Monday, 2 April 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 5: 20 -21


ರಾಮೋsಪಿ ತತ್ರ ದದೃಶೇ ಧನದಸ್ಯ ಶಾಪಾದ್ ಗನ್ಧರ್ವಮುರ್ವಶಿರತೇರಥ ಯಾತುಧಾನೀಮ್ ।
ಪ್ರಾಪ್ತಂ ದಶಾಂ ಸಪದಿ ತುಮ್ಬುರುನಾಮಧೇಯಂ ನಾಮ್ನಾ ವಿರಾಧಮಪಿ ಶರ್ವವರಾದವಧ್ಯಮ್ ॥೫.೨೦॥

ಒಮ್ಮೆ ತುಂಬುರು ಗಂಧರ್ವನಿಂದ ಊರ್ವಶಿಯ ಬಲಾತ್ಕಾರ,
ಊರ್ವಶಿಯ ದೂರಿನಂತೆ ರಾಕ್ಷಸನಾಗೆಂದು ಶಪಿಸಿದ ಕುಬೇರ.
ವಿರಾಧನೆಂಬ ಹೆಸರಿಂದಾ ರಾಕ್ಷಸ ಶಿವವರ ಬಲದಿ ಅವಧ್ಯನಾಗಿದ್ದ,
ದಂಡಕಾರಣ್ಯದಿ ಸಂಚರಿಸುತ್ತಿದ್ದ ರಾಮಚಂದ್ರ ಅವನ ನೋಡಿದ.

ಭಙ್ಕ್ತ್ವಾsಸ್ಯ ಬಾಹುಯುಗಳಂ ಬಿಲಗಂ ಚಕಾರ  ಸಮ್ಮಾನಯನ್ ವಚನಮಂಬುಜಜನ್ಮನೋsಸೌ ।
ಪ್ರಾದಾಚ್ಚ ತಸ್ಯ ಸುಗತಿಂ ನಿಜಗಾಯಕಸ್ಯ ಭಕ್ಷಾರ್ಥಮಂಸಕಮಿತೋsಪಿ ಸಹಾನುಜೇನ ॥೫.೨೧॥

ವಿರಾಧನ ತೋಳಿಗೆ ಸಿಕ್ಕವರು ಅವನ ವಶವೆಂದು ಬ್ರಹ್ಮನ ವರ,
ಮಗನ ಮಾತ ಮನ್ನಿಸುತ್ತ ಅವನೆರಡೂ ತೋಳ ಕತ್ತರಿಸಿದ ರಾಮಚಂದ್ರ.
ಸಶರೀರವಾಗಿ ಬಿಲದಲ್ಲಿ ವಿರಾಧನ  ಹೂತು ಹಾಕಿ ಸುಟ್ಟ,
ತಿನ್ನಲೆಂದು ಹೊತ್ತೊಯ್ದಿದ್ದರೂ ಗಾಯಕನೆಂದು ಸದ್ಗತಿ ಕೊಟ್ಟ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula