವೃಷಭಸ್ಯ ದೋಹಸೇ ದಶಪ್ರಮತಿಂ ಜನಯನ್ತ ಯೋಷಣಃ ।

‘ನಿರ್ಯ್ಯದೀಂ ಬುಧ್ನಾನ್ಮಹಿಷಸ್ಯ ವರ್ಪ್ಪಸ ಈಶಾನಾಸಃ ಶವಸಾ ಕ್ರನ್ತ ಸೂರಯಃ ॥ ೩೨.೧೭೭ ॥

 

 

‘ಯದೀಮನು ಪ್ರದಿವೋ ಮಧ್ವ ಆಧವೇ ಗುಹಾ ಸನ್ತಂ ಮಾತರಿಶ್ವಾ ಮಥಾಯತಿ’ ।

ಇತ್ಯಾದಿವಾಕ್ಯೋಕ್ತಮಿದಂ ಸಮಸ್ತಂ ತಥಾ ಪುರಾಣೇಷು ಚ ಪಞ್ಚರಾತ್ರೇ ॥ ೩೨.೧೭೮ ॥

 

ವೇದಾಭಿಮಾನಿಗಳಾದ ತಾಯಂದಿರು, ಪರಮಾತ್ಮನೇ ವೇದಗಳ ರಹಸ್ಯ ಬೇರುಎಂದು ತಿಳಿಸಿಕೊಡುವುದಕ್ಕಾಗಿ ಮಧ್ವರಿಗೆ ಕೊಟ್ಟರು ಹುಟ್ಟು. ಇದು ಮುಖ್ಯಪ್ರಾಣನ ಮೂರನೇ ರೂಪ ಮಧ್ವರವತರಿಸಿದ ಗುಟ್ಟು.

 

ಜ್ಞಾನಿಗಳಲ್ಲಿ ಶ್ರೇಷ್ಠನಾದ ಮುಖ್ಯಪ್ರಾಣನ ಅನುಗ್ರಹದ ಬಲ,

ಶ್ರೇಷ್ಠನಾದ  ಪರಮಾತ್ಮನ ಗುಣಗಳನ್ನು ಜ್ಞಾನಿಗಳು ಅರಿವ ಜಾಲ. 

ಯಾವ  ಪರಮಾತ್ಮನ ಚಿಂತನೆಯಿಂದ ಸಜ್ಜನರನ್ನು ಸರಿಯಾದ ದಾರಿಯಲ್ಲಿ ನಡೆಸಲು ಸಾಧ್ಯವಿದೆ

ಅಂತಹ  ಪರಮಾತ್ಮನ ಗುಣಗಳನ್ನು ಸಾಧನೆ ಮಾಡಲು ಮುಖ್ಯಪ್ರಾಣ ಕೊಟ್ಟ ಅಮೂಲ್ಯ ದಾರಿದೀವಿಗೆಯಾಗಿದೆ.

ನಮ್ಮ ಹೃದಯ ಗುಹೆಯಲ್ಲೇ ಇರುವ ಅಂತರ್ಯಾಮಿಯಾದ ಪರಮಾತ್ಮನನ್ನು ಮಥನ ಮಾಡಿ ಕೊಡುತ್ತಾರೆ.

ಇದೆಲ್ಲವನ್ನೂ ಕೂಡಾ ಹೇಳುತ್ತಾ ವೇದಪುರಾಣಗಳಲ್ಲಿ, ಪಂಚರಾತ್ರದಲ್ಲಿಯೂ ಇದನ್ನು ಹೇಳಿ ಸ್ಪಷ್ಟ ಮಾಡುತ್ತಾರೆ. 

 

ಅತ್ರೋದಿತಾ ಯಾಶ್ಚ ಕಥಾಃ ಸಮಸ್ತಾ ವೇದೇತಿಹಾಸಾದಿವಿನಿರ್ಣ್ಣಯೋಕ್ತಾಃ ।

ತಸ್ಮಾದಯಂ ಗ್ರನ್ಥವರೋSಖಿಲೋರುಧರ್ಮ್ಮಾದಿಮೋಕ್ಷಾನ್ತಪುಮರ್ತ್ಥಹೇತುಃ ।

ಕಿಂ ವೋದಿತೈರಸ್ಯ ಗುಣೈಸ್ತತೋSನ್ಯೈರ್ನ್ನಾರಾಯಣಃ ಪ್ರೀತಿಮುಪೈತ್ಯತೋSಲಮ್ ॥ ೩೨.೧೭೯ ॥

 

ಇಲ್ಲಿ ಹೇಳಿದ ಎಲ್ಲಾ ಕಥೆಗಳೂ ಕೂಡಾ ವೇದ, ಇತಿಹಾಸ, ಇತ್ಯಾದಿಗಳ ನಿರ್ಣಯದಿಂದ ಬಂದಿರುವುವಂಥದ್ದು.

ಅದರಿಂದ ಈ ಶ್ರೇಷ್ಠವಾದ ಗ್ರಂಥವು ಧರ್ಮ, ಅರ್ಥ, ಕಾಮ, ಮೋಕ್ಷಮೊದಲಾದ ಎಲ್ಲಾ ಪುರುಷಾರ್ಥಗಳ ಸಾಧನವಹುದು.

ಇದನ್ನು ಓದಿದರೆ ನಾರಾಯಣನಿಗೆ ಅತ್ಯಂತ ಪ್ರೀತಿಯಾಗುತ್ತದೆ. 

ಆದಕಾರಣ ಬೇರೆ ಎಷ್ಟು ಗುಣಗಳನ್ನು ಹೇಳಿ ಏನು ಪ್ರಯೋಜನವಿದೆ.

 

ಯಃ ಸರ್ವಗುಣಸಮ್ಪೂರ್ಣ್ಣಃ ಸರ್ವದೋಷವಿವರ್ಜ್ಜಿತಃ ।

ಪ್ರೀಯತಾಂ ಪ್ರೀತ ಏವಾಲಂ ವಿಷ್ಣುರ್ಮ್ಮೇ ಪರಮಃ ಸುಹೃತ್ ॥ ೩೨.೧೮೦ ॥

 

 

ಎಲ್ಲಾ ಗುಣಗಳಿಂದ ತುಂಬಿದ ಕಡಲುಯಾವ ಕೊರತೆಯೂ ಇಲ್ಲದ ಒಡಲು,

ಎಲ್ಲಾ ಕೊರತೆಗಳನ್ನು ಮೀರಿ ನಿಂತಿರುವನನ್ನಲ್ಲಿ ಯಾವಾಗಲೂ ಪ್ರೀತನೇ ಆಗಿರುವ

ಪ್ರಿಯನಾದ ಶ್ರೀಹರಿ ಆ ಭಗವಂತ, ಆಗಿರಲಿ ನನ್ನಲ್ಲಿ ಅತ್ಯಂತ ಪ್ರೀತ.

 

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಪಾಣ್ಡವಸ್ವರ್ಗ್ಗಾರೋಹಣರ್ನ್ನಾಮ  ದ್ವಾತ್ರಿಂಶೋsದ್ಧ್ಯಾಯಃ ॥

 

[ ಆದಿತಃ ಶ್ಲೋಕಾಃ ೫೦೦೦ + ೧೮೦=೫೧೮೦ ]

 

ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ ವಿರಚಿತವಾದ,

ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯದ ಭಾವಾನುವಾದ,

ಪಾಂಡವಸ್ವರ್ಗಾರೋಹಣ ಹೆಸರಿನ ಮೂವತ್ತೆರಡನೇ ಅಧ್ಯಾಯ,

ಮಧ್ವಾಂತರ್ಗತ ವೇದವ್ಯಾಸದೇವರ ಪಾದಗಳಿಗೆ ಅರ್ಪಿಸಿದ ಭಾವ.

 

*********

 

ಸಮಾಪ್ತೋಯಂ ಗ್ರನ್ಥಃ

 

ಶ್ರೀಕೃಷ್ಣಾರ್ಪಣಮಸ್ತು ॥

 

No comments:

Post a Comment

ಗೋ-ಕುಲ Go-Kula