Monday, 2 April 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 5: 17 - 19


ರಾಮೋsಥ ದಣ್ಡಕವನಂ ಮುನಿವರ್ಯನೀತೋ ಲೋಕಾನನೇಕಶ ಉದಾರಬಲೈರ್ನಿರಸ್ತಾನ್ ।
ಶ್ರುತ್ವಾಖರಪ್ರಭೃತಿಭಿರ್ವರತೋ ಹರಸ್ಯ ಸರ್ವೈರವಧ್ಯತನುಭಿಃ ಪ್ರಯಯೌ ಸಭಾರ್ಯಃ ॥೫.೧೭॥

ಸದಾಶಿವನ ವರಬಲದಿಂದ ಅವಧ್ಯರಾದ ಖರ ದೂಷಣ,
ಮುಂತಾದನೇಕ ರಕ್ಕಸರಾಗಿದ್ದರು ಸುಜನರ ಬಾಧೆಗೆ ಕಾರಣ.
ಋಷಿ ಮುನಿಗಳಿಂದ ರಾಮಚಂದ್ರಗೆ ಕರೆ,
ದುಷ್ಟರ ಶಿಕ್ಷಿಸಿ ಶಿಷ್ಟರ ಪೊರೆಯಲು ಮೊರೆ.
ಈ ಸುದ್ದಿಯ ಕೇಳಿದ ಶ್ರೀರಾಮ ಮರು ಕ್ಷಣ,
ಸೀತಾಸಮೇತ ದಾರಿಹಿಡಿದ ದಂಡಕಾರಣ್ಯ.

ಆಸೀಚ್ಚ ತತ್ರ ಶರಭಙ್ಗ ಇತಿ ಸ್ಮಜೀರ್ಣೋ ಲೋಕಂ ಹರೇರ್ಜಿಗಮಿಷುರ್ಮುನಿರುಗ್ರತೇಜಾಃ ।
ತೇನಾsದರೋಪಹೃತಸಾರ್ಘ್ಯಸಪರ್ಯಯಾ ಸಃ ಪ್ರೀತೋ ದದೌ ನಿಜಪದಂ ಪರಮಂರಮೇಶಃ॥೫.೧೮॥

ಮಾರ್ಗದಲ್ಲಿ ತೇಜಸ್ವಿ ತಪಸ್ವಿ ವೃದ್ಧ ಶರಭಂಗನ ನೋಡಿದ,
ಕಾದು ಕೂತಿದ್ದ ಅವನಿಂದ ಪೂಜಾ ಅರ್ಘ್ಯ ಆತಿಥ್ಯ ಸ್ವೀಕರಿಸಿದ.
ಅನುಗ್ರಹಿಸಿ ವೃದ್ಧಭಕ್ತನನ್ನು ತನ್ನ ಉತ್ತಮ ಲೋಕಕ್ಕೆ ಕಳಿಸಿದ.

ಧರ್ಮೋ ಯತೋsಸ್ಯ ವನಗಸ್ಯ ನಿತಾನ್ತಶಕ್ತಿಹ್ರಾಸೇ ಸ್ವಧರ್ಮಕರಣಸ್ಯ ಹುತಾಶನಾದೌ ।
ದೇಹಾತ್ಯಯಃ ಸ ತತ ಏವ ತನುಂ ನಿಜಾಗ್ನೌ ಸನ್ತ್ಯಜ್ಯ ರಾಮಪುರತಃ ಪ್ರಯಯೌ ಪರೇಶಮ್ ॥೫.೧೯॥

ವೇದೋಕ್ತ ಕರ್ಮಾನುಷ್ಠಾನಕ್ಕೆ ಬಂದಿತ್ತು ಭಂಗ,
ನಿಶ್ಯಕ್ತನಾದಾಗ ಅಗ್ನಿಪ್ರವೇಶ ಮಾಡಿದ ಶರಭಂಗ.
ರಾಮನುಪಸ್ಥಿತಿಯಲ್ಲೇ ಈ ಕೆಲಸ ಮಾಡಿದ ವಯೋವೃದ್ಧ,
ತನ್ನ ಪಾದಕ್ಕೊಸಿಕೊಂಡ ರಾಮ ತೋರಿದ ಭಕ್ತ ರಕ್ಷಣೆಗೆಂದೂ ಬದ್ಧ.

No comments:

Post a Comment

ಗೋ-ಕುಲ Go-Kula