ಯಾಂಯಾಂ ಪರೇಶ ಉರುಧೈವ ಕರೋತಿ ಲೀಲಾಂ ತಾನ್ತಾಂ ಕರೋತ್ಯನು ತಥೈವ ರಮಾsಪಿ ದೇವೀ ।
ನೈತಾವತಾsಸ್ಯ ಪರಮಸ್ಯ ತಥಾ ರಮಾಯಾ ದೋಷೋsಣುರಪ್ಯನುವಿಚಿನ್ತ್ಯ
ಉರುಪ್ರಭೂ ಯತ್ ॥೫.೩೫॥
ನಾರಾಯಣನು
ಹೇಗ್ಹೇಗೆ ಆಡುತ್ತಾನೋ ಬಗೆ ಬಗೆಯ ಆಟ,
ಲಕ್ಷ್ಮಿಯೂ
ಅನುಸರಿಸುತ್ತಾಳೆ ಪತಿಯ ವಿಡಂಬನಾ ನೋಟ.
ಜಗದ್ ಮಾತಾ
ಪಿತರಲ್ಲಿ ಎಣಿಸಲೇಬಾರದು ದೋಷ,
ಲೋಕ ಕಲ್ಯಾಣಕ್ಕಾಗಿ
ತಂದೆ ತಾಯಿಯರ ವಿವಿಧ ವೇಷ.
ಕ್ವಾಜ್ಞಾನಮಾಪದಪಿ
ಮನ್ದಕಟಾಕ್ಷಮಾತ್ರಸರ್ಗ್ಗಸ್ಥಿತಿಪ್ರಳಯಸಂಸೃತಿಮೋಕ್ಷಹೇತೋಃ ।
ದೇವ್ಯಾ ಹರೇಃ ಕಿಮು ವಿಡಮ್ಬನಮಾತ್ರಮೇತದ್ ವಿಕ್ರೀಡತೋಃ
ಸುರನರಾದಿವದೇವ ತಸ್ಮಾತ್॥೫.೩೬॥
ಕೇವಲ ಕುಡಿನೋಟ
ಮಾತ್ರದಿಂದ ಸೃಷ್ಟಿ ಸ್ಥಿತಿ ಲಯ ಮೊದಲಾದ ಅಷ್ಟ ಕಾರ್ಯ ,
ನಿಭಾಯಿಸುವ ತಾಯಿ
ಲಕ್ಷ್ಮೀದೇವಿಗೆಲ್ಲಿದೆ ಅಜ್ಞಾನ ಆಪತ್ತುಗಳ ಸ್ಪರ್ಶ ವಿಕಾರ .
ಶ್ರೀದೇವಿಗೇ
ಅದಿಲ್ಲದಿರುವಾಗ ಇನ್ನು ನಾರಾಯಣಗೆಲ್ಲಿಯ ಲೇಪ ,
ಅವತಾರದಲ್ಲಿ
ದುರ್ಜನಮೋಹನಕ್ಕೆ ಅವರಾಡುವ ನಾಟಕದ ರೂಪ .
ದೇವ್ಯಾಃ ಸಮೀಪಮಥ ರಾವಣ ಆಸಸಾದ್ ಸಾsದೃಶ್ಯತಾಮಗಮದಪ್ಯವಿಷಹ್ಯಶಕ್ತಿಃ
।
ಸೃಷ್ಟ್ವಾssತ್ಮನಃ ಪ್ರತಿಕೃತಿಂ ಪ್ರಯಯೌ ಚ ಶೀಘ್ರಂ ಕೈಲಾಸಮರ್ಚ್ಚಿತಪದಾ ನ್ಯವಸಚ್ಛಿವಾಭ್ಯಾಮ್॥೫.೩೭॥
ಆನಂತರ ರಾವಣ ಸೀತೆಯ
ಬಳಿಗೆ ಧಾವಿಸುವ ದೃಶ್ಯ,
ಸೀತಾಕೃತಿಯ
ನಿರ್ಮಿಸಿ ಸೀತೆಯಾದಳು ಅಲ್ಲಿಂದ ಅದೃಶ್ಯ.
ರಾವಣನ ಹೊಸಕಲು
ಲಕ್ಷ್ಮಿಗಿರಲಿಲ್ಲವೆಂದಲ್ಲ ಶಕ್ತಿ,
ಅವತಾರದಲ್ಲಿ
ಲೋಕವ್ಯವಹಾರ ತೋರೋ ಯುಕ್ತಿ.
ಅಲ್ಲಿಂದ ಸೀತಾಮಾತೆ
ಸೇರಿಕೊಂಡಳು ಕೈಲಾಸ,
ಶಿವ ಉಮೆಯರ ಸೇವೆ
ಸ್ವೀಕರಿಸುತ್ತಲ್ಲವಳ ವಾಸ.
ತಸ್ಯಾಸ್ತು ತಾಂ ಪ್ರತಿಕೃತಿಂ ಪ್ರವಿವೇಶ ಶಕ್ರೋ ದೇವ್ಯಾಶ್ಚ
ಸನ್ನಿಧಿಯುತಾಂ ವ್ಯವಹಾರಸಿದ್ಧ್ಯೈ ।
ಆದಾಯ ತಾಮಥ ಯಯೌ ರಜನೀಚರೇನ್ದ್ರೋ ಹತ್ವಾ ಜಟಾಯುಷಮುರುಶ್ರಮತೋ
ನಿರುದ್ಧಃ॥೫.೩೮॥
ಸೀತಾಕೃತಿಯಲ್ಲಿ
ವ್ಯವಹಾರಸಿದ್ಧಿಗಾಗಿ ಇಂದ್ರನ ಪ್ರವೇಶ,
ದೇವೇಂದ್ರ
ಶರೀರದಲ್ಲಿದ್ದುದರಿಂದ ಸೀತೆಯದೂ ಇತ್ತು ಆವೇಶ.
ಅಂಥಾ
ಸೀತಾಕೃತಿಯೊಂದಿಗೆ ರಾವಣನ ಲಂಕಾ ಪಯಣ,
ಮಾರ್ಗದಲ್ಲಿ ತಡೆದ
ಜಟಾಯುವಿಗೆ ರಾವಣ ಕೊಟ್ಟ ಮರಣ.
No comments:
Post a Comment
ಗೋ-ಕುಲ Go-Kula