ಭಕ್ತೋ ಮಮೈಷ ಯದಿ ಮಾಮಭಿಪಶ್ಯತೀಹ ಪಾದೌ ಧ್ರುವಂ ಮಮ ಸಮೇಷ್ಯತಿ
ನಿರ್ವಿಚಾರಃ ।
ಯೋಗ್ಯೋ ವಧೋ ನಹಿ ಜನಸ್ಯ ಪದಾನತಸ್ಯ ರಾಜ್ಯಾರ್ತ್ಥಿನಾ ರವಿಸುತೇನ ವಧೋsರ್ತ್ಥಿತಶ್ಚ ॥೬.೧೯॥
ರಾಮ ಯೋಚಿಸಿದ
ಯುದ್ಧಭೂಮಿಯಲಿ ನನ್ನ ಕಂಡರೆ ವಾಲಿ,
ಭಕ್ತನಾದ ಅವನು
ಸಹಜವಾಗೇ ಎನ್ನ ಕಾಲಿಗೆ ಬೀಳುವನಲ್ಲಿ.
ಶರಣಾದವನ
ಕೊಲ್ಲುವುದಲ್ಲ ಧರ್ಮ,
ನಿಗ್ರಹಿಸಿ
ಅನುಗ್ರಹಿಸುವುದದು ಮರ್ಮ.
ರಾಜ್ಯಹೀನ ಸುಗ್ರೀವ
ನಿರಪರಾಧಿ ಶೋಷಿತ,
ವಾಲಿಯ ವಧಿಸಿ
ಸುಗ್ರೀವನ ರಕ್ಷಿಸುವದು ಸಮ್ಮತ.
ಕಾರ್ಯ್ಯಂ ಹ್ಯಭೀಷ್ಟಮಪಿ ತತ್ ಪ್ರಣತಸ್ಯ ಪೂರ್ವಂ ಶಸ್ತೋ ವಧೋ ನ
ಪದಯೋಃ ಪ್ರಣತಸ್ಯ ಚೈವ ।
ತಸ್ಮಾದದೃಶ್ಯತನುರೇವ ನಿಹನ್ಮಿ ಶಕ್ರ-ಪುತ್ರಂ ತ್ವಿತೀಹ ತಮದೃಷ್ಟತಯಾ
ಜಘಾನ ॥೬.೨೦॥
ಸುಗ್ರೀವ ಮೊದಲು
ಶರಣಾಗಿ ಪಾದಕ್ಕೆರಗಿದವನು,
ದೋಷಿವಾಲಿ ಎದುರಾಗಿ
ಶರಣಾದರೆ ಮಾಡುವುದೇನು.
ಸುಗ್ರೀವನ ಉಳಿಸಿ
ಪೊರೆವುದು ಧರ್ಮ,
ಮರೆಯಲಿದ್ದು ವಾಲಿಗೆ ಬಾಣಬಿಟ್ಟ ಮರ್ಮ.
No comments:
Post a Comment
ಗೋ-ಕುಲ Go-Kula