Wednesday 18 April 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 5: 44 - 45


ದೃಷ್ಟ್ವಾ ತಮೇವ ಶಬರೀ ಪರಮಂ ಹರಿಂ ಚ ಜ್ಞಾತ್ವಾವಿವೇಶ ದಹನಂ ಪುರತೋsಸ್ಯ ತಸ್ಯೈ ।
ಪ್ರಾದಾತ್ ಸ್ವಲೋಕಮಿಮಮೇವ ಹಿ ಸಾ ಪ್ರತೀಕ್ಷ್ಯ ಪೂರ್ವಂ ಮತಙ್ಗವಚನೇನ ವನೇsತ್ರಸಾsಭೂತ್ ॥೫.೪೪॥

ಶಬರಿ ದೃಢವಾಗಿ ನಂಬಿದ್ದಳು ಶ್ರೀರಾಮನೇ ಹರಿ ಸರ್ವೇಶ,
ಅವನಿಗಾಗಿ ಕಾದವಳು ಅವನೆದುರೇ ಮಾಡಿದಳು ಅಗ್ನಿಪ್ರವೇಶ.
ರಾಮ ಅನುಗ್ರಹಿಸಿ ಅವಳಿಗಿತ್ತ ತನ್ನ ಅಮೃತ ಲೋಕವಾಸ,
ರಾಮನ ನಿರೀಕ್ಷೆಯಲಿ ನಿರ್ಭಯವಾಗಿತ್ತವಳ ಮತಂಗವನ ವಾಸ.

ಶಾಪಾತ್ ವರಾಪ್ಸರಸಮೇವ ಹಿ ತಾಂ ವಿಮುಚ್ಯ ಶಚ್ಯಾ ಕೃತಾತ್ ಪತಿಪುರಸ್ತ್ವತಿದರ್ಪ್ಪಹೇತೋಃ ।
ಗತ್ವಾ ದದರ್ಶ ಪವನಾತ್ಮಜಮೃಶ್ಯಮೂಕೇ ಸ ಹ್ಯೇಕ ಏನಮವಗಚ್ಛತಿ ಸಮ್ಯಗೀಶಮ್ 
॥೫.೪೫॥

ಅಪ್ಸರೆಯಾಗಿದ್ದವಳು ಸೌಂದರ್ಯದ ಹಮ್ಮು  ತೋರಿದ ಪಾಪ,
ಇಂದ್ರಪತ್ನಿ ಶಚಿಯಿಂದ ಬೇಡತಿಯಾಗೆಂದಿತ್ತವಳಿಗೆ ಶಾಪ.
ಶ್ರೀರಾಮನಿಂದ ಬೇಡತಿ ಶಬರಿಗೆ ವಿಶಾಪ,
ಋಷ್ಯಮೂಕದಿ ಹನುಮನ ಕಂಡ ಭೂಪ.
ರಾಮನ ಸರಿಯಾಗಿ ತಿಳಿದವನು ಹನುಮ,
ಅವನ ಅನುಗ್ರಹಿಸಲೆಂದೇ ಬಂದ ಶ್ರೀರಾಮ.

No comments:

Post a Comment

ಗೋ-ಕುಲ Go-Kula