Saturday, 7 April 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 5: 39 -43

ಮಾರ್ಗ್ಗೆ ವ್ರಜನ್ತಮಭಿಯಾಯ ತತೋ ಹನೂಮಾನ್ ಸಂವಾರಿತೋ ರವಿಸುತೇನ ಚ ಜಾನಮಾನಃ ।
ದೈವಂ ತು ಕಾರ್ಯ್ಯಮಥ ಕೀರ್ತ್ತಿಮಭೀಪ್ಸಮಾನೋ ರಾಮಸ್ಯ ನೈನಮಹನದ್ ವಚನಾದ್ಧರೇಶ್ಚ ॥೫.೩೯॥
ಲಂಕಾಭಿಮುಖವಾಗಿ ಸೀತೆಯೊಂದಿಗೆ ರಾವಣನ ನಡೆ,
ಮಾರ್ಗದಿ ಮುನ್ನುಗ್ಗಿದ ಹನುಮಗೆ ಸುಗ್ರೀವನಿಂದ ತಡೆ.
ಸಂಕಲ್ಪಿಸಿಯಾಗಿದೆ ಆಗಲೇ ದೇವತಾಕಾರ್ಯ,
ಅದ ಗೌರವಿಸಿ ನಿಲ್ಲುವ ರಾಮಬಂಟನ ಚರ್ಯ.
ರಾಮಗೇ ಸಲ್ಲಬೇಕಿದೆ ರಾವಣ ಸಂಹಾರದ ಕೀರ್ತಿ,
ಮಿತಿ ಅರಿತು ತೋರಿದ ವಾಯುಪುತ್ರನ ಲೋಕನೀತಿ.

ಪ್ರಾಪ್ಯೈವ ರಾಕ್ಷಸ ಉತಾsತ್ಮಪುರೀಂ ಸ ತತ್ರ ಸೀತಾಕೃತಿಂ ಪ್ರತಿನಿಧಾಯ ರರಕ್ಷ ಚಾಥ ।
ರಾಮೋsಪಿ ತತ್ತು ವಿನಿಹತ್ಯ ಸುದುಷ್ಟರಕ್ಷಃ ಪ್ರಾಪ್ಯಾsಶ್ರಮಂ ಸ್ವದಯಿತಾಂ ನಹಿ ಪಶ್ಯತೀವ 
॥೫.೪೦॥

ರಾವಣ ಸೀತಾಕೃತಿಯೊಂದಿಗೆ ಸೇರಿದ ಲಂಕಾಪಟ್ಟಣ,
ನೇಮಿಸಿದ ಕಾವಲುಪಡೆಯ ಮಾಡಲವಳ ರಕ್ಷಣ.
ಇತ್ತ ರಾಮ ಮುಗಿಸಿ ಬಂದ ದುರುಳ ಮಾರೀಚನ ಸಂಹಾರ,
ಆಶ್ರಮದಿ ಸೀತೆಯಿರದಾಗ ತೋರಿಸಿಕೊಂಡ ದುಃಖ ಅಪಾರ.

ಅನ್ವೇಷಮಾಣ ಇವ ತಂ ಚ ದದರ್ಶ ಗೃಧ್ರಂ ಸೀತಾರಿರಕ್ಷಿಷುಮಥೋ ರಿಪುಣಾ ವಿಶಸ್ತಮ್ ।
ಮನ್ದಾತ್ಮಚೇಷ್ಟಮಮುನೋಕ್ತಮರೇಶ್ಚ ಕರ್ಮ್ಮ  ಶ್ರುತ್ವಾ ಮೃತಂ ತಮದಹತ್ ಸ್ವಗತಿಂ ತಥಾsದಾತ್ ॥೫.೪೧॥

ಸೀತಾವಿಯೋಗದಿಂದ ದುಃಖತಪ್ತನಾದಂತೆ ರಾಮನ ಸಂಚಾರ,
ಹುಡುಕುವಾಗ ಮರಣಾವಸ್ತೆಯಲ್ಲಿದ್ದ ಜಟಾಯು ಕಂಡ ರಘುವೀರ.
ಜಟಾಯುವಿನಿಂದ ರಾಮ ತಿಳಿದಂತೆ ರಾವಣನ ದುರುಳ ವ್ಯಾಪಾರ,
ಅವಗೆ ಸದ್ಗತಿಯಿತ್ತು ರಾಮ ಮಾಡಿದ ಜಟಾಯು  ಅಂತ್ಯಸಂಸ್ಕಾರ.



ಅನ್ಯತ್ರ ಚೈವ ವಿಚರನ್ ಸಹಿತೋsನುಜೇನ ಪ್ರಾಪ್ತಃ ಕರೌ ಸ ಸಹಸಾsಥ ಕವನ್ಧನಾಮ್ನಃ ।
ಧಾತುರ್ವರಾದಖಿಲಜಾಯಿನ ಉಜ್ಝಿತಸ್ಯ ಮೃತ್ಯೋಶ್ಚ ವಜ್ರಪತನಾದತಿಕುಞ್ಚಿತಸ್ಯ 
॥೫.೪೨॥

ಲಕ್ಷ್ಮಣನೊಡನೆ ರಾಮನ ಸೀತೆಯ ಹುಡುಕುವಾಟ ದುಃಖದಿಂದ,
ಬ್ರಹ್ಮವರದಿಂದ ಅವಧ್ಯನಾದ ರಕ್ಕಸ ಎದುರಾದನವ ಕಬಂಧ.
ವಜ್ರಾಪಾತದಿಂದ ರುಂಡ ಕಾಲುಗಳು ಹೊಟ್ಟೆ ಸೇರಿ ಪ್ರಧಾನವಾದ ಬಾಹುಗಳು,
ದೈವಯೋಜನೆಯಂತೆ ರಾಮಲಕ್ಷ್ಮಣರಾದರು ಅವನ  ತೋಳ ಸೆರೆಯಾಳು.

ಛಿತ್ವಾsಸ್ಯ ಬಾಹುಯುಗಳಂ ಸಹಿತೋsನುಜೇನ ತಂ ಪೂರ್ವವತ್ ಪ್ರತಿವಿಧಾಯ ಸುರೇನ್ದ್ರಭೃತ್ಯಮ್ ।
ನಾಮ್ನಾ ದನುಂ ತ್ರಿಜಟಯೈವ ಪುರಾsಭಿಜಾತಂ ಗನ್ಧರ್ವಮಾಶು ಚ ತತೋsಪಿ ತದರ್ಚ್ಚಿತೋsಗಾತ್ ॥೫.೪೩॥

ತಮ್ಮನೊಡಗೂಡಿ ರಾಮ ಮಾಡಿದ ಅವನ ತೋಳುಗಳ ಛೇದ,
ರಕ್ಕಸದೇಹ ದಹಿಸಿ ಮೊದಲಂತೆ "ದನು" ಗಂಧರ್ವನ ಮಾಡಿದ.
ಸ್ವೀಕರಿಸಿದ ದನು ಗಂಧರ್ವನ ಪೂಜಾ ಸತ್ಕಾರ,
ಅನುಗ್ರಹಿಸಿ ಅವನ ಹೊರಟ ಶ್ರೀರಾಮಚಂದ್ರ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula