Sunday 4 February 2024

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 31: 36-76

 ಇತ್ಯುಕ್ತವನ್ತಂ ನೃಪತಿರರ್ಜ್ಜುನಶ್ಚೋಚತುಃ ಪುನಃ ।

ಯಿಯಾಸೋರ್ಯ್ಯಾಚಮಾನಾಯ ನಿಜಬಾಹುಬಲಾರ್ಜ್ಜಿತಮ್ ॥ ೩೧.೩೬ ॥

 

ದೇಹಿ ವಿತ್ತಂ ಪರಮತಃ ಕಿಂ ತ್ವಾಮೇಷೋSಭಿಯಾಚತೇ ।

ಇತ್ಯುಕ್ತಮಪಿ ನೇತ್ಯೇವ ಬ್ರುವಾಣಂ ಶುದ್ಧಧಾರ್ಮ್ಮಿಕಮ್  ॥ ೩೧.೩೭ ॥

 

ಅಪ್ರೀತ್ಯಾ ಜೋಷಮಾಸ್ಸ್ವೇತಿ ಪ್ರೋಚ್ಯೋವಾಚ ಯುಧಿಷ್ಠಿರಃ ।

ಕೋಶತೋ ಯದ್ ಬಹಿರ್ವಿತ್ತಂ ದಾನಭೋಗಾದಿಕಾರಣಮ್  ॥ ೩೧.೩೮ ॥

 

ಮಮ ಸನ್ನಿಹಿತಂ ಸರ್ವಂ ತತ್ ಪಿತ್ರೇSದ್ಯಾರ್ಪ್ಪಿತಂ ಮಯಾ ।

ಏವಮೇವಾರ್ಜ್ಜುನೋSಪ್ಯಾಹ ವಿದುರಂ ಪುನರೂಚತುಃ  ॥ ೩೧.೩೯ ॥

 

ಮುಖ್ಯಧರ್ಮ್ಮರತೇ ಭೀಮೇ ನ ಪಿತಾ ಕ್ರೋದ್ಧುಮರ್ಹತಿ ।

ಇತ್ಯುಕ್ತೋ ವಿತ್ತಮಾದಾಯ ಗತ್ವಾ ಕ್ಷತ್ತಾSಗ್ರಜೇSಬ್ರವೀತ್ ॥ ೩೧.೪೦ ॥

 

ಈರೀತಿಯಾಗಿ ಭೀಮಸೇನ ಹೇಳಿದಾಗ ಧರ್ಮರಾಜ ಹಾಗೂ  ಅರ್ಜುನರು ಹೇಳುವ ಮಾತು - ,

‘ಇನ್ನೇನು ಹೊರಟಿದ್ದಾನೆ ,ಬೇಡುತ್ತಿದ್ದಾನೆ, ರಾಷ್ಟ್ರದ ಹಣ ಬೇಡ, ನೀಡು ನೀನು ಗಳಿಸಿದ ಸಂಪತ್ತು.

ಇದಕ್ಕೂ ಮಿಗಿಲಾಗಿ ನಿನ್ನನ್ನು ಏನು ಬೇಡುತ್ತಿದ್ದಾನೆ ಅವನು?’ 

ಆಗ ಭೀಮ ‘ನನ್ನ ಹಣವನ್ನೂ ಕೊಡಲಾರೆ’ ಎಂದನು.

ಈ ರೀತಿಯಾಗಿ ಹೇಳುವ ಶುದ್ಧಧಾರ್ಮಿಕನಾದ ಭೀಮನನ್ನು ,

ಸಿಟ್ಟಿನಿಂದ ‘ಸುಮ್ಮನಿರು’ ಎಂದು ಗದರುತ್ತಾನೆ ಯುಧಿಷ್ಠಿರನು.

ವಿದುರನಲ್ಲಿ- ರಾಷ್ಟ್ರದ ಕೋಶದಿಂದ ಆಚೆ ಇರುವ,

ತಮ್ಮ ದಾನಗಳು ಮತ್ತು ಭೋಗಕ್ಕಾಗಿಯೇ ಇರುವ ,

ತನ್ನ ಹಾಗೂ ಅರ್ಜುನನ ವೈಯಕ್ತಿಕ ಹಣ ಕೊಡುತ್ತಿದ್ದೇನೆ ಎಂದನು.

ಅನುಮೋದಿಸಿದ ಅರ್ಜುನನೂ ಇದೇ ರೀತಿಯಾಗಿ ಹೇಳಿದನು.

ಅವರಿಬ್ಬರೂ ವಿದುರನಿಗೆ ಮತ್ತೆ ಹೇಳಿದರು-

‘ಶುದ್ಧ ಭಗವದ್ಧರ್ಮದಲ್ಲಿ ರತನಾದವನು ಭೀಮಸೇನ,

ದೊಡ್ಡಪ್ಪ ಧೃತರಾಷ್ಟ್ರ ಮುನಿಯುವುದಲ್ಲ ಸರಿ ವಿಧಾನ.

ಹೀಗೆ ಹೇಳಲ್ಪಟ್ಟ ವಿದುರ ಹಣವನ್ನು ಕೊಂಡೊಯ್ಯುತ್ತಾನೆ,

ತೆಗೆದುಕೊಂಡು ಹೋಗಿ ತನ್ನ ಅಣ್ಣನಲ್ಲಿ ಹೀಗೆ ಹೇಳುತ್ತಾನೆ.-

 

ಯುಧಿಷ್ಠಿರಾರ್ಜ್ಜುನೌ ಭಕ್ತಿಂ ನಿತರಾಂ ತ್ವಯಿ ಚಕ್ರತುಃ ।

ನಾತಿಹೃಷ್ಟಸ್ತ್ವದಾಜ್ಞಾಯಾಂ ಭೀಮಸ್ತನ್ಮಾ ಕ್ರುಧೋSತ್ರ ಚ ॥ ೩೧.೪೧ ॥

 

‘ಶುದ್ಧೇ ಕ್ಷತ್ರಿಯಧರ್ಮ್ಮೇ ಹಿ ನಿರತೋSಯಂ ವೃಕೋದರಃ’ ।

ನೃಪಾರ್ಜ್ಜುನೌ ಧರ್ಮ್ಮರತಾವಪಿ ಲೋಕಕೃಪಾಪರೌ ॥ ೩೧.೪೨ ॥

 

‘ಯುಧಿಷ್ಠಿರ ಹಾಗೂ ಅರ್ಜುನರು ನಿನ್ನಲ್ಲಿ ಆತ್ಯಂತಿಕವಾದ ಭಕ್ತಿಯನ್ನು ಮಾಡಿದರು. ಆದರೆ ಧರ್ಮನಿಷ್ಠೆಯ ಭೀಮಸೇನನಿಗಿದೆ ನಿನ್ನ ಅಣತಿಯ ವಿಚಾರದಲ್ಲಿ ತಕರಾರು.

ಭೀಮಸೇನ ಶುದ್ಧಕ್ಷತ್ರಿಯ ಧರ್ಮದಲ್ಲಿ ರತ ,

ಆ ಕಾರಣಕ್ಕೆ ಅವನಲ್ಲಿ ಮುನಿವುದಲ್ಲ ಹಿತ .

ಯುಧಿಷ್ಠಿರ ಹಾಗೂ ಅರ್ಜುನರು ಕ್ಷತ್ರಿಯ ಧರ್ಮದಲ್ಲಿ ಆಸಕ್ತ ,

ಆದರೂ ಕೂಡಾ ಜೊತೆಯಲ್ಲಿ ಪ್ರಜೆಗಳ ದಯೆಯಲ್ಲೂ ಆಸಕ್ತ.

 

ಅಜಾತಕೋಪಸ್ತಚ್ಛ್ರುತ್ವಾ ಧೃತರಾಷ್ಟ್ರಃ ಪ್ರಶಾನ್ತಧೀಃ ।

ಕೃತ್ವಾ ಶ್ರಾದ್ಧಾನಿ ಸರ್ವೇಷಾಂ ಮಹಾದಾನಾನ್ಯನಾರತಮ್ ॥ ೩೧.೪೩ ॥

 

ದಶರಾತ್ರಂ ದದೌ ಶುದ್ಧಮನಸಾ ನಿಋಣತ್ವಧೀಃ ।

ಸರ್ವಂ ಸಮರ್ಪ್ಯ ಗೋವಿನ್ದೇ ಪಾರ್ತ್ಥೇಭ್ಯೋSನ್ಯೇಭ್ಯ ಏವ ಚ  ॥ ೩೧.೪೪ ॥

 

ವಿದುರನ ಮಾತನ್ನು ಕೇಳಿದ ಧೃತರಾಷ್ಟ್ರನು ಕ್ರೋಧಿತನಾಗದೇ ಇದ್ದು,

ಶಾಂತಬುದ್ಧಿಯಿಂದ ದುರ್ಯೋಧನಾದಿಗಳ, ತನ್ನ ಋಣ ಇರಬಾರದು ,

ಎನ್ನುವ ಋಣಪರಿಹಾರದ ಬಯಕೆಯಿಂದ ಎಲ್ಲರಿಗೂ ಶ್ರಾದ್ಧವನ್ನು ಮಾಡಿದ.

ಹತ್ತು ರಾತ್ರಿಗಳ ಕಾಲ ನಿರಂತರವಾಗಿ ಮಹಾ ದಾನಾದಿಗಳನ್ನೂ ಮಾಡಿದ.

ಸ್ವಜನೇಭ್ಯಃ ಸಮಾದಾಯ ಸ್ರವನ್ನೇತ್ರೇಭ್ಯ ಉಚ್ಛಧೀಃ ।

ಅನುಜ್ಞಾಂ ನಿರ್ಗ್ಗತಃ ಪ್ರಾಹ ಪೌರಜಾನಪದಾನ್ ನೃಪಃ ॥ ೩೧.೪೫ ॥

 

ತಾನು ಮಾಡಿದ ಎಲ್ಲಾ ಕರ್ಮಗಳನ್ನು ನಾರಾಯಣನಲ್ಲಿ ಸಮರ್ಪಿಸಿದ, ಪಾಂಡವರಿಂದಲೂ, ಉಳಿದ ಎಲ್ಲಾ ಬಾಂಧವರಿಂದಲೂ ಅನುಜ್ಞೆ ಪಡೆದ, ಕಣ್ಣೀರಿಡುತ್ತಾ ಹೊರಟ ಧೃತರಾಷ್ಟ್ರ ನೆರೆದ ಪ್ರಜೆಗಳನ್ನು ಕುರಿತು ಮಾತನಾಡಿದ-

 

ಧರ್ಮ್ಮತೋ ರಕ್ಷಿತಾ ಯೂಯಮಸ್ಮತ್ಪೂರ್ವೈರ್ಮ್ಮಹಾತ್ಮಭಿಃ ।

ನಚಾಹಂ ಪರಮಸ್ನೇಹಾದ್ ಯುಷ್ಮಾಭಿಃ ಸುಕೃಪಾಲುಭಿಃ  ॥ ೩೧.೪೬ ॥

 

ಅರಕ್ಷಿತೇತಿ ಕಥಿತಃ ಪ್ರಮಾದಾದಪಿ ಸಜ್ಜನಾಃ ।

ಇಷ್ಟಂ ಚ ಯಜ್ಞೈಃ ಪೂರ್ತ್ತೈಶ್ಚ ಚರಿತಂ ಯುಷ್ಮದಾಶ್ರಯಾತ್ ॥ ೩೧.೪೭ ॥

 

ಪುತ್ರಸ್ತು ಮಮ ಪಾಪಾತ್ಮಾ ಸರ್ವಕ್ಷತ್ರವಿನಾಶಕಃ ।

ಸರ್ವಾತಿಶಙ್ಕೀ ಮೂಢಶ್ಚ ವೃದ್ಧಾನಾಂ ಶಾಸನಾತಿಗಃ ॥ ೩೧.೪೮ ॥

 

ನೀವೆಲ್ಲರೂ ನನಗಿಂತ ಹಿರಿಯರಾದ ರಾಜರಿಂದ ಧರ್ಮಪೂರ್ವಕವಾಗಿ ಪಾಲಿಸಲ್ಪಟ್ಟಿದ್ದೀರಿ.

ನಾನು ಪರಮಸ್ನೇಹದಿಂದ ನಿಮ್ಮನ್ನು ಪಾಲಿಸಿಲ್ಲ, ಆದರೂ ನನ್ನ ಮೇಲೆ ಕೃಪೆತೋರಿದ್ದೀರಿ .

ನೀವು‘ನಾನು ನಿಮ್ಮನ್ನು ರಕ್ಷಿಸಿಲ್ಲ’ ಎಂದು ಹೇಳಲಿಲ್ಲ.

ನೀವು ಪ್ರಮಾದದಿಂದಲಾದರೂ ನನ್ನನ್ನು ಬೈಯಲಿಲ್ಲ.

ನಾನು ನಿಮ್ಮ ಸಹಕಾರದಿಂದ  ಯಾಗಗಳನ್ನು ಮಾಡಿದೆ.

ಕೆರೆ ಕಟ್ಟೆಗಳ ತೋಡಿಸಿ ,ಅರವಟ್ಟಿಗೆಗಳನ್ನು ನಿರ್ಮಿಸಿದೆ.

ನನ್ನ ಮಗ ಅತ್ಯಂತ ಪಾಪಿಷ್ಠ, ಮೂಢ.

ಹಿಡಿದಿದ್ದ ಎಲ್ಲಾ ಕ್ಷತ್ರಿಯರ ನಾಶದ ಜಾಡ. ಎಲ್ಲರನ್ನೂ ಅವನು ಶಂಕಿಸುತ್ತಿದ್ದ.

ವೃದ್ಧರ ಶಾಸನವ ಅವನು ಮೀರಿದ್ದ. 

 

ಸೌಭ್ರಾತ್ರಂ ಯೇನ ಸನ್ತ್ಯಜ್ಯ ಪಾಣ್ಡವೇಷು ಮಹಾತ್ಮಸು ।

ಕೃತಂ ವಿರೂಪಂ ಸುಮಹತ್ ಕುರ್ಯ್ಯಾದ್ ಯನ್ನಾಪರಃ ಕ್ವಚಿತ್ ॥ ೩೧.೪೯ ॥

 

ಯಾವ ನನ್ನ ಮಗನಿಂದ ಮಹಾತ್ಮರಾದ ಪಾಂಡವರಲ್ಲಿ ಸ್ನೇಹವನ್ನು ಬಿಟ್ಟು ದ್ವೇಷ ಮಾಡಲ್ಪಟ್ಟಿತು;

ಅಂತಹ ಮಹತ್ತಾದ ದ್ವೇಷ ಇನ್ನೊಬ್ಬ ಎಲ್ಲೂ ಮಾಡುವುದಿಲ್ಲವೋ ಆ ತಪ್ಪು ಅವನಿಂದ ಮಾಡಲ್ಪಟ್ಟಿತು.

 

ಅಪ್ರಿಯಾಣಿ ಚ ಕೃಷ್ಣಸ್ಯ ಸುಬಹೂನ್ಯಾಚರತ್ ಕುಧೀಃ ।

ಪ್ರಾಯಸ್ತೇನಾಪಿ ಮನ್ದೇನ ನ ಯುಷ್ಮಾಸ್ವಶಿವಂ ಕೃತಮ್ ॥ ೩೧.೫೦ ॥

 

ಭ್ರಾತರೋSಸ್ಯ ಚ ಸರ್ವೇSಪಿ ತಚ್ಛೀಲಮನುವರ್ತ್ತಿನಃ ।

ಹತಾಶ್ಚ ಸ್ವೇನ ಪಾಪೇನ ಸಸುತಾಮಾತ್ಯಬಾನ್ಧವಾಃ ॥ ೩೧.೫೧ ॥

 

ಶ್ರೀಕೃಷ್ಣನಿಗೆ ಇಷ್ಟವಾಗದ ಕೆಲಸವನ್ನು ಅವನು ಮಾಡಿದ್ದು.

ಮೂರ್ಖನಾದ ಅವನಿಂದ ನಿಮ್ಮಲ್ಲೂ ಅನಿಷ್ಟವು ಆಗಿರಬಹುದು.

ಅವನ ತಮ್ಮಂದಿರೂ ಕೂಡಾ ಅವನದೇ ಸ್ವಭಾವವನ್ನು ಅನುಸರಿಸಿದರು ,

ಮತ್ತು ಎಲ್ಲರೂ ತಮ್ಮ ಪಾಪದಿಂದ ಮಕ್ಕಳು, ಬಾಂಧವರ ಸಹಿತ ಸತ್ತು ಹೋದರು.

 

ಸೋSಹಂ ವಯೋಗತಶ್ಚೈವ ಪುತ್ರಾಧಿಭಿರಭಿಪ್ಲುತಃ ।

ತತ್ಸಮ್ಬನ್ಧಕೃತಂ ಪಾಪಂ ಸ್ವಕೃತಂ ಚಾತ್ಯಪೇಶಲಮ್ ॥ ೩೧.೫೨ ॥

 

ಪಾಣ್ಡವೇಷು ಸಕೃಷ್ಣೇಶು ತಪಸಾ ಮಾರ್ಷ್ಟುಮುದ್ಯತಃ ।

ತತ್ರ ಮಾಮನುಜಾನೀಧ್ವಂ ಕೃಪಯಾ ಮಿತ್ರವತ್ಸಲಾಃ ॥ ೩೧.೫೩ ॥

 

ಅಂತಹ ನನ್ನ ಮಕ್ಕಳಿಂದ ಮಾಡಲ್ಪಟ್ಟ ಅನಿಷ್ಟದಿಂದ ಪೀಡಿತನಾದ ನಾನು ಮುದುಕನಾಗಿದ್ದೇನೆ.

ಅವನ ಸಂಬಂಧದಿಂದ ಉಂಟಾದ ಪಾಪವನ್ನು ಮತ್ತು ನಾನು ಮಾಡಿದ ಪಾಪವನ್ನು, ಕಟ್ಟಿಕೊಂಡಿದ್ದೇನೆ. ಶ್ರೀಕೃಷ್ಣ-ಪಾಂಡವರಲ್ಲಿ ಮಾಡಿದ ಪಾಪಪರಿಹಾರಕ್ಕಾಗಿ, ತಪಸ್ಸಿನಿಂದ ಎಲ್ಲಾ ತೊಳೆದುಕೊಳ್ಳಲು ಸಿದ್ಧನಾಗಿದ್ದೇನೆ.

ಈ ವಿಚಾರದಲ್ಲಿ ನೀವು ನನ್ನಮೇಲೆ ದಯೆಯಿಟ್ಟು,

ಮಿತ್ರರನ್ನು ಪ್ರೀತಿಸುವ ನೀವು ನನಗೆ ಅನುಜ್ಞೆಕೊಟ್ಟು,

ಕಾಪಾಡಿ ಎಂದ ಧೃತರಾಷ್ಟ್ರ ಪ್ರಜೆಗಳಲ್ಲಿ ಬೇಡಿಕೊಂಡದ್ದಿಷ್ಟು.

 

ಮತ್ಪ್ರಿಯಾರ್ತ್ಥಮಪಿ ಸ್ನೇಹಃ ಪಾಣ್ಡವೇಷು ಮಹಾತ್ಮಸು ।

ಕ್ರಿಯಮಾಣೋSಪಿ ಕರ್ತ್ತವ್ಯೋ ಭೂಯ ಏವ ಸದಾSಚಲಃ ॥ ೩೧.೫೪ ॥

 

ತೇ ಹಿ ಮೇ ಪುತ್ರಕಾಃ ಸನ್ತ ಇಹಾಮುತ್ರ ಚ ಸೌಖ್ಯದಾಃ ।

ಇತ್ಯುಕ್ತೈಃ ಸ್ವಗುಣಾನುಚ್ಛೈಃ ಕೀರ್ತ್ತಯದ್ಭಿಃ ಸುದುಃಖಿತೈಃ ॥ ೩೧.೫೫ ॥

 

ಪರ್ಯ್ಯಶ್ರುನಯನೈಃ ಕೃಚ್ಛ್ರಾತ್ ಪೌರಜಾನಪದೈಶ್ಚಿರಾತ್ ।

ಅನುಜ್ಞಾತೋ ಯಯೌ ಪಾರ್ತ್ಥೈರನುಯಾತಃ ಸುದೂರತಃ ॥ ೩೧.೫೬ ॥

 

ಮಹಾನುಭಾವರಾದ ಪಾಂಡವರಲ್ಲಿ ನೀವೆಲ್ಲರೂ ಸ್ನೇಹವನ್ನು ಮಾಡುತ್ತಿದ್ದೀರಿ,

ನನ್ನ ಪ್ರೀತಿಗೋಸ್ಕರ ಇನ್ನೂ ಹೆಚ್ಚಾಗಿ ಅವರಲ್ಲಿ ಪ್ರೀತಿಯನ್ನು ತೋರಿಸಿರಿ.

ಪಾಂಡವರೂ ಕೂಡಾ ನನ್ನ ಮಕ್ಕಳೇ.

ಸಜ್ಜನರಾದ ಅವರು ಇಲ್ಲೂ, ಮೇಲೆಯೂ ಸೌಖ್ಯ ಕೊಡತಕ್ಕ ಜೀವಗಳೇ.

ಈರೀತಿಯಾಗಿ ಧೃತರಾಷ್ಟ್ರನಿಂದ ಹೇಳಲ್ಪಡಲು,

ಕಣ್ಣೀರುತುಂಬಿದ ಪ್ರಜೆಗಳು ಕಷ್ಟದಿ ಅನುಜ್ಞೆಕೊಡಲು,

ಹೀಗೆ ಅನುಜ್ಞೆಯನ್ನು ಪಡೆದವನಾದ ಧೃತರಾಷ್ಟ್ರಮಹಾರಾಜನು

ಪಾಂಡವರಿಂದ ಬಹುದೂರ ಅನುಸರಿಸಲ್ಪಟ್ಟವನಾಗಿ ಹೋದನು. 

 

ಸಞ್ಜಯೋ ವಿದುರಶ್ಚೈನಂ ಸಭಾರ್ಯ್ಯಮನುಜಗ್ಮತುಃ ।

ಅನುವವ್ರಾಜ ತಂ ಕುನ್ತೀ ವನಾಯ ಕೃತನಿಶ್ಚಯಾ ॥ ೩೧.೫೭ ॥

 

ಸಂಜಯ ಹಾಗೂ ವಿದುರನೂ ಕೂಡಾ ಅನುಸರಿಸಿದರು ಗಾಂಧಾರಿಯಿಂದ ಕೂಡಿದ ಧೃತರಾಷ್ಟ್ರನ ದಾರಿ,

ಅಂತಹ ಧೃತರಾಷ್ಟ್ರನನ್ನು, ತಾನೂ ಕೂಡಾ ಕಾಡಿನಲ್ಲಿ ವಾಸಮಾಡಬೇಕೆಂದು ನಿರ್ಧರಿಸಿದ ಕುಂತಿ ಅನುಸರಿಸಿದ ಪರಿ.

 

ವಾರ್ಯ್ಯಮಾಣಾSಪಿ ತನಯೈಃ ಸಭಾರ್ಯ್ಯೈರ್ಭೃಶದುಃಖಿತೈಃ ।

ಸಂಸ್ಥಾಪ್ಯ ತಾನ್ ಸುಕೃಚ್ಛ್ರೇಣ ಯಯೌ ಸಾSನ್ವೇವ ತಂ ನೃಪಮ್ ॥ ೩೧.೫೮ ॥

 

ದ್ರೌಪದಿ ಮೊದಲಾದವರಿಂದೊಡಗೂಡಿದ ತನ್ನ ಮಕ್ಕಳಿಂದ ಕುಂತಿಗೆ ತಡೆ,

ಮಕ್ಕಳನ್ನು, ಸೊಸೆಯಂದಿರನ್ನು ಕಷ್ಟದಿ ತಡೆದಿರಿಸಿ,ಧೃತರಾಷ್ಟ್ರನನುಸರಿಸಿ ನಡೆ.

 

ಸನ್ದರ್ಶಿತಪಥೋ ರಾಜಾ ಕುನ್ತೀವಿದುರಸಞ್ಜಯೈಃ ।

ಗಾನ್ಧಾರೀಸಹಿತಃ ಪ್ರಾಪ ಕುರುಕ್ಷೇತ್ರೇ ಜಗದ್ಗುರೋಃ ।

ಕ್ರಮೇಣೈವಾSಶ್ರಮಂ ವ್ಯಾಸದೇವಸ್ಯ ಸುರಪೂಜಿತಮ್ ॥ ೩೧.೫೯ ॥

 

 

ಕುಂತಿ-ವಿದುರ ಹಾಗೂ ಸಂಜಯರಿಂದ ತೋರಲ್ಪಟ್ಟ ದಾರಿಯುಳ್ಳವನಾದಧೃತರಾಷ್ಟ್ರನು,

ಗಾಂಧಾರಿಯಿಂದ ಕೂಡಿಕೊಂಡು ಕುರುಕ್ಷೇತ್ರವ ತಲುಪಿದ. ಕ್ರಮೇಣ ಅವನು ಜಗಕ್ಕೇ ಉಪದೇಶಕರಾದ,

ಸಮಸ್ತ ದೇವತೆಗಳಿಂದಲೂ ಪೂಜಿತನಾದ, ಜಗದ್ಗುರು ವೇದವ್ಯಾಸರ ಆಶ್ರಮ ಹೊಂದಿದ.

 

ತ್ರಿವತ್ಸರಾದಸ್ಯ ನಿಜಸ್ಯ ಲೋಕಸ್ಯಾSಪ್ತಿಂ ಸಭಾರ್ಯ್ಯಸ್ಯ ಜಗಾದ ತತ್ರ ।

ಬ್ರಹ್ಮಾಙ್ಕಜಸ್ತೇನ ಭೃಶಂ ಪ್ರತೀತೋ ವ್ಯಾಸೋಪದಿಷ್ಟಂ ವ್ಯಚರತ್ ತಪೋSಗ್ರ್ಯಮ್ ॥ ೩೧.೬೦ ॥

 

ಆ ಆಶ್ರಮದಲ್ಲಿ ಬ್ರಹ್ಮಪುತ್ರರಾದ ನಾರದ ಮುನಿಗಳು ,

ಪತ್ನೀಸಹಿತ ಧೃತರಾಷ್ಟ್ರಗೆ ಆದನಂತರ ಮೂರು ವರ್ಷಗಳು,

ಹೇಳಿದರು ತನ್ನ ಲೋಕವನ್ನು ಹೊಂದುವ  ಬಗೆಯ ತಿರುಳು.

ನಾರದರಿಂದ ಇದೆಲ್ಲವನ್ನೂ ತಿಳಿದುಕೊಂಡ ಧೃತರಾಷ್ಟ್ರನು ,

ಉತ್ಕೃಷ್ಟವಾದ ತಪಸ್ಸನ್ನು ವೇದವ್ಯಾಸರ ಉಪದೇಶದಂತೆ ಮಾಡಿದನು.

 

ಸಕ್ಷತ್ತೃಗಾನ್ಧಾರಿಪೃಥೇ ಸಸಞ್ಜಯೇ ತಪೋಭಿರಾರಾಧಯತಿ ಪ್ರಭುಂ ಹರಿಮ್ ।

ವೈಚಿತ್ರವೀರ್ಯ್ಯೇSತ್ರ ಸದಾರಬನ್ಧುಭೃತ್ಯಾಸ್ತು ಪಾರ್ತ್ಥಾ ದೃಶಯೇ ಸಮಾಯಯುಃ ॥ ೩೧.೬೧ ॥

 

ಕ್ಷತ್ತೈಕತಾಮತ್ರ ಯುಧಿಷ್ಠಿರೇಣ ಪ್ರಾಪ್ತೋSಥ ಭಾರ್ಯ್ಯಾಸಹಿತಂ ಸಸಞ್ಜಯಮ್ ।

ಉಪಾಸಮಾನೇಷು ವಿಚಿತ್ರವೀರ್ಯ್ಯಪುತ್ರಂ ಪೃಥಾಂ ಚೈವ ಪೃಥಾಸುತೇಷು ॥ ೩೧.೬೨ ॥

 

ಪ್ರಾದುರ್ಬಭೂವಾಮಿತಶಕ್ತಿತೇಜೋಜ್ಞಾನಾದ್ಭುತೈಶ್ವರ್ಯ್ಯಸುಖಾದಿರೂಪಃ ।

ವ್ಯಾಸೋ ಹರಿಸ್ತತ್ರ ಸಮೀಕ್ಷ್ಯ ಸರ್ವೇ ಸಮ್ಪೂಜಯಾಮಾಸುರುದಗ್ರಭಕ್ತ್ಯಾ ॥ ೩೧.೬೩ ॥

 

ವಿದುರ, ಗಾಂಧಾರಿ, ಕುಂತಿ ಹಾಗೂ ಸಂಜಯನೊಂದಿಗೆ ಧೃತರಾಷ್ಟ್ರ, ಸರ್ವಶಕ್ತ ನಾರಾಯಣನ ತಪಸ್ಸು ಮಾಡುತ್ತಿರುತ್ತಾರೆ, ಹೆಂಡತಿ, ಬಂಧುಗಳು ಹಾಗೂ ಭೃತ್ಯರಿಂದ ಕೂಡಿರುವ ಪಾಂಡವರು ದೊಡ್ಡಪ್ಪನನ್ನು ನೋಡಲೆಂದು ಆಶ್ರಮಕ್ಕೆ ಬರುತ್ತಾರೆ.

 

ಆಗಲೇ ಅದೇ ತತ್ವದವತಾರಿ ವಿದುರನು, ಯುಧಿಷ್ಠಿರನಲ್ಲಿ ಐಕ್ಯವನ್ನು ಹೊಂದಿದನು.

ಸಂಜಯ ಮತ್ತು ಹೆಂಡತಿ ಸಹಿತನಾದ ಧೃತರಾಷ್ಟ್ರನನ್ನು, ಕುಂತಿಯನ್ನೂ,

ಪಾಂಡವರೆಲ್ಲ ಸೇರಿಕೊಂಡು ಮಾಡುತ್ತಿದ್ದರು ಚೆನ್ನಾಗಿ ಸೇವೆಯನ್ನು.

ಎಣೆಯಿರದ ಶಕ್ತಿ, ತೇಜಸ್ಸು, ಅಮಿತಜ್ಞಾನ, ಅದ್ಭುತವಾದ ಐಶ್ವರ್ಯ, ಸುಖದ ತಾಣ ,

ಗುಣ ಸ್ವರೂಪದ ವ್ಯಾಸರೂಪಿ ನಾರಾಯಣ,

ಅಲ್ಲಿ ಪ್ರಾದುರ್ಭವಿಸಲು ಆಶ್ರಮಕ್ಕೆ ಬಂದ ವೇದವ್ಯಾಸರನ್ನು ಕಂಡ  ಎಲ್ಲರೂ ಅತ್ಯುತ್ಕೃಷ್ಟ ಭಕ್ತಿಯಿಂದ ಅವರನ್ನು ಪೂಜಿಸಿದ ಪುಣ್ಯಕ್ಷಣ.

 

ತೈಃ ಪೂಜಿತಸ್ತತ್ರ ನಿಷಣ್ಣ ಆಹ ಯದ್ಯದ್ ಯದಿಷ್ಟಂ ಪ್ರವದನ್ತು ತತ್ತತ್ ।

ದಾಸ್ಯಾಮಿ ತಸ್ಯಾದ್ಯ ತದಿತ್ಯಮುಷ್ಮಿನ್  ಭಕ್ತ್ಯುಚ್ಛ್ರಯಃ ಪಾಣ್ಡುಸುತೈಃ ಸದಾರೈಃ ।

ವೃತೋSತ್ರ ಕುನ್ತೀ ರವಿಸೂನುಜನ್ಮಮೃತ್ಯೂತ್ಥದೋಷಾಪಗಮಂ ಯಯಾಚೇ ॥ ೩೧.೬೪ ॥

 

ಅವರೆಲ್ಲರಿಂದ ಸತ್ಕ್ರುತರಾದ ವೇದವ್ಯಾಸರು ಆಶ್ರಮದಲ್ಲಿದ್ದವರಾಗಿ ಹೀಗೆ ಹೇಳಿದರು-

‘ಯಾರ್ಯಾರಿಗೆ ಏನೇನು ಇಷ್ಟವೋ ಅದನ್ನು ಹೇಳಲಿ, ಅವರಿಗದನ್ನು ಕೊಡುವೆನೆಂದರು.

ಆಗ ಆ ವೇದವ್ಯಾಸರಲ್ಲಿ ಹೆಂಡಂದಿರಿಂದ ಸಹಿತರಾದ ಪಾಂಡವರೆಲ್ಲರೂ ಕೂಡಾ ಬೇಡಿಕೊಂಡರು ಭಕ್ತಿಯನ್ನು.

ಕುಂತಿಯು ಕರ್ಣನನ್ನು ಹುಟ್ಟಿಸಿದ್ದರಿಂದ ಬೇಡಿದಳು ಅವನ ಸಾವಿನಿಂದಾಗಿ  ಬಂದಿರಬಹುದಾದ ದೋಷಪರಿಹಾರವನ್ನು. 

 

ತೇಷಾಂ ಪ್ರದತ್ತೇಷ್ವಭಿವಾಞ್ಛಿತೇಷು ವೈಚಿತ್ರವೀರ್ಯ್ಯಃ ಸಹ ಭಾರ್ಯ್ಯಯೈವ ।

ಸಮ್ಮನ್ತ್ರ್ಯ ನಿಃಶೇಷರಣೇಹತಾನಾಂ ಸನ್ಧರ್ಶನಂ ಪ್ರಾರ್ತ್ಥಿತವಾಂಸ್ತಮೀಶಮ್ ॥ ೩೧.೬೫ ॥

 

ಪಾಂಡವರಿಗೆ ಹಾಗೂ ಕುಂತೀದೇವಿಗೆ ಅವರವರ ಬಯಕೆಗಳು ಕೊಡಲ್ಪಟ್ಟ ನಂತರ,

ಧೃತರಾಷ್ಟ್ರನು ತನ್ನ ಹೆಂಡತಿಯೊಡಗೂಡಿ ಯೋಚನೆಮಾಡಿ, ಬೇಡಿಕೊಂಡದ್ದು ಈ ಥರ.

ಯುದ್ಧದಲ್ಲಿ ಸತ್ತ ಎಲ್ಲರ ಸಂದರ್ಶನವನ್ನು, ಸಮರ್ಥ ವೇದವ್ಯಾಸರಲ್ಲಿ  ಬೇಡಿಕೊಂಡನು.

 

ತತಸ್ತು ತೇ ಸತ್ಯವತೀಸುತಸ್ಯ ಸರ್ವೇಶ್ವರಸ್ಯಾSಜ್ಞಯಾ ಸರ್ವ ಏವ ।

ಸಮಾಗತಾಃ ಸ್ವರ್ಗ್ಗಲೋಕಾತ್ ಕ್ಷಣೇನ ದತ್ತಾ ಚ ದಿವ್ಯಾ ದೃಗಮುಷ್ಯ ರಾಜ್ಞಃ ॥ ೩೧.೬೬ ॥

 

ಊಷುಶ್ಚ ರಾತ್ರಿಂ ಪರಮಾಜ್ಞಯೈವ ಸರ್ವೇ ಸ್ವಭಾರ್ಯ್ಯಾಸಹಿತಾ ಯಥಾ ಪುರಾ ।

ತೃಪ್ತಃ ಸದಾರೋ ನೃಪತಿಶ್ಚ ತತ್ರ ಸರ್ವೇSಪಿ ದೃಷ್ಟ್ವಾ ಮಹದದ್ಭುತಂ ತತ್ ॥ ೩೧.೬೭ ॥

 

ತದನಂತರ ಸರ್ವೆಶ್ವರನಾದ ವೇದವ್ಯಾಸರ ಆಜ್ಞೆಯಿಂದ ಯುದ್ಧದಲ್ಲಿ ಸಂಹರಿಸಲ್ಪಟ್ಟ ಅವರೆಲ್ಲರೂ ಕೂಡಾ ಸ್ವರ್ಗಲೋಕದಿಂದ ಕ್ಷಣದಲ್ಲಿ ಇಳಿದು ಬಂದರು.

ವ್ಯಾಸರು ಧೃತರಾಷ್ಟ್ರಗೆ ದಿವ್ಯದೃಷ್ಟಿ ಕೊಟ್ಟರು, ಎಲ್ಲರೂ ತಮ್ಮ ಹೆಂಡದಿರೊಡಗೂಡಿ, ಹಿಂದಿದ್ದಂತೆ, ಆ ರಾತ್ರಿ ಹೆಂಡಂದಿರ ಸಹಿತ ವ್ಯಾಸರಾಜ್ಞೆಯಂತೆ ಅಲ್ಲೇ ವಾಸಮಾಡಿದರು.

ಆಗ ಗಾಂಧಾರಿಯಿಂದೊಡಗೂಡಿದ ಧೃತರಾಷ್ಟ್ರನು ಅತ್ಯಂತ ಸಂತುಷ್ಟನಾದನು.

ಉಳಿದವರೆಲ್ಲರೂ ಸಂತಸಪಟ್ಟರು ಕಂಡು ಈ ಅತ್ಯದ್ಭುತವಾದ ಸಂಗತಿಯನ್ನು.

 

ಅಥಾSಜ್ಞಯೈವಾಸ್ಯ ಪರಸ್ಯ ಸರ್ವಾಃ ಸ್ತ್ರಿಯೋ ನಿಜೇಶೈಃ ಸಹಿತಾ ಯಯುಃ ಸ್ವಮ್ ।

ವಿನೋತ್ತರಾಂ ತಾಂ ತು ಕಥಾಂ ನಿಶಮ್ಯ ಪಾರಿಕ್ಷಿತೋSಯಾಚತ ತಾತದೃಷ್ಟಿಮ್ ॥ ೩೧.೬೮ ॥

 

ತದನಂತರ ಸರ್ವೋತ್ಕೃಷ್ಟರಾದ ವೇದವ್ಯಾಸದೇವರು ಆಜ್ಞೆ ಮಾಡಿದರು ,

ಉತ್ತರೆಯ ಬಿಟ್ಟು, ಎಲ್ಲಾ ಹೆಂಗಳೆಯರೂ ಪತಿಸಮೇತ ತಮ್ಮ ಲೋಕಕ್ಕೆ ತೆರಳಿದರು.

(ಮಗನನ್ನು ನೋಡಿಕೊಳ್ಳಲೋಸುಗ ಉತ್ತರೆ ಹೋಗದೇ ಉಳಿಯುತ್ತಾಳೆ).

 

ಈ ಕಥೆಯನ್ನು ಕೇಳಿದ ಜನಮೇಜಯನು,

ವ್ಯಾಸರಲ್ಲಿ ಸತ್ತ ತನ್ನ ಅಪ್ಪ ಪರೀಕ್ಷಿತನನ್ನು,

ತಾನೂ ನೋಡಬೇಕು ಎಂದು ಬೇಡಿದನು.

 

ತಂ ಚಾSನಯಾಮಾಸ ತದೈವ ಕೃಷ್ಣೋ ಹ್ಯಚಿನ್ತ್ಯಶಕ್ತಿಃ ಸ ವಿಕುಣ್ಠಲೋಕಾತ್ ।

ದೃಷ್ಟ್ವಾ ಸ ಪಾರೀಕ್ಷಿತ ಆಪ ತುಷ್ಟಿಂ ಸ್ವತಾತಮೀಶೇನ ಸಮಾಹೃತಂ ಪುನಃ ॥ ೩೧.೬೯ ॥

 

ಸಮ್ಪೂಜ್ಯ ತಂ ಕೃಷ್ಣಮಪೀಶವನ್ದ್ಯಂ ಕ್ಷಮಾಪಯಾಮಾಸ ಪರೀಕ್ಷಿದಾತ್ಮಜಃ ।

ಚಕ್ರೇ ಚ ವಿಸ್ರಮ್ಭಮತೀವ ಭಾರತೇ ಪುನಶ್ಚ ತತ್ರತ್ಯಜನೈಃ ಸಮೇತಃ ॥ ೩೧.೭೦ ॥

 

ಎಣೆಯಿರದ ಶಕ್ತಿಯುಳ್ಳ ವೇದವ್ಯಾಸರು,                      

ಪರೀಕ್ಷಿತ ರಾಜನನ್ನೂ ಕೂಡಾ ವೈಕುಂಠ ಲೋಕದಿಂದ ಆ ಕ್ಷಣದಲ್ಲಿಯೇ ಕರೆತಂದರು.

ಜನಮೇಜಯ ರಾಜನು ವೇದವ್ಯಾಸರಿಂದ ಕರೆತರಲ್ಪಟ್ಟ ತನ್ನ ಅಪ್ಪನನ್ನು ಕಂಡು ಅತೀವ ಸಂತಸವನ್ನು ಹೊಂದಿದ.

ಬ್ರಹ್ಮಾದಿಗಳಿಂದಲೂ ವಂದ್ಯರಾದ ವೇದವ್ಯಾಸರನ್ನು ಜನಮೇಜಯ ಸತ್ಕರಿಸಿದ,

‘ನಿಮ್ಮ ಶಕ್ತಿ ಪರೀಕ್ಷೆಮಾಡಿದ್ದಕ್ಕೆ ಕ್ಷಮೆ ಇರಲೀ’  ಎಂದು ವ್ಯಾಸರನ್ನು ಬೇಡಿಕೊಂಡ.

ಆನಂತರ ಅವನು ಅಲ್ಲಿರುವ ಜನರ ಸೇರಿ ಮಹಾಭಾರತದಲ್ಲಿ ಬಹುವಾಗಿ ವಿಶ್ವಾಸ ಮಾಡಿದ.

 

ಪಾರ್ತ್ಥಾಃ ಪುನಃ ಪ್ರಾಪ್ಯ ಪುರಂ ಸ್ವಕೀಯಂ ಧರ್ಮ್ಮೇಣ ಪೃಥ್ವೀಂ ಪರಿಪಾಲಯನ್ತಃ ।

ಭೋಗಾನರಾಗಾ ಅಜುಷನ್ತ ಯೋಗ್ಯಾನ್ ಯುಕ್ತಾ ಜಗದ್ಧಾತರಿ ವಾಸುದೇವೇ ॥ ೩೧.೭೧ ॥

 

 

ಪಾಂಡವರು ಮತ್ತೆ ತಮ್ಮ ಪಟ್ಟಣವನ್ನು ಹೊಂದಿದರು,

ಧರ್ಮದಿಂದ ಭೂಮಿಯನ್ನು ಪಾಲನೆ ಮಾಡುತ್ತಿದ್ದರು,

ಜಗದೊಡೆಯನಾದ ಕೃಷ್ಣನಲ್ಲಿ ಧ್ಯಾನ ಮಾಡುತ್ತಿದ್ದರು,

ಅವನಲ್ಲಿಯೇ ತಮ್ಮ ಮನಸ್ಸನ್ನು ನೆಟ್ಟು ಇಟ್ಟುಬಿಟ್ಟಿದ್ದರು.

ಯಾವುದೇ ಸಲ್ಲದ ಬಯಕೆ ಇಲ್ಲದೇ ಇದ್ದರು, ಯೋಗ್ಯ ಭೋಗಗಳನ್ನು ಅನುಭವಿಸಿದರು.

 

ವರ್ಷತ್ರಯಾನ್ತೇ ತ್ಮಸಮಾಹಿತಾಗ್ನಿಂ ತ್ಯಕ್ತಾಗ್ನಿಭಿಸ್ತೈರ್ವನಮಾಲಿಹದ್ಭಿಃ ।

ತೇ ಶುಶ್ರುವುರ್ದ್ಧೃತರಾಷ್ಟ್ರಂ ಸಭಾರ್ಯ್ಯಂ ಸಹೈವ ಕುನ್ತ್ಯಾ ಪರಿದಗ್ಧದೇಹಮ್ ॥ ೩೧.೭೨ ॥

 

ಮೂರು ವರ್ಷಗಳಾದ ಮೇಲೆ, ಅಗ್ನಿಹೋತ್ರವನ್ನು ಬಿಟ್ಟ ಧೃತರಾಷ್ಟ್ರನು,ತನ್ನೆದೆಯಲ್ಲಿ;

ಔಪಾಸನಾಗ್ನಿಯನ್ನಿಟ್ಟುಕೊಂಡು, ಆ ವನವನ್ನು ಪ್ರವೇಶಿಸುತ್ತಾ ಅಗ್ನಿಯನ್ನು ಆವಾಹಿಸಿಕೊಂಡನಲ್ಲಿ.

ಹೀಗೆ ತನ್ನ ಹೆಂಡತಿಯಿಂದ ಕೂಡಿಕೊಂಡ ಧೃತರಾಷ್ಟ್ರನನ್ನು ಕುಂತಿಯು ಅನುಸರಿಸಿ, ಎಲ್ಲರೂ ತಮ್ಮ ದೇಹವನ್ನು ದಹಿಸಿಕೊಂಡರು; ಎನ್ನುವ ಸುದ್ದಿಯನ್ನು ಪಾಂಡವರೆಲ್ಲರು (ಸಂಜಯನಿಂದ) ಕೇಳಿಸಿಕೊಂಡರು. 

 

ವ್ರೀಳಾಮುಖಾ ದ್ಧ್ಯಾನಪರಾ ನಿಶಮ್ಯ ಸ್ವರ್ಯ್ಯಾತಮಾತ್ಮೀಯಪಿತೃವ್ಯಮಾಶು ।

ಸಮೇತ್ಯ ಭರ್ತ್ರಾ ಪ್ರತಿಪೂಜ್ಯಮಾನಾಂ ಕುನ್ತೀಂ ಚ ತಪ್ತಾ ವಿದಧುಃ ಕ್ರಿಯಾಶ್ಚ ॥ ೩೧.೭೩ ॥

 

ನಾಚಿಕೆಯಿಂದ ಮುಖ ಕೆಳಗೆ ಮಾಡಲ್ಪಟ್ಟಿದ್ದ, ಧ್ಯಾನದಲ್ಲಿಯೇ ತನ್ನನ್ನು ತೊಡಗಿಸಿಕೊಂಡಿದ್ದ, ಸ್ವರ್ಗಲೋಕವನ್ನು ಹೊಂದಿದ ದೊಡ್ಡಪ್ಪನ ಕುರಿತು ಕೇಳಿ,

ಧ್ಯಾನಾಸಕ್ತಳಾಗಿ ಗಂಡನಿಂದ ಕೂಡಿ ತಪಿಸುವ ತಾಯಿ ಕುಂತಿ ಬಗ್ಗೆ ಕೇಳಿ,

ಸಂಕಟಪಟ್ಟ, ಪಾಂಡವರೆಲ್ಲರು, ಔರ್ಧ್ವದೈಹಿಕ ಕರ್ಮಗಳ ಮಾಡಿದರು.

 

ತೇ ವಿಷ್ಣುಭಕ್ತ್ಯಾ ಪರಿಪೂತಕರ್ಮ್ಮಭಿರ್ಜ್ಞಾನೇನ ಚಾನ್ತೇ ತಮನುಸ್ಮರನ್ತಃ ।

ಪಾರ್ತ್ಥೈಃ ಸುಪುತ್ರೈಃ ಸುಕೃತೋರ್ಧ್ವಕರ್ಮ್ಮಭಿರ್ವೃದ್ಧಿಂ ಸುಖಸ್ಯಾSಪುರನಪ್ಯಯಾಂ ಶುಭಾಮ್ ॥ ೩೧.೭೪ ॥

 

ಆ ಮೂವರು (ಕುಂತಿ, ಗಾಂಧಾರಿ, ಧೃತರಾಷ್ಟ್ರರು) ತಮ್ಮ ಅಂತಿಮಕಾಲದಲ್ಲಿ ವಿಷ್ಣುಭಕ್ತಿಯಿಂದ,

ಪವಿತ್ರವಾದ ಕರ್ಮಗಳಿಂದ, ಜ್ಞಾನದಿಂದ, ತಮ್ಮ ಮಕ್ಕಳು ಮಾಡಿದ ಔರ್ಧ್ವದೈಹಿಕ ಕರ್ಮಗಳಿಂದ,

ಒಳ್ಳೆಯ ಲೋಕಕ್ಕೆ ತೆರಳಿ, ಎಣೆಯಿರದ ಮಂಗಳವಾದ ಅಭಿವೃದ್ಧಿಯ ಹೊಂದಿದರು ಸುಖದಿಂದ.

 

 

ಗಾವದ್ಗಣಿರ್ವ್ಯಾಸಸಕಾಶಮೇತ್ಯ ಶುಶ್ರೂಷಯಾ ತಸ್ಯ ಪುನರ್ನ್ನಿಜಾಂ ಗತಿಮ್ ।

ಪ್ರಪೇದಿವಾನ್ ಪಾಣ್ಡುಸುತಾಶ್ಚ ಕೃಷ್ಣಂ ಪ್ರತೀಕ್ಷಮಾಣಾಃ ಪೃಥಿವೀಮಶಾಸನ್ ॥ ೩೧.೭೫ ॥

 

ಗಾವದ್ಗಣಿ ಸಂಜಯನು ವೇದವ್ಯಾಸರ ಬಳಿಗೆ ತೆರಳಿದ,

ವೇದವ್ಯಾಸರ ಸೇವೆಯಿಂದ ತನ್ನ ಯೋಗ್ಯ ಲೋಕವ ಹೊಂದಿದ.

ಪಾಂಡವರು ಶ್ರೀಕೃಷ್ಣ ಪರಂಧಾಮಕ್ಕೆ ತೆರಳುವುದನ್ನು ನಿರೀಕ್ಷಿಸುತ್ತಿದ್ದರು

ಹಾಗೇ ಭೂಮಿಯನ್ನು ರಕ್ಷಿಸುತ್ತಿದ್ದರು.

 

ಅಷ್ಟಾದಶಾಬ್ದಾಃ ಪೃಥಿವೀಂ ಸಮಸ್ತಾಂ ಪ್ರಶಾಸತಾಮೇವಮಗುರ್ಮ್ಮಹಾತ್ಮನಾಮ್ ।

ಅರಿಕ್ತಧರ್ಮ್ಮಾರ್ತ್ಥಸುಖೋತ್ತಮಾನಾಮನುಜ್ಝಿತಾನನ್ತಪದಸ್ಮೃತೀನಾಮ್ ॥ ೩೧.೭೬ ॥

 

ಹೀಗೆ, ಮಹಾತ್ಮರಾಗಿರುವ, ಧರ್ಮ-ಅರ್ಥ ಮೊದಲಾದವುಗಳನ್ನು ಬಿಡದೇ,

ಸುಖದಿಂದ ಉತ್ಕೃಷ್ಟರಾಗಿರುವ, ಪರಮಾತ್ಮನ ಸ್ಮರಣೆಯ ಎಂದೂ ಬಿಡದೇ,

ಇಡೀ ಭೂಮಿಯ ಆಳುತ್ತಿದ್ದ ಪಾಂಡವರ ಕಾಲದಲ್ಲಿ,

ಹದಿನೆಂಟು ವರ್ಷಗಳು ಕಳೆದುಹೋಗಿದ್ದವು ಅಲ್ಲಿ .

 

 

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಧೃತರಾಷ್ಟ್ರಾದಿಸ್ವರ್ಗ್ಗಪ್ರಾಪ್ತಿರ್ನ್ನಾಮ  ಏಕತ್ರಿಂಶೋSಧ್ಯಾಯಃ ॥

 

[ ಆದಿತಃ ಶ್ಲೋಕಾಃ ೪೯೨೪ + ೭೬=೫೦೦೦ ]

 

ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ ವಿರಚಿತವಾದ,

ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯದ ಭಾವಾನುವಾದ,

ಧೃತರಾಷ್ಟ್ರಾದಿಸ್ವರ್ಗಪ್ರಾಪ್ತಿ ಹೆಸರಿನ ಮೂವತ್ತೊಂದನೇ ಅಧ್ಯಾಯ,

ನಾರಾಯಣ , ವಾಯುದೇವರ ಪಾದಗಳಿಗೆ ಅರ್ಪಿಸಿದ ಧನ್ಯತಾಭಾವ.

 

*********


No comments:

Post a Comment

ಗೋ-ಕುಲ Go-Kula