ದೇಹೇsಪಿ ಯತ್ರ ಪವನೋsತ್ರ ಹರಿರ್ಯ್ಯತೋsಸೌ ತತ್ರೈವ ವಾಯುರಿತಿ ವೇದವಚಃ ಪ್ರಸಿದ್ಧಮ್ ।
‘ಕಸ್ಮಿನ್ ನ್ವಹಂ’
ತ್ವಿತಿ ತಥೈವ ಹಿ ಸೋsವತಾರೇ
ತಸ್ಮಾತ್ ಸ ಮಾರುತಿಕೃತೇ ರವಿಜಂ ರರಕ್ಷ
॥೫.೪೬॥
ಎಲ್ಲಿ ಮುಖ್ಯಪ್ರಾಣ
ಅಲ್ಲಿ ನಾರಾಯಣ,
ಎಲ್ಲಿ ನಾರಾಯಣ
ಅಲ್ಲಿ ಮುಖ್ಯಪ್ರಾಣ.
ಇದು ಪ್ರಸಿದ್ಧವಾದ
ವೇದ ವಚನ,
ಅವತಾರದಲ್ಲೂ ಅದರ
ಪ್ರದರ್ಶನ.
ಹನುಮಗಾಗಿ ರಾಮನಿಂದ
ಕಾಪಾಡಲ್ಪಟ್ಟ ಸುಗ್ರೀವ,
ಸಾಬೀತಾದ ಪ್ರಾಣ
ನಾರಾಯಣರ ಅವಿನಾಭಾವ.
ಏವಂ ಸ ಕೃಷ್ಣತನುರರ್ಜ್ಜುನಮಪ್ಯರಕ್ಷದ್ ಭೀಮಾರ್ಥಮೇವ ತದರಿಂ ರವಿಜಂ
ನಿಹತ್ಯ ।
ಪೂರ್ವಂ ಹಿ ಮಾರುತಿಮವಾಪ ರವೇಃ ಸುತೋsಯಂ ತೇನಾಸ್ಯ ವಾಲಿನಮಹನ್
ರಘುಪಃ ಪ್ರತೀಪಮ್॥೫.೪೭॥
ಕೃಷ್ಣಾವತಾರದಲ್ಲಿ
ಅರ್ಜುನ ಭೀಮಾಭಿರಕ್ಷಿತ,
ಹಾಗೆಂದೇ
ಕೃಷ್ಣಾನುಗ್ರಹದಿಂದ ಸದಾ ಸುರಕ್ಷಿತ.
ಭೀಮ
ದ್ವೇಷಿಯಾಗಿದ್ದ ಅವ ಕರ್ಣ,
ಕಳೆದುಕೊಳ್ಳಬೇಕಾಯಿತು
ತನ್ನ ಪ್ರಾಣ.
ಸುಗ್ರೀವ ಹನುಮಂತನ
ಆಶ್ರಯಿಸಿದ ಕಾರಣ,
ರಾಮ ರಕ್ಷಿಸಿ ಅವನ
ಹನುಮತ್ಯಕ್ತ ವಾಲಿಗಿತ್ತ ಮರಣ.
ಏವಂ ಸುರಾಶ್ಚ ಪವನಸ್ಯ ವಶೇ ಯತೋSತಃ ಸುಗ್ರೀವಮತ್ರ ತು
ಪರತ್ರ ಚ ಶಕ್ರಸೂನುಮ್ ।
ಸರ್ವೇ ಶ್ರಿತಾ ಹನುಮತಸ್ತದನುಗ್ರಹಾಯ ತತ್ರಾಗಮದ್ ರಘುಪತಿಃ ಸಹ
ಲಕ್ಷ್ಮಣೇನ ॥೫.೪೮॥
ದೇವತೆಗಳೆಲ್ಲಾ
ಎಂದೂ ಮುಖ್ಯಪ್ರಾಣನ ಅಧೀನ,
ಅಂತೇ
ಪ್ರಾಣನಾಶ್ರಯಿಸಿದ ಸುಗ್ರೀವನ ಸ್ವಾಧೀನ.
ಕೃಷ್ಣಾವತಾರದಲ್ಲಿ
ಹರಿಗೆ ಬಲು ಪ್ರಿಯ ಭೀಮಾರ್ಜುನ,
ದೇವತೆಗಳೆಲ್ಲಾ
ಇತ್ತಿದ್ದು ಅರ್ಜುನಗೇ ಸದಾ ಸಮ್ಮಾನ.
ಇದು ಪ್ರಾಣ
ನಾರಾಯಣರ ಎಂದೆಂದೂ ಬೇರಾಗದ ಸಂಬಂಧ,
ಪ್ರಿಯ ಮಗನ
ಅನುಗ್ರಹಿಸಲೆಂದೇ ಋಷ್ಯಮೂಕಕೆ ರಾಮ ಬಂದ.
ಯತ್ಪಾದಪಙ್ಕಜರಜಃ ಶಿರಸಾ ಬಿಭರ್ತಿ ಶ್ರೀರಬ್ಜಜಶ್ಚ ಗಿರಿಶಃ ಸಹ
ಲೋಕಪಾಲೈಃ ।
ಸರ್ವೇಶ್ವರಸ್ಯ ಪರಮಸ್ಯ ಹಿ ಸರ್ವಶಕ್ತೇಃ ಕಿಂ ತಸ್ಯ ಶತ್ರುಹನನೇ ಕಪಯಃ
ಸಹಾಯಾಃ
॥೫.೪೯॥
ರಮಾ ಬ್ರಹ್ಮ ರುದ್ರ
ಲೋಕಪಾಲ ಮೊದಲಾದ ದೇವತೆಗಳು,
ಪರಮಾದರ ಭಕ್ತಿಯಿಂದ
ಧರಿಸುವರು ಶ್ರಿಹರಿಯ ಪಾದಧೂಳು.
ಅಂಥ ಸರ್ವಶಕ್ತ
ಸರ್ವೇಶ್ವರ ಸರ್ವೋತ್ತಮಗೆ ಬೇಕಿತ್ತೆ ಕಪಿಗಳ ನೆರೆವು,
ಹಾಗಲ್ಲ ,ಭಗವತ್ ಕಾರ್ಯದಲ್ಲಿ
ಹರಿಸಬೇಕಿತ್ತವರಿಗೆ ಅನುಗ್ರಹದ ಹರಿವು.
ಸಮಾಗತೇ ತು ರಾಘವೇ ಪ್ಲವಙ್ಗಮಾಃ ಸಸೂರ್ಯ್ಯಜಾಃ ।
ವಿಪುಪ್ಲವುರ್ಭಯಾರ್ದಿತಾ ನ್ಯವಾರಯಚ್ಚ ಮಾರುತಿಃ ॥೫.೫೦॥
ಆಗಮಿಸುತ್ತಿದ್ದಂತೆ
ಶ್ರೀರಾಮಚಂದ್ರನ ಸವಾರಿ,
ಭಯಭೀತ ಕಪಿಗಳೆಲ್ಲಾ
ಹೊರಟವು ದೂರ ಹಾರಿ.
ರಾಮನ ಹಿರಿಮೆ
ಮಹಿಮೆ ಅರಿತವನವನು ಹನುಮ,
ತಡೆದ
ಕಪಿಗಳನ್ನೆಲ್ಲಾ ತಿಳಿಸುತ್ತಾ ಬಂದವನು ಶ್ರೀರಾಮ.
ಸಂಸ್ಥಾಪ್ಯಾsಶು ಹರೀನ್ದ್ರಾನ್ ಜಾನನ್ ವಿಷ್ಣೋರ್ಗುಣಾನನನ್ತಾನ್ ಸಃ ।
ಸಾಕ್ಷಾದ್ ಬ್ರಹ್ಮಪಿತಾsಸಾವಿತ್ಯೇನೇನಾಸ್ಯ
ಪಾದಯೋಃ ಪೇತೇ ॥೫.೫೧॥
ನಾರಾಯಣನ ಅನಂತ
ಮಹಿಮೆ ಅರಿತ ಮುಖ್ಯಪ್ರಾಣ,
ಸಂತೈಸಿ
ತಿಳಿಸಿದ-ಕಪಿಗಳಿಗೆ ತುಂಬಿದ ಧೈರ್ಯ ತ್ರಾಣ.
ತನ್ನಲ್ಲಿತ್ತು
ಸೃಷ್ಟಿಕರ್ತ ಬ್ರಹ್ಮನ ಪಿತ ಬಂದನೆಂಬ ಜ್ಞಾನ,
ರಾಮಪಾದಕ್ಕೆರಗುತ್ತ
ಹನುಮ ಮಾಡಿದ ಸಮ್ಮಾನ.
॥ ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ
ಶ್ರೀಮಹಾಭಾರತತಾತ್ಪರ್ಯನಿರ್ಣಯೇ ರಾಮಚರಿತೇ ಹನೂಮದ್ದರ್ಶನಂ ನಾಮ ಪಞ್ಚಮೋsಧ್ಯಾಯಃ ॥
ಇಲ್ಲಿಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ,
ಶ್ರೀಮಹಾಭಾರತತಾತ್ಪರ್ಯನಿರ್ಣಯದ ವಾದ,
ರಾಮಚರಿತೆ ಹನುಮದರ್ಶನ ಹೆಸರ ಐದನೇ ಅಧ್ಯಾಯ,
No comments:
Post a Comment
ಗೋ-ಕುಲ Go-Kula