Wednesday 4 April 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 5: 28 - 31


ದತ್ತೇsಭಯೇ ರಘುವರೇಣ ಮಾಹಾಮುನೀನಾಂ ದತ್ತೇ ಭಯೇ ಚ ರಜನೀಚರಮಣ್ಡಲಸ್ಯ ।
ರಕ್ಷಃಪತಿಃ ಸ್ವಸೃಮುಖಾದವಿಕಮ್ಪನಾಚ್ಚ ಶ್ರುತ್ವಾ ಬಲಂ ರಘುಪತೇಃ ಪರಮಾಪ ಚಿನ್ತಾಮ್ 
॥೫.೨೮॥
ಶ್ರೀರಾಮನಿಂದ ಸಜ್ಜನ ಮುನಿಗಳಿಗೆ ಅಭಯ,
ಹಾಗೇ ಜನಕಂಟಕ ರಾಕ್ಷಸ ಸಮೂಹಕ್ಕೆ ಭಯ.
ಸುದ್ದಿ ಮುಟ್ಟಿಸಿದರು ರಾವಣಗೆ ಶೂರ್ಪಣಖಿ ಮತ್ತು ಅಕಂಪನ,
ಶ್ರೀರಾಮನ ಮಹಾಬಲದ ವಾರ್ತೆ ಹುಟ್ಟಿಸಿತವನಿಗೆ ಕಂಪನ.
ಸ ತ್ವಾಶು ಕಾರ್ಯ್ಯಮವಮೃಶ್ಯ ಜಗಾಮ ತೀರೇ ಕ್ಷೇತ್ರಂ ನದೀನದಪತೇಃ ಶ್ರವಣಂ ಧರಿತ್ರ್ಯಾಃ ।
ಮಾರೀಚಮತ್ರ ತಪಸಿ ಪ್ರತಿವರ್ತಮಾನಂ ಭೀತಂ ಶರಾದ್ ರಘುಪತೇರ್ನಿತರಾಂ ದದರ್ಶ
॥೫.೨೯॥
ವಾರ್ತೆ ಕೇಳಿದ ರಾವಣ ಮುಂದಿನ ಯೋಜನೆ ಮಾಡಿದ,
ವರುಣ ಸಾನ್ನಿಧ್ಯದ ಗೋಕರ್ಣ ಸಾಗರ ತೀರ ಸೇರಿದ.
ಅಲ್ಲಿದ್ದ ರಾಮಬಾಣದಿ ಭಯಗ್ರಸ್ತ ಮಾರೀಚ ತಪೋನಿರತ,
ರಾಮಬಾಣದ ರುಚಿ ಉಂಡವನ ಕಂಡ ಲಂಕೆಯ ದೊರೆಯಾತ.
ತೇನಾರ್ಥಿತಃ ಸಪದಿ ರಾಘವವಞ್ಚನಾರ್ಥೇ  ಮಾರೀಚ ಆಹ ಶರವೇಗಮಮುಷ್ಯ ಜಾನನ್ ।
ಶಕ್ಯೋ ನ ತೇ ರಘುವರೇಣ ಹಿ ವಿಗ್ರಹೋsತ್ರ  ಜಾನಾಮಿ ಸಂಸ್ಪರ್ ಶಮಸ್ಯ ಶರಸ್ಯ ಪೂರ್ವಮ್ ॥೫.೩೦॥
ರಾಮ ವಂಚನೆಗೆ ಮಾರೀಚನ  ಸಹಾಯ ಕೇಳಿದ ರಾವಣ,
ಮಾರೀಚ ಎಚ್ಚರಿಸಿದ ಅತಿ ಭಯಂಕರವದು ರಾಮ ಬಾಣ.
ರಾಮನೊಡನೆ ವೈರದಿಂದ ಸುಖವಿಲ್ಲ,
ಸಾಕ್ಷಿಯಾಗಿ ನೋವುಂಡ ನಾನಿದ್ದೇನಲ್ಲ.
ಇತ್ಯುಕ್ತವನ್ತಮಥ ರಾವಣ ಆಹ ಖಡ್ಗಂ ನಿಷ್ಕೃಷ್ಯ ಹನ್ಮಿ ಯದಿ ಮೇ ನ ಕರೋಷಿ ವಾಕ್ಯಮ್ ।
ತಚ್ಛುಶ್ರುವಾನ್ ಭಯಯುತೋsಥ ನಿಸರ್ಗ್ಗತಶ್ಚ ಪಾಪೋ ಜಗಾಮ ರಘುವರ್ಯ್ಯ ಸಕಾಶಮಾಶು ॥೫.೩೧॥
ಮಾರೀಚನ ಮಾತಿಗೆ ಕತ್ತಿ ಹಿರಿದ್ಹೇಳಿದ  ರಾವಣ,
ಎನ್ನ ಮಾತ ಕೇಳದಿದ್ದರೆ ತೆಗೆಯುವೆ ನಿನ್ನ ಪ್ರಾಣ.
ಭಯಗ್ರಸ್ತ ಮಾರೀಚ ಸ್ವಭಾವದಿಂದಲೂ ದುಷ್ಟ,
ಒಪ್ಪಿ ರಾಮನ ವಂಚಿಸಲು ಧಾವಂತದಿ ಹೊರಟ.

No comments:

Post a Comment

ಗೋ-ಕುಲ Go-Kula