ಹನೂಮತ್ ಪ್ರತಿಯಾನಮ್
ನತ್ವಾ ಲಿಲಙ್ಘಯಿಷುರರ್ಣ್ಣವಮುತ್ಪಪಾತ ನಿಷ್ಪೀಡ್ಯತಂ ಗಿರಿವರಂ
ಪವನಸ್ಯಸೂನುಃ ॥೦೭-೦೧॥
ಪವನಸ್ಯಸೂನುಃ ॥೦೭-೦೧॥
ಶಾಶ್ವತ ಸರ್ವವ್ಯಾಪ್ತ ವಿಸ್ತೃತಶಕ್ತ ಸದ್ಗುಣಗಳ ಸಾಗರ,
ಷಡ್ಗುಣಗಳ ಆಗರ ಎಲ್ಲರ ಒಡೆಯ ಶ್ರೀರಾಮಚಂದ್ರ.
ಸ್ಮರಿಸುತ್ತಾ ಭಕ್ರಿಯಿಂದ ಹನುಮಂತ ಮಾಡಿದ ನಮಸ್ಕಾರ,
ಮಹೇಂದ್ರಪರ್ವತವ ಒದ್ದು ಜಿಗಿದ ಹಾರಲು ಆ ಸಾಗರ.
ಚುಕ್ಷೋಭ ವಾರಿಧಿರನುಪ್ರಯಯೌ ಚ ಶೀಘ್ರಂ ಯಾದೋಗಣೈಃ ಸಹ ತದೀಯಬಲಾಭಿಕೃಷ್ಟಃ ।
ವೃಕ್ಷಾಶ್ಚ ಪರ್ವತಗತಾಃ ಪವನೇನ ಪೂರ್ವಂ ಕ್ಷಿಪ್ತೋsರ್ಣ್ಣವೇ ಗಿರಿರುದಾಗಮದಸ್ಯ ಹೇತೋಃ॥೦೭.೦೨॥
ಸೆಳೆಯಿತು ಸಮುದ್ರವನ್ನೇ ಹನುಮಂತನ ಅಪರಿಮಿತ ಬಲ,
ಸಾಗರವಾಯಿತು ಸ್ಥಿರತೆ ಕಳೆದುಕೊಂಡು ಅಲ್ಲೋಲಕಲ್ಲೋಲ.
ಬೇರುಕಿತ್ತ ಮರಗಿಡಗಳೂ ಹಾರಿದವು ಹನುಮನ ಅನುಸರಿಸಿ,
ಮುಳುಗಿದ್ದ ಮೈನಾಕವೂ ಮೇಲೆದ್ದಿತು ಹನುಮಸೇವೆ ಬಯಸಿ.
ಸ್ಯಾಲೋ ಹರಸ್ಯ ಗಿರಿಪಕ್ಷವಿನಾಶಕಾಲೇ ಕ್ಷಿಪ್ತ್ವಾsರ್ಣ್ಣವೇ ಸ ಮರುತೋರ್ವರಿತಾತ್ಮಪಕ್ಷಃ ।
ಹೈಮೋ ಗಿರಿಃ ಪವನಜಸ್ಯ ತು ವಿಶ್ರಮಾರ್ತ್ಥಮುದ್ಭಿದ್ಯ
ವಾರಿಧಿಮವರ್ದ್ಧದನೇಕಸಾನುಃ ॥೭.೦೩॥
ವಾರಿಧಿಮವರ್ದ್ಧದನೇಕಸಾನುಃ ॥೭.೦೩॥
ಹಿಂದೆ ಪರ್ವತಗಳಿಗೆ ರೆಕ್ಕೆಗಳು ಇದ್ದವಂತೆ,
ಇಂದ್ರ ಅವನ್ನೆಲ್ಲಾ ಛೇದಿಸುತ್ತ ಬಂದನಂತೆ.
ರುದ್ರಾಣಿಯ ತಮ್ಮನಾದ ಮೈನಾಕ ಪರ್ವತ,
ಪ್ರಾಣನಿಂದ ಸಮುದ್ರಕ್ಕೆಸೆಯಲ್ಪಟ್ಟಾದನಂತೆ ರಕ್ಷಿತ.
ನೆನಪಾಯಿತಂತೆ ಅದಕೆ ಮುಖ್ಯಪ್ರಾಣನ ಕರುಣೆ,
ಮೇಲೆದ್ದು ಬಂತಂತೆ ಅನುಸರಿಸಿ ಉಪಕಾರ ಸ್ಮರಣೆ.[Contributed by Shri Govind Magal]
No comments:
Post a Comment
ಗೋ-ಕುಲ Go-Kula