ಇತೀರಿತೇ ಶಕ್ರಸುತಾತ್ಮಜೇನ ತಥೇತಿ ಹೋಚುಃ ಸಹ ಜಾಮ್ಬವನ್ಮುಖಾಃ ।
ಸರ್ವೇsಪಿ ತೇಷಾಮಥ ಚೈಕಮತ್ಯಂ ದೃಷ್ಟ್ವಾ ಹನೂಮಾನಿದಮಾಬಭಾಷೇ ॥೬.೪೨॥
ಈ ತೆರನಾದ ಅಂಗದ
ಮಾಡಿದ ವಿಶ್ಲೇಷಣೆ,
ಜಾಂಬವಂತ ಮೊದಲಾದವರ
ಅನುಮೋದನೆ.
ಈ ಒಮ್ಮತವ ಕಂಡ
ಹನುಮಂತ,
ಆರಂಭಿಸಿದ ತಾ
ಹೇಳುವ ಮಾತ.
ವಿಜ್ಞಾತಮೇತದ್ಧಿ ಮಯಾsಙ್ಗದಸ್ಯ ರಾಜ್ಯಾಯ
ತಾರಾಭಿಹಿತಂ ಹಿ ವಾಕ್ಯಮ್ ।
ಸಾಧ್ಯಂ ನ ಚೈತನ್ನಹಿ ವಾಯುಸೂನೂ ರಾಮಪ್ರತೀಪಂ ವಚನಂ ಸಹೇತ ॥೬.೪೩॥
ತಾರನ
ಉದ್ದೇಶವೇನೆಂದು ನನಗೆ ಗೊತ್ತು,
ಅಳಿಯಗೆ ರಾಜ್ಯ
ದೊರಕಿಸುವ ಮಸಲತ್ತು.
ಯಾವ ಕಾಲಕ್ಕೂ ಈ
ಹನುಮಂತ,
ಸಹಿಸಲಾರ
ರಾಮವಿರೋಧಿ ಮಾತ.
ನಚಾಹಮಾಕ್ರಷ್ಟುಮುಪಾಯತೋsಪಿ ಶಕ್ಯಃ ಕಥಞ್ಚಿತ್
ಸಕಲೈಃ ಸಮೇತೈಃ ।
ಸನ್ಮಾರ್ಗತೋ ನೈವ ಚ ರಾಘವಸ್ಯ ದುರನ್ತಶಕ್ತೇರ್ಬಿಲಮಪ್ರದೃಷ್ಯಮ್
॥೬.೪೪॥
ಶ್ರೀರಾಮ ಸರ್ವಜ್ಞ
ಸರ್ವಶಕ್ತ ಸರ್ವೇಶ,
ಅವನಿಚ್ಛಿಸಿದರೆ ಈ
ಗುಹೆಯು ಸರ್ವನಾಶ.
ನೀವೆಲ್ಲಾ ಯಾವ
ಉಪಾಯದಿಂದಾದರೂ ಒಗ್ಗಟ್ಟು,
ನನ್ನದು
ಸನ್ಮಾರ್ಗದಿಂದ ವಿಚಲಿತವಾಗದ ಬಿಗಿಪಟ್ಟು.
ವಚೋ ಮಮೈತದ್ ಯದಿ ಚಾsದರೇಣ ಗ್ರಾಹ್ಯಂ ಭವೇದ್
ವಸ್ತದತಿಪ್ರಿಯಂ ಮೇ ।
ನ ಚೇದ್ ಬಲಾದಪ್ಯನಯೇ ಪ್ರವೃತ್ತಾನ್ ಪ್ರಶಾಸ್ಯ ಸನ್ಮಾರ್ಗಗತಾನ್
ಕರೋಮಿ ॥೬.೪೫॥
ಇರಲಿಕ್ಕುಂಟೇ
ರಾಮಗೆ ಎಟುಕದ ತಾಣ,
ಎಲ್ಲೆಡೆ ಹೋಗಬಲ್ಲದು
ಅವನಿಚ್ಛೆಯ ಬಾಣ.
ನಿಮಗೆ ನನ್ನ
ಮಾತಾದರೆ ಆದರಪೂರ್ವಕ ಗ್ರಾಹ್ಯ,
ನನಗೂ ಆ ನಡೆ
ಸಂತೋಷದಾಯಕ ಮತ್ತು ಸಹ್ಯ.
ಹಾಗಾಗದೇ
ತೋರಿದಿರಾದರೆ ಅನೀತಿ,
ಬಳಸುತ್ತೇನೆ ನಾನು ಬಲಾತ್ಕಾರದ ರೀತಿ.
No comments:
Post a Comment
ಗೋ-ಕುಲ Go-Kula