Sunday 1 April 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 5: 05 - 08


ಏತಸ್ಮಿನ್ನೇವ ಕಾಲೇ ದಶರಥನೃಪತಿಃ ಸ್ವರ್ಗತೋsಭೂತ್ ವಿಯೋಗಾದ್
ರಾಮಸ್ಯೈವಾಥ ಪುತ್ರೌ ವಿಧಿಸುತಸಹಿತೈರ್ಮನ್ತ್ರಿಭಿಃ ಕೇಕಯೇಭ್ಯಃ ।
ಆನೀತೌ ತಸ್ಯ ಕೃತ್ವಾ ಶ್ರುತಿಗಣವಿಹಿತಪ್ರೇತಕಾರ್ಯಾಣಿ ಸದ್ಯಃ
ಶೋಚನ್ತೌ ರಾಮಮಾರ್ಗಂ ಪುರಜನಸಹಿತೌ ಜಗ್ಮತುರ್ಮಾತೃಭಿಷ್ಚ ॥೫.೦೫॥

ಇತ್ತ ರಾಮನಗಲಿಕೆಯಿಂದ ನೊಂದ ದಶರಥ ರಾಜನಾದ ಮೃತ,
ಭರತ ಶತ್ರುಘ್ನರನ್ನು ಕರೆಸಿ ಮುಗಿಸಿದರು ಸಂಸ್ಕಾರ ಶಾಸ್ತೋಕ್ತ.
ರಾಮನೇ ರಾಜ್ಯವಾಳಬೇಕೆಂದು ಭರತ ಶತ್ರುಘ್ನರ ನಿರ್ಧಾರ,
ರಾಮನನ್ನರಸುತ್ತ ಹೊರಟಿತು ಅರಣ್ಯದೆಡೆ ಎಲ್ಲ ಪರಿವಾರ.

ಧಿಕ್ ಕುರ್ವನ್ತೌ ನಿತಾನ್ತಂ ಸಕಲದುರಿತಗಾಂ ಮನ್ಥರಾಂ ಕೈಕಯೀಂ ಚ
ಪ್ರಾಪ್ತೌ ರಾಮಸ್ಯ ಪಾದೌ ಮುನಿಗಣಸಹಿತೌ ತತ್ರ ಚೋವಾಚ ನತ್ವಾ ।
ರಾಮಂ ರಾಜೀವನೇತ್ರಂ ಭರತ ಇಹ ಪುನಃ ಪ್ರೀತಯೇsಸ್ಮಾಕಮೀಶ
ಪ್ರಾಪ್ಯಾsಶು ಸ್ವಾಮಯೋಧ್ಯಾಮವರಜಸಹಿತಃ ಪಾಲಯೇಮಾಂ ಧರಿತ್ರೀಮ್ ॥೫.೦೬॥

ಸಕಲ ಪಾಪಗಳಿಗೂ ನೆಲೆಯಾದ ಮಂಥರೆ,
ಸಣ್ಣಬುದ್ಧಿಯಿಂದ ಕೈಕೇಯಿಯಾದಳವಳ ಕೈಸೆರೆ.
ಅವರನ್ನು ನಿಂದಿಸುತ್ತಾ ರಾಮನ ಬಳಿ ಬಂದರು  ಭರತಾದಿಗಳು,
ರಾಮಗೊಂದಿಸಿ ಭರತ ಬೇಡಿಕೊಂಡ ವಾಪಸಾಗಿ ಭೂಪಾಲನಾಗಲು.


ಇತ್ಯುಕ್ತಃ ಕರ್ತುಮೀಶಃ ಸಕಲಸುರಗಣಾಪ್ಯಾಯನಂ ರಾಮದೇವಃ
ಸತ್ಯಾಂ ಕರ್ತುಂ ಚ ವಾಣೀಮವದದತಿತರಾಂ ನೇತಿ ಸದ್ಭಕ್ತಿನಮ್ರಮ್ ।
ಭೂಯೋಭೂಯೋsರ್ಥಯನ್ತಂ ದ್ವಿಗುಣಿತಶರದಾಂ ಸಪ್ತಕೇ ತ್ವಭ್ಯತೀತೇ
ಕರ್ತೈತತ್ ತೇ ವಚೋsಹಂ ಸದೃಢಮೃತಮಿದಂ ಮೇ ವಚೋ ನಾತ್ರ ಶಙ್ಕಾ ॥೫.೦೭॥

ಭರತನ ವಿನಮ್ರ ಬೇಡಿಕೆಗೆ ಶ್ರೀರಾಮನಿಂದ ಸ್ಪಷ್ಟ ನಕಾರ,
ವಾಕ್ಯಪರಿಪಾಲನೆಯೊಂದಿಗೆ ಆಗಬೇಕಿದೆ ದೈತ್ಯ ಸಂಹಾರ.
ವಾಪಸಾಗಲು ಆಗಲೇಬೇಕು ಹದಿನಾಕು ವತ್ಸರ,
ಆನಂತರವಷ್ಟೇ ವಹಿಸಿಕೊಳ್ಳುವೆ ರಾಜ್ಯಭಾರ.

ಶ್ರುತ್ವೈತದ್ ರಾಮವಾಕ್ಯಂ ಹುತಭುಜಿ ಪತನೇ ಸ ಪ್ರತಿಜ್ಞಾಂ ಚ ಕೃತ್ವಾ
ರೋಮೋಕ್ತಸ್ಯಾನ್ಯಥಾತ್ವೇ ನತು ಪುರಮಭಿವೇಕ್ಷ್ಯೇsಹಮಿತ್ಯೇವ ತಾವತ್ ।
ಕೃತ್ವಾsನ್ಯಾಂ ಸ ಪ್ರತಿಜ್ಞಾಮವಸದಥ ಬಹಿರ್ಗ್ರಾಮಕೇ ನನ್ದಿನಾಮ್ನೀ
ಶ್ರೀಶಸ್ಯೈವಾಸ್ಯ ಕೃತ್ವಾ ಶಿರಸಿ ಪರಮಕಂ ಪೌರಟಂ ಪಾದಪೀಠಮ್ ॥೫.೦೮॥

ಶ್ರೀರಾಮನ ಸಂದೇಶ ಆಲಿಸಿದ ಭರತ,
ತಕ್ಷಣವೇ ತೊಡುತ್ತಾನೆ ಕಠೋರ ಶಪಥ.
ಬಾರದಿರೆ ರಾಮ ಹದಿನಾಕು ವರ್ಷದ ನಂತರ,
ಖಂಡಿತ ನಾನಾಗುವೆ ಪ್ರವೇಶಿಸಿ ಅಗ್ನಿಗೆ ಆಹಾರ.
ಮಾಡುವುದಿಲ್ಲ ಅಯೋಧ್ಯಾನಗರ ಪ್ರವೇಶ,
ರಾಮನಾಗಮನದವರೆಗೂ ನಂದಿಗ್ರಾಮವಾಸ.
ಕಠಿಣವ್ರತ ನೇಮದಿಂದ ದೂರವಿದ್ದುಕೊಂಡೇ  ರಾಜ್ಯಭಾರ,
ರಾಮಪಾದುಕೆ ಸಿಂಹಾಸನದಲ್ಲಿರಿಸಿ ಸೇವೆಗೈವ ವ್ಯಾಪಾರ.

No comments:

Post a Comment

ಗೋ-ಕುಲ Go-Kula