Thursday, 17 May 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 6: 01 - 03


           ಶ್ರೀರಾಮಚರಿತೇ ಸಮುದ್ರತರಣನಿಶ್ಚಯಃ

ಓಂ ಉತ್ಥಾಪ್ಯ ಚೈನಮರವಿನ್ದದಲಾಯತಾಕ್ಷಶ್ಚಕ್ರಾಙ್ಕಿತೇನ ವರದೇನ ಕರಾಮ್ಬುಜೇನ
ಕೃತ್ವಾ ಸಂವಿದಮನೇನ ನುತೋsಸ್ಯ ಚಾಂಸಂ ಪ್ರೀತ್ಯಾssರುರೋಹ ಹಸನ್ ಸಹ ಲಕ್ಷ್ಮಣೇನ .೦೧॥


ಹೀಗೆ ಕಾಲಿಗೆ ಬಿದ್ದ ಹನುಮಂತನನ್ನು ರಾಮಚಂದ್ರ,
ವರಪ್ರದ ಚಕ್ರಾಂಕಿತ ಹಸ್ತದಿಂದೆತ್ತಿದ ಕಮಲನೇತ್ರ.
ಮಾಡಿದ ಅವನೊಂದಿಗೆ ಪ್ರಿಯ ಸಂಭಾಷಣೆ,
ಸ್ವೀಕರಿಸಿದ ಹನುಮನ ಸ್ತೋತ್ರಪೂರ್ವಕ ನಿವೇದನೆ.
ಲಕ್ಷ್ಮಣ ಸಮೇತನಾದ ಪ್ರಭು ಶ್ರೀರಾಮಚಂದ್ರ,
ಹನುಮನ ಹೆಗಲೇರಿದ ಅಮಿತ ಗುಣಸಾಂದ್ರ.

ಆರೋಪ್ಯ ಚಾಂಸಯುಗಳಂ ಭಗವನ್ತಮೇನಂ ತಸ್ಯಾನುಜಂ ಚ ಹನುಮಾನ್ ಪ್ರಯಯೌ ಕಪೀನ್ದ್ರಮ್ ।
 ಸಖ್ಯಂ ಚಕಾರ ಹುತಭುಕ್ ಪ್ರಮುಖೇ ಚ ತಸ್ಯ ರಾಮೇಣ ಶಾಶ್ವತನಿಜಾರ್ತ್ತಿಹರೇಣ ಶೀಘ್ರಮ್ ॥೬.೦೨॥

ರಾಮ ಲಕ್ಷ್ಮಣರನು ಹೊತ್ತ ಹನುಮಂತ,
ಸಾಗಿಬಂದು ಸುಗ್ರೀವನ ಬಳಿ ನಿಂತ.
ನಂಬಿದ ಭಕ್ತರ ದುಃಖ ಪರಿಹರಿಸುವ ಶ್ರೀರಾಮ,
ಅಗ್ನಿಸಾಕ್ಷಿಯಾಗಿ ಸುಗ್ರೀವನ ಸಖ್ಯ ಬೆಳೆಸುವ ನೇಮ.

ಶ್ರುತ್ವಾsಸ್ಯ ದುಃಖಮಥ ದೇವವರಃ ಪ್ರತಿಜ್ಞಾಂ ಚಕ್ರೇ ಸ ವಾಲಿನಿಧನಾಯ ಹರೀಶ್ವರೋsಪಿ ।
ಸೀತಾನುಮಾರ್ಗ್ಗಣಕೃತೇsಥ ಸ ವಾಲಿನೈವ ಕ್ಷಿಪ್ತಾಂ ಹಿ ದುನ್ದುಭಿತನುಂ ಸಮದರ್ಶಯಚ್ಚ ॥೬.೦೩॥

ಆನಂತರ ರಾಮ ಸುಗ್ರೀವರ ಸಂಭಾಷಣೆ,
ಆಲಿಸಿದ ರಾಮ ಸುಗ್ರೀವಗಾದ ಶೋಷಣೆ.
ಹಾಗೇ ಮಾಡಿದ ವಾಲಿ ಸಂಹಾರದ ಶಪಥ,
ಸುಗ್ರೀವ ಸೀತೆ ಹುಡುಕುವ ಆಣೆ ಹಾಕಿ ನಿಂತ.
ತದನಂತರ ವಾಲಿಯಿಂದ ಶೋಷಿತ ಸುಗ್ರೀವ,
ತೋರಿದ ವಾಲಿ ಎಸೆದ ದುಂದುಭಿ ರಕ್ಕಸನ ದೇಹ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula