Saturday, 3 February 2024

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 30: 59-100

 

ಸಮಾಧಿವಿರತೋದಙ್ಕಪರಿಪೃಷ್ಟಃ ಪಥಿ ಪ್ರಭುಃ ।

ಹತಂ ದುರ್ಯ್ಯೋಧನಂ ಪ್ರಾಹ ಸಭ್ರಾತೃಸುತಸೈನಿಕಮ್ ॥ ೩೦.೫೯ ॥

 

ಕೃಷ್ಣ ದ್ವಾರಕೆಗೆ ತೆರಳುತ್ತಿರುವ ದಾರಿಯಲ್ಲಿ, ಸಮಾಧಿಯಿಂದ ಎದ್ದ ಉದಂಕನಿದ್ದನಲ್ಲಿ .

ಆ ಋಷಿ ದುರ್ಯೋಧನನ ಬಗೆಗೆ ಕೇಳಿದ, ಶ್ರೀಕೃಷ್ಣ ಪರಮಾತ್ಮನು ಅವನಿಗೆ ಹೇಳಿದ.

‘ದುರ್ಯೋಧನ ತನ್ನ ಸೈನಿಕರು, ಮಕ್ಕಳು ಹಾಗೂ ಸಹೋದರರ ಜೊತೆಗೆ ಹತನಾದ .

 

ತಂ ಶಿಷ್ಯವಧಕೋಪೇನ ಶಪ್ತುಮಾತ್ಮಾನಮುದ್ಯತಮ್ ।

ಕೇಶವೋSಶಮಯದ್ ವಾಕ್ಯೈರ್ವಿಶ್ವರೂಪಂ ಪ್ರದರ್ಶ್ಯ ಚ ॥ ೩೦.೬೦ ॥

 

ತನ್ನ ಶಿಷ್ಯ ದುರ್ಯೋಧನನ ಕೊಂದಿದ್ದಾನೆ ಎಂಬ ಸಿಟ್ಟು ಉದಂಕನಿಗೆ,

ಆ ಕೋಪದಲ್ಲಿ ಶಾಪಕೊಡಲು ಸಿದ್ದನಾದ  ಶ್ರೀಕೃಷ್ಣ ಪರಮಾತ್ಮನಿಗೇ.

ಅವನಿಗೆ ಶ್ರೀಕೃಷ್ಣ ತನ್ನ ವಿಶ್ವರೂಪವನ್ನು ತೋರಿಸಿದ,

ತನ್ನ ಯುಕ್ತಿಮಾತುಗಳಿಂದ ಅವನನ್ನು ಸಮಾಧಾನಿಸಿದ.

 

ಮದ್ಭಕ್ತೋ ನಿತರಾಮೇಷ ಮದಾರಾಧನತತ್ಪರಃ ।

ಮಾಮವಜ್ಞಾಯ ನಿರಯಂ ಮಾSನುತ್ಥಾನಂ ವ್ರಜೇದಿತಿ ॥ ೩೦.೬೧ ॥

 

ಕೃಪಯಾ ವಾಸುದೇವೇನ ಬೋಧಿತಃ ಶಾನ್ತಮಾನಸಃ ।

ಪಶ್ಚಾತ್ತಾಪಾಭಿತಪ್ತಾತ್ಮಾ ತಮೇವ ಶರಣಂ ಯಯೌ ॥ ೩೦.೬೨ ॥

 

ಈ ಉದಂಕ ತನ್ನ ಭಕ್ತನೇ ಆಗಿದ್ದು ನನ್ನನ್ನು ನಿರಂತರ ಆರಾಧನೆ ಮಾಡುತ್ತಿದ್ದಾನೆ.

ಇವನು ತನ್ನನ್ನು ತಿರಸ್ಕರಿಸಿ, ಅವಮಾನಿಸಿ, ನರಕಸೇರಬಾರದೆಂಬುದವನ ಕರುಣೆ.

ಉದಾತ್ತ ಕೃಪೆಯಿಂದ ವಾಸುದೇವ ಉದಂಕಗೆ ಉಪದೇಶಿಸಿದ,

ಶಾಂತಮನಸ್ಸುಳ್ಳವನಾದ ಉದಂಕ ಪಶ್ಚಾತ್ತಾಪದಿಂದ ಶರಣಾದ.  

 

ತಸ್ಮೈ ದೇವೋSಭಯಂ ದತ್ತ್ವಾ ಪ್ರೇಷಯಿಷ್ಯೇSಮೃತಂ ತವ ।

ದಾತುಂ ಶಕ್ರಮಿತಿ ಪ್ರೋಕ್ತ್ವಾ ಯಯೌ ದ್ವಾರವತೀಂ ಪ್ರಭುಃ ॥ ೩೦.೬೩ ॥

 

ತನಗೆ ಅಮೃತಬೇಕೆಂದು ಉದಂಕ ಕೇಳುತ್ತಾನೆ,

ಭಗವಂತ ಅವನಿಗೆ ಅಭಯ ಕೊಟ್ಟು ಹೇಳುತ್ತಾನೆ,

‘ನಿನಗೆ ಅಮೃತವನ್ನು ಕೊಡುವುದಕ್ಕಾಗಿ ದೇವೇಂದ್ರನನ್ನು ಕಳುಹಿಸಿ ಕೊಡುವೆನು’ ,

ಇಷ್ಟು ಹೇಳಿದಮೇಲೆ ಕೃಷ್ಣ ಪರಮಾತ್ಮ, ದ್ವಾರಕಾಪಟ್ಟಣದ ಕಡೆಗೆ ತೆರಳಿದನು.

 

ಅಥಾSದಿದೇಶ ದೇವೇಶಂ ವಾಸುದೇವೋSಮೃತಂ ಮುನೇಃ ।

ದೇಹೀತಿ ವಞ್ಚಯಿಷ್ಯಾಮೀತ್ಯಾಹ ಸೋSಪಿ ಕ್ಷಮಾಪಯನ್ ॥ ೩೦.೬೪ ॥

 

ಆನಂತರ ಇಂದ್ರನಿಗೆ ‘ಮುನಿಗೆ ಅಮೃತವನ್ನು ಕೊಡು’ ಎಂದು ಶ್ರೀಕೃಷ್ಣನ ಆದೇಶ,

ಆ ಇಂದ್ರನಾದರೋ, ಕ್ಷಮೆಕೋರುತ್ತಾ ಹೇಳುತ್ತಾನೆ ; ನಾನು ಮಾಡುತ್ತೇನೆ ಮೋಸ .

 

ಓಮಿತ್ಯುಕ್ತೋ ಭಗವತಾ ತತ್ಸ್ನೇಹಾತ್ ಸ ಶಚೀಪತಿಃ ।

ಸುಜುಗುಪ್ಸಿತಮಾತಙ್ಗವೇಷೋ ಭೂತ್ವಾ ಮುನಿಂ ಯಯೌ ॥ ೩೦.೬೫ ॥

 

‘ಹಾಗೇ ಆಗಲಿ’ ಎಂದು ಶ್ರೀಕೃಷ್ಣ ಹೇಳುತ್ತಾನೆ , ಇಂದ್ರ ಅತಿ ಕೆಟ್ಟ ಬೇಡನ ವೇಷ ಧರಿಸುತ್ತಾನೆ,

ಆ ವೇಷದಲ್ಲಿ ಉದಂಕನ ಬಳಿಗೆ ತೆರಳುತ್ತಾನೆ.

 

ಮೂತ್ರಸ್ರೋತಸಿ ಸೋSಧಶ್ಚ ನಿಧಾಯ ಕಲಶಂ ವಶೀ ।

ಮೂತ್ರಯನ್ನಿವ ತಂ ಪ್ರಾಹ ವಾಸುದೇವಃ ಸುಧಾಮಿಮಾಮ್ ॥ ೩೦.೬೬ ॥

 

ಮಹರ್ಷೇ ಪ್ರೇಷಯಾಮಾಸ ತವಾರ್ತ್ಥೇ ತತ್ ಪಿಬೇತಿ ಚ ।

ಸ ಮೂತ್ರಮಿತಿ ಮತ್ವಾ ತಂ ಯಾಹೀತ್ಯೇವಾSಹ ಭತ್ಸಯನ್ ॥ ೩೦.೬೭ ॥

 

ಇಂದ್ರ ಅಮೃತಸಂಬಂಧಿಯಾದ ಕಲಶವನ್ನು ತನ್ನ ಮೂತ್ರದ್ವಾರದ ಬಳಿ ಇಟ್ಟ,

ಇಂದ್ರಿಯ ನಿಗ್ರಹದಲ್ಲಿಟ್ಟು ತೋರಿದ ಕಲಶದಿ ಮೂತ್ರ ಮಾಡುತ್ತಿರುವ ನೋಟ.

ಹಾಗೆ ತೋರಿಸುತ್ತಾ, ಉದಂಕನಿಗೆ- ‘ಶ್ರೀಕೃಷ್ಣನು ಈ ಅಮೃತವನ್ನು ನಿನಗಾಗಿ ಕಳುಹಿಸಿದ್ದಾನೆ ,ಇದನ್ನು ಕುಡಿ’ ಎಂದ; ಉದಂಕನಾದರೋ, ಅದನ್ನು ಮೂತ್ರಾ ಎಂದು ತಿಳಿದು, ಇಂದ್ರನನ್ನು ಬಯ್ಯುತ್ತಾ, ‘ಇಲ್ಲಿಂದ ಹೊರಟುಹೋಗು’  ಎಂದ.

 

ವಞ್ಚಯಿತ್ವೈವ ತಂ ಶಕ್ರೋ ಯಯೌ ಪ್ರೀತಃ ಸ್ವಮಾಲಯಮ್ ।

ಅಸಾಧಾರಣಮನ್ನಂ ಹಿ ದೇವಾನಾಮಮೃತಂ ಸದಾ ॥ ೩೦.೬೮ ॥

 

 

ಹೀಗೆ ಇಂದ್ರ ಉದಂಕನ ಮೋಸಗೊಳಿಸಿದ, ಸಂತೋಷದಿಂದ ತನ್ನ ಮನೆಗೆ ತೆರಳಿದ. ದೇವತೆಗಳ ಅನ್ನ, ಅಮೃತ ಅಸಮಾನ್ಯ. (ದೇವತೆಗಳು ಮಾತ್ರ ಅಮೃತಕ್ಕೆ ಅರ್ಹ, ಬೇರೆಯವರಿಗೆ ಅಮೃತ ಅನರ್ಹ. ಅದು ಅನಾದಿಕಾಲದ ನಿಯಮಾನುಸಾರ.)

 

ಅನ್ಯಪೀತಿಸ್ತತಸ್ತಸ್ಯ ದೇವಾನಾಂ ಪರಮಾಪ್ರಿಯಾ ।

ಆತ್ಮದತ್ತಪ್ರಸಾದಾಚ್ಚ ಸ್ವಾಪರಾಧಾತ್ ಪ್ರಚಾಲಿತೇ ॥ ೩೦.೬೯ ॥

 

ಉದಙ್ಕೇ ವಾಸುದೇವಸ್ತು ಯುಕ್ತಮಿತ್ಯೇವ ಮನ್ಯತೇ ।

ಸ್ವಪುರೀಂ ಪ್ರಾಪ್ಯ ಯದುಭಿಃ ಪೂಜಿತಃ ಶೂರಸೂನವೇ ॥ ೩೦.೭೦ ॥

 

ವೃತ್ತಾನ್ತಂ ಕಥಯಾಮಾಸ ಕೇಶವೋ ಯದುಸಂಸದಿ ।

ವಧಮನ್ತರಿತಂ ಸೂನೋಃ ಸಾತ್ವತೇಶೇನ ಸಾತ್ವತೀ ॥ ೩೦.೭೧ ॥

 

ಪ್ರಣಮ್ಯ ಕಥಯೇತ್ಯೂಚೇ ತತ ಆಹ ಜನಾರ್ದ್ದನಃ ।

ತತಃ ಸುದುಃಖಿತಾಃ ಶೂರಪುತ್ರಾದ್ಯಾ ಅಭಿಮನ್ಯವೇ ॥ ೩೦.೭೨ ॥

 

ಶ್ರಾದ್ಧದಾನಾನಿ ಬಹುಶಶ್ಚಕ್ರುಃ ಕೇಶವಸಂಯುತಾಃ ।

ನಿವಸತ್ಯತ್ರ ವಿಶ್ವೇಶೇ ಧರ್ಮ್ಮಪುತ್ರಃ ಕ್ರತೂತ್ತಮಮ್ ॥ ೩೦.೭೩ ॥

 

ಅಶ್ವಮೇಧಮನುಷ್ಠಾತುಂ ನಾವಿನ್ದದ್ ವಿತ್ತಮಞ್ಜಸಾ ।

ಹತಶೇಷಾತ್ ಕ್ಷತ್ರಸಙ್ಘಾತ್ ಕರಂ ನೈಚ್ಛದ್ ದಯಾಪರಃ ॥ ೩೦.೭೪ ॥

 

ಅಮೃತವನ್ನು ದೇವೇತರರು ಸೇವಿಸುವುದು, ದೇವತೆಗಳಿಗೆ ಅತ್ಯಂತ ಅಪ್ರಿಯವಾದುದು.

ಉದಂಕನಿಗೆ ಶ್ರೀಕೃಷ್ಣ ಅನುಗ್ರಹ ಮಾಡಿದ್ದರೂ ಕೂಡಾ,

ತನ್ನ ಅಜ್ಞಾನದ ಅಪರಾಧದಿಂದ ಅದನ್ನು ಕಳೆದುಕೊಂಡ.

ಅದರಿಂದಾಗಿ ಶ್ರೀಕೃಷ್ಣನು ಅದನ್ನು ಯುಕ್ತವೆಂದೇ ತಿಳಿದ.

 

ಇತ್ತ ಶ್ರೀಕೃಷ್ಣ ತನ್ನ ಪಟ್ಟಣಕ್ಕೆ ತೆರಳಿದ, ಯಾದವರಿಂದ ಸತ್ಕಾರಕ್ಕೊಳಗಾದ .

ವಸುದೇವನಿಗೆ ಯಾದವರೆಲ್ಲರೂ ಸೇರಿರುವಾಗ ,

ಶ್ರೀಕೃಷ್ಣನು ಎಲ್ಲಾ ವೃತ್ತಾಂತವನ್ನು ಹೇಳುವನಾಗ.

ಶ್ರೀಕೃಷ್ಣನಿಂದ ತನ್ನ ಮಗನ ಸಂಹಾರದ ಕಥೆಯು ಮಧ್ಯದಲ್ಲಿ ಹಾರಿಸಲ್ಪಟ್ಟಿದ್ದನ್ನು ನೋಡಿ,

ಅಭಿಮನ್ಯುವಿನ ಸಾವಿನ ಕುರಿತು ಕೇಳುತ್ತಾಳೆ

ಸುಭದ್ರೆ ಶ್ರೀಕೃಷ್ಣನಿಗೆ ನಮಸ್ಕಾರವನ್ನು ಮಾಡಿ .

ತದನಂತರ ಅದೆಲ್ಲವೂ ಹೇಳಲ್ಪಟ್ಟಿತು ಶ್ರೀಕೃಷ್ಣ ಪರಮಾತ್ಮನಿಂದ,

ಆಗ ಅತ್ಯಂತ ದುಃಖಿತವಾಯಿತು ವಸುದೇವ ಮೊದಲಾದ ವೃಂದ.

ನಂತರ ಕೇಶವನಿಂದ ಕೂಡಿಕೊಂಡ ಎಲ್ಲರೂ, ಅಭಿಮನ್ಯುವಿಗೆ ಶ್ರಾದ್ಧಾದಿಗಳ ಮಾಡಿದರು. 

ಹೀಗೆ ದ್ವಾರಕಾ ಪಟ್ಟಣದಲ್ಲಿ ಶ್ರೀಕೃಷ್ಣನು ವಾಸಮಾಡುತ್ತಿರಲು,

ಇತ್ತ ಧರ್ಮರಾಜ ಯಜ್ಞಗಳಲ್ಲಿಯೇ ಮಿಗಿಲಾದ ಅಶ್ವಮೇಧವ ಮಾಡಲು,

ತನ್ನಲ್ಲಿರುವ ದ್ರವ್ಯ ಅಪೂರ್ಣ ಎಂದುಕೊಂಡ,

ಯುದ್ಧದಲ್ಲಿ ಅಳಿದು-ಉಳಿದ ಕ್ಷತ್ರಿಯರಿಂದ ,

ಸ್ವಭಾವದಿಂದ ಅತ್ಯಂತ ದಯಾಮಯನಾದ,

ಅವನು ಕಂದಾಯ ಪಡೆಯಲು ಬಯಸದಾದ.

 

ನಚ ಮದ್ಧ್ಯಮಕಲ್ಪೇನ ಯಷ್ಟುಂ ತಸ್ಯ ಮನೋಗತಮ್ ।

ವಿಜ್ಞಾಯ ನಿತ್ಯವಿಜ್ಞಾತನಿಖಿಲೋ ಬಾದರಾಯಣಃ ॥ ೩೦.೭೫ ॥

 

ಆವಿರ್ಭೂತೋ ಹಿಮವತಃ ಶೃಙ್ಗಂ ಯತ್ರಾಭಿಸಙ್ಗತಮ್ ।

ಮೇರುಶೃಙ್ಗೇಣ ಯತ್ರೈವ ವಿಷ್ಣುಃ ಸ್ವಾತ್ಮಾನಮವ್ಯಯಮ್ ॥ ೩೦.೭೬ ॥

 

ಲೋಕಸ್ಯ ಸಙ್ಗ್ರಹಾಯೇಜೇ ಕರ್ಮ್ಮಬನ್ಧೋಜ್ಝಿತೋSಪಿ ಸನ್ ।

ಶಙ್ಕರಾದ್ಯಾಃ ಸುರಾ ಯತ್ರ ಮರುತ್ತಶ್ಚೇಜಿರೇ ಹರಿಮ್ ॥ ೩೦.೭೭ ॥

 

ದಾನವೋ ವೃಷಪರ್ವಾ ಚ ತತ್ರಾಸ್ತಿ ಧನಮಕ್ಷಯಮ್ ।

ತಚ್ಛಙ್ಕರಶರೀರಸ್ಥಂ ಜಾಮದಗ್ನ್ಯಂ ಹರಿಂ ಪರಮ್ ॥ ೩೦.೭೮ ॥

 

ಇಷ್ಟ್ವೈವಾನುಜ್ಞಯಾ ತಸ್ಯ ಸ್ವೀಕೃತ್ಯ ಯಜ ತೇನ ಚ ।

ಇತ್ಯಾಹ ವ್ಯಾಸವಾಕ್ಯಾನು ಭೀಮೋSಪ್ಯಾಹ ನೃಪೋತ್ತಮಮ್ ॥ ೩೦.೭೯ ॥

 

ಧನಸ್ಯ ದೇವತಾ ವಿಷ್ಣುರ್ಜ್ಜಾಮದಗ್ನ್ಯೋSಖಿಲೇಶ್ವರಃ ।

ಸ ಶಙ್ಕರಶರೀರಸ್ಥೋ ಯಜ್ಞೋಚ್ಛಿಷ್ಟಧನಾಧಿಪಃ ॥ ೩೦.೮೦ ॥

 

 

ಮಧ್ಯಮ ಕಲ್ಪದಲ್ಲಿ (ತನ್ನಲ್ಲಿರುವಷ್ಟು ವಿತ್ತದಲ್ಲಿ) ಯಾಗ ಮಾಡಲು ಯುಧಿಷ್ಠಿರನಿಗೆ ಇಷ್ಟವಿರಲಿಲ್ಲ.

ಆಗ ಅವನ ಮನದಲ್ಲಿದ್ದ ವಿಷಯ ತಿಳಿದ, ಎಲ್ಲಬಲ್ಲ ವ್ಯಾಸರು ಆವಿರ್ಭೂತರಾಗಿ ಹೇಳಿದ ಜಾಲ.

ಹಿಮಾಲಯ ಪರ್ವತಶ್ರೇಣಿಯಲ್ಲಿ ಒಂದು ಮೇರುಪರ್ವತ,

ಅಲ್ಲಿ ಲೋಕಶಿಕ್ಷಣಕ್ಕಾಗಿ,ತಾನಾಗಿದ್ದರೂ ಕರ್ಮಬಂಧರಹಿತ,

ನಾರಾಯಣನು ಯಾಗಗಳನ್ನು ಮಾಡಿದ್ದ  ತೋರುತ್ತಾ ಲೋಕಹಿತ .

ಎಲ್ಲಿ ರುದ್ರ, ಮರುತ್ತರಾಜ, ವೃಷಪರ್ವ ದಾನವ ಪರಮಾತ್ಮನನ್ನು ಯಜ್ಞದಿಂದ ಪೂಜಿಸಿದ ಆ ಜಾಗ,

ಎಣೆಯಿರದ, ಮಿಗಿಲಾದ ಸಂಪತ್ತಿನ ಭಂಡಾರವನ್ನೇ ಹೊಂದಿರುವಂತಹ ವಿಶೇಷವಾದ ಯೋಗ.

ಶಂಕರನಂತರ್ಯಾಮಿಯಾದ ಪರಶುರಾಮನನ್ನು ಪೂಜಿಸಿ,

ಅವನ ಅನುಗ್ರಹ ಮತ್ತು ಅನುಜ್ಞೆಯಿಂದ ಆ ದ್ರವ್ಯವನ್ನು ಸ್ವೀಕರಿಸಿ,

ಅದರಿಂದ ಯಾಗ ಮಾಡು’ ಎಂದು ವ್ಯಾಸರು ಹೇಳುತ್ತಾರೆ.

ವೇದವ್ಯಾಸರ ಮಾತಿನ ನಂತರ ಭೀಮಸೇನನ ಮಾತಿನ ಧಾರೆ.

ಧರ್ಮರಾಜನನ್ನು ಕುರಿತು ಭೀಮಸೇನನು ಮಾತನಾಡಿದನು-

‘ಎಲ್ಲಕ್ಕೂ ಒಡೆಯನಾದ ಪರಶುರಾಮರೂಪಿ ನಾರಾಯಣನು,

ಧನಕ್ಕೆ ಒಡೆಯನಾದವನು ಶಂಕರನ ಶರೀರದಲ್ಲಿರುವವನು,

ಅವನೇ ಯಜ್ಞೋಚ್ಛಿಷ್ಟಕ್ಕೆ ಒಡೆಯನೆನಿಸಿದ್ದಾನೆ’ ಎಂದನು.

 

ತೇನೈವ ವಿಷ್ಣುನಾ ದತ್ತಮರ್ಜ್ಜುನಾಯಾಸ್ತ್ರಮುತ್ತಮಮ್ ।

ಕಾರ್ಯ್ಯಾಣ್ಯನ್ಯಾನಿ ಚಾಸ್ಮಾಕಂ ಕೃತಾನ್ಯೇತೇನ ವಿಷ್ಣುನಾ ॥ ೩೦.೮೧ ॥

 

ಮುಂದುವರಿದು ಹೇಳುತ್ತಾನೆ ಭೀಮಸೇನ ,

ರುದ್ರಾಂತರ್ಯಾಮಿಯಾದ ಅದೇ ಪರಶುರಾಮನಿಂದ ಅರ್ಜುನ,

ಪಡೆದ ಉತ್ತಮವಾದ ಪಾಶುಪತಾಸ್ತ್ರ ಎಂಬ ಧನುಸ್ಸನ್ನ .

ನಮ್ಮ ಇತರ ಎಲ್ಲಾ ಕಾರ್ಯಗಳ ಮಾಡುವುದೂ ಇದೇ ನಾರಾಯಣ.

 

ಸ ಬ್ರಹ್ಮರುದ್ರಶಕ್ರಾದಿಪದದಾತಾSಖಿಲಪ್ರದಃ ।

ಸ್ವತನ್ತ್ರಃ ಪರತನ್ತ್ರಾಂಸ್ತಾನಾವರ್ತ್ತಯತಿ ಚೇಚ್ಛಯಾ ॥ ೩೦.೮೨ ॥

 

ಬ್ರಹ್ಮ, ರುದ್ರ, ಇಂದ್ರ, ಮೊದಲಾದವರಿಗೆ ಪದವಿಯನ್ನು ಕೊಟ್ಟವನು ,

ಹಾಗೂ ಇತರ ಎಲ್ಲವನ್ನೂ ಕೊಡುವ ಸ್ವತಂತ್ರನಾದ ಆ ಪರಮಾತ್ಮನು ,

ತನ್ನ ಇಚ್ಛೆಗೆ ಅನುಗುಣವಾಗಿ ಜೀವರನ್ನು ಬೇರೆಬೇರೆ ಕಡೆ ತೊಡಗಿಸುವವನು.

 

ಪ್ರಿಯೋSಸ್ಮಾಕಂ ಪ್ರಿಯಾಸ್ತಸ್ಯ ಸರ್ವದೈವ ವಯಂ ನೃಪ ।

ಅತಸ್ತದಭ್ಯನುಜ್ಞಾತಧನೇನೈವ ಯಜಾಮಹೇ ॥ ೩೦.೮೩ ॥

 

ನಮಗೆ ಪರಮಾತ್ಮನು ಪ್ರಿಯನಾಗಿದ್ದಾನೆ. ಅವನಿಗೆ ನಾವೂ ಸದಾ ಪ್ರೀತಿಪಾತ್ರಾನೇ.

ಆ ಕಾರಣದಿಂದ ಅವನಿತ್ತ ಧನದಿಂದ,      ಅವನನ್ನೆ ಪೂಜಿಸೋಣ ಯಾಗದಿಂದ.

 

ಸೋSಯಂ ಪಿತಾಮಹೋSಸ್ಮಾಕಂ ವ್ಯಾಸಸ್ತನ್ನಃ ಪ್ರದಾಸ್ಯತಿ ।

ಇತ್ಯುಕ್ತ್ವಾ ತಂ ಪುರಸ್ಕೃತ್ಯ ಕೃಷ್ಣದ್ವೈಪಾಯನಂ ಯಯುಃ ॥ ೩೦.೮೪ ॥

 

ಆ ಪರಶುರಾಮನೇ ನಮ್ಮ ಪಿತಾಮಹನಾದ ವೇದವ್ಯಾಸ.

ಅವರೇ ನಮಗೆ ದ್ರವ್ಯವನ್ನು  ಕೊಡುವರಾದ ದಿವ್ಯಕೋಶ.

ಹೀಗೆ ವ್ಯಾಸರ ಹಿರಿತನದಲ್ಲಿ ಪಾಂಡವರು, ಹಿಮವತ್ ಪರ್ವತದ ಕಡೆಗೆ ಹೊರಟರು.

 

ಧನಂ ಕೃಷ್ಣಃ ಸಮಾದಾಯ ಸಮನ್ತಾಚ್ಛತಯೋಜನಮ್ ।

ದದೌ ತೇಷಾಂ ತೇSಪಿ ಚೋಹುರ್ಹಸ್ತ್ಯುಷ್ಟ್ರಾಶ್ವನರಾದಿಭಿಃ ॥ ೩೦.೮೫ ॥

 

ವ್ಯಾಸರು ಶತಯೋಜನ ಪರಿಮಿತವಾದ ಅಪಾರ ಪ್ರಮಾಣದ ಧನರಾಶಿಯನ್ನು ಪಾಂಡವರಿಗಿತ್ತರು.

ಅವರಾದರೋ, ಆನೆ, ಒಂಟೆ, ಅಶ್ವ, ಮನುಷ್ಯರು, ಮೊದಲಾದವರಿಂದ ಅದನ್ನು ಹೊರಿಸಿದರು.

 

ಯುಧಿಷ್ಠಿರಮೃತೇ ಸರ್ವೇ ಭೀಮಸೇನಪುರೋಗಮಾಃ ।

ಯಜ್ಞಾರ್ತ್ಥಮೂಹಿರೇ ಭೂರಿ ಸ್ವರ್ಣ್ಣಮುದ್ಯದ್ರವಿಪ್ರಭಮ್ ॥ ೩೦.೮೬ ॥

 

ಯುಧಿಷ್ಠಿರನನ್ನು ಹೊರತು ಭೀಮಸೇನನೇ ಮೊದಲಾದ ಎಲ್ಲರೂ ,

ಯಜ್ಞಕ್ಕಾಗಿ ಉದಯಿಸುವ ಕಾಂತಿಯ ಬಂಗಾರವನ್ನು ತಾವೇ ಹೊತ್ತರು.

 

ತದೈವ ವಾಸುದೇವೋSಪಿ ಸಭಾರ್ಯ್ಯಃ ಸಹ ಭದ್ರಯಾ ।

ಆಗಚ್ಛನ್ ಹಸ್ತಿನಪುರಂ ಪಥ್ಯುದಙ್ಕೇನ ಪೂಜಿತಃ ॥ ೩೦.೮೭ ॥

 

ಆಗಲೇ ಸುಭದ್ರೆ ಹಾಗೂ ತನ್ನ ಪತ್ನಿಯರಿಂದ,

ಕೂಡಿಕೊಂಡ ಕೃಷ್ಣ ಹಸ್ತಿನಪುರಕ್ಕೆ ಬರುತ್ತಿದ್ದ.

ದಾರಿಯಲ್ಲಿ ಉದಂಕನಿಂದ ಪೂಜಿತನಾದ.

 

ತತ್ಕಾಮವರ್ಷಿಣೋ ಮೇಘಾಂಸ್ತಸ್ಯ ದತ್ವೋದಕಾರ್ತ್ಥಿನಃ ।

ಸಫಲಂ ಸ್ವವರಂ ಕೃತ್ವಾ ಜಗಾಮ ಗಜಸಾಹ್ವಯಮ್ ॥ ೩೦.೮೮ ॥

 

ನೀರು ಬೇಕೆಂದು ಬಯಸುತ್ತಿರುವ ಉದಂಕನಿಗೆ ಬೇಕೆಂದಾಗ ಮಳೆಸುರಿಸುವ ಮೋಡಗಳನ್ನು ಕೊಟ್ಟ,

ತಾನು ಹಿಂದೆ ಅವನಿಗೆ ಕೊಟ್ಟ ವರವನ್ನು ಸಫಲವನ್ನಾಗಿ ಮಾಡಿ, ಶ್ರೀಕೃಷ್ಣ ತೆರಳಿದ ಹಸ್ತಿನಪುರದತ್ತ.

 

ಆಸನ್ನೇಷ್ವೇವ ಪಾರ್ತ್ಥೇಷು ವ್ಯಾಸೇ ಚ ಪುರುಷೋತ್ತಮೇ ।

ಪ್ರವಿವೇಶ ಪುರಂ ಕೃಷ್ಣಸ್ತದಾSಸೂತೋತ್ತರಾ ಮೃತಮ್ ॥ ೩೦.೮೯ ॥

 

ಪಾಂಡವರು ಹಾಗೂ ವೇದವ್ಯಾಸರು ಹಸ್ತಿನಾವತಿಯನ್ನು ಸಮೀಪಿಸುತ್ತಿರುವ ಸಮಯ ,

ಶ್ರೀಕೃಷ್ಣನು  ನಗರದ ಒಳಗೆ ಬಂದಾಗಲೇ  ಅಭಿಮನ್ಯುವಿನ ಪತ್ನಿ ಉತ್ತರೆಗೆ ಸತ್ತ ಮಗನ ಪ್ರಸವ.

 

ದ್ರೌಣ್ಯಸ್ತ್ರಸೂದಿತಂ ಬಾಲಂ ದೃಷ್ಟ್ವಾ ಕುನ್ತ್ಯಾದಿಕಾಃ ಸ್ತ್ರಿಯಃ ।

ಶರಣ್ಯಂ ಶರಣಂ ಜಗ್ಮುರ್ವಾಸುದೇವಂ ಜಗತ್ಪತಿಮ್ ॥ ೩೦.೯೦ ॥

 

ಅಶ್ವತ್ಥಾಮ ಕಾಯ್ದಿರಿಸಿದ ಬ್ರಹ್ಮಾಸ್ತ್ರದಿಂದ ಸತ್ತ ಬಾಲಕನನ್ನು ಕಂಡು ಕುಂತಿಯೇ ಮೊದಲಾದ ಹೆಣ್ಣು ಮಕ್ಕಳೆಲ್ಲರೂ,

ಮೊರೆಹೋಗಲು ಯೋಗ್ಯನಾದ, ಜಗತ್ತಿಗೇ ಒಡೆಯನಾಗಿರುವ, ಶ್ರೀಕೃಷ್ಣ ಪರಮಾತ್ಮನನ್ನು ರಕ್ಷಣೆಗಾಗಿ ಬೇಡಿದರು.

 

ಪ್ರತ್ಯಕ್ಷಮಾತ್ಮನಾ ಗರ್ಭೇ ರಕ್ಷಿತಂ ಪ್ರಸವೇ ಹತಮ್ ।

ಪುನರುಜ್ಜೀವಯಾಮಾಸ ಕೇಶವಃ ಪಾರ್ತ್ಥತನ್ತವೇ ॥ ೩೦.೯೧ ॥

 

ತನ್ನಿಂದ ಗರ್ಭದಲ್ಲಿ ರಕ್ಷಿತನಾದ, ಆದರೆ ಹೆತ್ತಕೂಡಲೇ ಸತ್ತು ಬಿದ್ದ,

ಈ ಮಗುವನ್ನು ಎಲ್ಲರೂ ನೋಡುತ್ತಿರುವಾಗ,

ಪಾಂಡವ ವಂಶವ ಮುಂದುವರಿಸಲೋಸುಗ,

ಶ್ರೀಕೃಷ್ಣ ಆ ಮಗುವನ್ನು ಬದುಕಿಸುವನಾಗ.

 

ತದೈವ ವಿವಿಶುಃ ಪಾರ್ತ್ಥಾಃ ಸಕೃಷ್ಣಾಃ ಸಧನೋಚ್ಚಯಾಃ ।

ಸರ್ವೇ ಮುಮುದಿರೇ ದೃಷ್ಟ್ವಾ ಪೌತ್ರಂ ಕೇಶವರಕ್ಷಿತಮ್ ॥ ೩೦.೯೨ ॥

 

ಆಗಲೇ ವ್ಯಾಸರೊಂದೊಡಗೂಡಿದ ಪಾಂಡವರು ಧನರಾಶಿಯೊಂದಿಗೆ ಪಟ್ಟಣವನ್ನು ಪ್ರವೇಶಮಾಡಿದರು,

ಎಲ್ಲರೂ ಶ್ರೀಕೃಷ್ಣನಿಂದ ರಕ್ಷಿತವಾದ ಮಗುವನ್ನು (ಪರೀಕ್ಷಿತನನ್ನು) ಕಂಡು ಸಂತೋಷಭರಿತರಾದರು.

 

ದದೌ ದಾನಾನಿ ಬಹುಶೋ ಧರ್ಮ್ಮಪುತ್ರೋ ಯುಧಿಷ್ಠಿರಃ ।

ಪೌತ್ರಜನ್ಮನಿ ಹೃಷ್ಟಾತ್ಮಾ ವಾಸುದೇವಂ ನನಾಮ ಚ ॥ ೩೦.೯೩ ॥

 

ಧರ್ಮಪುತ್ರನಾದ ಯುಧಿಷ್ಠಿರನು ಮೊಮ್ಮಗ ಹುಟ್ಟಿರುವುದಕ್ಕೆ ಬಹಳ ಸಂತಸಗೊಂಡ,

ಅನೇಕಾನೇಕ ದಾನಗಳನ್ನು ಕೊಟ್ಟನು ಮತ್ತು ಶ್ರೀಕೃಷ್ಣನಿಗೆ ನಮಸ್ಕಾರವನ್ನು ಮಾಡಿದ .

 

ಕುನ್ತೀಕೃಷ್ಣಾಸುಭದ್ರಾಭಿರ್ವೈರಾಟ್ಯಾSನ್ಯಾಭಿರೇವ ಚ ।

ಪಾಣ್ಡವೈಃ ಪುರುಷೈಶ್ಚಾನ್ಯೈಃ ಸಂಸ್ತುತಃ ಪ್ರಣತೋ ಹರಿಃ ॥ ೩೦.೯೪ ॥

 

ಕುಂತಿ, ದ್ರೌಪದಿ, ಸುಭದ್ರೆ, ಉತ್ತರೆ ಮತ್ತು ಇತರ ಹೆಣ್ಣುಮಕ್ಕಳಿಂದ,

ಪಾಂಡವರಿಂದ; ಉಳಿದ ಪುರುಷರಿಂದ ಪರಮಾತ್ಮ ಚೆನ್ನಾಗಿ ಸ್ತೋತ್ರಮಾಡಲ್ಪಟ್ಟ ನಮಿಸಲ್ಪಟ್ಟ ಕೂಡಾ.

 

ತತಃ ಕೃಷ್ಣಾಭ್ಯನುಜ್ಞಾತಾಃ ಪಾರಾಶರ್ಯ್ಯಸದಸ್ಯಕಾಃ ।

ಆರೇಭಿರೇSಶ್ವಮೇಧಂ ತೇ ಮುನಿಭಿರ್ಬ್ರಹ್ಮವಾದಿಭಿಃ ॥ ೩೦.೯೫ ॥

 

ತದನಂತರ ಶ್ರೀಕೃಷ್ಣನ ಅನುಜ್ಞೆಯ ಹೊಂದಿ, ವ್ಯಾಸರನ್ನೇ ಮುಖ್ಯ ಸದಸ್ಯರನ್ನಾಗಿ ಮಾಡಿ, ಪಾಂಡವರು ಬ್ರಹ್ಮವಾದಿ ಮುನಿಗಳ ಕೂಡಿ, ಧನ್ಯರಾದರವರು ಅಶ್ವಮೇಧವನ್ನು ಮಾಡಿ.  

 

ಸರ್ವಯಜ್ಞಾತ್ಮಕಂ ತೇಷಾಮಶ್ವಮೇಧಂ ಜಗತ್ಪತಿಃ ।

ಕಾರಯಾಮಾಸ ಭಗವಾನ್ ಕೃಷ್ಣದ್ವೈಪಾಯನಃ ಸ್ವಯಮ್ ॥ ೩೦.೯೬ ॥

 

ಜಗತ್ತಿಗೇ ಒಡೆಯರಾದ, ಷಡ್ಗುಣೈಶ್ವರ್ಯ ಸಂಪನ್ನರಾದ ವೇದವ್ಯಾಸರು,

ತಾವೇ ಮುಂದೆ ನಿಂತು ಯಜ್ಞದ ಎಲ್ಲಾ ಜವಾಬ್ದಾರಿಯನ್ನು ಹೊತ್ತುಕೊಂಡರು.

ಅಶ್ವಮೇಧವನ್ನು ಮಾಡಿಸುವವರಾದರು.

 

ಸಾಧನಾನಿ ತು ಸರ್ವಾಣಿ ಶಾಲಾಂ ಚೈವ ಹಿರಣ್ಮಯೀಮ್ ।

ಪವಮಾನಸುತಶ್ಚಕ್ರೇ ಕೃಷ್ಣದ್ವೈಪಾಯನೇರಿತಃ ॥ ೩೦.೯೭ ॥

 

ವೇದವ್ಯಾಸರಿಂದ ಪ್ರೇರಿತನಾದ, ಭೀಮಸೇನನು ಯಾಗಕ್ಕೆ ಬೇಕಾದ,

ಸಮಸ್ತಸಾಧನಗಳನ್ನು ಹೊಂದಿಸಿದ, ಹಿರಣ್ಮಯ ಯಾಗಶಾಲೆಯ ಮಾಡಿದ.

 

ಅಥಾನುಮನ್ತ್ರಿತೋತ್ಸೃಷ್ಟಂ ಪುರೋಹಿತಪುರಸ್ಕೃತಮ್ ।

ತುರಗಂ ಕೃಷ್ಣಸಾರಙ್ಗಮನುವವ್ರಾಜ ವಾಸವಿಃ ॥ ೩೦.೯೮ ॥

 

ಯಜ್ಞದೀಕ್ಷೆಯನ್ನು ತೆಗೆದುಕೊಂಡ ನಂತರ ಅರ್ಜುನನು,

ಅಭಿಮಂತ್ರಿಸಿ ಬಿಟ್ಟ, ಕಪ್ಪು ಮತ್ತು ಬೇರೆ ಬಣ್ಣದ ಯಜ್ಞತುರಗವನ್ನು,

ಪುರೋಹಿತರೊಂದಿಗೆ ಕೂಡಿಕೊಂಡು, ಅನುಸರಿಸಿ ಹೊರಟನು.

 

ಸ ಜಿತ್ವಾ ರುನ್ಧತಃ ಸರ್ವಾನ್ ನೃಪತೀಞ್ಛಸ್ತ್ರತೇಜಸಾ ।

ಚಾರಯಾಮಾಸ ಸರ್ವೇಷು ರಾಷ್ಟ್ರೇಷ್ವವಿಜಿತೋSರಿಭಿಃ ॥ ೩೦.೯೯ ॥

 

ಅವನು ಕುದುರೆಯನ್ನು ಕಟ್ಟಿಹಾಕುವ ಎಲ್ಲಾ ರಾಜರನ್ನೂ ,

ತನ್ನ ಶಸ್ತ್ರ ತೇಜಸ್ಸಿನಿಂದ ಎದುರಿಸಿ ಗೆಲ್ಲುತ್ತಾ ಸಾಗುವನು ,

ಎಲ್ಲಾ ರಾಜ್ಯಗಳಲ್ಲಿ ಕುದುರೆಯನ್ನು ಸಂಚಾರ ಮಾಡಿಸಿದನು.

 

ಯುಧಿಷ್ಠಿರಾಜ್ಞಯಾ ತೇನ ನ ಕಶ್ಚಿನ್ನಿಹತಸ್ತದಾ ।

ಆಹೂತಾಶ್ಚ ನೃಪಾಸ್ತೇನ ಯಜ್ಞಾರ್ತ್ಥಂ ಪ್ರೀಯತಾSಖಿಲಾಃ ॥ ೩೦.೧೦೦ ॥

 

ಅರ್ಜುನನಿಗೆ ಆಜ್ಞೆ ಮಾಡಿದ್ದ ಯುಧಿಷ್ಠಿರ, ಮಾಡಲಿಲ್ಲ ಯಾವುದೇ ರಾಜರ ಸಂಹಾರ.

ಪ್ರತಿಯಾಗಿ ಅವರೆಲ್ಲರನ್ನೂ  ಅರ್ಜುನ , ಪ್ರೀತಿಯಿಂದ ಮಾಡಿದ ಯಜ್ಞಕ್ಕೆ ಆಹ್ವಾನ.

No comments:

Post a Comment

ಗೋ-ಕುಲ Go-Kula